ಪ್ರಚಲಿತ

ಬಿಗ್ ಬ್ರೇಕಿಂಗ್! ರಾಮಮಂದಿರ – ಶಬರಿಮಲೆ ಚರ್ಚೆಗೆ ಮುಕ್ತಾಯ ಹಾಡಲು ಭಾಗವತ್ – ಶಾ ಸಜ್ಜು! ಸುಪ್ರೀಂ ಕೋರ್ಟ್ ಆದೇಶ ಮೀರಿ ನಿರ್ಮಾಣವಾಗುತ್ತಾ ಮಂದಿರ?

 

ಕಾನೂನು ಎಂಬುದು ರಚನೆಯಾಗುವುದಕ್ಕೂ ಮೊದಲೇ ಸನಾತನ ಹಿಂದೂ ಧರ್ಮ ಹುಟ್ಟಿಕೊಂಡಿತ್ತು. ಆದರೆ ಈಗ ಹಿಂದೂ ಧರ್ಮದ ಪ್ರತಿಯೊಂದು ಆಚಾರಕ್ಕೂ ಕಾನೂನು ಪ್ರಕಾರವೇ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಸದ್ಯ ಅಯೋಧ್ಯೆ ಶ್ರೀ ರಾಮಮಂದಿರ ವಿಚಾರವಾಗಿ ದೇಶಾದ್ಯಂತ ಚರ್ಚೆಯಾಗುತ್ತಿದ್ದು ನ್ಯಾಯಾಲಯ ಕೂಡ ಹಿಂದೂಗಳ ಭಾವನೆಗಳ ಜೊತೆ ಆಟ ಆಡುವಂತಿದೆ, ಪ್ರತೀ ಬಾರಿ ಇನ್ನೇನು ತೀರ್ಪು ಹೊರ ಬೀಳುತ್ತದೆ ಎಂದು ಸಂಭ್ರಮದಿಂದ ಕಾಯುತ್ತಿರುವ ಹಿಂದೂಗಳಿಗೆ ಕೋರ್ಟ್ ನಿರಾಸೆ ಉಂಟು ಮಾಡುತ್ತಿದೆ. ಕಳೆದ ತಿಂಗಳಷ್ಟೇ ರಾಮಮಂದಿರ ವಿಚಾರವಾಗಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮುಂದೂಡಿತ್ತು, ಮಸೀದಿ ನಿರ್ಮಾಣಕ್ಕೆ ಅವಕಾಶ ಇಲ್ಲ ಅದೇ ರೀತಿ ರಾಮಜನ್ಮ ಭೂಮಿಯಲ್ಲಿ ಮಂದಿರ ನಿರ್ಮಾಣ ಆಗುತ್ತದೆ ಎಂಬ ನಂಬಿಕೆ ಇಟ್ಟುಕೊಂಡಿದ್ದ ಹಿಂದೂಗಳು ಡಿಸೆಂಬರ್ ತಿಂಗಳಲ್ಲೇ ನಿರ್ಮಾಣ ಕಾರ್ಯ ಆರಂಭಿಸುವುದಾಗಿ ಹೇಳಿಕೊಂಡಿದ್ದರು. ಆದರೆ ಇದೀಗ ಸುಪ್ರೀಂ ಕೋರ್ಟ್ ಮತ್ತೆ ವಿಚಾರಣೆಯನ್ನು ಜನವರಿ ತಿಂಗಳಲ್ಲಿ ನಡೆಸುವುದಾಗಿ ಮುಂದೂಡಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಭಾರತೀಯ ಜನತಾ ಪಕ್ಷ ಗರಂ ಆಗಿದೆ. ಸುಪ್ರೀಂ ಕೋರ್ಟ್ ನೀಡಿದ ಈ ಆದೇಶದ ಮೇರೆಗೆ ಮುಂದಿನ ಕ್ರಮ ಏನು ಎಂಬುದನ್ನು ಚರ್ಚಿಸಲು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾತುಕತೆಗೆ ಮುಂದಾಗಿದ್ದಾರೆ.!

