ಪ್ರಚಲಿತ

ಬಹಮನಿ ಉತ್ಸವದಿಂದ ಶಾಶ್ವತವಾಗಿ ಕಾಂಗ್ರೆಸ್ ಕಳೆದುಕೊಳ್ಳುತ್ತಾ ಬಹುಸಂಖ್ಯಾತರ ಮತ?! ಕಾಂಗ್ರೆಸ್‍ನಲ್ಲಿಯೇ ಒಳಜಗಳ ಶುರು!!

ಟಿಪ್ಪು ಜಯಂತಿ. ಈ ಜಯಂತಿಯ ಹೆಸರು ಕೇಳಿದರೆ ಸಾಕು, ರಾಜ್ಯದಲ್ಲಿಯೇ ಅಶಾಂತಿ ನಿರ್ಮಾಣವಾಗುತ್ತೆ. ಕೆಲವು ಟಿಪ್ಪು ಜಯಂತಿಗೆ ಹೆದರಿಕೊಂಡು ಕುಂತರೆ ಮತ್ತೆ ಕೆಲವರು ಟಿಪ್ಪು ಜಯಂತಿಯ ವಿರುದ್ಧ ಆಕ್ರೋಷಭರಿತರಾಗಿ ಬೀದಿಗಿಳಿದು ಹೋರಾಟ ನಡೆಸುತ್ತಾರೆ. ಅದೆಷ್ಟೋ ಜೀವಗಳೂ ಟಿಪ್ಪು ಜಯಂತಿಯ ಹೆಸರಿನಲ್ಲಿ ಬಲಿಯಾಗಿದ್ದೂ ಕಳೆದ 5 ವರ್ಷಗಳಲ್ಲಿ ಉದಾಹರಣೆಗಳಿವೆ. ಹಿಂದೂ ಹಾಗೂ ಕ್ರೈಸ್ತ ವಿರೋಧಿ ಟಿಪ್ಪುವಿನ ಜಯಂತಿಯನ್ನು ಆಚರಿಸಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಶಾಂತಿಯನ್ನೇ ಸೃಷ್ಟಿಸಿತ್ತು. ಕೊಲೆ, ಹಿಂಸೆಗಳು ತಾರಕಕ್ಕೆ ಏರಿತ್ತು. ಕೋಟ್ಯಾಂತರ ಜನರ ವಿರೋಧವೂ ಈ ಆಚರಣೆಗೆ ಇತ್ತು. ಕೋಮುಗಲಭೆಗೆ ಈ ಟಿಪ್ಪು ಜಯಂತಿ ಕಾರಣವಾಗಿತ್ತು. ಇದು ರಾಜ್ಯ ಕಂಡ ಅತ್ಯಂತ ಘೋರ ಹಾಗೂ ದುರಾಡಳಿತವನ್ನು ಬಣ್ಣಿಸಿತ್ತು. ಟಿಪ್ಪು ಜಯಂತಿ ಅನ್ನೋದು ಈಗ ಇತಿಹಾಸ. ಆದರೆ ಚುನಾವಣೆ ಹತ್ತಿರ ಬರುತ್ತಲೇ ಟಿಪ್ಪು ಜಯಂತಿ ಮರೆತು ಹೋಗಬಾರದು ಎನ್ನುವ ಉದ್ಧೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಮುಸಲ್ಮಾನರ ಓಲೈಕೆಯನ್ನು ಶುರು ಮಾಡಿದ್ದಾರೆ.

