ಪ್ರಚಲಿತ

ಬ್ರೇಕಿಂಗ್: ಎತ್ತಂಗಡಿಯಾಗಿದ್ದ ನಲಪಾಡ್ ಆಪ್ತರಕ್ಷಕ ಮತ್ತೆ ಪೊಲೀಸ್ ಠಾಣೆಗೆ ಎಂಟ್ರಿ!! ಮತ್ತೆ ಶುರುವಾಗುತ್ತಾ ನಲಪಾಡ್‍ಗೆ ರಾಜಯೋಗ?

ಕಾಂಗ್ರೆಸ್ ಸರ್ಕಾರದಿಂದ ಮತ್ತಿನ್ನೇನು ನಿರೀಕ್ಷಿಸಲು ಸಾಧ್ಯ? ಕಳ್ಳಾಟವಾಡಿದರೂ ಸರಿ, ಮೋಸ ಮಡಿದರೂ ಸರಿ, ಕೊಲೆ ಮಾಡಿದರೂ ಸರಿ, ದರೋಡೆ ಮಾಡಿದರೂ ಸರಿ. ಏನೇ ಮಾಡಿದರೂ ಆತ ಕಾಂಗ್ರೆಸ್ ಪಕ್ಷದ ಕಟ್ಟಾಳುವಾದರೆ ಸಾಕು ಆತನನ್ನು ಏನೇ ಆದರೂ ಸಾಕುವ ಬುದ್ದಿ ಕಾನೂನು ವಿರೋಧಿ ಕಾಂಗ್ರೆಸ್ ಪಕ್ಷಕ್ಕಿದೆ ಎನ್ನುವುದು ಈಗಲೂ ಹಳೆತಲ್ಲ.

ಎತ್ತಂಗಡಿಯಾಗಿದ್ದ ನಲಪಾಡ್ ರಕ್ಷಕ..!

ಎಸಿಪಿ ಮಂಜುನಾಥ್. ಯುಬಿ ಸಿಟಿಯಲ್ಲಿ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಭಾರೀ ಸುದ್ಧಿಯಾಗಿದ್ದ ಶಾಂತಿ ನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಎಂಬಾತನಿಗೆ ಸಹಕಾರ ನೀಡಿದ ಪೊಲೀಸಪ್ಪ. ಅದ್ಯಾವಾಗ ಗೂಂಡಾ ನಲಪಡ್‍ಗೆ ಈ ಪೊಲೀಸ್ ಮಹಾಶಯ ಭರಪೂರ ಸಹಕಾರವನ್ನು ನೀಡಿದನೋ ಆ ಕೂಡಲೇ ಆ ಸುದ್ಧಿ ಭಾರೀ ಆಕ್ರೋಷಕ್ಕೆ ಕಾರಣವಾಗಿತ್ತು. ಓರ್ವ ಆರೋಪಿಗೆ ರಕ್ಷಣೆ ನೀಡಿ ಆತನಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಕರುಣಿಸಿದ ಈ ಎಸಿಪಿ ಮಂಜುನಾಥ್‍ಗೆ ಸರ್ಕಾರ ಅಥವ ಪೊಲೀಸ್ ಇಲಾಖೆ ಯಾಕೆ ಕಠಿಣ ಕ್ರಮವನ್ನು ಕೈಗೊಳ್ಳುತ್ತಿಲ್ಲ ಎಂಬ ಆಕ್ರೋಷವೂ ಹೊರಬಿದ್ದಿತ್ತು. ಇದರಿಂದ ಕಂಗಾಲಾದ ಪೊಲೀಸ್ ಇಲಾಖೆ ಗೂಂಡಾ ನಲಪಾಡ್‍ಗೆ ಸಹಕಾರ ನೀಡಿದ ಆ ಎಸಿಪಿ ಮಂಜುನಾಥ್‍ನನ್ನು ಅಲ್ಲಿಂದ ಎತ್ತಂಗಡಿ ಮಾಡಿ ಆದೇಶ ಹೊರಡಿಸಲಾಗಿತ್ತು.

