ಅಂಕಣಪ್ರಚಲಿತ

ವ್ಯಕ್ತಿಯ ಜೀವನವನ್ನೇ ಬದಲಾಯಿಸುವ ರಾಷ್ಟ್ರ ಸಂತನ 15 ಬಂಗಾರದ ಮಾತುಗಳು!!

ಸ್ವಾಮಿ ವಿವೇಕಾನಂದರನ್ನು ಇಡೀ ದೇಶ ಮಾತ್ರವಲ್ಲ, ಇಡೀ ಜಗತ್ತು ಬಹಳ ಗೌರವಾದರಗಳಿಂದ ನೆನಪಿಸಿಕೊಳ್ಳುತ್ತದೆ. ಚಿಕಾಗೋದಲ್ಲಿನ ಅವರ ಭಾಷಣ ಭಾರತೀಯರೆಲ್ಲರೂ ಹೆಮ್ಮೆ ಪಡುವಂತಹ ಘಟನೆಯಾಗಿದ್ದು, ಅಂದು ಸ್ವಾಮಿ ವಿವೇಕಾನಂದರು ಭಾರತೀಯ ಸಂಸ್ಕೃತಿ ಹಾಗೂ ತತ್ವಜ್ಞಾನಕ್ಕೆ ವಿದೇಶಿಯರಿಂದಲೂ ಜೈಕಾರದ ಗೌರವವನ್ನು ವಿದೇಶಿ ನೆಲದಲ್ಲಿ ದೊರಕಿಸಿಕೊಟ್ಟಿರುವುದು ಭಾರತೀಯರಲ್ಲಿ ಸ್ವಾತಂತ್ರ್ಯದ ಹೋರಾಟಕ್ಕೂ ಇದು ಚೈತನ್ಯವನ್ನು ನೀಡಿತ್ತು!! ಅಷ್ಟೇ ಅಲ್ಲದೇ, ಸ್ವಾಮಿ ವಿವೇಕಾನಂದರ ಜೀವನ ಅದೆಷ್ಟೋ ಮಂದಿಯ ಜೀವನವನ್ನೇ ಬದಲಿಸಿದೆ ಮಾತ್ರವಲ್ಲದೇ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ವಿವೇಕಾನಂದರ ಬರಹಗಳು ಸಾಕಷ್ಟು ಪ್ರಭಾವ ಬೀರಿರುವುದು ಮಹಾತ್ಮಾ ಗಾಂಧಿ, ಸುಭಾಷ್ ಚಂದ್ರ ಬೋಸ್ ಅವರ ಮಾತುಗಳಲ್ಲಿ ಕಂಡು ಬರುತ್ತದೆ.

ಹೌದು, ಅಮೆರಿಕದ ಚಿಕಾಗೊದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದ “ಧೀರಸನ್ಯಾಸಿ” ಸ್ವಾಮಿ ವಿವೇಕಾನಂದರು, ಭಾರತೀಯ ಸಂಸ್ಕೃತಿ – ಪರಂಪರೆ – ಸದ್ವಿಚಾರ – ತತ್ವಜ್ಞಾನಗಳ ಎರಕದಂತಿದ್ದ ಭಾಷಣ ಮಾಡುವ ಮೂಲಕ ಕೇಳುಗರನ್ನು ರೋಮಾಂಚನಗೊಳಿಸಿದ್ದು, ಭಾರತದ-ಭಾರತೀಯರ ಹಿರಿಮೆ-ಗರಿಮೆಗಳನ್ನು ಮತ್ತಷ್ಟು ಹೆಚ್ಚಿಸಿದ್ದು ಗೊತ್ತಿರುವಂಥದ್ದೇ. ವಿಶ್ವವೇ ಕಿವಿಯಾದ ಆ ಐತಿಹಾಸಿಕ ಭಾಷಣಕ್ಕೀಗ 126 ವರ್ಷ!! ಆದರೆ ಸ್ವಾಮಿ ವಿವೇಕಾನಂದರ ಶ್ರೇಷ್ಠವಾದ 15 ವಿಚಾರಗಳು ಮಾನವ ಈಡೀ ಜೀವನಕ್ಕೆ ಸಾರ್ಥಕತೆಯನ್ನು ಒದಗಿಸುವಂತಹ ಶಕ್ತಿಯನ್ನು ಹೊಂದಿದೆ!! ಅಷ್ಟಕ್ಕೂ ಆ 15 ವಿಚಾರಗಳಾದರೂ ಯಾವುವು ಗೊತ್ತಾ?

