ಅಂಕಣಪ್ರಚಲಿತ

ದುರಂತವೆಂದರೆ ಅದೇ! ಸುಲಭವಾಗಿ ಮರೆತೆವು 2.4 ಮಿಲಿಯನ್ ಹಿಂದೂಗಳ ಮಾರಣಹೋಮ ಹಾಗೂ 2 ಲಕ್ಷ ಭಗಿನಿಯರ ಅತ್ಯಾಚಾರವನ್ನು!

1947 ರಲ್ಲಿ ಭಾರತದ ವಿಭಜನೆಯಾದದ್ದು ಹಿಂದುಗಳಿಗೆ ಹಿಂದುಸ್ತಾನ್ , ಮುಸಲ್ಮಾನರಿಗೆ ಪಾಕಿಸ್ತಾನ ಎಂಬ ಆಧಾರದ ಮೇಲೆ ಇದನ್ನು ಸ್ವತಃ ಆ ದೇಶದ್ರೋಹಿ , ಆ ಮಹಾಪಾಪಿ ಮಹಮದ್ ಅಲಿ ಜಿನ್ನಾ ಗಂಟಾಘೋಷವಾಗಿ ಹೇಳಿದ್ದ. ಅವನ ಘೋಷಣೆ ಬರೀ ಮಾತಾಗಿರಲಿಲ್ಲ . ಅಖಂಡ ಭಾರತವನ್ನು ಪೂರ್ವ ಪಾಕಿಸ್ತಾನ್ ,ಪಶ್ವಿಮ ಪಾಕಿಸ್ತಾನವನ್ನಾಗಿ ಅಖಂಡ ಭಾರತವನ್ನು ಭಗ್ನ ಮಾಡಿದ.ವಿಶಾಲವಾದ ಬಂಗಾಳವನ್ನು ಕತ್ತರಿಸಿ ಪೂರ್ವ ಪಾಕಿಸ್ತಾನ್ , ವಿಶಾಲವಾದ ಪಂಜಾಬನ್ನು ಕತ್ತರಿಸಿ ಪಶ್ಚಿಮ ಪಾಕಿಸ್ತಾನವನ್ನಾಗಿ ಮಾಡಿದ.

ಬೆಳಗಾಗುವುದರೊಳಗೆ ಹಿಂದುಗಳ ಹೆಣ ಟ್ರಕ್ಕುಗಳಲ್ಲಿ , ರೈಲುಗಳಲ್ಲಿ ಭಾರತಕ್ಕೆ ಬಂದವು. ಹಿಂದುಗಳ ಶ್ರದ್ಧಾ ಕೇಂದ್ರಗಳು ಆ ಪ್ರದೇಶಗಳಲ್ಲಿ ನಾಶವಾದವು. ಆ ಪ್ರದೇಶದಲ್ಲಿದ್ದ 40% ಹಿಂದುಗಳು ಬೆಳಗಾಗುವುದರೊಳಗೆ 4% ಆಗಿದ್ದರು .

ಜಗತ್ತಿನಲ್ಲಿ ಎಲ್ಲಾ ರಾಷ್ಟ್ರಗಳು ಅತೀ ವಿಜೃಂಭಣೆಯಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತವೆ.ಭಾರತವೂ ಆಚರಿಸುತ್ತದೆ ಆದರೆ ಜಾಗೃತ ಭಾರತಿಯನಿಗೆ ಭಗ್ನಗೊಂಡ ಭಾರತವನ್ನು ಪಡೆದ ಅಳುಕಿದೆ ,ಅತೀವ ದುಃಖವಿದೆ , ಬಂಧು-ಭಗಿನಿಯರ ಆಕ್ರಂದನನದ ಅರಿವಿದೆ.

