ಅಂಕಣ

ತಮಿಳುನಾಡಿನ ಶ್ರೀರಂಗಂ ದೇವಸ್ಥಾನದ ಭೂಗತ ಕೋಣೆಯಲ್ಲಿ ಅಡಗಿರುವ ರಹಸ್ಯವೇನು? ವಿಷ್ಣು ದೇವಾಲಯದಲ್ಲಿ ಪ್ರಾಚೀನ ವಿಮಾನವೊಂದನ್ನು ಬಚ್ಚಿಟ್ಟಿದ್ದರೆ ನಮ್ಮ ಪೂರ್ವಜರು?

ತಮಿಳುನಾಡಿನ ಶ್ರೀರಂಗಂ ದೇವಸ್ಥಾನ ಮತ್ತು ಕೇರಳದ ಅನಂತ ಪದ್ಮನಾಭದೇವಾಲಯದಲ್ಲಿ ಹಲವಾರು ಸಮಾನತೆಗಳಿವೆ. ಅನಂತ ಪದ್ಮನಾಭ ದೇವಸ್ಥಾನದಂತೆಯೆ ಶ್ರೀರಂಗಂ ಕೂಡಾ ವೈಷ್ಣವ ಮಂದಿರ. ಈ ಎರಡೂ ದೇವಸ್ಥಾನಗಳ ಗರ್ಭಗೃಹದ ಮೂರ್ತಿಗಳು ಒಂದೆ ಭಂಗಿಯಲ್ಲಿವೆ. ಈ ಎರಡೂ ದೇವಸ್ಥಾನಗಳ ಕೆಳಗೆ ರಹಸ್ಯ ಕೋಣೆಗಳಿವೆ. ಇದರಲ್ಲಿ ಅನಂತ ಪದ್ಮನಾಭ ದೇವಸ್ಥಾನದ ಮೂರು ಕೋಣೆಗಳಲ್ಲಿ ಅಗಾಧ ಸಂಪತ್ತಿರುವುದು ಪ್ರಪಂಚಕ್ಕೆ ತಿಳಿದಿದೆ. ಆದರೆ ನಾಲ್ಕನೆ ಕೋಣೆಯಲ್ಲಿ ಏನಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ!!

ಇದೆ ರೀತಿ ತಮಿಳುನಾಡಿನ ಶ್ರೀರಂಗಂ ಮಂದಿರದ ಕೆಳಗಡೆಯೂ ಭೂಗತ ಕೋಣೆಗಳಿವೆ. ಈ ಭೂಗತ ಕೋಣೆಗಳಲ್ಲಿಯೂ ಅಗಾಧವಾದ ಸಂಪತ್ತಿದೆ. ಮಾತ್ರವಲ್ಲ ಪುರಾಣಗಳಲ್ಲಿ ಉಲ್ಲೇಖಿಸಲಾದ ವಿಮಾನದಂತಿರುವ ಒಂದು ವಸ್ತುವಿದೆ ಎನ್ನಲಾಗುತ್ತಿದೆ. ಕನಿಷ್ಠ ಹತ್ತು ಅಡಿ ಎತ್ತರವಿರುವ ಈ ವಿಮಾನ ಮುಟ್ಟಿದೊಡನೆ ವಿಚಿತ್ರವಾದ ಶಬ್ದ ಮಾಡುತ್ತದೆ ಎಂದು ಇದನ್ನು ಕಣ್ಣಾರೆ ಕಂಡವರ ಅಭಿಮತ. ಹಾಗಾದರೆ ಈ ವಿಮಾನವನ್ನು ಇಲ್ಲಿ ಬಚ್ಚಿಟ್ಟವರು ಯಾರು? ವಿಮಾನವನ್ನು ಬಚ್ಚಿಟ್ಟ ಉದ್ದೇಶವೇನು?

ಶ್ರೀರಂಗಂ ಮಂದಿರದ ನೆಲ ಮಾಳಿಗೆಯಲ್ಲಿ ವಿಮಾನವನ್ನು ಬಚ್ಚಿಟ್ಟಿದ್ದಾರೆಯೆ ನಮ್ಮ ಪೂರ್ವಜರು?

