ಪ್ರಚಲಿತ

ಪಾಕಿಸ್ತಾನದ ಖೈದಿಯ ಕೈಯಲ್ಲಿ ಭಗವದ್ಗೀತೆ! ಜೈಲಿನಲ್ಲೇ ಕೂತು ಭಗವದ್ಗೀತೆ ಪಠಣೆ ಮಾಡಿ ಪಾಕಿಸ್ತಾನಕ್ಕೆ ಮರಳಿದ ಯುವಕ!

ಹಿಂದೂ ಧರ್ಮದ ಆಚಾರ ವಿಚಾರಗಳನ್ನು ಪ್ರತಿಪಾದಿಸಿದ ಯಾರೂ ಕೂಡ ಕೆಟ್ಟ ದಾರಿ ಹಿಡಿಯಲು ಸಾಧ್ಯವಿಲ್ಲ. ಪುರಾತನ ಕಾಲದಲ್ಲಿ ಎಲ್ಲರೂ ಹಿಂದೂಗಳಾಗಿದ್ದರು ಎಂದು ಕೆಲವೊಂದು ಶಾಸ್ತ್ರ ಹೇಳಿದರೆ, ಹಿಂದೂ ಧರ್ಮದ ಆಚರಣೆಗಳನ್ನೇ ಇಡೀ ಜಗತ್ತು ಒಪ್ಪಿಕೊಂಡಿದೆ ಎಂದರೆ ತಪ್ಪಾಗದು. ಹಿಂದೂಗಳನ್ನು ವಿರೋಧಿಸುವವರು ಕೂಡ ಹಿಂದೂ ಧರ್ಮದ ಗ್ರಂಥಗಳನ್ನು ಓದಿ ಅದರಂತೆಯೇ ಉತ್ತಮ ಅಂಶಗಳನ್ನು ತಮ್ಮ ಜೀವನಕ್ಕೆ ಅಳವಡಿಸುತ್ತಾರೆ ಎಂಬುದಕ್ಕೆ ಸದ್ಯ ಭಾರತದ ಶತ್ರು ರಾಷ್ಟ್ರ ಪಾಕಿಸ್ತಾನದ ಈ ಯುವಕನೇ ಸಾಕ್ಷಿ. ಅಪರಾಧವೆಸಗಿ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ನಂತರದಲ್ಲಿ ಅದೆಷ್ಟೋ ಮಂದಿ ತಮ್ಮ ಜೀವನದಲ್ಲಿ ಒಳ್ಳೆಯವರಾದರೆ ಇನ್ನೂ ಕೆಲವರು ಬುದ್ಧಿ ಕಲಿಯದೆ ತಮ್ಮ ಹಳೇ ಛಾಳಿಯನ್ನೇ ಮುಂದುವರಿಸುತ್ತಾರೆ. ಆದರೆ ಇಲ್ಲೊಬ್ಬ ಪಾಕಿಸ್ತಾನದ ಖೈದಿ ಭಾರತದಲ್ಲಿ ಕಳೆದ ೧೬ ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸಿ ಇದೀಗ ಬಿಡುಗಡೆಗೊಂಡ ನಂತರ ತನ್ನ ದೇಶಕ್ಕೆ ಮರಳುವಾಗ ಜೊತೆಯಲ್ಲಿ ಹಿಂದೂ ಧರ್ಮದ ಪವಿತ್ರ ಗ್ರಂಥ ಭಗವದ್ಗೀತೆಯನ್ನು ತೆಗೆದುಕೊಂಡು ಹೋಗಿದ್ದು, ಆತನ ಜೀವನದಲ್ಲಿ ಭಗವದ್ಗೀತೆ ಯಾವ ರೀತಿ ಕಣ್ತೆರೆಸಿದೆ ಎಂಬುದನ್ನು ಸೂಚಿಸುತ್ತದೆ.!

ಜೈಲಿನಲ್ಲೇ ಕೂತು ಜ್ಞಾನೋದಯವಾಯಿತು ಪಾಕ್ ಖೈದಿಗೆ!