ಆ ಭಗ್ನಗೊಂಡ ದೌರ್ಭಾಗ್ಯವನ್ನು ,ಸಾಮೂಹಿಕ ಹಿಂದುಗಳ ಕೊಲೆಗಳನ್ನು ,ಬಂಧು-ಭಗಿನಿಯರ ಅತ್ಯಾಚಾರಗಳನ್ನು ,ಮತಾಂತರವನ್ನು ಇತಿಹಾಸ ಮರೆಮಾಚಿತು.ಭಾರತ ಇಬ್ಭಾಗವಾಗಬಾರದು ಎಂದು ಬಲಿದಾನಗೈದ ಕ್ರಾಂತಿಕಾರಿಗಳಿಗೆ ಮೋಸವಾಯ್ತು . ಅಹಿಂಸೆಯಿಂದಲೇ ಸ್ವಾತಂತ್ರ್ಯ ಪಡೆದುಕೊಂಡೆವು ಅಂತ ತಿಪ್ಪೆಸವರಿ ಕ್ರಾಂತಿಕಾರಿಗಳಿಗೆ ಮೋಸ ಮಾಡಿದರು.

ಭಾರತದ ವಿಭಜನೆಯಾದದ್ದು ಧರ್ಮದ ಆಧಾರದ ಮೇಲೆ . ಇಲ್ಲಿಯ ಮುಸಲ್ಮಾನರು ಅಲ್ಲಿಗೆ ,ಅಲ್ಲಿನ ಹಿಂದುಗಳು ಇಲ್ಲಿಗೆ ಅಂತ. ಇಲ್ಲಿಯ ಮುಸಲ್ಮಾನರು ಇಲ್ಲಿಯೇ ಉಳಿದರು ಯಾಕಂದ್ರೆ ನಾವು ಸಹಿಷ್ಣುಗಳು.ಆದರೆ ಅಲ್ಲಿಯ ಹಿಂದುಗಳ ಮಾರಣ ಹೋಮವೇ ನಡೆದು ಹೋಯಿತು.ಇಲ್ಲಿಗೆ ಬರುವ ಟ್ರಕ್ಕು ,ರೈಲುಗಳು ಹಿಂದುಗಳ ಹೆಣಗಳ ರಾಶಿಯೊಂದಿಗೆ ತುಂಬಿ ಬಂದವು.ಲಕ್ಷಾಂತರ ಬಂಧು-ಭಗಿನಿಯರ ಅತ್ಯಾಚಾರಗಳಾದವು . ಇದೆಲ್ಲಾವೂ ಬ್ರಿಟಿಷ್ ,ಕಾಂಗ್ರೆಸ್ , ಮುಸ್ಲಿಂ ಲೀಗ್ ನ ಕೊಡುಗೆ.

ಲಾಹೋರ್ , ಕರಾಚಿ ,ಪೇಷಾವರ ,ಬಂಗಾಳಗಳಲ್ಲಿ ರಕ್ತದ ಕೋಢಿಯೇ ಹರಿಯಿತು.ರಸ್ತೆಯುದ್ದಕ್ಕೂ ಹಿಂದುಗಳ ಹೆಣಗಳು ಚೆಲ್ಲಾಪಿಲ್ಲಿಯಾಗಿ ಬಿದ್ದವು.ಎರಡನೇ ಮಹಾಯುದ್ಧದ ನಾಲ್ಕು ವರ್ಷಗಳಲ್ಲಿ ಅಮೆರಿಕಾ ಕಳೆದುಕೊಂಡ ಅರ್ಧದಷ್ಟು ಜೀವಗಳನ್ನು ಭಾರತ ಕೆಲವೇ ದಿನಗಳಲ್ಲಿ ಕಳೆದುಕೊಂಡಿತು.

