ಅಂಕಣ

ಒಂದೇ ಕರೆಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ 60 ಲಕ್ಷ ರೂ.ದೋಚಿದ್ದರು! ದೇಶದಲ್ಲಿ ಮರೆಯಾದ ಉಕ್ಕಿನ ಮಹಿಳೆಯ ದೊಡ್ಡ ಹಗರಣ! ಹಗರಣದ ಪಾತ್ರದಾರಿ ಜೈಲಿನಲ್ಲೇ ಸಾವನ್ನಪ್ಪಿದ್ದು ಹೇಗೆ?

60 ವರ್ಷಗಳ ಆಡಳಿತ ಅವಧಿಯಲ್ಲಿ ಕಾಂಗ್ರೆಸ್ ದೇಶವನ್ನು ಅಭಿವೃದ್ಧಿಪಡಿಸುವ ಬದಲು ಹಗರಣಗಳೇ ಮಾಡುತ್ತಾ ಬಂದಿದೆ!! ಇಡೀ ದೇಶವನ್ನೇ ಲೂಟಿಹೊಡೆದು ಜನರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದೇ ಜಾಸ್ತಿ!! 1971ರಲ್ಲಿ ನಡೆದ ನಾಗರ್ವಾಲಾ ಹಗರಣ ಯಾರಿಗೂ ತಿಳಿಯದಂತೆ ಮುಚ್ಚಿ ಹಾಕಲಾಗಿತ್ತು.. ಆ ಸಮಯದಲ್ಲಿ 60 ಲಕ್ಷ ರೂಪಾಯಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಲೂಟಿ ಮಾಡಲಾಯಿತು.. ಅದೂ ಕೂಡಾ ಇಂದಿರಾ ಗಾಂಧಿ ಹೆಸರಿನಲ್ಲಿ!! ಕೇವಲ ಒಂದು ದೂರವಾಣಿ ಕರೆಯ ಮೂಲಕ ಎಂದರೆ ನಂಬಲು ಸಾಧ್ಯವೇ?! ಹೌದು ನಂಬಲೇ ಬೇಕು….

ಒಂದು ದೂರವಾಣಿ ಕರೆಯ ಮೂಲಕ ಲಕ್ಷಾಂತರ ರೂಪಾಯಿಗಳನ್ನು ಲೂಟಿ ಮಾಡುವ ಮೂಲಕ ಕಾಂಗ್ರೆಸ್ ಎಲ್ಲರ ಕಣ್ಣಿಗೆ ಮಣ್ಣೆರಚಿತ್ತು!! ದೆಹಲಿಯ ಪಾರ್ಲಿಮೆಂಟ್ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮೇ 24 1971 ರಲ್ಲಿ 60 ಲಕ್ಷ ರೂ ಹಗರಣ ನಡೆದಿದ್ದು ಈ ಹಗರಣ ನಡೆಸಿರುವಂತಹದ್ದು ಬೇರೇ ಯಾರೂ ಅಲ್ಲ.. ಅದು ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ!! ಆದರೆ ಈ ಸುದ್ದಿ ಮಾತ್ರ ಎಲ್ಲೂ ಹಬ್ಬಿಲ್ಲ.. ಯಾಕೆಂದರೆ ಆ ಸಮಯದಲ್ಲಿ ಆಳ್ವಿಕೆ ನಡೆಸಿರುವಂತಹದ್ದು ಕಾಂಗ್ರೆಸ್ಸಿಗರೇ.. ಯಾವಾಗ ಬೇಕಾದರೂ ಎಷ್ಟು ಬೇಕಾದರು ಅವರಿಗಿಷ್ಟ ಬಂದಂತೆ ಲೂಟಿ ಮಾಡಬಹುದಿತ್ತು!! ಹಾಗಾಗಿ ತಮ್ಮ ಆಳ್ವಿಕೆಯಲ್ಲಿ ತಮಗೆಷ್ಟು ಬೇಕೊ ಅಷ್ಟೂ ಹಣವನ್ನು ಕೊಳ್ಳೆಹೊಡೆದಿದ್ದಾರೆ!!

