ಅಂಕಣ

47 ಮಿಲಿಯನ್ ವರ್ಷಗಳ ಹಿಂದೆ ಭಾರತದ ರಾಜಸ್ತಾನ ಮರುಭೂಮಿಯಾಗಿರಲಿಲ್ಲ ಬದಲಾಗಿ ಸಮುದ್ರದ ಭಾಗವಾಗಿತ್ತು!! ಇತಿಹಾಸ ಪೂರ್ವ ಪಳೆಯುಳಿಕೆಗಳಿಂದ ದೊರೆಯಿತು ಸಾಕ್ಷ್ಯ!!

ರಾಜಸ್ಥಾನ ಎಂದರೆ ಸಾಕು ನಮ್ಮ ಮುಂದೆ ಸುಡು ಬಿಸಿಲು ಮತ್ತು ಬಿಸಿ ಮರಳಿನ ಚಿತ್ರ ಕಣ್ಣ ಮುಂದೆ ಬರುತ್ತದೆ. ಆದರೆ 47 ಮಿಲಿಯನ್ ವರ್ಷಗಳ ಹಿಂದೆ ರಾಜಸ್ತಾನ ಮರುಭೂಮಿಯಾಗಿರಲಿಲ್ಲ, ಬದಲಾಗಿ ಸಮುದ್ರವಾಗಿತ್ತು ಎಂದರೆ ನಂಬಲೆ ಬೇಕು. ಏಕೆಂದರೆ ಇತಿಹಾಸಪೂರ್ವ ಪಳೆಯುಳಿಕೆಗಳು ಈ ಸಂಶೋಧನೆಗೆ ಸಾಕ್ಷ್ಯ ಒದಗಿಸುತ್ತಿವೆ!

ಭಾರತೀಯ ಭೂ ಸರ್ವೇಕ್ಷಣ ಸಂಸ್ಥೆಯ ಪಶ್ಚಿಮ ವಿಭಾಗವು ಗುಜರಾತ್ ಮತ್ತು ರಾಜಸ್ತಾನದ ವಿಭಿನ್ನ ಜಾಗಗಳಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆಸಿದ ಪಳೆಯುಳಿಕೆಗಳ ಅಧ್ಯಯನಗಳಿಂದ ಈ ವಿಚಾರ ಬೆಳಕಿಗೆ ಬಂದಿದೆ. ರಾಜಸ್ತಾನದ ಜೈಸಲ್ಮೇರಿನ ಬಾಂದಾಹ್ ಹಳ್ಳಿಯಲ್ಲಿ ದೊರೆತಿರುವ ಪಳೆಯುಳಿಕೆಗಳು ಮಧ್ಯ ಇಸೀನ್ ಯುಗಕ್ಕೆ ಸಂಬಂಧ ಪಟ್ಟದ್ದೆಂದು ಧೃಢ ಪಟ್ಟಿವೆ. 47 ಮಿಲಿಯನ್ ವರ್ಷಗಳ ಹಿಂದೆ ಈ ಯುಗ ಪ್ರಾರಂಭವಾಗಿತ್ತು.

ಬಾಂದಾನ್ ಹಳ್ಳಿಯಲ್ಲಿ ತಿಮಿಂಗಿಲ, ಶಾರ್ಕ್ ಮತ್ತು ಮೊಸಳೆಗಳ ಹಲ್ಲುಗಳಿಂದ ಮತ್ತು ಆಮೆಯ ಎಲುಬುಗಳಿಂದ ಈ ಭಾಗದಲ್ಲಿ ಮೊದಲು ಸಮುದ್ರವಿತ್ತು ಎಂದು ತಿಳಿದು ಬಂದಿದೆ.

ಮಧ್ಯ ಇಸೀನ್ ಯುಗ ಎಂದರೆ ಏನು?

ನಿಮಗೆಲ್ಲಾ ಗೊತ್ತಿರುವ ಹಾಗೆ ಮಿಲಿಯಾಂತರ ವರ್ಷಗಳ ಹಿಂದೆ ನಮ್ಮ ಏಳೂ ಖಂಡಗಳು ಒಂದು ಮಹಾಖಂಡವಾಗಿತ್ತು. ಅಂದರೆ ಏಷ್ಯಾ, ಯೂರೋಪ್, ಅಮೇರಿಕಾ, ಆಫ್ರಿಕಾ, ಆಷ್ಟ್ರೇಲಿಯಾ, ಅಂಟಾರ್ಟಿಕಾ ಖಂಡಗಳು ಒಂದಕ್ಕೊಂದು ಬೆಸೆದುಕೊಂಡಿದ್ದವು. ಭೂಮಿಯ ಟೆಕ್ಟೋನಿಕ್ ಪ್ಲೇಟ್ (ಖಂಡಗಳ ಭೂಭಾಗ) ಗಳ ನಿರಂತರ ಜರುಗುವಿಕೆಯಿಂದಾಗಿ ಈಗಿರುವ ಏಳು ಖಂಡಗಳು ನಿರ್ಮಾಣವಾದವು.