1947 ಅಗಸ್ಟ್ 15 ರಂದು ಡೌನ್ ಎಕ್ಸಪ್ರೆಸ್ ರೈಲು ಅಮೃತಸರದ ನಿಲ್ದಾಣಕ್ಕೆ ಬಂದಾಗ ಆ ನಿಲ್ದಾಣದಲ್ಲಿ ಸಹಸ್ರಾರು ಜನ ತಮ್ಮ ಗೆಳೆಯರು ,ಸಂಭಂದಿಕರು ,ಅಕ್ಕ ತಂಗಿಯರು ,ಹೆತ್ತವರು ಹೀಗೆ ಎಲ್ಲರೂ ಬರುತ್ತಾರೆಂದು ಕಾಯ್ದು ನಿಂತಿದ್ದರು. ರೈಲೇನೋ ಬಂತು ಸಂಭಂದಿಕರು ,ಗೆಳೆಯರು ,ಅಕ್ಕ ತಂಗಿಯರು ಹೆತ್ತವರು ಎಲ್ಲರೂ ಬಂದಿದ್ದರು ಆದರೆ ಅವರಾರು ಬದುಕಿರಲಿಲ್ಲ ಇಡೀ ರೈಲು ರಕ್ತಮಯವಾಗಿ ರುಂಡ-ಮುಂಡಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಲಾಹೋರಿನ ಒಂದು ವಿದ್ರಾವಕ ಘಟನೆ:

ಮಹಮದ್ ಅಲಿ ಜಿನ್ನಾನ ಮುಸ್ಲಿಂ ಲೀಗಿನಿಂದ ಪ್ರೇರಿತಗೊಂಡ ಜಿಹಾದಿಗಳು ಲಾಹೋರಿನ ಒಂದು ಸಿಖ್ ಕುಟುಂಬದ ಮೇಲೆ ದಾಳಿ ಮಾಡಿ ಅಲ್ಲಿಯ ಪುರುಷರನ್ನು ಕತ್ತರಿಸುತ್ತಾರೆ ಇದನ್ನು ಕಂಡ ಅವರ ಹೆಣ್ಣುಮಕ್ಕಳು ಅವರಿಂದ ಅತ್ಯಾಚಾರಕ್ಕೊಳಗಾಗಿ ಸಾಯುವ ಬದಲು ಜೀವಂತ ಅಗ್ನಿಸ್ಪರ್ಶ ಮಾಡಿಕೊಂಡು ತಮ್ಮ ಮಕ್ಕಳೊಂದಿಗೆ ಸಾಯುತ್ತಾರೆ.

ವಿಭಜನೆಯ ಸಂದರ್ಭದಲ್ಲಿ ಲೆಕ್ಕವಿಲ್ಲದಷ್ಟು ಸಹೋದರಿಯರ ಅತ್ಯಾಚಾರವಾದವು. ಹಿಂದುಗಳ ಮನೆಗಳಿಂದ ,ನಿರಾಶ್ರಿತ ಶಿಬಿರಗಳಿಂದ,ರೈಲಿನಿಂದ ಲಕ್ಷಾಂತರ ಮಹಿಳೆಯರನ್ನು ಹೊತ್ತೊಯ್ದರು.

ವಿದೇಶಿ ಲೇಖಕನ ಉಲ್ಲೇಖ:

ಹಿಂದು ಮಹಿಳೆಯರ ಸ್ತನಗಳನ್ನು ಕತ್ತರಿಸಿ ಕೊಲೆಗೈಯ್ಯುತ್ತಿದ್ದರು. ಬ್ರಿಟಿಷ್ ಅಧಿಕಾರಿಗಳು ಇದನ್ನು ನೋಡಿಯೂ ನೋಡದಂತೆ ಇರುತ್ತಿದ್ದರು.ಮಹಿಳೆಯನ್ನು ಅಪಹರಿಸಿ ಅತ್ಯಾಚಾರಗೈದು ಕೊಲೆಗೈಯ್ಯೋದು ಒಂದು ಕಡೆ ಆದರೆ ಇನ್ನೊಂದು ಕಡೆ ಅಪಹರಿಸಿ ಅತ್ಯಾಚಾರಗೈದು ಗೋಮಾಂಸ ತಿನ್ನಿಸಿ ಮತಾಂತರ ಮಾಡುತ್ತಿದ್ದರು.ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಮಹಿಳೆಯರನ್ನು ಅವರ ಶಿಶುಗಳ ಸಮೇತ ಕತ್ತರಿಸಿ ಬಿಸಾಡುತ್ತಿದ್ದರು.