ಹೊಸದಿಲ್ಲಿ ಪಾರ್ಲಿಮೆಂಟ್ ಸ್ಟ್ರೀಟ್‍ನಲ್ಲಿರುವ ಬೃಹತ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಮೇ 24, 1971 ರಂದು ಶ್ರೀಮತಿ ಇಂದಿರಾ ಗಾಂಧಿಯವರ ಕಚೇರಿಯಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ದೂರವಾಣಿ ಕರೆ ಬಂದಿದ್ದು ಅದನ್ನು ಮುಖ್ಯ ಕ್ಯಾಷಿಯರ್, ಪ್ರಕಾಶ್ ಮಲ್ಹೋತ್ರಾರವರು ಆ ಕರೆಯನ್ನು ಸ್ವೀಕರಿಸುತ್ತಾರೆ… ಮೊದಲು ಇಂದಿರಾ ಗಾಂಧಿಯ ಕಚೇರಿಯಿಂದ ಸೆಕ್ರೆಟರಿ ಫೋನ್ ಕರೆಯನ್ನು ಮಾಡುತ್ತಾರೆ. ನಾನು ಪ್ರಧಾನ ಮಂತ್ರಿ ಕಚೇರಿಯಿಂದ ಕರೆ ಮಾಡುತ್ತಿದ್ದೇನೆ ಎಂದು ಸ್ವಲ್ಪ ಹೊತ್ತು ಲೈನ್ ಹೋಲ್ಡ್ ಮಾಡುತ್ತಾರೆ!!

Related image

ನಂತರ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ಕರೆಯನ್ನು ಸ್ವೀಕರಿಸಿ.. ಬಾಂಗ್ಲಾದೇಶದ ಮಿಷನ್‍ಗಾಗಿ ನಮಗೆ ಅಗತ್ಯವಾಗಿ 60 ಲಕ್ಷ ರೂಪಾಯಿ ಬೇಕಾಗಿದೆ.. ಹಾಗಾಗಿ ನೀವು ಅಗತ್ಯವಾಗಿ ನಮಗೆ ಅಷ್ಟು ಹಣವನ್ನು ನಮಗೆ ತಲುಪಿಸಬೇಕು ಎಂದರು.. ಇದು ತುಂಬಾ ರಹಸ್ಯವಾದುದು.. ಹಾಗಾಗಿ ಇದು ಯಾರಿಗೂ ತಿಳಿಯಬಾರದು ಎಂಬ ಶರತ್ತನ್ನೂ ವಿಧಿಸುತ್ತಾರೆ!! ಹಣವನ್ನು ತಂದ ತಕ್ಷಣ ನಮ್ಮ ಕಡೆಯ ಒಬ್ಬರನ್ನು ಆ ಸ್ಥಳಕ್ಕೆ ಕಳುಹಿಸುತ್ತೇವೆ, ಕೋಡ್ ವರ್ಡ್‍ನೊಂದಿಗೆ ನೀವು ಹಣವನ್ನು ತರುತ್ತೀರಿ ಆಗ ನಾವು ಬಾಂಗ್ಲಾದೇಶ್ ಕಾ ಬಾಬು ಎಂದಾಗ ಅದಕ್ಕೆ ಪ್ರತಿಯಾಗಿ ಬಾರ್ ಎಟ್ ಲಾ ಎಂದು ಪ್ರತ್ಯುತ್ತರ ನೀಡಿದರೆ ಮಾತ್ರ ನೀವು ಹಣವನ್ನು ಕೊಡಿ ಎಂದು ಹೇಳುತ್ತಾರೆ.. ಅದಕ್ಕೆ ಪ್ರತ್ಯುತ್ತರ ನೀಡಿದ ಮಲ್ಹೋತ್ರ ನೀವು ಹೇಳಿದಂತಾಗಲಿ ಎಂದು ಹೇಳಿ ಫೋನ್ ಸಂಭಾಷಣೆಯನ್ನು ಮುಗಿಸುತ್ತಾರೆ..

