ದೇಶಪ್ರಚಲಿತ

ತಮ್ಮ ಜೀವದ ಹಂಗು ತೊರೆದು 3000 ಪ್ರವಾಸಿಗಳನ್ನು ಹಿಮಪಾತದಿಂದ ಪಾರುಮಾಡಿ ತಮ್ಮ ಬರಾಕ್ ಗಳನ್ನೆ ಅವರಿಗಾಗಿ ಬಿಟ್ಟು ಕೊಟ್ಟ ಭಾರತೀಯ ಸೇನೆಯ ವೀರ ಸೈನಿಕರಿಗೆ ನಮನಗಳು

 

ಇಂತಹ ಸುದ್ದಿಗಳು ಮಾಧ್ಯಮದ ಆಕರ್ಷಣೆಯ ಕೇಂದ್ರವಾಗುವುದೆ ಇಲ್ಲ. ಭಾರತೀಯ ಸೇನೆಯ ಪರಾಕ್ರಮ ಎಲ್ಲರಿಗೂ ತಿಳಿದಿರುವಂತದ್ದೆ. ಆದರೆ ಸೇನೆಯ ಮಾನವೀಯ ಮುಖದ ಅನಾವರಣ ಆಗುವುದು ಕಡಿಮೆ. ನಮ್ಮ ಭಾರತೀಯ ಸೇನೆಯ ಗುಣಗಾನ ಮಾಡಲು ಪದಗಳೆ ಸಾಲದು. ಕಳೆದ ವಾರ ಗ್ಯಾಂಗ್ಟಾಕ್ ನ ನಾಥುಲಾದಲ್ಲಿ ಭಾರೀ ಪ್ರಮಾಣದ ಹಿಮಪಾತವಾದ ಕಾರಣ ಕನಿಷ್ಟ ಪಕ್ಷ 3000 ಪ್ರವಾಸಿಗಳು ನಾಥುಲಾದಲ್ಲಿ ಸಿಕ್ಕಿಹಾಕಿಕೊಂಡು ತಮ್ಮ ತಾಣಗಳಿಗೆ ಬರಲಾಗದೆ ಒದ್ದಾಡುತ್ತಿದ್ದರು. ಕಷ್ಟಕಾಲದಲ್ಲಿ ಆಪದ್ಭಾಂದವನಂತೆ ಬಂದು ಇವರ ಪ್ರಾಣವನ್ನು ರಕ್ಷಿಸಿದ್ದು ರಾಜಕಾರಣಿ, ಚಿತ್ರನಟ ಅಥವಾ ಕ್ರಿಕೆಟ್ ತಾರೆಯರಲ್ಲ, ಬದಲಿಗೆ ನಮ್ಮ ಸೇನೆಯ ವೀರ ಸೈನಿಕರು.

ಚೀನಾದ ಸರಹದ್ದಿಗೆ ಅತಿ ಸಮೀಪವಿರುವ ನಾಥುಲಾ ಪಾಸ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಅಷ್ಟೂ ಜನ ಪ್ರವಾಸಿಗರನ್ನು ತಮ್ಮ ಪ್ರಾಣದ ಹಂಗು ತೊರೆದು ಸುರಕ್ಷಿತವಾಗಿ ಸೈನ್ಯ ಶಿಬಿರಗಳಿಗೆ ಸಾಗಿಸಿದ್ದರು ಸೇನೆಯ ಸೈನಿಕರು. ಇಷ್ಟೇ ಅಲ್ಲ ತಮಗೆಂದೆ ಮೀಸಲಾಗಿರುವ ಬರಾಕ್ ಗಳನ್ನು 2,500 ಪ್ರವಾಸಿಗರಿಗೆ ಬಿಟ್ಟುಕೊಟ್ಟು ತಮ್ಮ ಮಾನವೀಯ ಮುಖದ ಪರಿಚಯವನ್ನು ಜಗತ್ತಿಗೇ ತೋರಿಸಿಕೊಟ್ಟಿದ್ದಾರೆ. ಸ್ವಲ್ಪ ಯೋಚಿಸಿ ಸಾಮಾನ್ಯ ಛಳಿಗೆ ಬ್ಲಾಂಕೆಟ್ ಹೊದ್ದು ಬೆಚ್ಚನೆ ಮಲಗುವ ನಾವು ಮತ್ತು ದೇಹದ ಎಲುಬುಗಳೂ ಕರಗುವಂತಹ ಮೈ ಕೊರೆಯುವ ಛಳಿಯಲ್ಲಿ ದೇಶ ಕಾಯುವ ಸೈನಿಕರು!

