ಇತಿಹಾಸ

ಬ್ರಿಟಿಷರ ವಿರುದ್ಧ ನಿಂತರೆ ಬೋಸ್ ವಿರುದ್ಧ ನಾನೇ ಯುದ್ಧ ಸಾರುತ್ತೇನೆ ಎಂದಿದ್ದ ನೆಹರೂ ದೇಶಪ್ರೇಮಿಯಾ? ದೇಶಕ್ಕಿಂತ ಅಧಿಕಾರ ಮುಖ್ಯವಾಗಿತ್ತು ಎಂಬುವುದಕ್ಕೆ ಇದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕಾ?

ದೇಶದ ಕ್ರಾಂತಿವೀರರಿಗೆ ಎಪ್ಪತ್ತು ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷ ಅವಮಾನ ಮಾಡುತ್ತಲೆ ಬಂದಿದೆ. ಕಾಂಗ್ರೆಸ್ ಮಾಡಿದ ಪಾಪದ ಕೊಳೆಯನ್ನು ಮೋದಿ ಎನ್ನುವ ಮಹಾನುಭಾವ ತೊಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ದೇಶ ಕ್ರಾಂತಿಕಾರಿಗಳ ಬಲಿದಾನದಿಂದ ಸ್ವತಂತ್ರವಾಯಿತು. ಆದರೆ ಕ್ರಾಂತಿಕಾರಿಗಳಿಗೆ ಮತ್ತು ಅವರ ಪರಿವಾರಗಳಿಗೆ ಸಲ್ಲಬೇಕಾದ ಗೌರವ ದೊರಕಲೆ ಇಲ್ಲ. ತಡವಾಗಿಯಾದರೂ ಸರಿ ನಮ್ಮ ದೇಶದ “ಅಸಲಿ” ನಾಯಕರಿಗೆ ದೊರೆಕಬೇಕಾಗಿದ್ದ ಗೌರವ ಆದರಗಳು ದೊರೆತು, “ನಕಲಿ”ಗಳ ಮುಖವಾಡ ಕಳಚಿ ಬೀಳುತ್ತಿದೆಯಲ್ಲ ಅಷ್ಟು ಸಾಕು.

ಕಾಂಗ್ರೆಸ್ ದೇಶಪ್ರೇಮಿಯೆಂದು ಬಿಂಬಿಸುವ ನೆಹರೂ ನಿಜವಾಗಿಯೂ ದೇಶಭಕ್ತನೆ?

ರವಿವಾರದಂದು ಇಡಿಯ ದೇಶವೆ ಸುಭಾಷರ ‘ಆಜಾದ್ ಹಿಂದ್ ಸರಕಾರದ’ ಎಪ್ಪತ್ತೈದನೆ ವರ್ಷವನ್ನಾಚರಿಸಿ ಸಂಭ್ರಮ ಪಟ್ಟಿತು. “ನೀವು ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ” ಎಂದು ಘರ್ಜಿಸಿ ಬಿಟಿಷರ ನಡು ಮುರಿಯಲು ಸೇನೆ ಕಟ್ಟಿ ಹೋರಾಡಿದ ಮಹಾನಾಯಕ ನಮ್ಮ ಸುಭಾಷರು. ಈ ದೇಶ ನೆಹರೂವಿನಿಂದಾಗಿ ಅಲ್ಲ ಬದಲಿಗೆ ಸುಭಾಷರಿಂದಾಗಿ ಸ್ವತಂತ್ರವಾಯಿತು ಎಂದು ಸ್ವತಃ ಅಂಬೇಡ್ಕರ್ ಒಪ್ಪಿಕೊಂಡಿದ್ದಾರೆ. ಅಂತಹ ಸುಭಾಷರ ವಿರುದ್ದ ಯುದ್ದ ಮಾಡುತ್ತೇನೆ ಎಂದವರು ನೆಹರೂ.

ಆಚಾರ್ಯ ಶ್ರೀ ಕೃಷ್ಣ ಸರಳರು ಸುಭಾಷರ ಮೇಲೆ ಬರೆದಿರುವ “ಕಾಲಜಯಿ ಸುಭಾಷ” ಪುಸ್ತಕದಲ್ಲಿ ಈ ಬಗ್ಗೆ ಬರೆದಿದ್ದಾರೆ. ಪುಸ್ತಕದ 507 ನೇ ಪುಟದಲ್ಲಿ ” ಬ್ರಿಟಿಷರ ಮಿಥ್ಯಾ ಪ್ರಚಾರದ ಫಲಸ್ವರೂಪದಿಂದಾಗಿ ಕಾಂಗ್ರೆಸಿನ ಕೆಲವು ಕ್ಷೇತ್ರಗಳಲ್ಲಿ ಸುಭಾಷರನ್ನು ಅನುಮಾನದ ದೃಷ್ಟಿಯಿಂದ ನೋಡಲಾಗುತ್ತಿತ್ತು. ಇದು ಬ್ರಿಟಿಷರ ಸುಳ್ಳಿನ ಪ್ರಭಾವವೋ ಇಲ್ಲ ವೈಯಕ್ತಿಕ ಈರ್ಷ್ಯೆಯ ಪ್ರಭಾವವೋ ಗೂತ್ತಿಲ್ಲ ಆದರೆ ಖುದ್ದು ಜವಾಹರ ಲಾಲ್ ನೆಹರೂ ಒಂದು ವೇಳೆ ಸುಭಾಷರು ಜಪಾನ್ ಜೊತೆ ಸೇರಿ ಭಾರತದ ಮೇಲೆ ಆಕ್ರಮಣ ಮಾಡಿದರೆ ಅವರ ವಿರುದ್ದ ಯುದ್ದ ಮಾಡುವ ಮೊದಲ ವ್ಯಕ್ತಿ ನಾನಾಗಿರುತ್ತೇನೆ” ಎಂದು ಹೇಳಿದ್ದರೆಂದು ಬರೆದಿದ್ದಾರೆ.