ಬಹಮನಿ ಸುಲ್ತಾನರ ಉತ್ಸವವನ್ನು ಆಚರಿಸುತ್ತಂತೆ ಸರ್ಕಾರ…

ಈ ರಾಜ್ಯ ಕಾಂಗ್ರೆಸ್‍ಗೆ ನಾಡ ಪ್ರೇಮ ಅನ್ನೋದು ನಯಾ ಪೈಸೆಯೂ ಇಲ್ಲ ಅನ್ನೋದು ಈಗ ಮತ್ತೊಮ್ಮೆ ಸಾಭೀತಾಗಿದೆ. ದೇಶದ್ರೋಹಿ ಟಿಪ್ಪು ಜಯಂತಿಯನ್ನು ಆಚರಿಸಿ ಕ್ರೌರ್ಯಕ್ಕೆ ದಾರಿ ತೋರಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ಮತ್ತೊಮ್ಮೆ ರಕ್ತವನ್ನು ಹರಿಸಲು ಮುಂದಾಗಿದೆ. ನಾವು ಅಪ್ರತಿಮ ಕನ್ನಡ ಪ್ರೇಮಿಗಳು ಎಂದು ಬೀಗಿಕೊಳ್ಳುವ ಕಾಂಗ್ರೆಸ್ ನಾಯಕರು ದೇಶದ್ರೋಹಿ ಟಿಪ್ಪು ಜಯಂತಿಯ ನಂತರ ನಾಡದ್ರೋಹಿ ಬಹಮನಿ ಸುಲ್ತಾನರ ಜಯಂತಿಯನ್ನು ಆಚರಿಸಲು ಮುಂದಾಗಿದೆ.

ಯಾರು ಈ ಬಹಮನಿ ಸುಲ್ತಾನರು?

ಅದೊಂದು ಕಾಲವಿತ್ತು. ವಿಜಯ ನಗರದ ಅರಸರ ಕಾಲ. ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ರಾಜ್ಯದ ಕಾಲ ಅದು. ಮುತ್ತು, ರತ್ನ, ಬಂಗಾರಗಳನ್ನು ಬೀದಿ ಬೀದಿಯಲ್ಲಿ ಮಾರುತ್ತಿದ್ದ ಕಾಲ ಅದು. ರಾಜ ವೈಭೋಗದಿಂದ, ವಿಜಯ ನಗರದ ಅರಸ ಶ್ರೀ ಕೃಷ್ಣ ದೇವರಾಯ ಸಹಿತ ಅನೇಕ ರಾಜರುಗಳು ಆಳಿದಂತಹ ಭಾರೀ ಶ್ರೀಮಂತಿಕೆಯ ರಾಜ್ಯ. ಈ ರಾಜ್ಯದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರೆನ್ನದೆ ಎಲ್ಲರೂ ಒಂದೇ ಎನ್ನುವ ವಾತಾವರಣ ಅಲ್ಲಿ ನಿರ್ಮಾಣವಾಗಿತ್ತ್ರು. ಆ ಸಮಯದಲ್ಲಿ ವಿಜಯನಗರದ ಸಾಮ್ರಾಜ್ಯದ ಮೇಲೆ ದಾಳಿ ಮಾಡಿದ ಮುಸಲ್ಮಾನ ಆಕ್ರಮಣಕಾರಿ ದೊರೆಯೇ ಬಹಮನಿ ಸುಲ್ತಾನರು.

ವಿಜಯ ನಗರ ಸಮ್ರಾಜ್ಯದ ಹಲವಾರು ಸ್ಮಾರಕಗಳಲ್ಲಿ ಇಂದಿಗೂ ಬಹಮನಿ ಸುಲ್ತಾನರು ದಾಳಿ ಮಾಡಿದ ಕುರುಹುಗಳಿವೆ. ಕನ್ನಡ ಭಾಷೆಯನ್ನು ವಿರೋಧಿಸಿ ಪರ್ಶಿಯನ್ ಭಾಷೆಯನ್ನು ಹೇರಿದ್ದ ಈ ಬಹಮನಿ ಸುಲ್ತಾನರ ಉತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡಲು ನಿರ್ಧರಿಸಿದೆ. ಈ ಮೂಲಕ ರಾಷ್ಟ್ರ ವಿರೋಧಿ ಅಥವಾ ಕನ್ನಡ ವಿರೋಧಿಯಾಗಿದ್ದರೂ ತೊಂದರೆ ಇಲ್ಲ, ನಮಗೆ ಮುಸಲ್ಮಾನರ ಓಟ್ ಬ್ಯಾಂಕ್ ಮುಖ್ಯ ಎಂಬ ಸ್ಪಷ್ಟ ಸಂದೇಶವನ್ನು ಸಾರಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ.

