ಪ್ರಚಲಿತ

ಮೋದಿ ಸರಕಾರದ ಖಡಕ್ ನಿರ್ಧಾರದ ಬೆನ್ನಲ್ಲೇ 16 ನಕ್ಸಲರನ್ನು ಬಂಧಿಸಿದ ಛತ್ತೀಸ್‍ಘಡ್ ಪೊಲೀಸರು!! ನಕ್ಸಲ್ ಮುಕ್ತ ದೇಶಕ್ಕೆ ಪಣತೊಟ್ಟ ಕೇಂದ್ರ!!

ಭಾರತದ ಆಂತರಿಕ ಭದ್ರತೆಗೆ ನಕ್ಸಲೀಯರು ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸತೊಡಗಿದ್ದಾರೆ ಎನ್ನುವ ವಿಚಾರಗಳು ಹಲವು ದಶಕಗಳಿಂದಲೂ ಕೇಳಿ ಬರುತ್ತನೇ ಇದೆ. ಹಾಗಾಗಿ ನರೇಂದ್ರ ಮೋದಿ ಸರಕಾರವು ಈಗಾಗಲೇ ನಕ್ಸಲರ ನಿಗ್ರಹಕ್ಕೆ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತನೆ ಬರುತ್ತಿದ್ದಾರೆ!! ದೇಶದ ಆಂತರಿಕ ಭದ್ರತೆಗೆ ಅಪಾಯಕಾರಿಯಾಗಿರುವ ನಕ್ಸಲ್‍ವಾದವನ್ನು ಮೂರು ವರ್ಷದಲ್ಲಿ ಸಂಪೂರ್ಣವಾಗಿ ತೊಲಗಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ ಬೆನ್ನಲ್ಲೇ ಇದೀಗ 16 ನಕ್ಸಲರನ್ನು ಬಂಧಿಸಿದ್ದು ಕೇಂದ್ರ ಸರಕಾರದ ತಾಕತ್ತು ಏನು ಎಂಬುವುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ.

Image result for rajnath singh

ಇದೀಗ ರಾಜನಾಥ ಸಿಂಗ್‍ರವರು ಹೇಳಿಕೆ ನೀಡಿರುವ ಬೆನ್ನಲ್ಲೇ ಛತ್ತೀಸ್‍ಘಡದ ಸುಕ್ಮಾದಲ್ಲಿ ಪೊಲೀಸರು ಸುಮಾರು 16 ಮಾವೋವಾದಿಗಳನ್ನು ಬಂಧನ ಮಾಡಿದ್ದಾರೆ. ಅಲ್ಲದೆ, ನವೆಂಬರ್ 10 ಹಾಗೂ 12ರಂದು ಛತ್ತೀಸ್‍ಘಡದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಆ ಸಮಯದಲ್ಲಿ ರಾಜ್ಯದಲ್ಲಿ ನಕ್ಸಲರನ್ನು ನಿರ್ನಾಮ ಮಾಡಬೇಕು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಕೈಗೊಂಡು 16 ಮಾವೋವಾದಿಗಳನ್ನು ಬಂಧಿಸಿದ್ದಾರೆ. ರಾಜ್ಯದಲ್ಲಿ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ನಕ್ಸಲರು ದಾಳಿ ಮಾಡಲು ಮುಂದಾಗಿದ್ದಾರೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆಯೇ ರಾಜ್ಯ ಸರ್ಕಾರ ಹೆಚ್ಚಿನ ನಿರ್ಧಾರ ತೆಗೆದುಕೊಂಡಿದ್ದು, ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸುಕ್ಮಾ ಜಿಲ್ಲೆಗೆ 700 ಹೆಚ್ಚುವರಿಯಾಗಿ ಕೇಂದ್ರೀಯ ಸಶಸ್ತ್ರ ಮೀಸಲು ಪಡೆ (ಸಿ.ಆರ್.ಪಿ.ಎಫ್.)ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಹಾಗಾಗಿ ಸುಕ್ಮಾ ಜಿಲ್ಲೆಯನ್ನು ಸುತ್ತುವರಿದಿರುವ ಸಿ.ಆರ್.ಪಿ.ಎಫ್. ಸಿಬ್ಬಂದಿಯು ವಿಶೇಷ ಕಾರ್ಯಪಡೆಯ ಪೊಲೀಸರೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ಕೈಗೊಂಡು ಮನ್ಪಾ ಜಿಲ್ಲೆಯಲ್ಲಿ 16 ನಕ್ಸಲರನ್ನು ಬಂಧಿಸಿದ್ದಾರೆ. ಇವರಲ್ಲಿ ಐವರು ಕಳೆದ ಏಪ್ರಿಲ್ ನಲ್ಲಿ ಸಿ.ಆರ್.ಪಿ.ಎಫ್. ನೆಲೆಯ ಮೇಲೆ ಮಾಡಿದ ಮಾರಣಾಂತಿಕ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Image result for modiji

