ಪ್ರಚಲಿತ

ಆರ್‌ಎಸ್‌ಎಸ್ ಸಭೆಯಲ್ಲಿ ರತನ್ ಟಾಟಾ .! ಪ್ರಣಬ್ ಮುಖರ್ಜಿ ಬಳಿಕ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ ಟಾಟಾ.!

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದರೆ ಸಾಮಾನ್ಯವಾದ ಸಂಘಟನೆಯೇ.? ಇಡೀ ಜಗತ್ತಿನಾದ್ಯಂತ ಕಾರ್ಯಕರ್ತರನ್ನು ಹೊಂದಿರುವ ಆರ್‌ಎಸ್‌ಎಸ್ ಜಗತ್ತಿನಲ್ಲೇ ಅತೀ ದೊಡ್ಡ ಸಂಘಟನೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಸಂಘಟನೆ. ಕೇವಲ ಒಂದು ಶಾಖೆಯಿಂದ ಆರಂಭವಾದ ಈ ಸಂಘಟನೆಗೆ ಇಂದು ದೇಶದಲ್ಲಿ ಲಕ್ಷಾಂತರ ಕಾರ್ಯಕರ್ತರನ್ನು ಒಗ್ಗೂಡಿಸಿ ದೇಶ ಸೇವೆಗೆ ಮುಡಿಪಾಗಿರಿಸುವಂತಹ ಒಂದು ಸಾಮಾರ್ಥ್ಯ ಇದೆ ಎಂದರೆ ನೀವೇ ಊಹಿಸಿಕೊಳ್ಳಿ ಸಂಘದ ಸಾಮಾರ್ಥ್ಯವನ್ನು. ಆರ್‌ಎಸ್‌ಎಸ್ ಬಗ್ಗೆ ಹೆಚ್ಚು ವಿವರವಾಗಿ ಹೇಳುವ ಅವಶ್ಯಕತೆ ಇಲ್ಲ. ಯಾಕೆಂದರೆ ಸಂಘದ ಬಗ್ಗೆ ತಿಳಿದವರು ಇದರ ಕಾರ್ಯಕರ್ತ ಎಂದು ಎದೆಯುಬ್ಬಿಸಿ ಹೇಳಿಕೊಳ್ಳುತ್ತಾನೆ. ಆದರೆ ಸಂಘದ ಮಹತ್ವ ಅರಿಯದ ಕೆಲವರು ಈ ಸಂಘಟನೆಯನ್ನು ವಿರೋಧಿಸುತ್ತಾರೆ, ಆದರೆ ವಿರೋಧಿಗಳು ಎಸೆದ ಕಲ್ಲುಗಳನ್ನೇ ಮೆಟ್ಟಿಲುಗಳನ್ನಾಗಿ ಸೃಷ್ಟಿಸಿದ ಆರ್‌ಎಸ್‌ಎಸ್ ಇಂದು ಬಲಿಷ್ಠ ಹೆಮ್ಮರವಾಗಿ ಬೆಳೆದು ನಿಂತಿದೆ.!

ಆರ್‌ಎಸ್‌ಎಸ್‌ನ ಇತ್ತೀಚಿಗೆ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕಾಂಗ್ರೆಸಿಗರ ವಿರೋಧದ ನಡುವೆಯೂ ಸಂಘವನ್ನು ಅಪ್ಪಿಕೊಂಡಿದ್ದರು.‌ ಮುಖರ್ಜಿ ಅವರ ಈ ನಡೆ ಕಂಡು ವಿರೋಧಿಗಳಿಗೆ ಬೆಂಕಿ ಹಚ್ಚಿದಂತಹ ಅನುಭವ ಉಂಟಾಗಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಯಾಕೆಂದರೆ ಆರ್‌ಎಸ್‌ಎಸ್‌ನ್ನು ಕಂಡರೆ ಕಾಂಗ್ರೆಸ್ ಉರಿದು ಬೀಳುತ್ತದೆ, ಅಂತಹ ಸಂದರ್ಭದಲ್ಲೂ ಪ್ರಣಬ್ ಮುಖರ್ಜಿ ಅವರು ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಿಂದ ಇಡೀ ದೇಶವೇ ನಿಬ್ಬೆರಗಾಗಿತ್ತು. ಇದೀಗ ಪ್ರಣಬ್ ಮುಖರ್ಜಿ ಅವರ ಬೆನ್ನಲ್ಲೇ ಖ್ಯಾತ ಉದ್ಯಮಿ ಟಾಟಾ ಸಂಸ್ಥೆಯ ಮಾಜಿ ಅಧ್ಯಕ್ಷರಾದ ರತನ್ ಟಾಟಾ ಅವರು ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.

Image result for ಪ್ರಣಬ್ ಮುಖರ್ಜಿ

ಆರ್‌ಎಸ್‌ಎಸ್ ಎನ್‌ಜಿಓ ಕಾರ್ಯಕ್ರಮದಲ್ಲಿ ಟಾಟಾ ಭಾಗಿ..!