ಈ ವಿವರವನ್ನು ಒಮ್ಮೆ ನೋಡಿ. ಇದು ಬಹಮನಿ ಸುಲ್ತಾನರ ಚರಿತ್ರೆಯನ್ನು ಬಿಂಬಿಸುತ್ತದೆ. ಈ ವರದಿಯಲ್ಲಿ ಬಹಮನಿ ಸುಲ್ತಾನರು ಅದ್ಯಾವ ರೀತಿಯಲ್ಲಿ ದೇಶಪ್ರೇಮಿಗಳು ಅಥವಾ ನಾಡಪ್ರೇಮಿಗಳ ತರಹ ಕಾಣುತ್ತಾರೆ ಅನ್ನೋದನ್ನು ನೀವೇ ನೋಡಿ.

ಬಹಮನಿ ಸಾಮ್ರಾಜ್ಯ

* ಬಹಮನಿ ಸಾಮ್ರಾಜ್ಯ ಕಾಲ – ಕ್ರಿ.ಶ.1347 – 1527
* ಕರ್ನಾಟಕದಲ್ಲಿ ಸ್ಥಾಪಿತವಾದ ಮೊದಲ ಮುಸ್ಲಿಂ ಸಾಮ್ರಾಜ್ಯ – ಬಹಮನಿ ಸಾಮ್ರಾಜ್ಯ
* ಸ್ಥಾಪಕ – ಅಲ್ಲಾವುದ್ದೀನ್ ಹಸನ್ ಗಂಗೂ ಮತ್ತೊಂದು ಹೆಸರು – ಜಾಫರ್ ಖಾನ್
* ಬಹಮನಿ ಸಾಮ್ರಾಜ್ಯ ಸ್ಥಾಪನೆ – 1347 ಆಗಸ್ಟ್ 3
* ಬಹಮನಿ ಸಾಮ್ರಾಜ್ಯ ಆರಂಭದ ರಾಜಧಾನಿ – ಗುಲ್ಬರ್ಗ
* ಗುಲ್ಬರ್ಗದ ಪ್ರಾಚೀನ ಹೆಸರು – ಅಹ್ ಸಾನಾಬಾದ್
* ನಂತರದ ರಾಜಧಾನಿ – ಬೀದರ್
* ಸ್ಮಾರಕ ತಯಾರಿಸಲು ಬಳಸಿದ ಶಿಲ್ಪಿಗಳು – “ಪರ್ಶಿಯಾದವರು”

