ಅಂಕಣ

ತಾಜ್‍ಮಹಲ್‍ನ ರಹಸ್ಯ ಬಿಚ್ಚಿಟ್ಟ ಮಾರ್ವಿನ್ ಎಚ್.ಮಿಲ್ಸ್!! ತಾಜ್ ಮಹಲ್ ಹಿಂದೆ ಹಿಂದೂ ದೇವಾಲಯವಾಗಿತ್ತು ಎಂದ ಅಮೆರಿಕಾದ ಪುರಾತತ್ವ ಇಲಾಖೆ!!

ಏಳು ಅದ್ಭುತಗಳಲ್ಲಿ ಒಂದಾದ ತಾಜ್‍ಮಹಲ್‍ನಲ್ಲಿ ಅಡಗಿರುವ ಕೆಲ ಅದ್ಭುತ ವಿಚಾರಗಳ ಬಗ್ಗೆ ಇನ್ನೂ ಅನೇಕ ಜನರಲ್ಲಿ ಗೊಂದಲವನ್ನು ಮೂಡಿಸುತ್ತವೆ!! ಈಗಾಗಲೇ ತಾಜ್ ಮಹಲ್‍ನ ರಹಸ್ಯದ ಬಗ್ಗೆ ಭಾರತದ ಪುರಾತತ್ವ ಇಲಾಖೆಯ ಪಿ.ಎನ್ ಓಕ್‍ರವರು ತಾಜ್‍ಮಹಲ್ ಒಂದು ಹಿಂದೂ ದೇವಾಲಯ ಎಂದು ಈಗಾಗಲೇ ತನ್ನ ಪುಸ್ತಕದಲ್ಲಿ ಬರೆದಿರುವ ವಿಚಾರ ಗೊತ್ತೆ ಇದೆ.. ಇದೀಗ ಅಮೆರಿಕಾದ ಪುರಾತತ್ವ ಅಧಿಕಾರಿ ಪ್ರೊಫೆಸರ್ ಮಾರ್ವಿನ್ ಎಚ್ ಮಿಲ್ಸ್ ರವರು ತಾಜ್‍ಮಹಲ್ ಒಂದು ಹಿಂದೂ ದೇವಾಲಯ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ!!

ತಾಜ್‍ಮಹಲ್ ಹಿಂದೆ ಹಿಂದೂ ದೇವಾಲಯವಾಗಿತ್ತು ಎಂದ ಅಮೆರಿಕಾದ ಪುರಾತತ್ವ ಅಧಿಕಾರಿ!!

ಜಗತ್ತಿನ 7 ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಬಗ್ಗೆ ಹಲವಾರು ವಾದ ವಿವಾದಗಳಿವೆ. ಶಹಜಹಾನ್ ತನ್ನ ಪತ್ನಿ ಮುಮ್ತಾಝ್ ನೆನಪಿಗಾಗಿ ಕಟ್ಟಿದ ಪ್ರೇಮ ಸೌಧ ಇದೆಂದು ಅಧಿಕೃತವಾಗಿ ನಂಬಲಾದರೂ ಇದರ ಹಿಂದೆ ಬೇರೆಯದ್ದೇ ಇತಿಹಾಸ ಇದೆ ಎಂಬುವುದು ಹಲವರ ವಾದವಾಗಿದೆ. ಭಾರತದ ಪ್ರಸಿದ್ಧ ಇತಿಹಾಸಕಾರ ಪುರುಷೋತ್ತಮ್ ನಾಗೇಶ್ ಓಕ್‍ರಂತೆ ಅಮೆರಿಕಾದ ಪುರಾತತ್ವ ಇಲಾಖೆಯ ಅಧಿಕಾರಿ ಪ್ರೊಫೆಸರ್ ಮಾರ್ವಿನ್ ಎಚ್.ಮಿಲ್ಸ್ ಅವರು ಕೂಡಾ ತಾಜ್ ಮಹಲ್ ನಿಜವಾಗಿ ಹಿಂದೂ ಸ್ಮಾರಕವಾಗಿದೆ ಎಂದಿದ್ದಾರೆ!! ಇದನ್ನು ಮೊಘಲರು ಆಕ್ರಮಿಸಿಕೊಂಡ ಬಳಿಕ ಇಸ್ಲಾಂ ಸಮಾಧಿಯನ್ನಾಗಿ ಪರಿವರ್ತಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್‍ಗೆ ಬರೆದ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ!!