ಮಂದಿರ – ಶಬರಿಮಲೆ ವಿಚಾರವಾಗಿ ಚರ್ಚೆಗೆ ಮುಂದಾದ ಶಾ-ಭಾಗವತ್!

ಹಿಂದೂಗಳು ಅದೆಷ್ಟೋ ವರ್ಷಗಳಿಂದ ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಡುತ್ತಾ ಬಂದಿದ್ದಾರೆ, ಆದರೆ ಕಾನೂನು ಮೀರಿ ಯಾವತ್ತೂ ನಡೆದುಕೊಂಡಿಲ್ಲ. ಕಾನೂನಿಗೆ ತಲೆಬಾಗುತ್ತಲೇ ಬಂದಿರುವ ಹಿಂದೂಗಳಿಗೆ ಸದ್ಯ ರಾಮಮಂದಿರ ಮತ್ತು ಶಬರಿಮಲೆ ವಿಚಾರವಾಗಿ ಭಾರೀ ಹಿನ್ನಡೆಯಾಗುತ್ತಲೇ ಇದೆ. ರಾಮಮಂದಿರ ವಿಚಾರವಾಗಿ ಸುಪ್ರೀಂ ಕೋರ್ಟ್ ನಿರಾಸೆ ಉಂಟು ಮಾಡುತ್ತಿದ್ದರೆ, ಶಬರಿಮಲೆ ವಿಚಾರವಾಗಿ ಕೇರಳ ಸರಕಾರ ಮತ್ತು ಸುಪ್ರೀಂ ಕೋರ್ಟ್ ಭಾರೀ ಹೊಡೆತ ನೀಡುತ್ತಿದೆ. ಆದ್ದರಿಂದಲೇ ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿದ ಭಾರತೀಯ ಜನತಾ ಪಕ್ಷ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೇಗಾದರೂ ಮಾಡಿ ಈ ಘಟನೆಗೆ ಪೂರ್ಣವಿರಾಮ ಹಾಕಬೇಕೆಂಬ ನಿರ್ಧಾರಕ್ಕೆ ಬಂದಿದೆ. ಅದೇ ಕಾರಣಕ್ಕೆ ಇದೀಗ ಮುಂಬೈನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡ ಭಾಗಿಯಾಗಲಿದ್ದು ಮೋಹನ್ ಭಾಗವತ್ ಅವರ ಜೊತೆ ಗಂಭೀರ ಚರ್ಚೆ ನಡೆಸಲಿದ್ದಾರೆ.

ಇತ್ತ ಆರ್‌ಎಸ್‌ಎಸ್ ಪ್ರಮುಖರು ರಾಮಮಂದಿರ ನಿರ್ಮಾಣ ಕಾರ್ಯ ಯಾವುದೇ ಕಾರಣಕ್ಕೂ ವಿಳಂಬವಾಗಬಾರದು ಎಂಬ ಎಚ್ಚರಿಕೆಯನ್ನು ನೀಡಿದ್ದು ಬಿಜೆಪಿಗೆ ಸವಾಲಾಗಿ ಪರಿಣಮಿಸಿದೆ. ಯಾಕೆಂದರೆ ರಾಮಮಂದಿರ ನಿರ್ಮಾಣ ಬಿಜೆಪಿಯ ಪ್ರಣಾಳಿಕೆಯ ಪ್ರಮುಖ ಅಸ್ತ್ರ, ಆದ್ದರಿಂದ ಮುಂದಿನ ಲೋಕಸಭಾ ಚುನಾವಣೆಗೂ ಮೊದಲೇ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಬೇಕಿದೆ. ಆದ್ದರಿಂದ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಮುಂದೆ ಯಾವ ರೀತಿ ತಂತ್ರ ರೂಪಿಸಬಹುದು ಎಂಬ ಚರ್ಚೆ ಇಂದು ನಡೆಯಲಿದ್ದು ಅಯೋಧ್ಯೆ ಮತ್ತು ಶಬರಿಮಲೆ ವಿಚಾರವಾಗಿ ಮಹತ್ವವಾದ ನಿರ್ಧಾರ ಇಂದು ತೆಗೆದುಕೊಳ್ಳಲಿದ್ದಾರೆ.!