Image result for vivekananda

“ಸ್ವಾಮಿ ವಿವೇಕಾನಂದರ ಕೃತಿಗಳನ್ನು ಓದಿದ ಬಳಿಕ ನನಗೆ ನನ್ನ ದೇಶದ ಬಗೆಗೆ ಇರುವ ಪ್ರೀತಿ ಸಾವಿರ ಪಟ್ಟು ಹೆಚ್ಚಾಯಿತು. ನಾನು ಯುವಜನತೆಯಲ್ಲಿ ಒಂದನ್ನು ಕೋರಿಕೊಳ್ಳುತ್ತೇನೆ – ಸ್ವಾಮಿ ವಿವೇಕಾನಂದರು ಬದುಕಿ – ಬಾಳಿದ ಈ ನೆಲದಲ್ಲಿ ನಿಮ್ಮ ಚೈತನ್ಯವನ್ನು ಉಪಯೋಗಿಸದೆ ವಿಫಲಜೀವರಾಗಿ ಹೋಗದಿರಿ” ಎಂದು ಮಹಾತ್ಮ ಗಾಂಧಿ ಹೇಳಿದ್ದರು!! ಇನ್ನು, ರಾಷ್ಟ್ರಕವಿ ಕುವೆಂಪು ಅವರು, “ಸ್ವಾಮಿ ವಿವೇಕಾನಂದರ ತಪಃ ಪೂರ್ಣವಾದ ಶಕ್ತಿವಾಣಿ ಒಂದು ಅಮೃತದ ಮಡು ! ಇದರಲ್ಲಿ ಮಿಂದರೆ ಪುನೀತರಾಗುತ್ತೇವೆ. ಇದು ಜ್ಯೋತಿಯ ಖನಿ. ಹೊಕ್ಕರೆ ಪ್ರಬುದ್ಧರಾಗುತ್ತೇವೆ” ಎಂದು ಹೇಳಿದ್ದರು!! “ತಮ್ಮ ಕಾಲದ ವಿದ್ಯಾರ್ಥಿಗಳ ಮೇಲೆ ಸ್ವಾಮಿ ವಿವೇಕಾನಂದರು ತಮ್ಮ ಭಾಷಣ, ಬರಹಗಳ ಮೂಲಕ ಮಾಡಿದ ಪ್ರಭಾವವು, ಇತರ ಯಾವುದೇ ನಾಯಕರ ಪ್ರಭಾವಕ್ಕಿಂತ ಮಿಗಿಲಾದುದಾಗಿತ್ತು. ಸ್ವಾಮಿ ಅವರೆಲ್ಲರ ಆಶೆ ಆಶೋತ್ತರಗಳನ್ನು ಪ್ರತಿನಿಧಿಸಿದ್ದರು” ಎಂದು ಸುಭಾಶ್ಚಂದ್ರ ಬೋಸ್ ಹೇಳಿದ್ದರೆ ಹೀಗೆ ಅದೆಷ್ಟೋ ಮಂದಿ ಸ್ವಾಮಿ ವಿವೇಕಾನಂದರ ಸಂಸ್ಕೃತಿ – ಪರಂಪರೆ – ಸದ್ವಿಚಾರಗಳಿಗೆ ಮರುಳಾಗಿದ್ದು, ಜೀವನದುದ್ದಕ್ಕೂ ಪಾಲಿಸಿಕೊಂಡಿದ್ದಾರೆ ಮಾತ್ರವಲ್ಲದೇ ಪಾಲಿಸಿಕೊಂಡು ಬರುತ್ತಿದ್ದಾರೆ!!

ಅಷ್ಟಕ್ಕೂ ಆ 15 ವಿಚಾರಗಳಾದರೂ ಯಾವುದು ಗೊತ್ತೇ??

* ಪ್ರತಿದಿನ ಒಮ್ಮೆಯಾದರೂ ನಿಮ್ಮೊಂದಿಗೆ ನೀವು ಮಾತನಾಡಿ, ಇಲ್ಲದಿದ್ದರೆ ನೀವು ಈ ಜಗತ್ತಿನ ಅತ್ಯುತ್ತಮ ವ್ಯಕ್ತಿಯೊಂದಿಗೆ ಸಭೆಯನ್ನು ಕಳೆದುಕೊಳ್ಳಬಹುದು.

* ಒಳಗಿನಿಂದ ನೀವು ಬೆಳೆಯಬೇಕಾಗಿದೆ ಅದನ್ನು ಯಾರೂ ನಿಮಗೆ ಕಲಿಸಲು ಸಾಧ್ಯವಿಲ್ಲ, ಯಾರು ನಿಮ್ಮನ್ನು ಆಧ್ಯಾತ್ಮಿಕಗೊಳಿಸುವುದಿಲ್ಲ, ಬೇರೆ ಶಿಕ್ಷಕರು ಇಲ್ಲ, ಅದು ಸ್ವತಃ ನಿಮ್ಮ ಆತ್ಮದಿಂದ ಮಾತ್ರ ಸಾಧ್ಯ.

