ಪ್ರಚಲಿತರಾಜ್ಯ

ಮುಖ್ಯಮಂತ್ರಿ ಮಗನಿಂದಲೇ ದಾದಾಗಿರಿ!! ಬಯಲಾಯ್ತು ನಾಡ ದೊರೆಯ ಮಗನ ಕರಾಳ ಮುಖ!! ಗೂಂಡಾಗಿರಿ ನಂ-6

ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕಾಂಗ್ರೆಸ್‍ನ ಒಂದೊಂದೇ ಕರಾಳ ಮುಖ ಹೊರಬರುತ್ತಿದೆ… ಈಗಾಗಲೇ ಕಾಂಗ್ರೆಸ್ ಶಾಸಕ ಹ್ಯಾರಿಸ್‍ನ ಗೂಂಡಾ ಮಗ ಮೊಹಮ್ಮದ್ ನಲಪಾಡ್ ಗೂಂಡಾಗಿರಿ ಮೆರದಿದ್ದು ಇದಾಗಲೇ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ… ಇದೀಗ ರಾಜ್ಯದ ಮುಖ್ಯ ಮಂತ್ರಿಯ ಮಗನ ಬಂಟರು ಗೂಂಡಾಗಿರಿ ಪ್ರದರ್ಶಿಸಿದ್ದಾರೆ ಎಂದರೆ ಇಡೀ ಕಾಂಗ್ರೆಸ್ ಸಮೂಹವೇ ಗೂಂಡಾಗಿರಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂದು ಹೇಳಬಹುದು…

ದಿನಕ್ಕೊಂದು ಪ್ರಕರಣದಂತೆ, ಸಾಮಾನ್ಯ ಜನರ ಮೇಲೆ ಹಲ್ಲೆಯಾಗುತ್ತಲೇ ಇದೆ ಎಂದರೆ ರಾಜ್ಯವಾಳಲು ಸಮರ್ಥರು ಎಂದು ಇವರನ್ನು ಜನರು ಆಯ್ಕೆ ಮಾಡಿದರೆ ಇವರು ಮಾತ್ರ ಮಾಡುವುದು ಇಂತಹ ಗೂಂಡಾಗಿರಿ ಕೆಲಸ ಎಂದರೆ ನಿಜವಾಗಿಯೂ ವಿಷಾದನೀಯ!! ಇಂದಿಗೆ ಕಾಂಗ್ರೆಸ್‍ನಿಂದ 6 ಗೂಂಡಾಗಳು ಗೂಂಡಾಗಿರಿ ಮಾಡಿದ್ದಾರೆ.. ಇಂದು ಮತ್ತೆ ಗೂಂಡಾಗಿರಿ ಪ್ರದರ್ಶನ ಮಾಡಿದವರು ಯಾರು ಗೊತ್ತಾ?!

ಸಿಎಂ ಮಗನ ಆಪ್ತರಿಂದ ಗೂಂಡಾಗಿರಿ!!

ಬೆಂಗಳೂರಿನ ಹೆಬ್ಬಾಳದ ಫ್ಲೈ ಓವರ್ ಪಕ್ಕದಲ್ಲಿರುವ ಎಚ್‍ ಬಿ ಶಿವರಾಮ್ ಸಹೋದರಿಗೆ ಸೇರಿದ ಭೂಮಿಯಾಗಿದ್ದು ಸಿಎಂ ಮಗನ ಬಂಟರು ಧಮ್ಕಿ ಹಾಕಿ ಬೇಲಿ ತೆಗೆದು ದಬ್ಬಾಳಿಕೆ ನಡೆಸಿದ್ದಾರೆ.. ನಾವು ಸಿಎಂ ಕಡೆಯವರು ಎಂದು ಸಿಎಂ ಹೆಸರು ಹೇಳಿಯೇ ಯತೀಂದ್ರ ಸ್ನೇಹಿತ ಶಾಂತಲಾ ಇಂಡಸ್ಟ್ರೀಸ್ ಮಾಲೀಕ ರಾಜೇಶ್ ಗೌಡ, ಬ್ರೋಕರ್ ಸೂರಿಯಿಂದ ದಬ್ಬಾಳಿಕೆ ನಡೆಸಿದ್ದಾರೆ…

ಈ ಭೂಮಿಯು ಬೆಂಗಳೂರಿನ ಫ್ಲೈ ಓವರ್ ಪಕ್ಕದಲ್ಲಿರುವ ಎಚ್‍ಬಿ ಶಿವರಾಂ ಮತ್ತು ಸಹೋದರರಿಗೆ ಸೇರಿದ ಭೂಮಿಯಾಗಿದ್ದು ಸುಮಾರು 50 ಕೋಟಿ ರೂ ಮೌಲ್ಯದ ಭೂಮಿಗೆ ನುಗ್ಗಿ ಸಿಎಂ ಹೆಸರು ಹೇಳಿ ಜಮೀನು ಮಾಲೀಕನಿಗೆ ಧಮ್ಕಿ ಹಾಕಿದ್ದಾರೆ. ಇವರಿಗೆ ಸಂಬಂಧ ಪಟ್ಟ ಭೂಮಿಯಲ್ಲದಿದ್ದರೂ ಸಹ ಜೆಸಿಬಿ ನುಗ್ಗಿಸಿ ಬೇಲಿ ಕಿತ್ತೆಸೆದು ಅತಿಕ್ರಮವಾಗಿ ಪ್ರವೇಶ ಮಾಡಿದ್ದಾರೆ… ಈ ಜಮೀನಿಗೆ ಇದಕ್ಕಿಂತ ಮುಂಚೆಯೇ ಕೇಸು ದಾಖಲಾಗಿದ್ದು ಜಮೀನು ಬಗ್ಗೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚಿಸಿತ್ತು ಕೋರ್ಟ್!! ಅದನ್ನೂ ಮೀರಿಯೂ ದರ್ಪ ತೊರಿಸಿರುವುದು ನಿಜವಾಗಿಯೂ ಕಾಂಗ್ರೆಸ್‍ನ ಒಂದೊದೇ ಮುಖ ಅನಾವರಣಗೊಳ್ಳುತ್ತಿದೆ…

