ಪ್ರಚಲಿತ

ಬಹುಕೋಟಿ ಹಗರಣದಲ್ಲಿ ಸೋನಿಯಾ ಗಾಂಧಿ ಆಪ್ತನ ಹೆಸರು ಬಹಿರಂಗ! ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ರೂವಾರಿ ಕ್ರಿಶ್ಚಿಯನ್ ಮಿಷೆಲ್ ಬಾಯ್ಬಿಟ್ಟ ಸತ್ಯ ಏನು?

ಸ್ವಾತಂತ್ರ್ಯ ನಂತರದಲ್ಲಿ ಕಾಂಗ್ರೆಸ್ ಈ ದೇಶವನ್ನು ಯಾವ ರೀತಿ ತನಗೆ ಬೇಕಾದ ರೀತಿಯಲ್ಲಿ ಬಳಸಿಕೊಂಡಿದೆ ಎಂದರೆ ಭಾರತದಲ್ಲಿ ಯಾವ ಮಾರ್ಗದಲ್ಲೆಲ್ಲಾ ಲೂಟಿ ಮಾಡಲು ಸಾಧ್ಯವೋ ಅಂತಹ ಎಲ್ಲಾ‌ ಕಳ್ಳ ಮಾರ್ಗದಲ್ಲಿ ದೇಶದ ಸಂಪತ್ತನ್ನು ದೋಚಿದ ಕಾಂಗ್ರೆಸ್‌ನ ಒಂದೊಂದೇ ಕಳ್ಳ ಮುಖವನ್ನು ಪ್ರಧಾನಿ ನರೇಂದ್ರ ಮೋದಿ ಯಾವ ರೀತಿ ಪತ್ತೆ ಹಚ್ಚಿ ಒಬ್ಬೊಬ್ಬರನ್ನು ಹೆಡೆಮುರಿಕಟ್ಟುತ್ತಿದ್ದಾರೆ ಎಂದರೆ ಇದೀಗ ಬಹುಕೋಟಿ ಹಗರಣದ ಮುಖ್ಯ ರೂವಾರಿ ಕ್ರಿಶ್ಚಿಯನ್ ಮಿಷೆಲ್ ಮತ್ತೊಂದು ಸತ್ಯ ಬಾಯಿ ಬಿಟ್ಟಿದ್ದಾನೆ. ಅಗಸ್ಟಾ ವೆಸ್ಟ್ ಲ್ಯಾಂಡ್‌ ಹಗರಣದಲ್ಲಿ ಸೋನಿಯಾ ಗಾಂಧಿ ಕೂಡ ಭಾಗಿಯಾಗಿದ್ದರು ಎಂಬ ಆರೋಪ ಈ ಹಿಂದೆಯೇ ಕೇಳಿ ಬಂದಿತ್ತು. ಈಗಾಗಲೇ ಸೋನಿಯಾ ಗಾಂಧಿ ಅವರ ಹೆಸರು ಕೂಡ ಈ ಹಗರಣದಲ್ಲಿ ಕೇಳಿ ಬಂದಿದ್ದು, ಇದೀಗ ಸೋನಿಯಾ ಗಾಂಧಿ ಆಪ್ತ ಅಹ್ಮದ್ ಪಟೇಲ್ ಅವರ ಹೆಸರು ಬಹಿರಂಗವಾಗಿದೆ.!

ಪ್ರತಿಯೊಂದು ಡೀಲ್‌ಗೂ ಕೋಡ್ ವರ್ಡ್ ಬಳಸಿದ್ದ ಮಿಷೆಲ್!