ಅದಲ್ಲದೆ ನಕ್ಸಲರ ಬೀಡಾಗಿದ್ದ ಛತ್ತೀಸ್‍ಘಡ್‍ನಲ್ಲಿ ಕಳೆದ ಎರಡು ವರ್ಷದಲ್ಲಿ 247 ನಕ್ಸಲರನ್ನು ಹತ್ಯೆ ಮಾಡಲಾಗಿದೆ, ಸುಮಾರು 400 ಎನ್ ಕೌಂಟರ್ ಕೈಗೊಳ್ಳಲಾಗಿದೆ ಎಂದು ಈಗಾಗಲೇ ಪೊಲೀಸ್ ಅಧಿಕಾರಿಗಳೇ ಮಾಹಿತಿ ನೀಡಿದ್ದರು. ಅಲ್ಲದೆ, ಮುಂದೆಯೂ ನಕ್ಸಲರ ವಿರುದ್ಧ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಈ ದಿಸೆಯಲ್ಲಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಈಗಾಗಲೇ ಮಾತನಾಡಿದ್ದು, ಕಾಡಿನಲ್ಲಿ ಅಡಗಿ ಕುಳಿತಿರುವ ನಕ್ಸಲರು ಪೊಲೀಸರಿಗೆ ಬಂದು ಶರಣಾಗಿ ಇಲ್ಲವೇ ಸಾಯಲು ಸಿದ್ಧರಾಗಿ ಎಂದು ಈಗಾಗಲೇ ಎಚ್ಚರಿಸಿದ್ದರು!! ರಮಣ್ ಸಿಂಗ್ ಅವರು ನಕ್ಸಲರಿಗೆ ನೇರ ಎಚ್ಚರಿಕೆಯನ್ನು ನೀಡುವ ಮೂಲಕ ನಕ್ಸಲರ ಎದೆಯಲ್ಲಿ ನಡುಕ ಹುಟ್ಟಿಸಿದ್ದರು!!

ಹೀಗೆ ಎಚ್ಚರಿಕೆ ನೀಡಿದ ಕೆಲವೇ ದಿನಗಳಲ್ಲೇ ಹಲವು ನಕ್ಸಲರು ಶರಣಾಗಿದ್ದರು. ಆದರೆ ಶರಣಾಗುವವರ ಸಂಖ್ಯೆ ಕಡಿಮೆಯಾಗಿದ್ದ ಕಾರಣ ಭದ್ರತಾ ಸಿಬ್ಬಂದಿಯೂ ಇತ್ತೀಚೆಗೆ ಕಾರ್ಯಾಚರಣೆ ಕೈಗೊಂಡು ಹಲವು ನಕ್ಸಲರನ್ನು ಹೊಡೆದುರುಳಿಸಿತ್ತು. ಭದ್ರತಾ ಸಿಬ್ಬಂದಿಯ ಕಾರ್ಯಾಚರಣೆಯಿಂದ ಹೆದರಿರುವ ಸುಮಾರು 15 ನಕ್ಸಲರು ಈಗಾಗಲೇ ಸುಕ್ಮಾ ಜಿಲ್ಲೆಯಲ್ಲಿ ಕೇಂದ್ರೀಯ ಸಶಸ್ತ್ರ ಮೀಸಲು ಪಡೆ (ಸಿ.ಆರ್.ಪಿ.ಎಫ್.) ಪೊಲೀಸರಿಗೆ ಬಂದು ಶರಣಾಗಿದ್ದರು.