* ಸ್ವಾಮಿ ವಿವೇಕಾನಂದರ 3 ನಿಯಮಗಳು- ನಿಮಗೆ ಯಾರು ಸಹಾಯ ಮಾಡುತ್ತಿದ್ದಾರೆ ಅವರನ್ನು ಮರೆತು ಬಿಡಬೇಡಿ, ಯಾರು ನಿಮ್ಮನ್ನು ಪ್ರೀತಿಸುತ್ತಾರೋ ಅವರನ್ನು ದ್ವೇಷಿಸಬೇಡಿ, ನಿಮ್ಮನ್ನು ಯಾರು ನಂಬುತ್ತಾರೋ ಅವರಿಗೆ ಮೋಸ ಮಾಡಬೇಡಿ.

* ನನ್ನನ್ನು ಇಷ್ಟಪಡಿ ಅಥವಾ ದ್ವೇಷಿಸಿ ಎರಡು ನನ್ನ ಪರವಾಗಿದೆ, ನೀವು ನನ್ನನ್ನು ಇಷ್ಟಪಟ್ಟರೆ ನಾನು ನಿನ್ನ ಹೃದಯದಲ್ಲಿದ್ದೇನೆ, ನೀವು ನನ್ನನ್ನು ದ್ವೇಷಿಸಿದರೆ ನಾನು ನಿನ್ನ ಮನಸಿನಲ್ಲಿದ್ದೇನೆ.

* ನಿಮ್ಮ ಮೆದುಳನ್ನು ದೊಡ್ಡ ಅಲೋಚನೆಗಳಿಂದ ತುಂಬಿರಿ ಅತ್ಯುನ್ನತ ಅದರ್ಶಗಳನ್ನ ಹಗಲು ರಾತ್ರಿ ನಿಮ್ಮ ಮುಂದೆ ಇಡಿ ಮತ್ತು ಅದರಿಂದ ದೊಡ್ಡ ಕೆಲಸ ಹೊರಬರುತ್ತದೆ.

* ನಿಮ್ಮ ಆಲೋಚನೆಗಳು ನಿಮ್ಮ ಮನಸ್ಸನ್ನು ಆಕ್ರಮಿಸಿಕೊಂಡಾಗ ಅದು ನಿಜವಾದ ದೈಹಿಕ ಅಥವಾ ಮಾನಸಿಕ ಸ್ಥಿತಿಯಾಗಿ ರೂಪಾಂತರಗೊಳ್ಳುತ್ತದೆ.

* ಬ್ರಹ್ಮಾಂಡದ ಎಲ್ಲಾ ಶಕ್ತಿ ಈಗಾಗಲೇ ನಮ್ಮಲ್ಲಿದೆ ಆದರೆ ನಮ್ಮ ಕಣ್ಣುಗಳನ್ನು ನಮ್ಮ ಕೈಗಳಿಂದ ಮುಚ್ಚಿ ನಾವು ಅದನ್ನು ಕತ್ತಲೆ ಎಂದು ಕೂಗುತ್ತೇವೆ.

* ನಮ್ಮ ಚಿಂತೆಗಳು ನಮ್ಮನ್ನು ಮಾಡಿವೆ ಆದ್ದರಿಂದ ನೀವು ಯೋಚಿಸುವ ಬಗ್ಗೆ ಕಾಳಜಿ ತೆಗೆದುಕೊಳ್ಳಿ ಕೊನೆಗೆ ನಿಮ್ಮ ಚಿಂತನೆಗಳು ಮಾತ್ರ ಉಳಿಯುತ್ತದೆ.

* ಏಳು, ಎದ್ದೇಳು ಗುರಿ ಮುಟ್ಟುವ ತನಕ ನಿಲ್ಲದಿರು.

* ನಾವು ಹೊಂದಿರುವ ಏಕೈಕ ಶಿಕ್ಷಕ ಅದು ನಮ್ಮ ಅನುಭವ.

* ಯಾವುದು ನಿಮ್ಮನ್ನು ದೈಹಿಕವಾಗಿ, ಬೌದ್ಧಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ದುರ್ಬಲಗೊಳಿಸಿದರೆ ಅದನ್ನು ವಿಷದಂತೆ ತಿರಸ್ಕರಿಸಿ.

