ದೇಶಪ್ರಚಲಿತ

ಸಿದ್ದರಾಮಯ್ಯನವರನ್ನು ಮಣಿಸಿದ ಯೋಗಿಯ ಶಿಕ್ಷಣ ಕ್ರಾಂತಿ.! ಉತ್ತರ ಪ್ರದೇಶದಲ್ಲಿ ಹೊಸ ಶೈಕ್ಷಣಿಕ ಕ್ರಾಂತಿ ಹುಟ್ಟಿದ್ದೇಗೆ ಗೊತ್ತಾ.?!

ಅಧಿಕಾರ ತಮ್ಮ ಕೈಯಲ್ಲಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು, ಸಾಧಿಸುವ ಛಲ ಬೇಕು ಅಷ್ಟೇ. ಇದೇ ರೀತಿಯಲ್ಲಿ ಎಲ್ಲರಿಗೂ ಮಾದರಿಯಾಗುವಂತೆ ಆಡಳಿತ ನಡೆಸುತ್ತಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸದ್ಯ ಮೋದಿ ಸರಕಾರದ ಹಿಂದೂ ಫೈರ್ ಬ್ರಾಂಡ್..!

ವಿದ್ಯಾಭ್ಯಾಸ ಒಂದು ಸರಿಯಾದ ರೀತಿಯಲ್ಲಿ ಇದ್ದರೆ ದೇಶದ ಜನತೆ ಉತ್ತಮ‌ ರೀತಿಯ ಜೀವನ ನಡೆಸುತ್ತಾರೆ. ಅದೇ ಕಾರಣಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಕಾರ ಮಹತ್ತರವಾದ ನಿರ್ಧಾರಕ್ಕೆ ಮುಂದಾಗಿದ್ದಾರೆ. ಮುಖ್ಯಮಂತ್ರಿ ಯಾಗಿ ಆಯ್ಕೆ ಆದ ದಿನದಿಂದಲೇ ಏನಾದರೊಂದು ವಿಶೇಷ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ಯೋಗಿ , ಇದೀಗ ತಮ್ಮ ರಾಜ್ಯದಲ್ಲಿ ಉಚಿತ ಶಿಕ್ಷಣ ನೀಡಲು ಮುಂದಾಗಿದ್ದಾರೆ.

೧೨ನೇ ತರಗತಿಯವರೆಗೆ ಉಚಿತ ಶಿಕ್ಷಣ..!

ಶಾಲೆಯಲ್ಲಿ ವಿದ್ಯೆ ಕಲಿತು ಉತ್ತಮ ರೀತಿಯಲ್ಲಿ ಜೀವನ ಸಾಗಿಸಬೇಕಾಗಿದ್ದ ಮಕ್ಕಳು ತಮ್ಮ ವಿದ್ಯಾಭ್ಯಾಸ ಕಡಿತಗೊಳಿಸಿ ಕೂಲಿ ಕೆಲಸವನ್ನು ಮಾಡುತ್ತಾ ಇದ್ದಾರೆ. ಅದಕ್ಕಾಗಿಯೇ ಯೋಗಿ ಸರಕಾರ ೧೨ನೇ ತರಗತಿಯವರೆಗೆ ಕಲಿಯುವ ವಿದ್ಯಾರ್ಥಿಗಳಿಗೆ ಸರಕಾರದ ವತಿಯಿಂದಲೇ ಉಚಿತ ಶಿಕ್ಷಣ ನೀಡಲು ಮುಂದಾಗಿದೆ. ದೇಶದಲ್ಲೇ ಅನಕ್ಷರತೆ ತಲೆದೂಗುತ್ತಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರ ಈ ನಿರ್ಧಾರಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ.

ವಿದ್ಯಾರ್ಥಿಗಳು ಫುಲ್ ಖುಷ್..!