Related image

ಹೀಗೆ ಛತ್ತೀಸ್ ಘಡದಲ್ಲಿ ನಕ್ಸಲರ ಅಸ್ತಿತ್ವವನ್ನೇ ನಿರ್ನಾಮ ಮಾಡಲು ರಮಣ್ ಸಿಂಗ್ ಅವರು ಸಿದ್ಧರಾಗಿದ್ದು, ಹಲವು ಕ್ರಮಗಳ ಮೂಲಕ ಅವರನ್ನು ನಿಗ್ರಹಿಸುತ್ತಿದ್ದಾರೆ. ಶರಣಾದರೆ ಜೀವಂತವಾಗಿ ಹಾಗೂ ಶರಣಾಗಿದ್ದರೆ ಅವರನ್ನು ಎನ್ ಕೌಂಟರ್ ಮಾಡಿ ಎಂದು ಭದ್ರತಾ ಸಿಬ್ಬಂದಿಗೆ ಸೂಚಿಸಿರುವುದು ನಕ್ಸಲರಿಗೆ ನುಂಗಲಾರದ ತುತ್ತಾಗಿದೆ. ಅಲ್ಲದೆ ಈಗ ನಕ್ಸಲರನ್ನು ಬಂಧಿಸುತ್ತಿದ್ದು ಇನ್ನು ನಕ್ಸಲರ ಅಟ್ಟಹಾಸಕ್ಕೆ ಬ್ರೇಕ್ ಬೀಳುವುದಂತೂ ಖಂಡಿತ!!

ಒಟ್ಟಿನಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ನಕ್ಸಲರನ್ನು ಹೆಡೆಮುರಿಕಟ್ಟುತ್ತನೇ ಬರುತ್ತಿದ್ದಾರೆ!! ಹೀಗಾಗಿ ಹಲವಾರು ನಕ್ಸಲರು ನೂತನ ಬದುಕನ್ನು ಪ್ರಾರಂಭಿಸಬೇಕೆಂಬ ನಿಟ್ಟಿನಲ್ಲಿ ಪೊಲೀಸರಿಗೆ ಶರಣಾಗಿ ಸಮಾಜದಲ್ಲಿ ಹೊಸ ಬದುಕನ್ನು ಪ್ರಾರಂಭಿಸಲು ಶುರು ಮಾಡಿದರೆ ಮತ್ತೊಂದು ಕಡೆಯಲ್ಲಿ ಶರಣಾಗದೆ ತಲೆಮರೆಸಿಕೊಂಡಿದ್ದ ನಕ್ಸಲರನ್ನು ಬಂಧಿಸುತ್ತಿದ್ದಾರೆ!! ಮೋದಿ ಸರಕಾರದ ಖಡಕ್ ನಿರ್ಧಾರದಂತೆ ದೇಶಕ್ಕೆ ಹಾನಿಕಾರಕವಾಗಿದ್ದ ನಕ್ಸಲರನ್ನು ಬಗ್ಗುಬಡಿಯುತ್ತಿದ್ದು ನಕ್ಸಲ್ ಮುಕ್ತ ದೇಶವಾಗಲು ಪಣತೊಟ್ಟಿದ್ದಾರೆ…

source: outlookindia.com

  • ಪವಿತ್ರ
Tags

Related Articles

FOR DAILY ALERTS
 
FOR DAILY ALERTS
 
Close