ಭಾರತ ಎಂದರೆ ಹಿಂದೂ ಧರ್ಮ ಎಂದರೆ ಯಾವತ್ತೂ ಇನ್ನೊಬ್ಬರಿಗೆ ಕೇಡು ಬಯಸಿದ ಸಂಸ್ಕೃತಿ ಅಲ್ಲ. ಆದ್ದರಿಂದಲೇ ಭಾರತವನ್ನು ಜಗತ್ತಿನ ಎಲ್ಲಾ ರಾಷ್ಟ್ರಗಳು ಹಿಂಬಾಲಿಸುತ್ತವೆ. ವಿದೇಶಿಗರಂತೂ ಭಾರತಕ್ಕೆ ಬಂದು ಇಲ್ಲಿನ ದೇವಾಲಯಗಳ ಸೌಂದರ್ಯವನ್ನು ಸವಿಯದೆ ವಾಪಾಸ್  ಮರಳುವುದಿಲ್ಲ, ಇಲ್ಲಿಯೇ ಇದ್ದು ಇಲ್ಲಿನ ಸಂಸ್ಕೃತಿಯಂತೆ ಮದುವೆಯಾದ ವಿದೇಶಿಗರೂ ನಮಗೆ ಉದಾಹರಣೆಯಾಗಿ ಸಿಗುತ್ತಾರೆ. ಆದರೆ ಈಗ ಇಲ್ಲಿ ನಡರದ ಘಟನೆ ಜಗತ್ತನ್ನೇ ದಿಗ್ಬ್ರಮೆಗೊಳಿಸಿದೆ, ಕಾರಣ ಪಾಕಿಸ್ತಾನದ ಖೈದಿಯೊಬ್ಬ ಭಾರತದಲ್ಲಿ ಜೈಲು ಶಿಕ್ಷೆ ಅನುಭವಿಸಿ ತನ್ನ ದೇಶಕ್ಕೆ ಮರಳುವ ವೇಳೆ ಜೊತೆಯಲ್ಲೇ ಭಗವದ್ಗೀತೆಯನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಿದ್ದಾರೆ.

2001ರಲ್ಲಿ ಭಾರತದ ವಾರಣಾಸಿಯ ಕಂಟೋನ್ಮೆಂಟ್ ವಲಯದಲ್ಲಿ ಅನುಮಾಸ್ಪದವಾಗಿ ಓಡಾಡುತ್ತಿದ್ದ ಪಾಕಿಸ್ತಾನ ಮೂಲದ ಜಲಾಲುದ್ದೀನ್ ಎದಂಬ ಯುವಕನನ್ನು ಪೊಲೀಸರು ಬಂಧಿಸಿದ್ದರು. ಕಳೆದ ೧೬ ವರ್ಷಗಳಿಂದ ಜೈಲಿನಲ್ಲೇ ಇರುವ ಜಲಾಲುದ್ದೀನ್ ಅಂದು ಭಾರತದ ಸಂಸ್ಕೃತಿಯ ವಿರುದ್ಧ ಇದ್ದ ಆತನ ವರ್ತನೆ ಇಂದು ಭಗವದ್ಗೀತೆ ಓದಿದ ನಂತರ ಸಂಪೂರ್ಣವಾಗಿ ಬದಲಾಗಿದ್ದಾನೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ.

ಜೈಲಿನಲ್ಲೇ ಎಂ‌.ಎ ಪದವಿ ಪಡೆದ ಜಲಾಲುದ್ದೀನ್!