ತದ ನಂತರ ಅವರು ಮುಖ್ಯ ಕ್ಯಾಷಿಯರ್ ರಾಮ್ ಪ್ರಕಾಶ್ ಬಾತ್ರಾಗೆ 60 ಲಕ್ಷ ನಗದಿನ ಬಗ್ಗೆ ವಿವರಿಸಿದ ತಕ್ಷಣವೇ ಇಂದಿರಾಗಾಂಧಿ ಕೇಳಿದಷ್ಟೂ ಹಣವನ್ನು ಪ್ಯಾಕ್ ಮಾಡುತ್ತಾರೆ!! ಬಾತ್ರಾ ಮತ್ತು ಸಹೋದ್ಯೋಗಿ ಎಚ್.ಆರ್. ಖನ್ನಾ, ಅಗತ್ಯವಾದ ಫಾರ್ಮಾಲಿಟಿಗಳನ್ನು ಭರ್ತಿ ಮಾಡುತ್ತಾರೆ!! ಸಂಬಂಧಪಟ್ಟಂತಹ ಎಲ್ಲಾ ಕಾಗದಗಳಿಗೆ ಸಹಿಯನ್ನೂ ಹಾಕುತ್ತಾರೆ.. ಸಹಿ ಹಾಕುತ್ತಿರುವಾಗ ಉಪ ಮುಖ್ಯ ಕ್ಯಾಷಿಯರ್ ರಾವಲ್ ಸಿಂಗ್ ಕೆಲ ಉದ್ದೇಶಕ್ಕಾಗಿ ಪಾವತಿ ಚೀಟಿ ಮಾಡಬೇಕೆಂದು ಕೇಳುತ್ತಾರೆ.. ಮಲ್ಹೋತ್ರಾರವರು ಆ ಚೀಟಿಗೆ ಸಹಿ ಹಾಕುವಂತೆ ಬಾತ್ರಾ ತಿಳಿಸುತ್ತಾರೆ!! ಮಲ್ಹೋತ್ರಾ ಸ್ವತಃ ಬ್ಯಾಂಕಿನ ಅಧಿಕೃತ ಕಾರಿನಲ್ಲಿ ಹಣದ ಬ್ಯಾಗ್‍ಗಳನ್ನು ಹಿಡಿದುಕೊಂಡು ಹೊರಡುತ್ತಾರೆ..

ಮಲ್ಹೋತ್ರಾ ಅವರು ಈ ಕಾರನ್ನು ಬ್ಯಾಂಕ್‍ನಿಂದ ಸ್ವಲ್ಪ ದೂರದಲ್ಲಿ ನಿಲ್ಲಿಸಿದ ತಕ್ಷಣವೇ ಒಬ್ಬ ಬೆಳ್ಳಗಿನ ಎತ್ತರದ ಮನುಷ್ಯನೊಬ್ಬ ಬಂದು ನಿಂತಿರುತ್ತಾನೆ.. ತಕ್ಷಣ ಆತನ ಹತ್ತಿರ ಹೋಗಿ ಮಲ್ಹೋತ್ರ ಆತನ ಹತ್ತಿರ ಬಂದು ಕೋಡ್ ಪದವನ್ನು ಬಳಸಿ ಮಾತನಾಡುತ್ತಾನೆ.. ಆ ಸಮಯದಲ್ಲಿ ಅವರು ಸರ್ದಾರ್ ಪಟೇಲ್ ರಸ್ತೆ ಮತ್ತು ಪಂಚೇಲ್ಮಾರ್ ಮಾರ್ಗಗಳ ಜಂಕ್ಷನ್ನಲ್ಲಿ ಟ್ಯಾಕ್ಸಿಯಿಂದ ಕೆಳಗಿಳಿಯುತ್ತದ್ದಂತೆಯೇ 60 ಲಕ್ಷ ರೂಪಾಯಿಯನ್ನು ಇಂದಿರಾಗಾಂಧಿಯ ಕಡೆಯವರು ತೆಗೆದುಕೊಳ್ಳುತ್ತಾನೆ!! ನಂತರ ಮಲ್ಹೋತ್ರನ್ನು ನೇರವಾಗಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯ ಮನೆಗೆ ಹೋಗಿ ಕರೆದುಕೊಂಡು ಚೀಟಿ ಪಡೆಯುವಂತೆ ಹೇಳುತ್ತಾನೆ..