ರಾಜಕೀಯ ಇತಿಹಾಸ

* ಅಲ್ಲಾವುದ್ದಿನ್ ಹಸನ್ ಗಂಗೂ ಬಹಮನ್ ಷಾ ( 1347 – 1358 ) ಬಹಮನಿ ವಂಶದ ಸ್ಥಾಪಕ .
* ಎರಡನೇ ಅಲೆಗ್ಸಾಂಡರ್ ಎಂದು ನಾಣ್ಯ ಟಂಕಿಸಿದವನು – ಅಲ್ಲಾವುದ್ದಿನ್ ಹಸನ್ ಗಂಗೂ ಬಹಮನ್ ಷಾ
* ಅಲ್ಲಾವುದ್ದಿನ್ ಹಸನ್ ಗಂಗೂ ಬಹಮನ್ ಷಾ ಈತನ ಆಸ್ಥಾನ ಕವಿ – ಇಸಾಮಿ
* ಒಂದನೇ ಮಹಮ್ಮದ್ ಷಾ ( 1358 – 1375 ) ಈತ ಹಸನ್ ಗಂಗೂನ ಮಗ
* ಒಂದನೇ ಮಹಮ್ಮದ್ ಷಾ ಈತ ಗುಲ್ಬರ್ಗದಲ್ಲಿ ಅತಿದೊಡ್ಡ “ ಜೂಮ್ಮ ಮಸೀದಿ ” ಯನ್ನು ನಿರ್ಮೀಸಿದ
* ಒಂದನೇ ಮಹಮ್ಮದ್ ಷಾ ಈತನ ಆಸ್ಥಾನ ಕವಿಗಳು – ಜೈನುದ್ದೀನ್ ಪೌಲತಾಬಾದಿ ಹಾಗೂ ನಿಜಾಮುದ್ದೀನ್ ಬರಾನಿ
* ಎರಡನೇ ಮಹಮ್ಮದ ಷಾ – ( 1377 – 1397 ) ಈತ ಅರಿಸ್ಟಾಟಲ್ ಎಂಬ ನಾಮದ್ಯೇಯಕ್ಕೆ ಪಾತ್ರನಾದನು
* ಎರಡನೇ ಮಹಮ್ಮದ ಷಾ ಈತನ ಆಸ್ಥಾನದ ಕವಿ – ಹಫೀಜ್
* ಫೀರೋಜ್ ಷಾ ಹಸನ್ ಗಿಲಾನಿ ಈತನ ಆಸ್ಥಾನದ ಶ್ರೇಷ್ಠ ಕವಿ
* ಫೀರೋಜ್ ಷಾ ಈತ ಷಾನು – ಗುಲ್ಬರ್ಗದಲ್ಲಿ ಒಂದು ಸುಂದರ ಜುಮ್ಮಾ ಮಸೀದಿ ಯನ್ನು ನಿರ್ಮೀಸಿದನು
* ಫೀರೋಜ್ ಷಾ ಈತ ಭೀಮಾ ನದಿಯ ದಂಡೆಯ ಮೇಲೆ ತನ್ನ ಹೆಸರಿನಲ್ಲಿ ಫೀರೋಜ್ ಬಾದ್ ನಗರವನ್ನು ನಿರ್ಮಿಸಿದನು
* 1 ನೇ ಅಹಮದ್ ಷಾ ಇವನ ಆಸ್ಥಾನದಲ್ಲಿ ಪರ್ಶಿಯನ್ ಕವಿ – ಅಜರಿ
* ಈತನ ಕೃತಿ – ಬಹಮನ್ ನಾಮ
* 2 ನೇ ಅಲ್ಲಾವುದ್ದೀನ್ ಅಹಮ್ಮದ್ ಷಾ ಈತ “ಜಲೀಂ” ( ದಬ್ಬಾಳಿಕೆ ರಾಜ ) ಎಂದೇ ಹೆಸರಾಗಿದ್ದ .
* ಮಹಮ್ಮದ್ ಗವಾನ್ ಈತ ಒರಿಸ್ಸಾದ ದಂಗೆಯನ್ನು ಅಡಗಿಸಿ ಅಲ್ಲಿನ “ಹಿಂದೂ ದೇವಾಲಯವನ್ನು ದ್ವಂಸ ಮಾಡಿ” “ ಘಾಜಿ ” ಎಂಬ ಬಿರುದನ್ನ ಪಡೆದುಕೊಂಡನು
* ಮಹಮ್ಮದ್ ಗವಾನ್ ಈತನ ಮತ್ತೊಂದು ಬಿರುದು – ಲಷ್ಕರೆ
* ಮಹಮ್ಮದ್ ಗವಾನ್ ಈತ ಬೀದರ್ ನಲ್ಲಿ 1472 ರಲ್ಲಿ “ ಗವಾನ್ ಮದರಸಾ ” ಎಂಬ ಕಾಲೇಜನ್ನ ನಿರ್ಮಿಸಿದನು

* ಕೇಂದ್ರದಲ್ಲಿ ಸುಲ್ತಾನನೇ ಸರ್ವೋಚ್ಚ ಅಧಿಕಾರಿ –
* ಸುಲ್ತಾನನ್ನ “ ಭೂಮಿಯ ಮೇಲಿನ ದೇವರ ಅಧಿಕಾರಿ ’ ಎಂದು ನಂಬಲಾಗಿತ್ತು .