ಜಲಾಲುದ್ದೀನ್ ಕೇವಲ ಜೈಲಿನಲ್ಲಿ ಸಾಮಾನ್ಯ ಖೈದಿಗಳಂತೆ ಇರಲಿಲ್ಲ, 2001ರಲ್ಲಿ ಬಂಧಿಸುವ ವೇಳೆ ಜಲಾಲುದ್ದೀನ್ ಪ್ರೌಢ ಶಿಕ್ಷಣವನ್ನು ಮಾತ್ರ ಮುಗಿಸಿದ್ದ, ಆದರೆ ಜೈಲಿನಲ್ಲಿಯೇ ಇದ್ದು ಎಂ‌.ಎ ಓದಲು ತೀರ್ಮಾನಿಸಿದ್ದ. ಅದರಂತೆಯೇ ಪೊಲೀಸರ ಸಹಾಯದಿಂದ ಜೈಲಿನಲ್ಲೇ ಎಂ.ಎ ಪದವಿ ಪಡೆದು ಇದೀಗ ಬಹಳ ಒಳ್ಳೆಯ ಯುವಕನಾಗಿ ಪರಿವರ್ತನೆಗೊಂಡಿದ್ದಾನೆ. ಅಲ್ಲದೆ ಜೈಲಿನಲ್ಲೇ ಎಲೆಕ್ಟ್ರಿಶಿಯನ್ ಕೋರ್ಸನ್ನೂ ಮುಗಿಸಿ ಬಹಳ ಲವಲವಿಕೆಯಿಂದ ಜೈಲಿನಲ್ಲಿ ವಿದ್ಯುತ್ ಸಮಸ್ಯೆಗಳನ್ನು ತಾನೇ ಸರಿಪಡಿಸುತ್ತಿದ್ದ. ಅಷ್ಟೇ ಅಲ್ಲದೆ ಖೈದಿಗಳಿಗೆ ಏರ್ಪಡಿಸುತ್ತಿದ್ದ ಕ್ರಿಕೆಟ್ ಆಟದಲ್ಲಿ ತಾನು ಅಂಪಾಯರ್ ಆಗಿ ಉತ್ತಮ ತೀರ್ಪು ಕೂಡ ನೀಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ೧೬ ವರ್ಷಗಳಲ್ಲಿ ಜಲಾಲುದ್ದೀನ್ ಸಂಪೂರ್ಣವಾಗಿ ಬದಲಾಗಿರುವುದಕ್ಕೆ ಆತನ ನಡವಳಿಕೆಯೇ ಸಾಕ್ಷಿ ಎಂದಿರುವ ಪೊಲೀಸರು ಆತನನ್ನು ಅಮೃತಸರಕ್ಕೆ ಕರೆದೊಯ್ದು ನಂತರ ವಾಘಾ ಗಡಿಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.!

ಹಿಂದೂಗಳನ್ನು ಕಂಡರೆ ಉರಿದು ಬೀಳುವ ಪಾಕಿಸ್ತಾನಿಗಳೇ ಹಿಂದೂ ಧರ್ಮದ ಪವಿತ್ರ ಗ್ರಂಥ ಭಗವದ್ಗೀತೆಯನ್ನು ಒಪ್ಪಿಕೊಳ್ಳುತ್ತಾರೆ ಎಂದರೆ ಭಾರತ ಯಾವ ರೀತಿ ಜಗತ್ತಿಗೆ ಗುರುವಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ. ಭಾರತ ಯಾವತ್ತಿಗೂ ಜಗತ್ತಿನ ಮುಂದೆ ಗುರುವಿನ ಸ್ಥಾನದಲ್ಲೇ ಇರುತ್ತದೆ ಎಂಬುದಕ್ಕೆ ಪದೇ ಪದೇ ಒಂದೊಂದು ಘಟನೆಗಳು ಸಾಕ್ಷಿಯಾಗುತ್ತಿದೆ. ಅಂದಹಾಗೆ ಭಾರತದಲ್ಲಿ ಹಿಂದೂ ವಿರೋಧಿಗಳಿಗೆ ಸದ್ಯ ಜಲಾಲುದ್ದೀನ್‌ನ ವಿಚಾರ ತಿಳಿದು ಹೊಟ್ಟೆಗೆ ಬೆಂಕಿ ಇಟ್ಟಂತಾಗಿರುವುದರಲ್ಲಿ ಸಂಶಯವೇ ಇಲ್ಲ.!!

–ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close