ಹಣ ಯಾರಿಗೆ ತಲುಪಿಸಬೇಕೋ ಅವರಿಗೆ ತಲುಪಿಸಿ ತಿರುಗಿ ಬಂದ ಮಲ್ಹೋತ್ರ ವಾಪಸ್ ಆಟೋ ಹಿಡಿದು ಬ್ಯಾಂಕಿನತ್ತನೇ ತೆರಳುತ್ತಾರೆ.. ಆದರೆ ತಿರುಗಿ ಬಂದ ಮಲ್ಹೋತ್ರ ವಾಪಸ್ಸು ಬ್ಯಾಂಕಿಗೆ ರಾರದೆ ಕಾಣೆಯಾಗುತ್ತಾರೆ!! ಎಷ್ಟು ಗಂಟೆಗಳು ಕಳೆದರೂ ಮಲ್ಹೋತ್ರ ವಾಪಾಸ್ಸು ಬರದೇ ಇರುವ ಕಾರಣ ಬ್ಯಾಂಕಿನಿಂದ ಪೊಲೀಸರಿಗೆ ದೂರು ದಾಖಲಿಸುತ್ತಾರೆ.. ಆದರೆ ಮಲ್ಹೋತ್ರ ಮಾತ್ರ ವಾಪಸ್ಸು ಬರಲೇ ಇಲ್ಲ!!

ಈ ಪ್ರಕರಣಕ್ಕೆ ಸಂಬಂಧಿಸಿ ನಾಗರ್ವಾಲಾನನ್ನು ಬಂಧಿಸಲಾಗುತ್ತದೆ.. ನ್ಯಾಯಾಂಗ ಇತಿಹಾಸದಲ್ಲಿ ಅತಿ ಶೀಘ್ರವಾಗಿ ವಿಚಾರಣೆ ನಡೆಸಿದ ನಾಗರ್ವಾಲಾಕ್ಕೆ ನಾಲ್ಕು ವರ್ಷಗಳ ಕಠಿಣ ಜೈಲು ಮತ್ತು ರೂ. 1,000. ದಂಡವನ್ನು ವಿಧಿಸಲಾಯಿತು!! ಕ್ಯಾಮರಾದಲ್ಲಿ ದಾಖಲಾದ ತನ್ನ ತಪ್ಪೊಪ್ಪಿಗೆಯಲ್ಲಿ, ನಾಗಾರ್ವಾಲಾ ಅವರು ಬಾಂಗ್ಲಾದೇಶದ ಮಿಷನ್‍ಗೆ ಗಮನ ಸೆಳೆಯಲು ಈ ಕ್ಷಣದ ಪ್ರವೃತ್ತಿಯ ಬಗ್ಗೆ ಯೋಚಿಸಿದ್ದೇವೆ ಎಂದು ಹೇಳುತ್ತಾರೆ.. ಇಡೀ ವಿಚಾರಣೆ 10 ನಿಮಿಷಗಳಲ್ಲಿ ಮುಗಿಯುತ್ತದೆ.. ಯಾವುದೇ ದೃಢವಾದ ಅಥವಾ ಬೆಂಬಲಿಸುವ ಸಾಂದರ್ಭಿಕ ಪುರಾವೆಗಳಿಲ್ಲದೆ, ಅವರ ತಪ್ಪೊಪ್ಪಿಗೆಯ ಆಧಾರದ ಮೇರೆಗೆ ಅವರನ್ನು ಅಪರಾಧಿಯನ್ನಾಗಿ ಮಾಡಲಾಗುತ್ತದೆ?!