ಮಂತ್ರಿ ಮಂಡಲ

* ವಕೀಲ್ – ಉಸ್ – ಸುಲ್ತಾನ್ – ಪ್ರಧಾನ ಮಂತ್ರಿ
* ಅಮೀರ್ – ಇ- ಜುಮ್ಲಾ – ಅರ್ಥ ಸಚಿವ
* ವಜೀರ್ – ಇ- ಅಶ್ರಫ್ – ವಿದೇಶಾಂಗ ಮಂತ್ರಿ
* ಅಮೀರ್ – ಉಲ್ – ಉಮ್ರಾ – ಮಹಾದಂಡ ನಾಯಕ
* ವಜೀರ್ – ಇ – ಕುಲ್ – – ಪೇಶ್ವೆ ಮಂತ್ರಿ
* ಖಾಜಿ – ನ್ಯಾಯಾಧೀಶ
* ಸದರ್ ಇ – ಜಹಾನ್ – ನ್ಯಾಯಾಡಳಿತ ಮಂತ್ರಿ
* ನಜೀರ್ – ಮುಖ್ಯ ಲೆಕ್ಕಾಧಿಕಾರಿ
* ಕೊತ್ವಾಲ – ನರ ರಕ್ಷಕ
* ಪ್ರಾಂತ್ಯದ ಹೆಸರು – ತರಫ್
* ಸರಕಾರ – ಜಿಲ್ಲೆ
* ರಗಣ – ತಾಲ್ಲೂಕ್
* ಅನಿಫ್ – ಜಿಲ್ಲೆಯ ಅಧಿಕಾರಿ
* ಮಕ್ ದಾಬ್ – ಶಿಕ್ಷಣ ಕೇಂದ್ರ
* ಫಿಕಾರ್ ನಾಮಾ ಕೃತಿಯ ಕರ್ತೃ – ಬಂದೇ ನವಾಜ್
* 1 ನೇ ಮಹಮ್ಮದ್ ಷಾ ನಿರ್ಮಿಸಿದ ಜುಮ್ಮಾ ಮಸೀದಿಯ ಶಿಲ್ಪಿ – ರಫಿ ಕ್ಷಾಜಿನ್