ನೇತಾಜಿ ಅವರ ಆಜಾದ್ ಹಿಂದ್ ಸೇನೆಗೆ ಸಂಪೂರ್ಣ ಭಾರತದಲ್ಲಿ ಭಾರೀ ಜನಬೆಂಬಲ ವ್ಯಕ್ತವಾಗಿದ್ದ ಹಿನ್ನಲೆಯಲ್ಲಿ ನೆಹರೂ ಈ ಮಾತುಗಳನ್ನಾಡಿದ್ದರು. ನೇತಾಜಿ ಜಪಾನ್, ಜರ್ಮನ್, ಸಿಂಗಾಪುರದ ಸಹಾಯದಿಂದ ಬ್ರಿಟಿಷರ ಮೇಲೆ ಆಕ್ರಮಣ ಮಾಡಲಿ ಎಂದು ಭಾರತೀಯರೆ ಬಯಸುತ್ತಿದರು. ಒಂದು ವೇಳೆ ನೇತಾಜಿಯೇನಾದರೂ ಬ್ರಿಟಿಷರ ಮೇಲೆ ಯುದ್ದ ಹೂಡಿದ್ದರೆ ಇಡಿಯ ದೇಶವೆ ನೇತಾಜಿ ಬೆಂಬಲಕ್ಕೆ ನಿಲ್ಲಲು ಸಿದ್ದವಾಗಿತ್ತು. ಅಂತಹ ಸಂಧರ್ಭದಲ್ಲಿ ನೆಹರೂ ಇಂತಹ ಹೇಳಿಕೆ ಕೊಟ್ಟಿದ್ದರೆಂದರೆ, ಭಾರತ ಸ್ವತಂತ್ರವಾಗುವುದು ನೆಹರೂಗೆ ಇಷ್ಟವಿರಲಿಲ್ಲ ಎನ್ನುವುದನ್ನು ಮೇಲು ನೋಟಕ್ಕೆ ಗೊತ್ತಾಗುತ್ತದೆ.

ನೇತಾಜಿ ಸುಭಾಷ್ ಚಂದ್ರ ಬೋಸರಿಂದಾಗಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ್ದರೆ, ನಿಸ್ಸಂಶಯವಾಗಿ ಅವರೆ ಈ ದೇಶದ ಪ್ರಥಮ ಪ್ರಧಾನಿಯಾಗಿರುತ್ತಿದ್ದರು. ಆಗ ಈ ದೇಶದ ಭಾಗ್ಯವೆ ಬದಲಾಗುತ್ತಿತ್ತು. ಭಾರತ ಎಪ್ಪತ್ತು ವರ್ಷಗಳ ಹಿಂದೆಯೆ ಮತ್ತೊಮ್ಮೆ ವಿಶ್ವಗುರುವಾಗುತ್ತಿತ್ತು. ಕಪಟಿ ನೆಹರೂನಿಂದಾಗಿ ಎಂತಹ ಒಂದು ಸುವರ್ಣಾವಕಾಶವನ್ನು ನಾವೆಲ್ಲಾ ಕಳೆದುಕೊಂಡೆವು. ಅಂದು ನೆಹರೂವಿನಿಂದಾಗಿ ಸುಭಾಷರನ್ನು ಕಳೆದುಕೊಂಡೆವು, ಈಗ ಅದೆ ನೆಹರೂನ ಮರಿ ಮೊಮ್ಮಗ ರಾಹುಲನಿಂದಾಗಿ ಮೋದಿಯನ್ನು ಕಳೆದುಕೊಳ್ಳುವ ತಪ್ಪು ನಿರ್ಧಾರ ಮಾಡುವುದು ಬೇಡ. ಈ ನೆಹರೂ ಸಂತಾನಗಳು ಯಾವುದೆ ಕಾರಣಕ್ಕೂ ದೇಶದ ಗದ್ದುಗೆಯಲ್ಲಿ ಕೂರಬಾರದು. ದೇಶವನ್ನು ನಿರ್ನಾಮ ಮಾಡಲೆಂದೆ ಹುಟ್ಟಿರುವ ಇವರುಗಳು ಯಾವುದೆ ಕಾರಣಕ್ಕೂ ಗೆಲ್ಲಬಾರದು.

-Postcard team

Tags

Related Articles

FOR DAILY ALERTS
 
FOR DAILY ALERTS
 
Close