ಅಗಸ್ಟಾ ವೆಸ್ಟ್ ಲ್ಯಾಂಡ್‌ ಹೆಲಿಕಾಪ್ಟರ್ ಹಗರಣದಲ್ಲಿ ಮುಖ್ಯ ಡೀಲರ್ ಆಗಿದ್ದ ಕ್ರಿಶ್ಚಿಯನ್ ಮಿಷೆಲ್ ಭಾರತದ ವಶದಲ್ಲಿದ್ದು ನಿರಂತರ ವಿಚಾರಣೆ ನಡೆಯುತ್ತಲೇ ಇದೆ. ಇದೀಗ ಕ್ರಿಶ್ಚಿಯನ್ ಮಿಷೆಲ್ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದು, ಕಾಂಗ್ರೆಸ್ ನಾಯಕ, ಸೋನಿಯಾ ಗಾಂಧಿ ಅವರ ಆಪ್ತ ಅಹ್ಮದ್ ಪಟೇಲ್ ಅವರ ಹೆಸರನ್ನು ಕೂಡ ಉಲ್ಲೇಖಿಸಿದ್ದಾರೆ. ಹಗರಣದಲ್ಲಿ ಡೀಲ್ ಮಾಡುವಾಗ ಕೆಲವೊಂದು ಕೋಡ್ ವರ್ಡ್ ಬಳಕೆ ಮಾಡಲಾಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ. “ಎಪಿ” ಮತ್ತು “FAM” ಎಂಬ ಎರಡು ಕೋಡ್ ವರ್ಡ್‌ನಿಂದಲೇ ವ್ಯವಹಾರ ನಡೆಯುತ್ತಿತ್ತು ಎಂಬುದು ತನಿಖೆಯ ವೇಳೆ ಬಹಿರಂಗವಾಗಿದೆ. ಯಾಕೆಂದರೆ “ಎಪಿ” ಎಂದರೆ ಅಹ್ಮದ್ ಪಟೇಲ್ ಮತ್ತು “FAM” ಎಂದರೆ ಅವರ ಕುಟುಂಬ ಎಂದರ್ಥ. ಅಹ್ಮದ್ ಪಟೇಲ್ ಅವರು ಸೋನಿಯಾ ಗಾಂಧಿ ಅವರ ಆಪ್ತ, ಇತ್ತ ಹಗರಣದಲ್ಲಿ ಕೂಡ ಈತನ‌ ಹೆಸರು ಬಯಲಾಗಿದ್ದು ಸೋನಿಯಾ ಗಾಂಧಿ ಅವರಿಗೂ ಕಂಟಕ ಎದುರಾಗಿದೆ.!

ಜಾರಿ ನಿರ್ದೇಶನಾಲಯವು ಕ್ರಿಶ್ಚಿಯನ್ ಮಿಷೆಲ್ ವಿರುದ್ಧ ಮತ್ತಷ್ಟು ಹೆಚ್ಚುವರಿ ತನಿಖೆ ಆರಂಭಿಸಿದೆ ಮತ್ತು ಒಂದೊಂದೇ ಮಾಹಿತಿ ಕಲೆ ಹಾಕುತ್ತಿದೆ. ಡೈರಿಯಲ್ಲಿ ಬರೆದುಕೊಂಡಂತೆ “ಎಪಿ” ಮತ್ತು “FAM” ಎರಡೂ ಕೂಡ ವ್ಯವಹಾರಕ್ಕೆ ಸಂಬಂಧಿಸಿದ ಎರಡು ಕೀವರ್ಡ್ ಎಂದು ಅಧಿಕಾರಿಗಳು ಹೇಳಿದ್ದಾರೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ನನ್ನ ಮೇಲೆ ಒತ್ತಡ ಹೇರಲಾಗಿತ್ತು, ಅದೇ ರೀತಿ FAM ಎಂದರೆ ಗಾಂಧಿ ಕುಟುಂಬ ಎಂದು ಹೇಳಲಾಗಿದೆ. ಅಂದಿನ ವಾಯುಪಡೆಯ ಮತ್ತು ರಕ್ಷಣಾ ಪಡೆಯ ಅಧಿಕಾರಿಗಳು ಮತ್ತು ಸರಕಾರಕ್ಕೆ ಹಣ ನೀಡಲಾಗಿತ್ತು ಎಂದು ಕ್ರಿಶ್ಚಿಯನ್ ಮಿಷೆಲ್ ಒಪ್ಪಿಕೊಂಡಿದ್ದಾನೆ.

ಕಾಂಗ್ರೆಸ್‌ ಆಡಳಿತದಲ್ಲಿ ಇದ್ದರೆ ಈ ದೇಶವನ್ನು ಯಾವ ರೀತಿ ಕೊಳ್ಳೆ ಹೊಡೆಯುತ್ತದೆ ಎಂಬುದ ಸದ್ಯ ಒಂದೊಂದೇ ಬಯಲಾಗುತ್ತಿದ್ದು ಎಲ್ಲಾ ಕಳ್ಳರನ್ನು ಮೋದಿ ಸರಕಾರ ಹೆಡೆಮುರಿಕಟ್ಟುತ್ತಿದೆ. ವಿಚಾರಣೆ ವೇಳೆ ಕ್ರಿಶ್ಚಿಯನ್ ಮಿಷೆಲ್ ಮತ್ತಷ್ಟು ಭ್ರಷ್ಟರ ಹೆಸರು ಬಾಯಿ ಬಿಟ್ಟರೆ ಕಾಂಗ್ರೆಸ್‌ನ ದೊಡ್ಡ ದೊಡ್ಡ ಕೈಗಳು ಕಂಬಿ ಎಣಿಸುವುದು ಗ್ಯಾರಂಟಿ..!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close