ಪ್ರಚಲಿತ

ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದ ಮೋದಿ ಸರಕಾರ!! ಇನ್ಮುಂದೆ ರೈಲ್ವೆಯ ಬ್ರಾಡ್’ಗೇಜ್ ಹಳಿಗಳು ಸಂಪೂರ್ಣವಾಗಿ ವಿದ್ಯುತೀಕರಣವಾಗಲಿದ್ದು, ರೈಲು ಪ್ರಯಾಣ ಸುಗಮವಾಗಲಿದೆ!!

ಭಾರತೀಯ ರೈಲ್ವೆ ಇಲಾಖೆ ವಿಶ್ವದ ನಾಲ್ಕನೇ ಅತಿ ದೊಡ್ಡ ರೈಲು ಜಾಲವನ್ನು ಹೊಂದಿದ್ದು, ತೀರಾ ಇತ್ತೀಚಿನವರೆಗೂ ರೈಲ್ವೆ ಇಲಾಖೆಯನ್ನು ಸಮರ್ಥವಾಗಿ ಹಾಗೂ ಲಾಭದಾಯಕ ಹಾದಿಯಲ್ಲಿ ಮುನ್ನಡೆಯುತ್ತಿರುವ ವಿಚಾರ ಗೊತ್ತೇ ಇದೆ!! ಆದರೆ ಇದೀಗ ಭಾರತೀಯ ರೈಲ್ವೆಯ ಬ್ರಾಡ್ ಗೇಜ್ ಹಳಿಗಳನ್ನು ಸಂಪೂರ್ಣವಾಗಿ ವಿದ್ಯುತೀಕರಣಗೊಳಿಸಲು ಮೋದಿ ಸರಕಾರವು ನಿರ್ಧರಿಸಿದ್ದು, ಈ ವಿದ್ಯುತೀಕರಣದಿಂದಾಗಿ ರೈಲ್ವೆಯ ಡೀಸಿಲ್ ಮೇಲಿನ ಅವಲಂಬನೆಯು ನಿಂತು ಹೋಗಲಿದೆ ಎನ್ನುವ ಸಿಹಿ ಸುದ್ದಿಯನ್ನು ನೀಡಿದೆ!!

ಕಳೆದ ವರ್ಷ ಸೆಪ್ಟೆಂಬರ್ ನಿಂದ ಈ ವರ್ಷದ ಅಕ್ಟೋಬರ್ ವರೆಗೆ ದೇಶದ ವಿವಿಧೆಡೆ ಸಂಭವಿಸಿದ 75 ರೈಲು ಅಪಘಾತಗಳಲ್ಲಿ 40 ಮಂದಿ ಸಾವಿಗೀಡಾಗಿದ್ದಾರೆ. ಆದರೆ ಕಳೆದ ಐದು ವರ್ಷಗಳ ರೈಲು ಅಪಘಾತಗಳು ಮತ್ತು ಸಾವು-ನೋವಿಗೆ ಹೋಲಿಸಿದಲ್ಲಿ ಉತ್ತಮ ಸುರಕ್ಷತಾ ವಿಧಾನಗಳಿಂದ ದುರಂತದ ಸಂಖ್ಯೆ ಇಳಿಮುಖವಾಗಿದೆಯಲ್ಲದೇ, ಭಾರತೀಯ ರೈಲ್ವೆ ಕೈಗೊಂಡ ಸುರಕ್ಷತಾ ಕ್ರಮಗಳು ಮತ್ತು ಮುಂಜಾಗ್ರತಾ ವಿಧಾನಗಳಿಂದ ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಅಪಘಾತಗಳು ಮತ್ತು ಸಾವಿನ ಸಂಖ್ಯೆ ಕಡಿಮೆಯಾಗಿದೆ ಎಂದು ಸ್ಪಷ್ಟಪಡಿಸಿದ್ದರು. ಈ ಬೆನ್ನಲ್ಲೇ ಇದೀಗ ಭಾರತೀಯ ರೈಲ್ವೆಯ ಬ್ರಾಡ್ ಗೇಜ್ ಹಳಿಗಳನ್ನು ಶೇಕಡಾ 100ರಷ್ಟು ವಿದ್ಯುತೀಕರಣಗೊಳಿಸಲು ಮೋದಿ ಸರಕಾರವು ನಿರ್ಧರಿಸಿದೆ. ಪ್ರಸ್ತುತ ಭಾರತದ ಶೇಕಡಾ 46ರಷ್ಟು ಹಳಿಗಳು ಮಾತ್ರ ವಿದ್ಯುತೀಕರಣಗೊಂಡಿದ್ದು, ಪ್ರಸ್ತುತ 20,000 ಕಿಲೋ ಮೀಟರ್ ಹಳಿಗಳ ವಿದ್ಯುತೀಕರಣದ ಕಾಮಗಾರಿಯು ಭರದಿಂದ ನಡೆಯುತ್ತಿದೆ. ಇದು ಸಂಪೂರ್ಣಗೊಂಡರೆ ಭಾರತೀಯ ಶೇಕಡಾ 78ರಷ್ಟು ಹಳಿಗಳು ವಿದ್ಯುತೀಕರಣ ಗೊಂಡಾಂತಾಗುತ್ತದೆ.