2015 ರಲ್ಲಿ ಶ್ರೀರಂಗಂ ದೇವಸ್ಥಾನದ ಪರಿಸರದಲ್ಲಿ ನವೀಕರಣ ಕಾರ್ಯಗಳಾಗುತ್ತಿದ್ದಾಗ, ಮಂದಿರದ ನೆಲಮಾಳಿಗೆಯನ್ನು ತೆರೆಯಲಾಗುತ್ತದೆ. ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ನೆಲಮಾಳಿಗೆಯ ಬಾಗಿಲನ್ನು ತೆರೆದಾಗ ಅವರಿಗೆ ಆಶ್ಚರ್ಯವೊಂದು ಕಾದಿರುತ್ತದೆ. ಆ ನೆಲಮಾಳಿಗೆಯೊಳಗೆ ಖಜಾನೆ ಮತ್ತು ವಿಮಾನದಂತಹ ವಸ್ತುವೊಂದು ಪತ್ತೆಯಾಗುತ್ತದೆ. ಈ ವಿಚಾರವನ್ನು ದೇವಾಲಯದ ಆಡಳಿತಕ್ಕೆ ಮತ್ತು ಸರಕಾರಕ್ಕೆ ತಿಳಿಸಲಾಗುತ್ತದೆ. ಸುದ್ದಿ ತಿಳಿದು ಹೌಹಾರಿದ ಆಡಳಿತ ಮಂಡಳಿ ಮತ್ತು ಸರಕಾರ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ, ಒಂದೆ ವಾರದೊಳಗೆ ಆ ಕೋಣೆಯನ್ನು ಮುಚ್ಚಿ ಸೀಲ್ ಮಾಡಿ ಬಿಡುತ್ತದೆ!! ಅಲ್ಲಿಂದ ಇಲ್ಲಿವರೆಗೆ ಭೂಗತ ಕಕ್ಷೆ ಇರುವ ಕೋಣೆಗೆ ಯಾರಿಗೂ ಪ್ರವೇಶವಿಲ್ಲ.

ಶ್ರೀರಂಗಂ ಮಂದಿರದ ಪರಿಸರ ಪ್ರಾಚೀನ ವಿಮಾನ ನಿಲ್ದಾಣವೆ?

ಕೂಲಂಕುಷವಾಗಿ ಅವಲೋಕಿಸಿದರೆ ಈ ದೇವಾಸ್ಥಾನದ ವಾಸ್ತುಕಲೆಯಲ್ಲಿ ಹಲವಾರು ರೀತಿಯ ವಿಮಾನಗಳನ್ನು ಕೆತ್ತಲಾಗಿರುವುದು ಕಂಡುಬರುತ್ತದೆ! ಭಾರದ್ವಾಜ ಋಷಿಗಳು ವಿಮಾನ ಶಾಸ್ತ್ರದಲ್ಲಿ ಬರೆದಿರುವಂತ ವಿಮಾನಗಳನ್ನು ಗೋಪುರದಲ್ಲಿ ಕೆತ್ತಲಾಗಿದೆ. ಇಡಿಯ ಶ್ರೀರಂಗಂ ಪರಿಸರದ ದೇವಸ್ಥಾನದ ಗೋಪುರಗಳು ವಿಮಾನವನ್ನೆ ಹೋಲುತ್ತವೆ. ಈ ಎಲ್ಲಾ ಗೋಪುರಗಳ ಮಧ್ಯೆ ಲಕ ಲಕ ಹೊಳೆಯುವ ಅಪ್ಪಟ ಚಿನ್ನದಿಂದ ಮಾಡಿದ ಗೋಪುರವಿದೆ. ಇದು ಸ್ವತಃ ವಿಷ್ಣು ಭೂಲೋಕ ಸಂಚಾರಕ್ಕಾಗಿ ಬಳಸಿದ್ದ ಬಂಗಾರದಿಂದ ಮಾಡಲ್ಪಟ್ಟ ವಿಮಾನವೆನ್ನಲಾಗಿದೆ! ಈ ವಿಮಾನದ ಮೇಲ್ಭಾಗ ಮಾತ್ರ ನಮಗೆ ಕಾಣಿಸುತ್ತಿದೆ. ಆದರೆ ಈ ವಿಮಾನದ ಬಹುತೇಕ ಭಾಗ ಭೂಮಿಯೊಳಗೆ ಹುದುಗಿದೆ ಎಂದು ಹೇಳುತ್ತಾರೆ. ಹಾಗೆಯೆ ಈ ಮಂದಿರದ ನೆಲ ಮಾಳಿಗೆಯಲ್ಲಿ ವಿಮಾನವೊಂದನ್ನು ಹುದುಗಿಸಲಾಗಿದೆ ಎಂದು ಹೇಳಲಾಗುತ್ತದೆ.