 

ಮತ್ತೆ ಎಂಟ್ರಿಯಾಗಿದ್ದಾರೆ ಎಸಿಪಿ ಮಂಜುನಾಥ್…!

ಸರ್ಕಾರ ಅವರದ್ದೇ ತಾನೇ. ಅವರು ಬಿಡುತ್ತಾರಾ? ಆರಂಭದಲ್ಲೇ ವಚನ ನೀಡಿದಂತೆ ಎಸಿಪಿ ಮಂಜುನಾಥ್‍ನನ್ನು ಮತ್ತೆ ಪೊಲೀಸ್ ಇಲಾಖೆ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಿದೆ. ಯಾವ ಪ್ರಕರಣ ಇನ್ನೂ ಕೋರ್ಟ್‍ನಲ್ಲಿ ವಿಚರಣೆ ನಡೆಯುತ್ತಿದೆಯೋ ಅದೇ ಪ್ರಕರಣದ ಆರೋಪವನ್ನು ಎದುರಿಸಿ ಎತ್ತಂಗಡಿಯಾಗಿದ್ದ ಪೊಲೀಸ್ ಅಧಿಕಾರಿಯನ್ನು ಮತ್ತೆ ಕರ್ತವ್ಯಕ್ಕೆ ಹಾಜರುಪಡಿಸಿ ತಮ್ಮ ನೀಚ ನೀತಿಯನ್ನು ಪ್ರದರ್ಶಿಸಿದ್ದಾರೆ. ಪ್ರಕರಣದ ತನಿಖೆ ಇನ್ನೂ ಹೈಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿದೆ. ಎಸಿಪಿ ಮಂಜುನಾಥ್ ಮೇಲೆ ಕರ್ತವ್ಯದ ಆರೋಪವಿದ್ದರೂ ಅವರನ್ನು ಮತ್ತೆ ಕರ್ತವ್ಯಕ್ಕೆ ಸೇರಿಸಿಕೊಂಡಿದ್ದು ಎಷ್ಟು ಸರಿ ಎಂಬ ಪ್ರಶ್ನೆಗಳು ಮೂಡುತ್ತಲೇ ಇದೆ.

ಜೈಲಿನಲ್ಲೂ ಡೈಲೀ ಅಪ್ ಡೇಟ್..!

ಕಾಂಗ್ರೆಸ್ ಶಾಸಕ ಗೂಂಡಾ ನಲಪಾಡ್ ಈಗ ಪರಪ್ಪನ ಅಗ್ರಹಾರದ ಜೈಲುಹಕ್ಕಿ. ಮಾಮೂಲಿ ಆರೋಪಿಗಳಿಗೆ ಜೈಲಿನಲ್ಲಿ ನಾಯಿಗಿಂತಲೂ ಕಡೆಯಾದ ಶಿಕ್ಷೆಯನ್ನು ನೀಡಿ ಹಿಂಸಿಸಲಾಗುತ್ತದೆ. ಆದರೆ ವಿವಿಐಪಿಗಳಿಗೆ ಮಾತ್ರ ರಾಜ ಮರ್ಯಾದೆ. ಹೀಗಾಗಿ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಗೂಂಡಾ ನಲಪಾಡ್‍ಗೂ ಭಾರೀ ಮರ್ಯಾದೆಯನ್ನು ನೀಡುವ ಮೂಲಕ ಕಾನೂನನ್ನೇ ಮುರಿಯಲಾಗಿದೆ. ಪೊಲೀಸ್ ಠಾಣೆಯಲ್ಲಿ ಜ್ಯೂಸ್ ನೀಡಿ ಆರೈಕೆ ಮಾಡಿದ ಪೊಲೀಸರು ಜೈಲಿನಲ್ಲಿಯೂ ಭಾರೀ ರಾಜ ಮರ್ಯಾದೆಯನ್ನು ನೀಡಿ ಆತನನ್ನು ಮೆಚ್ಚಿಸಿಕೊಳ್ಳುವ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಹೀಗೆ ಅಧಿಕಾರದಲ್ಲಿ ಇಲ್ಲದಾಗಲೂ ಈ ರೀತಿಯ ಅನುಕೂಲವನ್ನು ನೀಡಿದ ಪೊಲೀಸರು ಇನ್ನು ಅಧಿಕಾರದಲ್ಲಿರುವಾಗ ಇನ್ಯಾವ ರೀತಿಯಲ್ಲಿ ನೀಡಬಹುದು ಎಂಬ ಪ್ರಶ್ನೆಗಳೂ ಎದುರಾಗಿದೆ.