ಈ ರೀತಿಯ ಹಲವು ಸಂಶೋಧನೆಗಳ ಮೂಲಕ ಮಿಲ್ಸ್ ರವರು ತಮ್ಮ ಸಂಶೋಧನಾ ಪತ್ರದ ಮೂಲಕ ಮಾಡಿಕೊಂಡಿರುವ ಅಪೀಲ್ ನ ಪ್ರಕಾರ ತಾಜಮಹಲ್ ನ ಕಟ್ಟಿದ ದಿನಾಂಕದ ಕುರಿತಾಗಿ ಕಾರ್ಬನ್-14 ಹಾಗೆಯೇ ಥರ್ಮೋಲ್ಯೂನೆನ್ಸೆಂಸ್ ಮೂಲಕ ಅಸಲಿ ದಿನಾಂಕವನ್ನ ಕಂಡು ಹಿಡಿಯಬಹುದಾಗಿದೆ ಎಂದಿದ್ದಾರೆ. ಈ ಕಾರ್ಯಕ್ಕಾಗಿ ಭಾರತೀಯ ಪುರಾತತ್ವ ವಿಭಾಗಕ್ಕೆ ಸರ್ಕಾರವು ಈ ಸಂಶೋಧನೆ ಮಾಡಲು ಅನುವುಮಾಡಿ ಕೊಡಬೇಕಾಗುತ್ತದೆ. ಇದರಿಂದ ಭಾರತದ ಇತಿಹಾಸದಲ್ಲಿ ಮುಚ್ಚಿ ಹೋಗಿರುವ ಕರಾಳ ಸುಳ್ಳೊಂದು ಬಯಲಾಗಿ ದೇಶದ ಜನತೆಗೆ ನೈಜ ಇತಿಹಾಸದ ಅರಿವಾಗಲಿದೆ.

ಅದಲ್ಲದೆ ಈಗಾಗಲೇ ಪುರುಷೋತ್ತಮ್ ನಾಗೇಶ್ ಓಕ್ ಬರೆದಿರುವ ಪುಸ್ತಕದಲ್ಲಿ ತಾಜ್ ಮಹಲ್- ಒಂದು ಸತ್ಯ ಕಥೆಯಾಗಿದ್ದು ತಾಜ್ ಮಹಲ್ ನ ರಹಸ್ಯವನ್ನು ಬಯಲಾಗಿಸುತ್ತಾ ಹೋಗಿದ್ದಾರೆ. ಅವರು ಹೇಳುವಂತೆ ತಾಜ್ ಮಹಲ್ ರಾಣಿ ಮುಮ್ತಾಜಳ ಗೋರಿಯಾಗಿರದೆ ಅದೊಂದು ಹಿಂದೂಗಳ ಪುರಾತನ ಪವಿತ್ರ ಕ್ಷೇತ್ರವಾಗಿತ್ತು. ಅದು ತೇಜೋ ಮಹಾಲಯ ಎಂದು ಕರೆಯಲ್ಪಡುವ ಶಿವ ಕ್ಷೇತ್ರವಾಗಿತ್ತು. ತಮ್ಮ ಸಂಶೋಧನೆಯ ಹಾದಿಯಲ್ಲಿ ಓಕ್ ತೇಜೋ ಮಹಾಲಯವನ್ನು ಆಗ ಜೈಪುರದ ರಾಜನಾಗಿದ್ದ ಜೈಸಿಂಗ್ ನಿಂದ ಕಿತ್ತುಕೊಳ್ಳಲಾಗಿತ್ತು ಎಂಬ ಸತ್ಯವನ್ನು ನಮೂದಿಸಿದ್ದಾರೆ!! ತನ್ನ ಬಾದಶಹನಾಮ ದಲ್ಲಿ ಸ್ವತಃ ಷಾಹಜಹಾನ್ ರಾಜಾ ಜೈಸಿಂಗ್ ನಿಂದ ಆಗ್ರಾದ ಒಂದು ವೈಭವೋಪೇತ ಹಾಗೂ ಸುಂದರ ಅರಮನೆಯನ್ನು ಮುಮ್ತಾಜಳ ಶವಸಂಸ್ಕಾರಕ್ಕೆ ಪಡೆದದ್ದನ್ನು ನಮೂದಿಸಿದ್ದಾನೆ.

ಅಷ್ಟೇ ಅಲ್ಲದೇ, ಜೈಪುರದ ಮಾಜಿ ಮಹಾರಾಜರು ತನ್ನ ರಹಸ್ಯ ಸಂಗ್ರಹದಲ್ಲಿ ಷಾಹಜಹಾನ್ ತಾಜ್ ಕಟ್ಟಡವನ್ನು ಅವನಿಗೊಪ್ಪಿಸುವಂತೆ ನೀಡಿದ ಎರಡು ಆಜ್ಞಾಪನಾ ಪತ್ರಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ. ತಾವು ವಶಪಡಿಸಿಕೊಂಡ ದೇವಾಲಯಗಳನ್ನು ಹಾಗೂ ಅರಮನೆಗಳನ್ನು ತಮ್ಮ ನಿಷ್ಠಾವಂತರ ಹಾಗೂ ಅರಮನೆಯ ಪ್ರಜೆಗಳ ಶವಸಂಸ್ಕಾರಕ್ಕೆ ಬಳಸುವ ಪದ್ಧತಿ ಮುಸಲ್ಮಾನ ದೊರೆಗಳಲ್ಲಿತ್ತು ಎಂಬುದನ್ನು ಇತಿಹಾಸವೇ ಹೇಳುತ್ತದೆ.ಪ್ರೊ|| ಓಕ್ ತಮ್ಮ ಸಂಶೋಧನೆಯನ್ನು “ತಾಜ್ ಮಹಲ್” ಎಂಬ ಪದದಿಂದ ಆರಂಭಿಸುತ್ತಾರೆ. ಅವರ ಪ್ರಕಾರ ಆಫ್ಘಾನಿಸ್ಥಾನದಿಂದ ಆಲ್ಜೀರಿಯಾ ವರೆಗಿನ ಯಾವ ದೇಶಗಳಲ್ಲಿಯೂ ಮುಸಲ್ಮಾನರು ಕಟ್ಟಡವನ್ನು “ಮಹಲ್” ಎಂದು ಕರೆಯುವುದಿಲ್ಲ. “ತಾಜ್ ಮಹಲ್” ಎನ್ನುವ ಪದವು “ಮುಮ್ತಾಜ್ ಮಹಲ್” ಎನ್ನುವ ಪದದಿಂದ ಉತ್ಪತ್ತಿಯಾದುದೆಂಬ ಇತಿಹಾಸಕಾರರ ವಾದವನ್ನು ಎರಡು ರೀತಿಯಲ್ಲಿ ಪುರುಷೋತ್ತಮ್ ನಾಗೇಶ್ ಓಕ್ ಖಂಡಿಸಿದ್ದಾರೆ.