ಗುಜರಾತಿನ ಗಡಿಯಲ್ಲಿ ಪುರುಷರನ್ನು ಬೇರ್ಪಡಿಸಿ ಕತ್ತರಿಸಿ ಹಾಕಿದ್ದರು. ಅಂದಾಜಿನ ಪ್ರಕಾರ ಆ ಗಡಿಯಲ್ಲಿ ಸುಮಾರು 4000 ಮಹಿಳೆಯರ ಅಪಹರಣವಾಗಿತ್ತು. ಮತಾಂಧ ಜಿಹಾದಿಗಳ ಪೈಶಾಚಿಕ ಕೃತ್ಯ ಹೇಗಿತ್ತೆಂದರೆ ನಿರಾಶ್ರಿತರ ಸಿಬಿರದ ಆಸ್ಪತ್ರೆಗಳಲ್ಲಿ ಮಹಿಳೆಯರ ಸ್ತನಗಳಿಂದ ಗುಂಡು ಹೊರತೆಗೆಯಲಾಗಿತ್ತು.ಅನ್ನ ಆಹಾರವಿಲ್ಲದೇ ಸತ್ತವರ ಸಂಖ್ಯೆಯೂ ಲೆಕ್ಕಕ್ಕಿಲ್ಲ.

ಇದೆಲ್ಲವೂ ನಮ್ಮ ಇತಿಹಾಸದಿಂದ ಮರೆಮಾಚಿದರು.(ಮರೆಮಾಚಿದವರು ಯಾರು ಅಂತ ನಿಮಗೆಲ್ಲಾ ಗೊತ್ತು)

ವಿಭಜನೆಯ ಸಂದರ್ಭದಲ್ಲಿ ಗಾಂಧೀಜಿಯ ಪಾತ್ರ :

ನನ್ನ ದೇಹ ಛಿದ್ರವಾದರೂ ನಾನು ವಿಭಜನೆಗೆ ಒಪ್ಪಲ್ಲವೆಂದ ಗಾಂಧೀಜಿ ,ಕೊನೆಗೆ ಒಪ್ಪಿದರು . ಇಲ್ಲಿನ ಜನರನ್ನೂ ಒಪ್ಪಿಸಿದರು.ಮತಾಂಧ ಜಿಹಾದಿಗಳ ಕ್ರೂರತೆ ನೋಡಿ ಇಲ್ಲಿಯ ಹಿಂದು ಪುರುಷ ಸಿಂಹಗಳು ಆರ್ಭಟಿಸಿ ಬುದ್ಧಿ ಕಲಿಸಲು ಹೊರಟಾಗ ಈ ಗಾಂಧೀ ಉಪವಾಸ ಕುಳಿತು ವಿಭಜನೆಗೆ ಪರೋಕ್ಷ ಕಾರಣವಾದರು.ಹಿಂದುಗಳ ಸರಣಿ ಕೊಲೆ ,ಬಂಧು-ಭಗಿನಿಯರ ಅತ್ಯಚಾರವಾದರೂ ಕೂಡಾ ಗಾಂಧಿ ಸಾಂತ್ವನ ಹೇಳಲೇ ಇಲ್ಲ. ಜಗತ್ತಿನ ಯಾವ ಇತಿಹಾಸವೂ ಇಷ್ಟು ಕರಾಳತೆಯಿಂದ ಕೂಡಿರಲಿಕ್ಕಿಲ್ಲ.

postcard team

Tags

Related Articles

FOR DAILY ALERTS
 
FOR DAILY ALERTS
 
Close