ನಿಜಕ್ಕೂ ಮಲ್ಹೋತ್ರರವರಿಗೆ ಏನಾಯಿತು ಎಂಬುವುದು ಕೊನೆಗೂ ವಿಷಯ ನಿಗೂಢವಾಗಿಯೇ ಉಳಿಯುತ್ತದೆ!! ಈ ಘಟನೆಯ ಬಗ್ಗೆ ತನಿಖೆಯನ್ನು ಮಾಡಿದಾಗ ಇಂದಿರಾ ಗಾಂಧಿಯವರು ಯಾವುದೇ ಕರೆ ಮಾಡಲಿಲ್ಲ ಎಂದು ಹೇಳಲಾಗಿದೆ.. ಆದರೆ ಇಂದಿರಾ ಗಾಂಧಿಯವರ ಧ್ವನಿಯನ್ನು ಮಾಡಿ ನಾಗರ್ವಾಲ್ 60 ಲಕ್ಷ ದೋಚಿದ್ದಾರೆ ಎಂದು ತನಿಖೆಯಲ್ಲಿ ಸುಳ್ಳು ಆರೋಪವನ್ನು ಮಾಡಲಾಗುತ್ತದೆ.. ಈ ತನಿಖೆಯ ನಂತರ ಪೊಲೀಸರು ನಾಗವಾಲ್‍ನನ್ನು ಸೆರೆಹಿಡಿದು ಆತನ ವಿರುದ್ಧ ಎಫ್‍ಐಆರ್ ದಾಖಲಿಸಿ ಅವರನ್ನು ಜೈಲಿಗೆ ಹಾಕುತ್ತಾರೆ.. ಅಲ್ಲಿಂದ ಆತನಿಗೆ ಆರೋಗ್ಯದ ಸಮಸ್ಯೆ ಇದೆ ಎಂಬ ಉದ್ಧೇಶದಿಂದ ಫೆಬ್ರವರಿ 1972 ರ ಆರಂಭದಲ್ಲಿ ನಾಗರ್ವಾಲಾವನ್ನು ತಿಹಾರ್ ಜೈಲಿನಿಂದ ಆಸ್ಪತ್ರೆಗೆ ದಾಖಲಿಸಲಾಯಿತು. ಮಾರ್ಚ್ 2 ರಂದು ಆತ ಸತ್ತ ಎಂಬ ಸುದ್ಧಿ ಎಲ್ಲೆಡೆ ಹಬ್ಬಿತು.. ಅದೇ ದಿನ ಆತನದ್ದು 51 ನೇ ಹುಟ್ಟಿದ ದಿನವಾಗಿತ್ತಲ್ಲದೆ ಆತನ ಸಾವು ನಿಗೂಢವಾಗಿಯೇ ಆಯಿತು!! ಈ ಹಗರಣದಲ್ಲಿ ಸಾಕ್ಷಿಯಾಗಿ ಯಾರಿದ್ದಾರೋ ಅವರೆಲ್ಲಾ ನಿಗೂಢವಾಗಿಯೇ ಸಾಯುತ್ತಾ ಹೋಗುತ್ತಾರೆ!!