ಪುರಾಣಗಳಲ್ಲಿ ದೇವತೆಗಳು ವಿಮಾನ (UFO) ಮೂಲಕ ಲೋಕ ಸಂಚಾರ ಮಾಡುತ್ತಿದ್ದರು. ಅದಕ್ಕೆ ನೋಡಿ ನಮ್ಮ ಹಿರಿಯರು ದೇವರು ಆಕಾಶದಿಂದ ಬರುತ್ತಾನೆ ಅಂದು ಮೇಲೆ ನೋಡಿ ಕೈ ಮುಗಿಯುತ್ತಿದ್ದುದು! ಅಂದರೆ ಪ್ರಾಚೀನ ಕಾಲದಲ್ಲಿ ದೇವರೆಂದೆನಿಕೊಂಡವರ ಬಳಿ ಉನ್ನತವಾದ ವಿಮಾನಗಳಿರುತ್ತಿದ್ದವು. ವಿಷ್ಣುವಿನ ವಿಮಾನದ ಹೆಸರು ಗರುಡ ಎಂದಿರಬಹುದು. ಕುಬೇರನ ಬಳಿ ಪುಷ್ಪಕ ವಿಮಾನವಿತ್ತು. ಹೀಗೆ ಪ್ರತಿಯೊಬ್ಬರ ಬಳಿ ತನ್ನದೆ ಆದ ಆಯುಧ, ವಿಮಾನ ಮತ್ತು ಇನ್ನಿತರ ವಸ್ತುಗಳಿರುತ್ತಿದ್ದವು ಮತ್ತು ಅವುಗಳಿಗೆ ಪ್ರತ್ಯೇಕ ಹೆಸರುಗಳಿರುತ್ತಿದ್ದವು! ಪಾಮರರಾದ ಹುಲು ಮಾನವರ ಜ್ಞಾನಕ್ಕೆ ಈ ಎಲ್ಲಾ ವಿಷಯಗಳು ನಿಲುಕದಿದ್ದರಿಂದ ವೇದ-ಪುರಾಣಗಳು ಕಾಗಕ್ಕ-ಗೂಬಕ್ಕ ಕಥೆ ಎಂದು ಜರೆದರು.

ಶ್ರೀರಂಗಂ ಮಂದಿರದ ಬಗ್ಗೆ ಬರೆಯಲಾದ “ಶ್ರೀರಂಗಂ ಮಹಾತ್ಮೆ” ಗ್ರಂಥದಲ್ಲಿ ವಿಷ್ಣು ಈ ಜಾಗದಲ್ಲಿ ಪ್ರತ್ಯಕ್ಷನಾಗಿದ್ದ ಎಂದು ಬರೆಯಲಾಗಿದೆ. ಅಂದರೆ ಈ ವಿಮಾನವನ್ನು ಕೆತ್ತಿದ್ದಲ್ಲ ಬದಲಾಗಿ ವಿಷ್ಣು ಈ ವಿಮಾನದ ಮೂಲಕ ಇಲ್ಲಿಗೆ ಬಂದು ಈ ಜಾಗದಲ್ಲಿ ಭೂ ಸ್ಪರ್ಶ ಮಾಡಿದ್ದ. ಬಹುಷ ಆ ಕಾಲದಲ್ಲಿ ಇದೊಂದು ವಿಮಾನ ನಿಲ್ದಾಣವಾಗಿದ್ದಿರಬಹುದು. ವಿಷ್ಣು ತನ್ನ ವಿಮಾನವನ್ನು ಇಲ್ಲಿಯೆ ನೆಲೆ ನಿಲ್ಲಿಸಿ ತದ ನಂತರ ಇದೆ ಜಾಗದಲ್ಲಿ ಮಂದಿರ ಕಟ್ಟಿರಬಹುದು. ಈ ಮಂದಿರದ ಗರ್ಭದಲ್ಲಿ ಇನ್ನೆಷ್ಟು ರಹಸ್ಯಗಳು ಅಡಗಿವೆಯೋ ಆ ವೈಕುಂಠವಾಸಿ ರಂಗನಾಥನಿಗೇ ಗೊತ್ತು ಹೊರತು ಬೇರಾರಿಗೂ ಗೊತ್ತಿಲ್ಲ.