* ಇವರ ಕಾಲದ ಶೈಲಿಯನ್ನು “ ಸಾರ್ಸನಿಕ್ ಶೈಲಿ ” ಎಂದು ಕರೆಯಲಾಗಿದೆ
* ಗುಲ್ಬರ್ಗದ ಕೋಟೆಯನ್ನು ಮೊದಲೇ ಅಲ್ಲಾವುದ್ದೀನನ ಕಾಲದಲ್ಲಿಲ ನಿರ್ಮಿಸಲಾಯಿತು
* ಗುಲ್ಬರ್ಗಾದ ಸಮಾಧಿಗಳಲ್ಲಿ ಪ್ರಸಿದ್ದವಾದುದು – ಬಂದೇ ನವಾಜ್ ದರ್ಗ
* ಬೀದರಿ ಕಲೆಯಲ್ಲಿ ಅನುಸರಿಸಲಾದ ಬೆಳ್ಳಿಯ ರೇಖೆಗಳನ್ನು – ಟೆಹ್ನಿಷಾನ್ ಎಂದು ಕರೆಯುವರು
* ಬೀದರಿ ಕಲೆಯಲ್ಲಿ ಉಬ್ಬಾದ ರೇಖೆಗಳನ್ನು – ಜರ್ನಿಪಾನ್ ಎಂದು ಕರೆಯುವರು
* ಅಮೀರ್ ಉಲ್ ಉಮ್ರಾ – ಕೇಂದ್ರ ಸೇನಾಪತಿ
* . ಲಷ್ಕರ್ ಸೇನಾ ವಸತಿ ಪ್ರದೇಶಗಳನ್ನ ನೋಡುತ್ತಿದವನು
* ತೋಶಕ್ ಖಾನ್ – ಶಸ್ತ್ರಾಸ್ತ್ರ ಮತ್ತು ಸಮವಸ್ತ್ರ ಕಛೇರಿ
* ಫಿಕಾರ್ ಘರ್ – ಸುಲ್ತಾನನ ಬೇಟೆ ಸಲಕರಣಿ ಒದಗಿಸುವ ಕಛೇರಿ
* ಮೀರ್ ಭಕ್ಷಿ ಮತ್ತು ಸದ್ರುಷಾ ಶರೀಫ್ – ಅರಬ್ಬಿ ಭಾಷೆಯ ಪಂಡಿತರು
* ಅಲಿಮುದ್ದೀನ್ ಮತ್ತು ಹಕೀಂ ನಾಸಿರುದ್ದೀನ್ – ಹೆಸರಾಂತ ಆಸ್ಥಾನ ವೈದ್ಯರು
* ಇಬ್ರಾಹಿಂ ನಾಮ ಕೃತಿಯ ಕ್ರತೃ – ಅಬ್ದುಲ್
* ಹಸನ್ ಗಂಗು ಗುಲ್ಬರ್ಗಕ್ಕೆ ಇಟ್ಟ ಹೆಸರು – ಹಸನ್ ಬಾದ್
* ದಕ್ಷಿಣ ಭಾರತದಲ್ಲಿ ಮೊದಲು ಸಂಘಟಿತ ಆಡಳಿತ ಸ್ಥಾಪಿಸಿದ ಮುಸ್ಲಿಂ – ಮಹಮ್ಮದ್ ಬಿನ್ ತುಘಲಕ್
* ಹಸನ್ ಗಂಗು – ಪರ್ಶಿಯಾದವನು
* ಹಸನ್ ಗಂಗು – ಮಹಮ್ಮದ್ ಬಿನ್ ತುಘಲಕ್ ನ ಅಮೀರನಾಗಿದ್ದ
* ಮಹಮ್ಮದ್ ಗವಾನ್ ನ ತಂದೆಯ ಹೆಸರು – ಜಲಾಲುದ್ದೀನ್ ಮಹಮ್ಮದ್
* ಬಹಮನಿ ಸುಲ್ತಾನರ ಪ್ರಮುಖ ವಾಸ್ತುಶಿಲ್ಪ ಕೇಂದ್ರಗಳು – ಬೀದರ್ ಮತ್ತು ಗುಲ್ಬರ್ಗ
* ಮಹಮ್ಮದ್ ಗವಾನ್ ನ ಮೊದಲ ಹೆಸರು – ಮಹಮ್ಮದ್ ಉದಿನ್ – ಅಹಮ್ಮದ್
* ಬಹಮನಿ ರಾಜ್ಯದ ಕೊನೆಯ ಸುಲ್ತಾನ – ಕಲೀಮುಲ್ಲ
* ಬಹಮನಿ ರಾಜ್ಯದಿಂದ ಹೊರಗೆ ಬಂದ ಮೊದಲ ಷಾಹಿ ರಾಜ್ಯ – ಬಿರಾರ್
* ಬಹಮನಿ ಸುಲ್ತಾನ ಆಡಳಿತ ಭಾಷೆ – ಪರ್ಶಿಯನ್

ಈಗ ಹೇಳಿ… ಯಾವ ಪುರುಷಾರ್ಥಕ್ಕಾಗಿ ಕಾಂಗ್ರೆಸ್ ಸರ್ಕಾರ ಈ ನಾಡದ್ರೋಹಿಗಳ ಉತ್ಸವವನ್ನು ಆಚರಿಸುತ್ತಿದೆ. ಈ ಲಿಸ್ಟ್‍ನಲ್ಲಿ ದೇಶಕ್ಕಾಗಿ ಅಥವಾ ಕನ್ನಡ ನಾಡಿಗಾಗಿ ಯಾವ ಕೊಡುಗೆಯನ್ನಾದರೂ ಈ ಬಹಮನಿ ಸುಲ್ತಾನರು ನೀಡಿದ್ದಾರಾ? ಸದಾ ಹಿಂದೂ ದೇವಾಯಗಳನ್ನು ಧ್ವಂಸ ಮಾಡಿ ನಾಡದ್ರೋಹವನ್ನು ಬಗೆದು, ಕನ್ನಡ ಭಾಷೆಯನ್ನು ಕಡೆಗಣಿಸಿ ಪರ್ಷಿಯನ್ ಭಾಷೆಗೆ ಒತ್ತು ನೀಡುತ್ತಿದ್ದ ಈ ಸುಲ್ತಾನರ ಉತ್ಸವನ್ನು ಮಾಡಲು ಹೊರಟ ಕಾಂಗ್ರೆಸ್ ಸರ್ಕಾರದ ಅರ್ಥವೇನು?