ನಲಪಾಡ್‍ನಿಂದ ಹಲ್ಲೆಗೊಳಗಾದ ವಿದ್ವತ್‍ನ ಆರೋಗ್ಯ ತಪಾಸನೆಯ ವರದಿಯು ಸರ್ಕಾರದ ತನಿಖಾಧಿಕಾರಿಗಳು ಹಾಗೂ ಕೋರ್ಟ್ ತಲುಪುವ ಮುನ್ನವೇ ಅದು ಜೈಲಿನಲ್ಲಿದ್ದ ನಲಪಾಡ್‍ಗೆ ತಲುಪುತ್ತೆ ಎಂದರೆ ಪೊಲೀಸ್ ಇಲಾಖೆ ಯಾವ ರೀತಿ ಕಾನೂನು ಮೆರೆಯುತ್ತೆ ಎಂಬುವುದನ್ನು ಕಾಣಬಹುದಾಗಿದೆ. ಇದು ಕರ್ನಾಟಕ ಪೊಲೀಸ್ ಇಲಾಖೆಗೂ ಕಳಂಕ ತರುವ ವಿಚಾರವಾಗಿದೆ. ಪೊಲೀಸರೂ ಉಳ್ಳವರ ಪಾಲಾಗಿದ್ದು, ಕಾಂಗ್ರೆಸ್ ಸರ್ಕಾರದ ಹಾಗೂ ಶಾಸಕರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ.

ಕಾಂಗ್ರೆಸ್ ಗೂಂಡಾಗಳನ್ನು ಬೆಳೆಸಿ ಅವರ ಆರೈಕೆ ಮಾಡಿದರೆ ಸಾಕು ಅವರಿಗೆ ಎಲ್ಲಾ ಸೌಲಭ್ಯವನ್ನೂ ಕರುಣಿಸುವ ಕಾಂಗ್ರೆಸ್ ಸರ್ಕಾರದ ತನ್ನ ನೀತಿಯನ್ನು ಮುಂದುವರೆಸುತ್ತಿರುವುದು ಇದೇ ಮೊದಲಲ್ಲ. ಸದ್ಯ ನಲಪಾಡ್‍ಗೂ ಇದೇ ರೀತಿಯ ಸೌಕರ್ಯವನ್ನೂ ಕರುಣಿಸಿರುವುದೂ ಭಾರೀ ಆಕ್ರೋಷಕ್ಕೆ ಕಾರಣವಾಗಿದೆ. ಒಂದೆಡೆ ತಮಗೆ ಕರ್ತವ್ಯ ನಿರ್ವಹಿಸಲು ಅವಕಾಶ ನೀಡುತ್ತಿಲ್ಲ ಎಂದು ಐಪಿಎಸ್ ಅಧಿಕಾರಿಗಳು ಸರ್ಕಾರಕ್ಕೆ ಸಚಿವರುಗಳ ವಿರುದ್ಧವೇ ಪತ್ರ ಬರೆದಿದ್ದರೆ ಮತ್ತೊಂದೆಡೆ ಕರ್ತವ್ಯ ಲೋಪ ಮೆರೆದ ಅದೇ ಕಾಂಗ್ರೆಸ್ ಪಕ್ಷದ ಕಟ್ಟಾಳು ಪೊಲೀಸರನ್ನು ಮತ್ತೆ ಕರ್ತವ್ಯಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಇದರಿಂದ ರಾಜ್ಯದ ಜನತೆಗೆ ಯವ ಸಂದೇಶವನ್ನು ನೀಡಿದಂತಾಗಿದೆ ಎಂದು ಜನತೆ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close