ಮೇಲಿನ ಎಲ್ಲಾ ತರ್ಕಗಳನ್ನು ಪುಷ್ಟೀಕರಿಸುವಂತಹ ಘಟನೆ ದೂರದ ಅಫಘಾನಿಸ್ತಾನದಲ್ಲಿಯೂ ನಡೆದಿದೆ. ವೇದ ಕಾಲದಲ್ಲಿ ಅಫಘಾನಿಸ್ತಾನವೂ ಭಾರತದ ಭಾಗವೆ ಆಗಿತ್ತು ಎನ್ನುವುದು ಎಲ್ಲರಿಗೂ ತಿಳಿದಿದೆ. 2013 ಅಮೇರಿಕಾದ ಸೈನಿಕರು ಅಫಘಾನಿಸ್ತಾನದ ಒಂದು ಗುಹೆಯಲ್ಲಿ ಪ್ರಾಚೀನ ಕಾಲದ ವಿಮಾನದ ಬಿಡಿ ಭಾಗಗಳನ್ನು ಕಂಡೆವೆಂದು ಜಗತ್ತಿಗೆ ತಿಳಿಸುತ್ತಾರೆ. ಈ ಬಿಡಿ ಭಾಗಗಳು ಐದು ಸಾವಿರ ವರ್ಷಗಳಷ್ಟು ಹಳೆಯದು ಎಂದು ಕಂಡುಕೊಳ್ಳಲಾಗುತ್ತದೆ. ಸುದ್ದಿ ತಿಳಿದ ಕೂಡಲೆ ಜಗತ್ತಿನ ದೊಡ್ಡ ದೊಡ್ಡ ದೇಶಗಳ ರಾಷ್ಟ್ರಾಧ್ಯಕ್ಷರು ಅಲ್ಲಿಗೆ ದೌಡಾಯಿಸುತ್ತಾರೆ. ವಿಚಿತ್ರವೆಂದರೆ ವಿಮಾನವನ್ನು ನೋಡಿದ್ದೇವೆ ಎಂದು ಹೇಳಿದ ಸೈನಿಕರು ಕಣ್ಮರೆಯಾಗುತ್ತಾರೆ ಮತ್ತು ಅವರು ಚಿತ್ರೀಕರಿಸಿದ ಕ್ಯಾಮರಾ ಗುಹೆಯ ಬಾಗಿಲಲ್ಲಿ ದೊರಕುತ್ತದೆ!!

ಇದು ಕೇವಲ ಕಾಕತಾಳೀಯವೋ ಇಲ್ಲ ಬೇಕೆಂದೇ ಮಾಡಿದ ಕುತಂತ್ರವೊ ಗೊತ್ತಿಲ್ಲ. ಒಂದಂತೂ ಸತ್ಯ, ಜಗತ್ತಿನಾದ್ಯಂತ ಮತ್ತು ಭಾರತದಲ್ಲೂ ವೇದ-ಪುರಾಣಗಳು ಸತ್ಯವೆಂದು ಸಾರುವ ಸಾಕ್ಷಿಗಳು ದೊರಕುತ್ತಿವೆ. ಆದರೆ ಸರಕಾರಗಳು ಅದನ್ನು ಜನರ ಕಣ್ಣಿಗೆ ಕಾಣದಂತೆ ಮುಚ್ಚಿಡುತ್ತಿವೆ. ಸನಾತನ ಭಾರತದ ನೈಜ ಇತಿಹಾಸವನ್ನು ಸನಾತನಿಗಳಿಂದಲೆ ಮುಚ್ಚಿಟ್ಟು ಸರಕಾರಗಳು ಜನತೆಗೆ ದ್ರೋಹ ಬಗೆಯುತ್ತಿವೆ. ಪಾಶ್ಚಾತ್ಯ ದೇಶಗಳ ಏಸು ಮೊದಲು-ಅಲ್ಲಾ ಮೊದಲು ಎನ್ನುವ ಸುಳ್ಳನ್ನು ಸನಾತನಿಗಳು ನಂಬುವಂತೆ ಮಾಡಲಾಗುತ್ತಿದೆ. ಸುಳ್ಳಿಗೆ ಆಯಸ್ಸು ಕಡಿಮೆ ಒಂದಲ್ಲಾ ಒಂದು ದಿನ ಆ ಸುಳ್ಳು ಸಾಯಲೆ ಬೇಕು.

ಸತ್ಯವನ್ನು ಬಚ್ಚಿಡಬಹುದು ಆದರೆ ನಿರ್ನಾಮ ಮಾಡಲಾಗುವುದಿಲ್ಲ. ಕಾಲ ಗರ್ಭದಲ್ಲಿ ಬಲವಂತವಾಗಿ ಹುದುಗಿಸಲಾದ ಸತ್ಯಗಳು ಒಂದು ದಿನ ಹೊರ ಬಂದೆ ಬರುತ್ತವೆ. ಸನಾತನ ಧರ್ಮದ ಜನನಿ ಭಾರತ, ವಿಶ್ವದ ಎಲ್ಲಾ ನಾಗರಿಕತೆಯ ತೊಟ್ಟಿಲು ಎಂದು ಸಾಕ್ಷಿ ಸಮೇತ ಸಾಬೀತಾಗುವ ದಿನ ಬಂದೇ ಬರುತ್ತದೆ. ಸನಾತನವೆಂಬ ವಿಷಾಲ ವೃಕ್ಷವೆ ಸತ್ಯ. ವೇದ-ಪುರಾಣ-ಉಪನಿಷತ್ತು-ಮಹಾಕಾವ್ಯಗಳು ನೂರಕ್ಕೆ ನೂರರಷ್ಟು ಸತ್ಯ…

Postcard team

Tags

Related Articles

FOR DAILY ALERTS
 
FOR DAILY ALERTS
 
Close