ಹೆಚ್ಚಿನ ಶಿಕ್ಷಣ ಪಡೆಯಲು ಆಸಕ್ತಿ ಇದ್ದರೂ , ಹಣಕಾಸಿನ ಕೊರತೆಯಿಂದ ಅದೆಷ್ಟೋ ಮಕ್ಕಳು ಶಾಲೆಗೆ ಹೋಗದೆ , ಕೂಲಿ ಕೆಲಸಗಳಿಗೆ ತೆರಳಿ ಶಿಕ್ಷಣ ವಂಚಿತರಾಗುತ್ತಿದ್ದರು. ಆದರೆ ಯೋಗಿ ಸರಕಾರದ ಈ ಒಂದು ನಿರ್ಧಾರದಿಂದ ಉತ್ತರ ಪ್ರದೇಶದ ಮಕ್ಕಳು ಫುಲ್ ಖುಷ್ ಆಗಿದ್ದಾರೆ. ಮನೆಯಲ್ಲಿ ಏನಾದರೊಂದು ತೊಂದರೆ ಎದುರಿಸುತ್ತಿರುವ ಮಕ್ಕಳು ಶಾಲೆಗೆ ಹೋಗದೆ ಕೆಲಸಕ್ಕೆ ಹೋಗುವುದು ಮಾಮೂಲಾಗಿದೆ. ಅದೇ ಕಾರಣಕ್ಕಾಗಿ ಯೋಗಿ ಇಂತಹ ನಿರ್ಧಾರ ಕೈಗೊಂಡಿದ್ದು ಉತ್ತರ ಪ್ರದೇಶ ಮಾತ್ರವಲ್ಲದೆ ದೇಶದ ಎಲ್ಲಾ ಮೂಲೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು..!

ಈ ಮಾತು ಕೇವಲ ಬಾಯಿ ಮಾತಿಗೆ ಸೀಮಿತವಾಗಿರದೆ, ಅದನ್ನು ಕಾರ್ಯರೂಪಕ್ಕೆ ತರಬೇಕಾದರೆ ಒಂದು ರಾಜ್ಯದ ಸರಕಾರದ ಸಹಾಯ ಎಷ್ಟರ ಮಟ್ಟಿಗೆ ಇದೆ ಎಂಬೂದು ಮುಖ್ಯ. ಶಾಲೆಯಲ್ಲಿ ಈ ಮಾತು ಹೇಳಿಕೊಡುತ್ತಾರೆ. ಆದರೆ ಶಾಲೆಗೆ ಹೋಗದ ಮಕ್ಕಳಿಗೆ ಇಂತಹ ಯಾವುದೇ ಶಿಕ್ಷಣ ಪಡೆಯುವುದಿಲ್ಲ. ಆದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತ್ರ ಎಲ್ಲಾ ರೀತಿಯಲ್ಲೂ ವಿಶೇಷವಾಗಿ ನಿರ್ಧಾರ ಕೈಗೊಳ್ಳುವುದರಿಂದಲೇ ಉಚಿತ ಶಿಕ್ಷಣ ನೀಡಿ ಮಕ್ಕಳನ್ನು ಉತ್ತಮ‌ ಪ್ರಜೆಯನ್ನಾಗಿ ರೂಪಿಸಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

೮ನೇ ತರಗತಿಯವರೆಗೆ ಕಡ್ಡಾಯ ಶಿಕ್ಷಣ..!

ದೇಶದಲ್ಲಿ ಈಗಾಗಲೇ ೮ನೇ ತರಗತಿಯವರೆಗೆ ಕಡ್ಡಾಯ ಶಿಕ್ಷಣ ಎಂಬ ಸರಕಾರದ ನಿಯಮವೇ ಇದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಎಂಟನೇ ತರಗತಿಯವರೆಗೆ ಕಡ್ಡಾಯವಾಗಿ ಶಿಕ್ಷಣ ಪಡೆಯಲೇಬೇಕು. ಇಲ್ಲವಾದಲ್ಲಿ ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ ಆಗಿರುತ್ತದೆ. ಆದರೆ ಇದೀಗ ಉಚಿತ ಶಿಕ್ಷಣ ನೀಡುತ್ತಿರುವುದರಿಂದ ಸರಕಾರದ ಈ ನಿಯಮವೂ ಸರಿಯಾದ ರೀತಿಯಲ್ಲಿ ಪಾಲನೆಯಾಗಬಹುದು ಎಂಬ ಆಲೋಚನೆಯಿಂದ ಯೋಗಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

೪ ತಿಂಗಳಲ್ಲಿ ವಿದ್ಯಾರ್ಥಿಗಳ ನೊಂದಣಿ ಅಭಿಯಾನ..!