ಪಕ್ಷದೊಳಗೇ ಗೊಂದಲ..?

ಹಿಂದೂ ವಿರೋಧಿ ಹಾಗೂ ನಾಡ ದ್ರೋಹಿ ಬಹಮನಿ ಸುಲ್ತಾನರ ಉತ್ಸವವನ್ನು ರಾಜ್ಯದಲ್ಲಿ ಆಚರಿಸುವ ಬಗ್ಗೆ ಸ್ವತಃ ಕಾಂಗ್ರೆಸ್ ನಾಯಕರ ನಡುವೆಯೇ ಮನಸ್ತಾಪ ವ್ಯಕ್ತವಾಗಿದೆ. ಈ ಬಗ್ಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಮಗೇನೂ ಗೊತ್ತೇ ಇಲ್ಲ ಎಂದು ಹೇಳುತ್ತಿದ್ದರೆ, ಮತ್ತೊಂದೆಡೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಬಹಮನಿ ಸುಲ್ತಾನ ಅಂದರೆ ಯಾರು ಎಂದು ಮಾಧ್ಯಮಗಳಿಗೇ ಪ್ರಶ್ನೆಯನ್ನು ಕೇಳಿದ್ದಾರೆ. ಈ ಮೂಲಕ ನಾಡದ್ರೋಹಿ ಬಹಮನಿ ಸುಲ್ತಾನರ ಉತ್ಸವವನ್ನು ಆಚರಿಸುವ ಬಗ್ಗೆ ಪಕ್ಷದಲ್ಲೇ ಗೊಂದಲ ಏರ್ಪಟ್ಟಿದೆ. ಮತ್ತೆ ಕೆಲವರು ಟಿಪ್ಪು ಜಯಂತಿಯ ನಂತರ ಈ ರೀತಿಯ ಗಲಾಟೆಗಳು ಬೇಕಾ ಎಂಬ ಪ್ರಶ್ನೆಗಳನ್ನೂ ಪಕ್ಷದ ನಾಯಕರ ಮುಂದೆ ಇಟ್ಟಿದ್ದಾರೆ.

ಟಿಪ್ಪು ಜಯಂತಿಯ ಬೇಗೆಯಿಂದ ರಾಜ್ಯ ಇನ್ನೂ ಹೊರ ಬಂದಿಲ್ಲ. “ಅಬ್ಭಾ ಈ ಬಾರಿಯ ಟಿಪ್ಪು ಜಯಂತಿ ಮುಗಿದು ಹೋಯಿತು. ಇನ್ನು ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬರೋ ಮಾತೇ ಇಲ್ಲ. ಆದ್ದರಿಂದ ಇನ್ನುಮುಂದೆ ರಾಜ್ಯದಲ್ಲಿ ರಕ್ತಕ್ರಾಂತಿ ಆಗೋದಿಲ್ಲ” ಎಂದು ರಾಜ್ಯದ ಜನತೆ ನಿಟ್ಟುಸಿರು ಬಿಟ್ಟಿದ್ದರು. ಆದರೆ ಈ ಬಾರಿ ಮತ್ತೆ ಬಹಮನಿ ಸಲ್ತಾನರ ಉತ್ಸವದ ರೂಪದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ನಾಟಕ ಶುರುವಿಟ್ಟುಕೊಂಡಿದ್ದು, ಮತ್ತೆ ನೆತ್ತರು ಹರಿಯುವ ಭೀತಿ ಎದುರಾಗಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮುಂದಿನ ದಿನಗಳಲ್ಲಿ ಶಾಪವಾಗಿ ಪರಿಣಮಿಸೋದರಲ್ಲಿ ಸಂದೇಹವೇ ಇಲ್ಲ.

source: http://indianhistorypr.blogspot.in/2011/03/blog-post_1585.html

-ಸುನಿಲ್ ಪಣಪಿಲ

 

Tags

Related Articles

FOR DAILY ALERTS
 
FOR DAILY ALERTS
 
Close