ಈ ಜರುಗುವಿಕೆಯನ್ನು ಹಲವಾರು ವಿಭಾಗಗಳಾಗಿ ವಿಭಾಜಿಸಲಾಗಿದೆ. ಅಂತೆಯೆ ಅಂಟಾರ್ಟಿಕಾ ಮತ್ತು ಆಷ್ಟ್ರೇಲಿಯಾ ಖಂಡಗಳು ದೂರ ಜರುಗಿದ ಕಾಲವನ್ನೆ ಮಧ್ಯ ಇಸೀನ್ ಯುಗ ಎಂದು ಕರೆಯುತ್ತಾರೆ. ಈ ಎರಡು ಖಂಡಗಳ ದೂರ ಸರಿಯುವಿಕೆಯಿಂದ ಈ ಎರಡು ಮಾಹಾದ್ವೀಪಗಳ ನಡುವೆ ಆಳ ಸಮುದ್ರದ ನಿರ್ಮಾಣವಾಯಿತು. ಈ ಪರಿಚಲನೆಯ ಪರಿಣಾಮವಾಗಿ ಇಸೀನ್ ಯುಗದ ಅಂತ್ಯದವರೆಗೆ ಜಗತ್ತಿನಲ್ಲಿ ಶೀತಲಯುಗ ಅರಂಭವಾಗಿತ್ತು.

ಈ ಇಸೀನ್ ಯುಗದ ಮಧ್ಯಭಾಗದಲ್ಲೆ ರಾಜಸ್ತಾನ ಸಮುದ್ರವಾಗಿತ್ತು. ಮುಂದೆ ಜಗತ್ತಿನಲ್ಲಿ ನಡೆದ ಪ್ರಾಕೃತಿಕ ವಿಕೋಪಗಳಿಂದಾಗಿ ಇಲ್ಲವೆ ಬರದಿಂದಾಗಿ ಇಲ್ಲಿನ ನೀರು ಇಂಗಿ ಈ ಪ್ರದೇಶ ಸಂಪೂರ್ಣವಾಗಿ ಮರುಭೂಮಿಯಾಗಿ ಬದಲಾಯಿತು.

ಜಗತ್ತಿನಲ್ಲಿ ಜೀವ ವಿಕಾಸವಾದ ಭಾರತದಲ್ಲೇ ಏಕಾಯಿತು ಎನ್ನುವ ವಾದಕ್ಕೆ ಈ ಸಂಶೋಧನೆ ಪುಷ್ಟಿ ನೀಡುತ್ತದೆ. ಏಕೆಂದರೆ ಜಗತ್ತಿನ ಏಳೂ ಖಂಡಗಳಲ್ಲಿ ಜೀವಿಗಳ ವಿಕಾಸಕ್ಕೆ ಬೇಕಾದ ವಾಸಯೋಗ್ಯ ಹವಾಮಾನ ಜಂಬೂದ್ವೀಪ ಆರ್ಯಾವರ್ತವನ್ನು ಹೊರತು ಬೇರೆಲ್ಲಿಯೂ ಇಲ್ಲವಾಗಿದ್ದಿರಬಹುದು. ಭೂಮಿಯ ಸಮಭಾಜಕ ವೃತ್ತಕ್ಕೆ ಅತಿ ಸಮೀಪವೂ ಅಲ್ಲ, ಅತಿ ದೂರವೂ ಅಲ್ಲದ ಜಂಬೂದ್ವೀಪ ಜೀವಿಗಳ ವಿಕಾಸಕ್ಕೆ ಹೇಳಿ ಮಾಡಿಸಿದಂತಿತ್ತು. ಮಾನವನ ಹುಟ್ಟು ಭೂಮಿಯ ಮೇಲೆ ಮೊತ್ತ ಮೊದಲು ಭಾರತದಲ್ಲೆ ಆಗಿರಬಹುದೆನ್ನುವುದಕ್ಕೆ ಅತಿ ದೊಡ್ಡ ಸಾಕ್ಷ್ಯ ವಿಷ್ಣುವಿನ ದಶಾವತಾರಗಳು. ಇಲ್ಲಿಯ ಜನರು ಅತಿ ಬುದ್ದಿವಂತಾಗಿದ್ದರಿಂದಲೆ ಅವರು “ಆರ್ಯರು”. ನೀರಿನ ಬಳಿ ಅಂದರೆ ದ್ರವ್ಯದ ಬಳಿ ನಾಗರಿಕತೆಯನ್ನು ಹುಟ್ಟು ಹಾಕಿದ್ದರಿಂದ ಅವರು ದ್ರಾವಿಡರು.

ಭಾರತದಲ್ಲಿ ಜೀವ ವಿಕಾಸವಾಗುವ ಕಾಲದಲ್ಲಿ ಜಗತ್ತಿನ ಇನ್ನಿತರ ಭಾಗಗಳಲ್ಲಿ ಹೆಚ್ಚಿನಂಶ ಹಿಮಚ್ಛಾದಿತವಾಗಿತ್ತು ಇಲ್ಲವೆ ಬೇರೆ ಕಾರಣಗಳಿಂದ ವಾಸಯೋಗ್ಯವಾಗಿರಲಿಲ್ಲ. ಹಿಮಯುಗದ ಬಳಿಕ ಭಾರತದ ಬೇರೆ ಬೇರೆ ಜನಾಂಗಗಳು ಪರಿಸ್ಥಿತಿಗನುಗುಣವಾಗಿ ಭೂಮಿಯ ಇನ್ನಿತರ ಭೂಭಾಗಗಳಲ್ಲಿ ನೆಲೆಯನ್ನು ಕಂಡುಕೊಂಡಿತು. ಹಾಗಾಗಿಯೆ ವಿಶ್ವದೆಲ್ಲೆಡೆ ಸನಾತನಕ್ಕೆ ಸಂಬಂಧ ಪಟ್ಟ ವಸ್ತುಗಳೆ ದೊರೆಯುತ್ತಿರುವುದು. ವೇದಗಳನ್ನು ನಂಬದವರು ವಿಜ್ಞಾನವನ್ನು ಧಾರಾಳವಾಗಿ ನಂಬಬಹುದು.

-Postcard team

Tags

Related Articles

FOR DAILY ALERTS
 
FOR DAILY ALERTS
 
Close