ಅದಲ್ಲದೆ ತಾಜ್ ಮಹಲ್ ನಲ್ಲಿ ರಹಸ್ಯ ಕೋಣೆಗಳು ಇವೆ ಎನ್ನುವುದು ತಿಳಿದು ಬಂದಿದ್ದು, ಈ ರಹಸ್ಯ ಕೋಣೆಯೊಳಗೆ ಪ್ರವೇಶೀಸಿದರೆ ಮತ್ತೆ ವಾಪಸ್ ಬರುವುದು ಕಷ್ಟವೆನ್ನುವುದು ಹಲವರ ಅಭಿಪ್ರಾಯವಾಗಿದೆ. ಯಾಕೆಂದರೆ ಅವೆಲ್ಲಾ ಚಕ್ರವ್ಯೂಹದಂತೆ ಇದ್ದು, ಆ ಕೋಣೆಗಳ ಒಳಕ್ಕೆ ಯಾರೂ ಹೋಗಬಾರದೆಂದು ಇಟ್ಟಿಗೆ, ಕಲ್ಲುಗಳಿಂದ ಅವುಗಳನ್ನು ಸೀಜ್ ಮಾಡಲಾಗಿದೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೇ ಅವೆಲ್ಲವೂ ಗಾಡಾಂಧಕಾರದಲ್ಲಿರುತ್ತವಂತೆ. ಹಾಗಾಗಿ ಆ ಕೋಣೆಗಳಿಗೆ ಹೋಗಲು ಯಾರೂ ಸಾಹಸ ಮಾಡಲ್ಲ. ಇನ್ನು ಮುಮ್ತಾಜ್ ಸಮಾಧಿ ಇರುವ ಭಾಗದ ಕೆಳಗೆ ಒಂದು ಪುರಾತನ ಶಿವಾಲಯ ಇತ್ತಂತೆ. ಆದರೆ ಅದನ್ನು ಮುಚ್ಚಿ ಶಹಜಹಾನ್ ತಾಜ್ ಮಹಲ್ ನಿರ್ಮಿಸಿದ ಎಂದು ಕೆಲವರು ಅಭಿಪ್ರಾಯವಾಗಿದೆ!! ಆ ಸಮಾಧಿಯ ಕೆಳ ಭಾಗದಲ್ಲಿ ದೊಡ್ಡ ಸುರಂಗ ಮಾರ್ಗವಿದೆಯೆಂದು ಅದರಲ್ಲಿ ಪುರಾತನ ವಿಗ್ರಹಗಳು ಇವೆಯೆಂಬುವುದು ತಿಳಿದು ಬಂದಿದೆ!! ಅದೇ ರೀತಿ ಡಾಕ್ಟರ್ ಗಾಡ್‍ಬೋಲ್ ಎಂಬ ಸಾಹಿತಿ ಏನು ಹೇಳಿದ್ದಾರೆಂದರೆ ತಾಜ್ ಮಹಲನ್ನು ಶಹಜಹಾನ್ ಕಟ್ಟಸಲಿಲ್ಲವಂತೆ. ಅದನ್ನು ಕಟ್ಟಿದ್ದು ರಾಜಾ ಮಾನ್ ಸಿಂಗ್ ಎನ್ನುತ್ತಾರೆ. ಆದಷ್ಟು ಬೇಗ ತಾಜ್‍ಮಹಲ್‍ನ ಹಿಂದಿರುವ ಇದರ ಸತ್ಯ ಇಡೀ ಜಗತ್ತಿಗೆ ತಿಳಿಯಬೇಕು ಅಷ್ಟೇ…

source: nationalistview

  • Postcard team
Tags

Related Articles

FOR DAILY ALERTS
 
FOR DAILY ALERTS
 
Close