ಯೋಗಿ ಸರಕಾರದ ಅಂಗ ಪಕ್ಷವಾಗಿರುವ ಎಸ್ ಬಿ ಎಸ್ ಪಿ ಯ ಸಮಾವೇಶದಲ್ಲಿ ಉಚಿತ ಶಿಕ್ಷಣ ನೀಡುವ ಬಗ್ಗೆ ಪ್ರಸ್ತಾಪ ಮಾಡಿದ್ದು , ಇನ್ನೇನು ಕೇವಲ ನಾಲ್ಕು ತಿಂಗಳಲ್ಲಿ ಸ್ವತಃ ಸರಕಾರವೇ ವಿದ್ಯಾರ್ಥಿಗಳ ನೊಂದಣಿಗೆ ಸಂಬಂಧ ವಿಶೇಷ ಅಭಿಯಾನವನ್ನೂ ರಾಜ್ಯದಲ್ಲಿ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. ಉಚಿತ ಶಿಕ್ಷಣ ನೀಡುವ ಮೊದಲೇ ರಾಜ್ಯದಲ್ಲಿ ವಿದ್ಯಾರ್ಥಿಗಳ ನೊಂದಣಿ ಅಭಿಯಾನ ನಡೆಸುವುದರಿಂದ ಒಟ್ಟು ಎಷ್ಟು ವಿದ್ಯಾರ್ಥಿಗಳು ಈ ಯೋಜನೆಯಿಂದ ಶಿಕ್ಷಣ ಪಡೆಯುತ್ತಾರೆ ಎಂಬ ವರದಿಯೂ ಯೋಗಿ ಸರಕಾರದ ಕೈಯಲ್ಲಿ ಇರುತ್ತದೆ.

ಆದ್ದರಿಂದ ಈ ಯೋಜನೆಯಲ್ಲಿ ಯಾವುದೇ ರೀತಿಯ ಮೋಸ ನಡೆಯಲು ಅವಕಾಶ ಇರುವುದಿಲ್ಲ. ಪ್ರತಿಯೊಂದು ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಮೊದಲು ಅದನ್ನು ಕೂಲಂಕಷವಾಗಿ ಪರಿಶೀಲಿಸುವ ಯೋಗಿ ತಾವು ಜಾರಿಗೊಳಿಸಿದ ಯೋಜನೆಯಲ್ಲಿ ಯಾವುದೇ ರೀತಿಯ ವಂಚನೆ ನಡೆಯಬಾರದು ಎಂಬ ನಿಟ್ಟಿನಲ್ಲಿ ಪೂರ್ವಭಾವಿಯಾಗಿ ಎಲ್ಲಾ ತಯಾರಿ ನಡೆಸುತ್ತಾರೆ..!

ಶೀಘ್ರದಲ್ಲೇ ರಾಜ್ಯಾದ್ಯಂತ ಜಾರಿ..!

ಈಗಾಗಲೇ ರಾಜ್ಯದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಮುಂದಾಗಿರುವ ಯೋಗಿ ಸರಕಾರ, ಇದಕ್ಕೆ ಬೇಕಾದ ಎಲ್ಲಾ ರೀತಿಯ ತಯಾರಿ ನಡೆಸುತ್ತಿದೆ. ರಾಜ್ಯದಲ್ಲಿ ಒಟ್ಟು ಎಷ್ಟು ಮಕ್ಕಳು ಅನಕ್ಷರಸ್ಥರಾಗಿದ್ದಾರೆ ಮತ್ತು ಎಷ್ಟು ಮಕ್ಕಳು ಶಾಲೆ ಬಿಟ್ಟು ಕೂಲಿ ಕೆಲಸ ಅಥವಾ ಮನೆಯಲ್ಲಿಯೇ ಇದ್ದಾರೆ ಎಂಬ ಸಮಗ್ರ ವರದಿಯನ್ನು ಪಡೆಯಲು ಯೋಗಿ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದು, ಇನ್ನೇನು ಕೇವಲ ನಾಲ್ಕು ತಿಂಗಳಲ್ಲಿ ಈ ಬಗ್ಗೆ ವರದಿ ಯೋಗಿ ಕೈ ಸೇರಲಿದೆ. ನಂತರದಲ್ಲಿ ಈ ಬಗ್ಗೆ ಆಜ್ಞೆ ಹೊರಡಿಸಲಿದ್ದು ಕಡ್ಡಾಯವಾಗಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲೇಬೇಕು ಎಂಬ ನಿಯಮ ಜಾರಿಗೊಳಿಸುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ.