ಹೌದು, ಮೋದಿ ಸರಕಾರವು 2016 ರವೆರೆಗೆ ಸುಮಾರು 4,800 ಕಿಲೋ ಮೀಟರ್ ನಷ್ಟು ವ್ಯಾಪ್ತಿಗೆ ಬ್ರಾಡ್ ಗೇಜ್ ರೈಲು ಹಳಿಗಳನ್ನು ನಿರ್ಮಿಸಿದ್ದರೆ 1,200 ಕಿಲೋ ಮೀಟರ್ ನಷ್ಟು ವ್ಯಾಪ್ತಿಗೆ ಹೊಸ ರೈಲು ಮಾರ್ಗಗಳನ್ನು ನೀಡಿದೆ. ಇನ್ನು 1,900 ಕಿಲೋ ಮೀಟರ್ ಗೇಜ್ ಪರಿವರ್ತನೆ ಹಾಗೂ 1,700 ಕಿಲೋ ಮೀಟರ್ ನಷ್ಟು ಜೋಡಿ ಹಳಿ ಮಾರ್ಗಗಳನ್ನು ನಿರ್ಮಿಸಲಾಗಿತ್ತು!! ಆದರೆ ಯುಪಿಎ ಸರಕಾರವು ವಾರ್ಷಿಕವಾಗಿ 1,530 ಕಿಲೋ ಮೀಟರ್ ರೈಲ್ವೆ ಮಾರ್ಗವನ್ನು ನಿರ್ಮಿಸಲಾಗಿತ್ತು. ಇನ್ನು ಯುಪಿಎ ಸರಕಾರ ವಾರ್ಷಿಕವಾಗಿ 763 ಮೇಲ್ಸೇತುವೆಗಳನ್ನು ನಿರ್ಮಿಸಿದ ದಾಖಲೆ ಹೊಂದಿದ್ದರೆ, ಎನ್ ಡಿ ಎ ಸರಕಾರ ವಾರ್ಷಿಕವಾಗಿ 1,066 ರಂತೆ ಎರಡು ವರ್ಷಗಳಲ್ಲಿ(2014-2016) 2,132 ರೈಲ್ವೆ ಮೇಲ್ಸೇತುವೆ ಹಾಗೂ ಕೆಳಸೇತುವೆ ನಿರ್ಮಾಣ ಮಾಡಿದೆ. ಇನ್ನು ಎರಡು ವರ್ಷಗಳಲ್ಲಿ ನಿರ್ಮಾಣವಾದ ಮಾನವರಹಿತ ಕ್ರಾಸಿಂಗ್ ನ ಸಂಖ್ಯೆ 2,433 ಆಗಿತ್ತು!!