Related image

ತನಿಖೆಯಲ್ಲಿ ನೇತೃತ್ವ ವಹಿಸಿದ್ದ ಯುವ ಪೊಲೀಸ್ ಅಧಿಕಾರಿ ಕಶ್ಯಪ್ ನವೆಂಬರ್ 20, 1971 ರಂದು ಮಧುಚಂದ್ರಕ್ಕೆ ಹೋಗುತ್ತಿರುವಾಗ ಕಾರು ಅಪಘಾತದಲ್ಲಿ ನಿಗೂಢವಾಗಿ ಮರಣ ಹೊಂದುತ್ತಾರೆ.. ಈ ಲೂಟಿಗೆ ಸಂಬಂಧಿಸಿದ ಪ್ರತಿಯೊಬ್ಬರೂ ನಿಗೂಢವಾಗಿ ಸಾವನ್ನಪ್ಪುತ್ತಾರೆ.. ಕೇವಲ ಒಂದು ಕರೆ ಮಾತ್ರವಲ್ಲದೆ ಇಂತಹ ಕರೆಗಳನ್ನು ಮಾಡುವ ಮೂಲಕ ಅದೆಷ್ಟೋ ಹಗರಣಗಳನ್ನು ಮಾಡಿದ ಕೀರ್ತಿ ಯುಪಿಎ ಸರಕಾರಕ್ಕೆ ಸಲ್ಲುತ್ತದೆ!!

ಈ ಲೂಟಿಗೆ ಸಂಬಂಧಿಸಿದ ಪ್ರತಿಯೊಬ್ಬ ವ್ಯಕ್ತಿಯ ಸಾವಿನ ಕಾರಣ, ಈ ಪ್ರಕರಣವನ್ನು ಎಂದಿಗೂ ಬಹಿರಂಗಪಡಿಸಲಾಗುವುದಿಲ್ಲ.. ನಂತರ ಸರಿಯಾಗಿ ಪರಿಶೀಲಿಸಿದ ಮೇಲೆ ಇದು ಪ್ರಧಾನ ಮಂತ್ರಿ ಇಂದಿರಾ ಗಾಂಧಿಯ ಕಚೇರಿಯಿಂದ ಕರೆ ಬಂದಿರುವುದದು ಸಾಭೀತಾಗಿರುತ್ತದೆ.. ಆದರೆ ಇಲ್ಲಿಯೂ ಕಾಂಗ್ರೆಸ್ ಯಾವ ಹಗರಣವೂ ಬಯಲಿಗೆ ಬರುವುದಿಲ್ಲ!! ಸ್ವತಃ ಇಂದಿರಾ ಗಾಂಧಿಯೇ ಕರೆ ಮಾಡುವುದರ ಮೂಲಕ 60 ಲಕ್ಷ ವನ್ನು ದೋಚಿದ ಪಾಪ ಯಾರಿಗೋ ಅದರ ಹೊರೆಯನ್ನು ವಹಿಸಿ ತಾವು ಮಾತ್ರ ಎಲ್ಲಾ ಆಟವನ್ನು ದೂರದಲ್ಲಿಯೇ ನಿಂತು ನೋಡುತ್ತಾರೆ!! ಅಷ್ಟು ವರ್ಷಗಳ ಕಾಲ ಜನರಿಗೆ ಚಳ್ಳೆ ಹಣ್ಣು ತಿನ್ನಿಸಿ ಇದ್ದ ಬದ್ದ ಹಣವನ್ನೆಲ್ಲಾ ನುಂಗಿ ನೀರು ಕುಡಿದಿದ್ದಾರೆ!! ಆದರೆ ಯಾವಾಗ ಮೋದಿ ಸರಕಾರ ಅಧಿಕಾರಕ್ಕೆ ಬಂತೋ ಯುಪಿಎ ಮಾಡಿದ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತಾ ಬಂತು!! ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕು…. ಮೋದಿಜೀಯಂತಹ ದೇಶ ಅಭಿವೃದ್ಧಿ ಮಾಡುವಂತಹ ಪ್ರಧಾನಿಯನ್ನು ನಾವು ಆಯ್ಕೆ ಮಾಡಬೇಕು….ಇದರ ಹೊಣೆ ನಮ್ಮ ಮೇಲಿದೆ..

source: https://www.indiatoday.in/

ಪವಿತ್ರ

Tags

Related Articles

FOR DAILY ALERTS
 
FOR DAILY ALERTS
 
Close