ಚುನಾವಣೆ ಹತ್ತಿರ ಬರುತ್ತಿದ್ದಂತೆಯೆ ಒಂದಲ್ಲ ಒಂದು ಗೂಂಡಾಗಿಯನ್ನು ಮಾಡುತ್ತಿದ್ದು ಎಲ್ಲಾ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ…. ಮೊನ್ನೆ ತಾನೇ ಅಮಾಯಕ ವಿದ್ವತ್‍ನನ್ನು ಗೂಂಡಾಗಿರಿ ಮಾಡಿ ಕುಡಿದ ಅಮಲಿನಲ್ಲಿ ಮನಬಂದಂತೆ ಹೊಡೆದು ಇಷ್ಟ ಬಂದಂತೆ ಗೂಂಡಾಗಿರಿ ಪ್ರದರ್ಶನ ಮಾಡಿದರು… ಕೊನೆಗೂ ಆ ಪಾಪಿ ಮೊಹಮ್ಮದ್ ನಲಪಾಡ್ ಜೈಲು ಸೇರಿ ಬಿಟ್ಟ!! ಒಂದೇ ವಾರದಲ್ಲಿ ಒಂದರಮೇಲೆ ಒಂದರಂತೆ ಗೂಂಡಾಗಿರಿ ಪ್ರದರ್ಶನ ಮಾಡಿ ತಮ್ಮ ಮುಖವನ್ನು ತಾವೇ ಪ್ರದರ್ಶನಗೊಳಿಸಿದರು…

ಪಾಪದ ಕೊಡ ತುಂಬಿದೆ ಅನ್ನುತ್ತಾರಲ್ಲಾ, ಬಹುಷಃ ಇದಕ್ಕೆ ಆಗಿರಬೇಕು. ಅಧಿಕಾರಕ್ಕೆ ಬಂದು 5 ವರ್ಷಗಳು ತುಂಬುತ್ತಲೇ ಇಷ್ಟು ವರ್ಷಗಳು ಮಾಡಿದ ಪಾಪಗಳು ಒಂದೊಂದೇ ಬಯಲಾಗುತ್ತಿದೆ. ಒಂದಲ್ಲಾ ಎರಡಲ್ಲಾ, ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಅದೆಷ್ಟೋ ಚಟುವಟಿಕೆಗಳನ್ನು ಮಾಡಿ ಮಾಡಿ ಈ ಸರ್ಕಾರ ಯಾರೂ ಮಾಡದಷ್ಟು ಪಾಪವನ್ನು ಕಟ್ಟಿಕೊಂಡು ಈಗ ಆ ಪಾಪದ ಕರ್ಮಗಳನ್ನು ಒಂದೊಂದಾಗಿಯೇ ಅನುಭವಿಸುತ್ತಿದೆ.

ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಒಂದೇ ಒಂದು ಸದ್ದು. ಅದು ಕಾಂಗ್ರೆಸ್ ಗೂಂಡಾಗಳ ಗೂಂಡಾಗಿರಿ. ಪ್ರಮುಖ ಕಾಂಗ್ರೆಸ್ ಮುಖಂಡರೇ ಗೂಂಡಾಗಿರಿಯಲ್ಲಿ ಭಾಗಿಯಾಗಿ ಸರ್ಕಾರದ ಮಾನ ಮರ್ಯಾದೆಯನ್ನು ಹರಾಜು ಹಾಕುತ್ತಿದ್ದಾರೆ. ಒಂದೇ ವಾರದಲ್ಲಿ 6 ಕಾಂಗ್ರೆಸ್ ಶಾಸಕರ ಗೂಂಡಾಗಿರಿ ಬಯಲಾಗಿದೆ. ತನ್ನ ಛೇಲಾಗಳನ್ನು ಛೂಬಿಟ್ಟು ತಮಗೆ ಬೇಕಾದ ಹಾಗೆ ಕೆಲಸ ಮಾಡಿಕೊಳ್ಳುತ್ತಿದ್ದ ಕಾಂಗ್ರೆಸ್ ಶಾಸಕರಿಗೆ ಈಗ ಅದೇ ಗೂಂಡಾ ಛೇಲಗಳು ಕಗ್ಗಂಟಾಗಿ ಪರಿಣಮಿಸಿದೆ.

ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್, ಕಾಂಗ್ರೆಸ್ ಶಾಸಕ ಬೈರತಿ ಬಸವರಾಜು ಛೇಲಾ ನಾರಾಯಣ ಸ್ವಾಮೀ, ಕೃಷಿ ಸಚಿವ ಕೃಷ್ಣ ಬೈರೇಗೌಡರ ಛೇಲಾಗಳ ಗೂಂಡಾಗಿರಿಯ ನಂತರ ಈಗ ಮತ್ತೊಂದು ಗೂಂಡಗಿರಿಯ ಪ್ರಕರಣ ಬೆಳಕಿಗೆ ಬಂದಿದೆ. ಸಿಎಂ ಸಿದ್ದರಾಮಯ್ಯನ ಮಗನ ಆಪ್ತನೇ ಈ ರೀತಿಯಾಗಿ ವರ್ತಿಸಿರುವುದು ನಿಜವಾಗಿಯೂ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ…

ಪವಿತ್ರ

Tags

Related Articles

FOR DAILY ALERTS
 
FOR DAILY ALERTS
 
Close