* ನಿಮ್ಮನ್ನು ನೀವು ನಂಬುವ ತನಕ ನೀವು ದೇವರಲ್ಲಿ ನಂಬಲು ಸಾಧ್ಯವಿಲ್ಲಾ.

* ನಾವು ನಮ್ಮ ಹೃದಯದಲ್ಲಿ ಮತ್ತು ಪ್ರತಿಯೊಂದು ಜೀವಿಯಲ್ಲಿ ದೇವರನ್ನ ಕಾಣದಿದ್ದರೆ ದೇವರನ್ನು ಹುಡುಕಲು ನಾವು ಎಲ್ಲಿ ಹೋಗಬಹುದು.

* ವಿವಿಧ ಧರ್ಮಗಳ ಅಧ್ಯಯನದಿಂದ ನಾವು ಮೂಲಭೂತವಾಗಿ ಅವು ಒಂದೇ ಎಂದು ಕಂಡುಕೊಳ್ಳುತ್ತೇವೆ.

* ಸಂಬಂಧಗಳು ಜೀವನಕ್ಕಿಂತ ಹೆಚ್ಚು ಮಹತ್ವದ್ದಾಗಿವೆ ಆದರೆ ಅಂತಹ ಸಂಬಂಧಗಳು ಜೀವವನ್ನು ಹೊಂದಿರುವುದು ಮುಖ್ಯವಾಗಿದೆ.

ಒಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ಜೀವನಮೌಲ್ಯಗಳು ಹಾಗೂ ಸಂದೇಶಗಳು ನಮ್ಮೆಲ್ಲರಿಗೆ ಅನುಕರಣೀಯವಾಗಿದೆ. ಅವುಗಳ ಪೈಕಿ ಕೆಲವನ್ನಾದರೂ ನಮ್ಮ ಯುವಜನತೆ ಮೈಗೂಡಿಕೊಂಡರೆ, ಅದುವೇ ಸ್ವಾಮಿ ವಿವೇಕಾನಂದರಿಗೆ ಗೌರವ ಸಲ್ಲಿಸಿದಂತೆ!! ತಮ್ಮ ಅಲ್ಪಾವಧಿಯಲ್ಲಿಯೇ ಅಗಾಧ ಸಾಧನೆ ಮಾಡಿದಂತಹ ಸ್ವಾಮಿ ವಿವೇಕಾನಂದರ ಆದರ್ಶ ತತ್ವಗಳು ಇಂದಿಗೂ ಪ್ರಸ್ತುತವಾಗಿದ್ದು, ಸ್ವಾಮಿ ವಿವೇಕಾನಂದರು ತಮ್ಮ ಶಕ್ತಿಯುತ ವ್ಯಕ್ತಿತ್ವದ ಮೂಲಕ, ಪ್ರಭಾವಪೂರ್ಣ ಮಾತುಗಳ ಮೂಲಕ ವಿದೇಶದಲ್ಲಿಯೂ ನಮ್ಮ ರಾಷ್ಟ್ರಚೇತನವನ್ನು ಜಾಗೃತಗೊಳಿಸಿದವರು.

Image result for vivekananda

ಅಷ್ಟೇ ಅಲ್ಲದೇ, ಯುವಕರಲ್ಲಿ ನವೋತ್ಸಾಹವನ್ನು ಕೆರೆಳಿಸಿ, ಅವರಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಯನ್ನು ಮೂಡಿಸಿ, ನವಭಾರತದ ನಿರ್ಮಾಣಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟವರು. ದೇಶವನ್ನು ಸದೃಢ ರಾಷ್ಟ್ರವನ್ನಾಗಿಸಬೇಕಿದ್ದಲ್ಲಿ, ಭವಿಷ್ಯದ ಶಕ್ತಿಯೆಂದೇ ಬಿಂಬಿಸಲ್ಪಡುವ ಯುವಜನತೆಯನ್ನು ಸತ್ಕಾರ್ಯಗಳಿಗೆ ಪ್ರೇರೇಪಿಸಬೇಕಾಗಿದೆ. ದೇಶದ ಪ್ರತಿಭಾ ಪಲಾಯನವನ್ನು ತಡೆಗಟ್ಟಿ, ದೇಶಕ್ಕೆ ಸದ್ವಿನಿಯೋಗವಾಗುವಂತೆ ಮಾಡುವುದು ಇಂದಿನ ಅಗತ್ಯಗಳಲ್ಲೊಂದಾಗಿರುವುದಂತೂ ಅಕ್ಷರಶಃ ನಿಜ!!

ಮೂಲ:https://www.speakingtree.in/

Postcard team

Tags

Related Articles

FOR DAILY ALERTS
 
FOR DAILY ALERTS
 
Close