ಅಂತಹ ಛಳಿಯಲ್ಲಿಯೂ ತಮ್ಮ ಬರಾಕ್ ಗಳನ್ನು ಜನರಿಗಾಗಿ ಬಿಟ್ಟುಕೊಟ್ಟು ಅವರ ಪ್ರಾಣ ಕಾಪಾಡಿದ ನಮ್ಮ ಸೈನಿಕರು ದೇವರಿಗಿಂತ ಕಡಿಮೆಯೆ? ಇಂತಹ ಸೇನೆಯನ್ನು ಬಲಾತ್ಕಾರಿಗಳು, ಗೂಂಡಾಗಳು ಎನ್ನುತ್ತಾರಲ್ಲಾ ಅವರಿನ್ನೆಂತಹ ಕಟುಕರಿರಬೇಕು? ಹಿಮಪಾತಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳಬಹುದಾಗಿದ್ದ ಅಷ್ಟೂ ಪ್ರವಾಸಿಗರನ್ನು ರಕ್ಷಿಸಿ, ಅವರಿಗೆ ವೈದ್ಯಕೀಯ ಸೌಲಭ್ಯ ನೀಡಿ, ಅವರಿಗೆ ತಮ್ಮ ಆಶ್ರಯಯದಾಣಗಳನ್ನೂ ಬಿಟ್ಟುಕೊಟ್ಟು ತಮ್ಮ ಪಾಲಿನ ಊಟವನ್ನೂ ಪ್ರವಾಸಿಗಳಿಗೆ ನೀಡಿದರೂ ಯಾವ ಮಾಧ್ಯಮಗಳೂ ನಮ್ಮ ಸೈನಿಕರ ಪರಾಕ್ರಮ ಮತ್ತು ಮಾನವೀಯತೆಯನ್ನು ಹೊಗಳಲೆ ಇಲ್ಲ.

ಯಾವನೋ ಚಿತ್ರನಟ, ರಾಜಕಾರಣಿ ಇಲ್ಲ, ಕ್ರಿಕೆಟ್ ತಾರೆಯ ಮದುವೆ, ಮುಂಜಿ, ಕಾರ್ಯಕ್ರಮಗಳನ್ನು ವಾರಗಟ್ಟಲೆ ತೋರಿಸುವ ಮಾಧ್ಯಮಗಳಿಗೆ ಸೈನಿಕರ ಬಲಿದಾನಗಳು ಟಿ.ಆರ್.ಪಿ ತಂದು ಕೊಡುವ ಸುದ್ದಿಯಾಗುವುದಿಲ್ಲ. ಹಾಗಾಗಿ ಸೈನಿಕರಿಗೆ ಸಂಬಂಧ ಪಟ್ಟ ವಿಚಾರಗಳೆಂದರೆ ಇವುಗಳಿಗೆ ಅಲರ್ಜಿ. ಭಾರತೀಯ ಸೇನೆಯಲ್ಲದಿದ್ದರೆ ನಾವು ನಮ್ಮ ಪ್ರಾಣವನ್ನೆ ಕಳೆದುಕೊಳ್ಳಬೇಕಾಗುತ್ತಿತ್ತು, ದೇವರಂತೆ ಬಂದು ನಮ್ಮನ್ನು ಕಾಪಾಡಿದರು ಎಂದು ರಕ್ಷಿಸಲ್ಪಟ್ಟ ಪ್ರವಾಸಿಗಳು ಸೈನಿಕರನ್ನು ಬಾಯಿ ತುಂಬಾ ಕೊಂಡಾಡಿದ್ದಾರೆ. ಇಂತಹ ಸೈನಿಕರು ನಮ್ಮ ಆದರ್ಶಗಳಾಗಿರಬೇಕೆ ಹೊರತು, ರಾಜಕಾರಣಿ, ಚಿತ್ರನಟರಲ್ಲ.

13,000 ಅಡಿ ಎತ್ತರದಲ್ಲಿ ಸಿಲುಕಿರುವ ಪ್ರವಾಸಿಗಳ ಜೀವಕ್ಕೆ ಕಿಂಚಿತ್ತೂ ಕುತ್ತು ಬರದಂತೆ 9000 ಅಡಿಗಳಲ್ಲಿರುವ ತಮ್ಮ ಬೇಸ್ ಕ್ಯಾಂಪ್ ಗೆ ಕರೆತಂದು ಅವರ ಶುಶ್ರೂಷೆ ಮಾಡಿ ಸುರಕ್ಷಿತವಾಗಿ ಅವರನ್ನು ಗ್ಯಾಂಗ್ಟಾಕ್ ಗೆ ಕಳುಹಿಸಿಕೊಟ್ಟ ಭಾರತೀಯ ಸೇನೆಗೆ ಅನಂತಾನಂತ ನಮನಗಳು. ದೇಶಕ್ಕಾಗಿ ಬೇರೇನನ್ನೂ ಮಾಡಲು ಸಾಧ್ಯವಿಲ್ಲ, ಕಡೆ ಪಕ್ಷ ನಮ್ಮ ಸೇನೆಯ ವೀರ ಸೈನಿಕರ ಬಲಿದಾನ, ಪ್ರರಾಕ್ರಮಗಳಿಗೆ ನಮನಗಳನ್ನಾದರೂ ಸಲ್ಲಿಸೋಣ.

ಜೈ ಜವಾನ್ ….. ಭಾರತೀಯ ಸೇನೆ ಅಮರವಾಗಿರಲಿ

–ಶಾರ್ವರಿ

Tags

Related Articles

FOR DAILY ALERTS
 
FOR DAILY ALERTS
 
Close