ನಾಗ್ಪುರದಲ್ಲಿ ನಡೆದ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಹಲವಾರು ಜನರ ಕಣ್ಣು ಕೆಂಪಗಾಗುವಂತೆ ಮಾಡಿದ್ದರು. ಇದೀಗ ಮುಂಬೈನಲ್ಲಿ ಇದೇ ಆಗಸ್ಟ್ ೨೪ರಂದು ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಮತ್ತೊಮ್ಮೆ ಸಂಘದ ವಿರೋಧಿಗಳಿಗೆ ಕಪಾಳಮೋಕ್ಷ ಮಾಡಲಿದ್ದಾರೆ. ಟಾಟಾ ಅವರ ೭೯ನೇ ಹುಟ್ಟು ಹಬ್ಬದ ಪ್ರಯುಕ್ತ ಈ ಹಿಂದೆ ಸಂಘದ ಪ್ರಧಾನ ಕಚೇರಿಗೆ ಏಕಾಏಕಿ ಭೇಟಿ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದ ಇವರು ಇದೀಗ ಮತ್ತೊಮ್ಮೆ ಮೋಹನ್ ಭಾಗವತ್ ಅವರ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಸಂಘದ ಕಾರ್ಯಕ್ರಮಕ್ಕೆ ಈಗಾಗಲೇ ರತನ್ ಟಾಟಾ ಅವರನ್ನು ಆಹ್ವಾನಿಸಿದ್ದು ಟಾಟಾ ಕೂಡ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಆಗಸ್ಟ್ ತಿಂಗಳಲ್ಲಿ ಸಂಘದ ಮತ್ತೊಂದು ಐತಿಹಾಸಿಕ ಕ್ಷಣ ಸೃಷ್ಟಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.!

Image result for ratan tata

ರತನ್ ಟಾಟಾ ಈ ಹಿಂದೆ ಕೂಡ ಸಂಘದ ಜೊತೆ ಉತ್ತಮ‌ ಸಂಪರ್ಕ ಹೊಂದಿರುವುದರಿಂದ ಮುಂಬೈನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಪ್ರಣಬ್ ಮುಖರ್ಜಿ ಅವರು ಆರ್‌ಎಸ್‌ಎಸ್ ಸಭೆಯಲ್ಲಿ ಭಾಗವಹಿಸಿ ಭಾರೀ ಒಳ್ಳೆಯ ಅಭಿಪ್ರಾಯ ಕೂಡ ವ್ಯಕ್ತಪಡಿಸಿದ್ದರು.‌ ಕಾಂಗ್ರೆಸಿಗರು ಎಷ್ಟೇ ವಿರೋಧಿಸಿದರೂ ಕ್ಯಾರೇ ಅನ್ನದ ಪ್ರಣಬ್ ಮುಖರ್ಜಿ ಆರ್‌ಎಸ್‌ಎಸ್ ಒಂದು ದೇಶಪ್ರೇಮಿ ಸಂಘಟನೆ ಎಂದು ಹಾಡಿ ಹೊಗಳಿದ್ದರು.‌ಇದು ಸಂಘದ ವಿರೋಧಿಗಳಿಗೆ ಗಾಯಕ್ಕೆ ಉಪ್ಪು ನೀರು ಹಾಕಿದಂತಾಗಿತ್ತು. ಯಾಕೆಂದರೆ ಮಾಜಿ ರಾಷ್ಟ್ರಪತಿಯೊಬ್ಬರು ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಒಳ್ಳೆಯ ಅಭಿಪ್ರಾಯ ಪಡುತ್ತಾರೆ ಎಂದರೆ ಇದು ಸಾಮಾನ್ಯವಾದ ಸಂಘಟನೆ ಅಲ್ಲ ಎಂದು ಎಲ್ಲರಿಗೂ ಮನವರಿಕೆ ಆಗಿತ್ತು.!

ಆದ್ದರಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಸ್ವಲ್ಪ ತಿಳಿದುಕೊಂಡರೂ ಸಾಕು ಅಂತವರು ಸಂಪೂರ್ಣವಾಗಿ ತಮ್ಮನ್ನು ತಾವು ಸಂಘಕ್ಕೆ ಮುಡಿಪಾಗಿಡಲು ಪ್ರಯತ್ನಿಸುತ್ತಾರೆ. ಯಾಕೆಂದರೆ ವೃತ್ತಿ ಜೀವನ ತೊರೆದು ಸಂಘದ ಗರಡಿಯಲ್ಲಿ ಬೆಳೆದು ಇಂದು ಅದೆಷ್ಟೋ ಜನರು ದೇಶಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದೇ ರೀತಿ ಜಗತ್ತೇ ಮೆಚ್ಚಿಕೊಂಡ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಇದೇ ಸಂಘದ ಆಶ್ರಯದಲ್ಲಿ ಬೆಳೆದವರು ಎಂದು ಭಾರತೀಯರಾದ ನಾವು ಎದೆ ತಟ್ಟಿ ಹೇಳುವುದೇ ಒಂದು ರೀತಿಯ ಹೆಮ್ಮೆ..!

–ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close