ಓಲೈಕೆಗಾಗಿ ಒಂದೊಂದೇ ಯೋಜನೆ ಜಾರಿಗೊಳಿಸುತ್ತಿರುವ ಸಿದ್ದರಾಮಯ್ಯ..!

ಸಿದ್ದರಾಮಯ್ಯನವರಿಂದಲೂ ಇಂತಹ ಯೋಜನೆ ಈ ಬಾರಿಯ ಬಜೆಟ್ ನಲ್ಲಿ ಘೋಷಿಸಿದ್ದರು. ಆದರೆ ಇದು ಕೇವಲ ನಾಟಕೀಯವಾಗಿತ್ತು. ಯಾಕೆಂದರೆ ಒಂದು ವರ್ಗದ ಜನರನ್ನು ಓಲೈಸುವುದಕ್ಕಾಗಿ ಈ ಯೋಜನೆ ಜಾರಿಗೊಳಿಸಿದ್ದ ಸಿದ್ದರಾಮಯ್ಯನವರು ತಮ್ಮ ಓಟ್ ಬ್ಯಾಂಕ್ ಗಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಯಾವುದೇ ಯೋಜನಯನ್ನು ಜಾರಿಗೊಳಿಸಿದರು ಅದು ಕೇವಲ ತಮ್ಮ ಚುನಾವಣೆಯ ದೃಷ್ಟಿಯಿಂದ ಜಾರಿಗೊಳಿಸುತ್ತಾರೆ. ಪ್ರತಿಯೊಬ್ಬ ಪ್ರಜೆಗೂ ಅನುಕೂಲವಾಗುವಂತೆ ಯಾವುದೇ ಯೋಜನೆ ಈವರೆಗೆ ಜಾರಿಗೊಳಿಸಿಲ್ಲ. ಆದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತ್ರ ಯಾವುದೇ ಯೋಜನೆಗಳನ್ನು ಜಾರಿಗೊಳಿಸಿದರು ಅದು ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಅನುಕೂಲವಾಗುವಂತೆ ಕಾರ್ಯರೂಪಕ್ಕೆ ತರುತ್ತಾರೆ.

ಅಧಿಕಾರ ವಹಿಸಿಕೊಂಡು ಒಂದು ವರ್ಷ ಪೂರೈಸುತ್ತಿದ್ದಂತೆ ರಾಜ್ಯದಲ್ಲಿ ಮಹತ್ತರವಾದ ಯೋಜನೆಗಳನ್ನು ಜಾರಿಗೊಳಿಸಿ , ಉತ್ತರ ಪ್ರದೇಶವನ್ನು ದೇಶದಲ್ಲೇ ಮಾದರಿ ರಾಜ್ಯವನ್ನಾಗಿ ಮಾಡಲು ಪಣ ತೊಟ್ಟಿರುವ ಯೋಗಿ ಸಾಕಷ್ಟು ದಿಟ್ಟ ನಿರ್ಧಾರಗಳಿಂದ ಕೆಲವೊಂದು ಯೋಜನೆಯನ್ನು ಜಾರಿಗೊಳಿಸುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಉಚಿತ ಶಿಕ್ಷಣ ಯೋಜನೆ ಕೂಡ ಜಾರಿಯಾಗಲಿದ್ದು ಉತ್ತರ ಪ್ರದೇಶದಾದ್ಯಂತ ಮಕ್ಕಳು ಮತ್ತು ಹೆತ್ತವರಲ್ಲಿ ಸಂತಸ ಮನೆ ಮಾಡಿದೆ..!

–ಅರ್ಜುನ್

Tags

Related Articles

Close