ಆದರೆ ಇದೀಗ ಹಳಿಗಳ ವಿದ್ಯುತೀಕರಣದ ಕಾಮಗಾರಿಯು ಭರದಿಂದ ಸಾಗುತ್ತಿದ್ದು, ಮೋದಿ ಸರಕಾರವು ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 15000 ಕಿಲೋ ಮೀಟರ್ ರೈಲ್ವೆ ಹಳಿಗಳು ವಿದ್ಯುತೀಕರಣ ಗೊಂಡಿವೆ. 2013-14 ರಲ್ಲಿ 610 ಕಿಲೋ ಮೀಟರ್ ಹಳಿಗಳ ವಿದ್ಯುತೀಕರಣ ಗೊಂಡಿದ್ದರೆ, 2017-18ರಲ್ಲಿ 4087 ಕಿಲೋ ಮೀಟರ್ ಹಳಿಗಳು ವಿದ್ಯುತೀಕರಣ ಗೊಂಡಿವೆ. ಪ್ರಸ್ತುತ ದೇಶದಲ್ಲಿ ಸ್ವದೇಶಿ ತಂತ್ರಜ್ಞಾನದಡಿಯಲ್ಲಿ ಎಲೆಕ್ಟ್ರಿಕ್ ಎಂಜಿನ್ ಗಳು ತಯಾರಾಗುತ್ತಿದ್ದು, 2017-18ರಲ್ಲಿ 377 ಎಲೆಕ್ಟ್ರಿಕ್ ಎಂಜಿನ್ ಗಳು ತಯಾರಾಗಿವೆ. 500 ಹೆಚ್.ಪಿ ಸಾಮರ್ಥ್ಯದ ಈ ಎಲೆಕ್ಟ್ರಿಕ್ ಎಂಜಿನ್ ಗಳು ಪ್ರಸ್ತುತ ಬಳಕೆಯಲ್ಲಿರುವ ಡೀಸಿಲ್ ಎಂಜಿನ್ ಗಳಿಗಿಂತ ಶೇಕಡ 92 ರಷ್ಟು ಹೆಚ್ಚು ಸಾಮರ್ಥ್ಯಶಾಲಿಯೂ ಬಲಶಾಲಿಯೂ ಆಗಿವೆ. ಈ ಎಂಜಿನ್ ಗಳ ನಿರ್ವಹಣಾ ವೆಚ್ಚವೂ ಡೀಸಿಲ್ ಎಂಜಿನ್ ಗಳಿಗಿಂತ ತುಂಬಾ ಕಡಿಮೆ.

ಪ್ರಸ್ತುತ 20,000 ಕಿಲೋ ಮೀಟರ್ ಹಳಿಗಳ ವಿದ್ಯುತೀಕರಣದ ಕಾಮಗಾರಿಯು ಭರದಿಂದ ನಡೆಸುತ್ತಿರುವ ನರೇಂದ್ರ ಮೋದಿ ಸರಕಾರವು ಇದನ್ನು ಸಂಪೂರ್ಣಗೊಳಿಸಿದರೆ ಭಾರತೀಯ 78% ಹಳಿಗಳು ವಿದ್ಯುತೀಕರಣ ಗೊಂಡಂತಾಗುತ್ತದೆ. ಇನ್ನುಳಿದ 13,675 ಕಿಲೋ ಮೀಟರ್ ಹಳಿಗಳನ್ನು 12134 ಕೋಟಿ ರೂಪಾಯಿಗಳ ವೆಚ್ಚದಲ್ಲಿ ವಿದ್ಯುತೀಕರಿಸಲು ಮೋದಿ ಸರಕಾರದ ಕ್ಯಾಬಿನೆಟ್ ತೀರ್ಮಾನ ಕೈಗೊಂಡಿದೆ!! ಅಷ್ಟೇ ಅಲ್ಲದೇ ಈ ವಿದ್ಯುತೀಕರಣದಿಂದಾಗಿ ರೈಲ್ವೆಯ ಡೀಸಿಲ್ ಮೇಲಿನ ಅವಲಂಬನೆಯು ನಿಂತು ಹೋಗಲಿದೆ. ಪ್ರಸ್ತುತ ರೈಲ್ವೆಯು ತನ್ನ ಡಿಸೇಲ್ ಎಂಜಿನ್ ಗಳಿಗೆ ವಾರ್ಷಿಕವಾಗಿ ಸುಮಾರು 283 ಕೋಟಿ ಲೀಟರ್ ಡೀಸೆಲ್ ಬಳಸುತ್ತಿದ್ದು, ಸಂಪೂರ್ಣ ವಿದ್ಯುತೀಕರಣ ಹೊಂದಿದಾಗ ಸುಮಾರು 14,000 ಕೋಟಿ ರೂಪಾಯಿ ಮೊತ್ತದ ಡೀಸೆಲ್ ಬಳಕೆ ನಿಂತು ಹೋಗಿ ಈ ಮೊತ್ತದ ವಿದೇಶೀ ವಿನಿಮಯವು ಕೂಡಾ ದೇಶಕ್ಕೆ ಉಳಿತಾಯವಾಗಲಿದೆ!!