ಸುಪ್ರೀಂ ಕೋರ್ಟ್ ಆದೇಶಕ್ಕೂ ಮೊದಲೇ ನಿರ್ಮಾಣವಾಗುತ್ತಾ ಮಂದಿರ?

ಹೌದು ಇದು ನಿನ್ನೆ ಮೊನ್ನೆಯ ವಿಚಾರವಲ್ಲ, ಅದೆಷ್ಟೋ ವರ್ಷಗಳಿಂದ ರಾಮಮಂದಿರ ನಿರ್ಮಾಣ ಆಗಲಬೇಕು ಎಂದು ಹಿಂದೂಪರ ಸಂಘಟನೆಗಳು ಹೋರಾಡುತ್ತಾ ಬಂದಿವೆ, ಮಾತ್ರವಲ್ಲದೆ ಅದೆಷ್ಟೋ ಬಲಿದಾನಗಳು ಕೂಡ ಆಗಿದೆ. ಆದ್ದರಿಂದಲೇ ರಾಮಮಂದಿರ ನಿರ್ಮಾಣ ಆಗಬೇಕು ಎಂಬುದು ಹಿಂದೂಗಳ ಆಗ್ರಹ, ಈಗಾಗಲೇ ಕೆಲವೊಂದು ಮುಸ್ಲಿಂ ಸಂಘಟನೆಗಳು ಕೂಡ ಮಂದಿರ ನಿರ್ಮಾಣಕ್ಕೆ ಬೆಂಬಲ ಸೂಚಿಸಿದ್ದು ಸುಪ್ರೀಂ ಕೋರ್ಟ್ ಆದೇಶ ಹೊರಬೀಳುವುದೊಂದೇ ಬಾಕಿ. ಆದರೆ ಸುಪ್ರೀಂ ಕೋರ್ಟ್ ಆದೇಶ ಯಾರ ಪರವಾಗಿಯೇ ಬರಲಿ, ಮಂದಿರ ನಿರ್ಮಾಣ ಖಂಡಿತ ಎಂದಿರುವ ಮಂದಿರ ಪರ ಹೋರಾಟಗಾರರು, ಕೋರ್ಟ್ ಆದೇಶ ಕೇವಲ ಕಾನೂನು ಪ್ರಕಾರ ಹೋಗುವುದಕ್ಕೆ ಮಾತ್ರ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಆದ್ದರಿಂದ ಸುಪ್ರೀಂ ಕೋರ್ಟ್ ತೀರ್ಪು ನೀಡುವುದಕ್ಕೂ ಮೊದಲೇ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾದರೂ ಆಶ್ಚರ್ಯ ಪಡಬೇಕಾಗಿಲ್ಲ. ಇತ್ತ ಭಾರತೀಯ ಜನತಾ ಪಕ್ಷ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೂಡ ಮಹತ್ವವಾದ ಮಾತುಕತೆಗೆ ಮುಂದಾಗಿರುವುದು ಬಹಳ ಕುತೂಹಲ ಕೆರಳಿಸುವಂತೆ ಮಾಡಿದೆ. ಅದೇನೇ ಆಗಲಿ ಅಯೋಧ್ಯೆ ವಿಚಾರವಾಗಿ ಹಿಂದೂಗಳ ಪರ ತೀರ್ಪು ಬರಲಿ ಮತ್ತು ಮಂದಿರ ನಿರ್ಮಾಣ ಕಾರ್ಯ ಸುಸೂತ್ರವಾಗಿ ನಡೆಯಲಿ ಎಂಬುದೇ ಪ್ರತಿಯೊಬ್ಬ ಹಿಂದೂವಿನ ಆಶಯ..!!

–ಸಾರ್ಥಕ್ ಶೆಟ್ಟಿ

maharashtratimes

Tags

Related Articles

FOR DAILY ALERTS
 
FOR DAILY ALERTS
 
Close