ಡೀಸಿಲ್ ಎಂಜಿನ್‍ಗಳು ಒಂದು ಟನ್ ಒಂದು ಕಿಲೋ ಮೀಟರ್ ತೂಕವನ್ನು ಎಳೆಯಲು 5.1 ಪೈಸೆಯ ಇಂಧನವನ್ನು ಬಳಸುತ್ತಿದೆ. ಆದರೆ ಎಲೆಕ್ಟ್ರಿಕ್ ಎಂಜಿನ್ ಗಳು ಒಂದ ಟನ್ ಒಂದು ಕಿಲೋಮೀಟರ್ ತೂಕವನ್ನು ಎಳೆಯಲು ಕೇವಲ 1.5 ಪೈಸೆಯ ವಿದ್ಯುತ್ತನ್ನು ಬಳಸುತ್ತಿದೆ. ಎಲೆಕ್ಟ್ರಿಕ್ ಎಂಜಿನ್ ಗಳ ಬಳಕೆಯಿಂದ ವಾಯು ಮಾಲಿನ್ಯವೂ ಗಣನೀಯವಾಗಿ ಕಡಿಮೆಯಾಗಲಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಲಿದೆ!! ಜೊತೆಗೆ ವಿದ್ಯುತ್ ಚಾಲಿತ ರೈಲುಗಳ ವೇಗವು ಡೀಸಿಲ್ ಚಾಲಿತ ರೈಲುಗಳಿಗಿಂತ ಹೆಚ್ಚಾಗಲಿದ್ದು, ಇದು ಪ್ರಯಾಣಿಕರ ಪ್ರಯಾಣದ ಅವಧಿಯನ್ನೂ ಕಡಿಮೆ ಮಾಡುತ್ತದೆ. ದೇಶೀ ತಂತ್ರಜ್ಞಾನದ ಬಳಕೆಯಿಂದ ವಿಶ್ವದಲ್ಲೇ ಮೊದಲ ಬಾರಿಗೆ ಭಾರತದಲ್ಲಿ ರೈಲ್ವೇ ಡೀಸಿಲ್ ಎಂಜಿನ್ ಗಳನ್ನು ಎಲೆಕ್ಟ್ರಿಕ್ ಎಂಜಿನ್ ಗಳನ್ನಾಗಿ ಪರಿವರ್ತಿಸುವ ಕೆಲಸವೂ ಆಗುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ!!

ಒಟ್ಟಿನಲ್ಲಿ ದೇಶದ ಎಲ್ಲ ಮೀಟರ್ ಗೇಜ್ ರೈಲ್ವೆ ಹಳಿಗಳನ್ನು ಬ್ರಾಡ್ ಗೇಜ್ ಗೆ ಹಂತಹಂತವಾಗಿ ಪರಿವರ್ತಿಸುತ್ತಿರುವ ಕೇಂದ್ರ ಸರಕಾರವು ಈಗಾಗಲೇ 3.5 ಲಕ್ಷ ಕೋಟಿ ರೂಪಾಯಿಗಳನ್ನು ಕ್ರೋಢೀಕರಣ ಮಾಡಿದೆ. ನಷ್ಟ ಕಡಿತಗೊಳಿಸುವ ಸಲುವಾಗಿ ಹಳಿ ಪರಿವರ್ತನೆ ಕೈಗೊಳ್ಳಲಾಗುತ್ತಿರುವ ಜತೆಗೆ ಒಂದೇ ರೀತಿಯ (ಯೂನಿಗೇಜ್) ಹಳಿ ಮತ್ತು ಹಳಿ ವಿಸ್ತರಣೆ ಯಿಂದಾಗಿ ಇನ್ನು ಮುಂದೆ ರೈಲು ಪ್ರಯಾಣ ಸುಗಮವಾಗಲಿರುವ ಜತೆಗೆ ಸುರಕ್ಷಿತ ಮತ್ತು ವೇಗವೂ ದೊರೆಯಲಿದೆ.

ಮೂಲ:https://indianexpress.com/

– ಅಲೋಖಾ

Tags

Related Articles

FOR DAILY ALERTS
 
FOR DAILY ALERTS
 
Close