ಪ್ರಚಲಿತ

ಸುಭಾಷ್ ಚಂದ್ರ ಬೋಸರನ್ನೇ ಕಾಂಗ್ರೆಸ್ಸಿನಿಂದ ಉಚ್ಚಾಟಿಸಿದ ಹಿಂದಿನ ಕಥನ ಗೊತ್ತಾ? ಕಾಂಗ್ರೆಸ್ ಪಕ್ಷದಲ್ಲಿ ಸರ್ವಾಧಿಕಾರ ಗಾಂಧಿಜೀ ಕಾಲದಿಂದಲೂ ಇತ್ತು.!

ಹುಟ್ಟಿನಿಂದಲೇ ಆದ್ಯಾತ್ಮದೆಡೆಗೆ ಒಲವು ತೋರುತ್ತಿದ್ದ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸರು ಸನ್ಯಾಸಿ ಆಗಬೇಕೆಂದೇ ಹೊರಟು ಬಿಟ್ಟಿದ್ದರು. ಈ ನಿಮಿತ್ತ ಅನೇಕ ಬಾರಿ ಸ್ವಾಮಿ ವಿವೇಕಾನಂದರನ್ನು ಭೇಟಿಯಾಗಲೂ ಉತ್ಸುಕರಾಗಿದ್ದರು. ಮನೆಯಲ್ಲಿ ಧ್ಯಾನ, ತಪಸ್ಸು ಎಂದೆಲ್ಲಾ ಮಾಡುತ್ತಿದ್ದ ಬೋಸರು ಸ್ವಾತಂತ್ರ್ಯ ಕಹಳೆಯನ್ನು ಊದಿದ್ದರ ಪರಿ ಅದ್ಭುತ.

ಸುಭಾಷ್ ಚಂದ್ರ ಬೋಸರು ಆರಂಭದಿಂದಲೂ ಭಾರತಾಂಬೆಯ ದಾಸ್ಯಮುಕ್ತಿಗಾಗಿ ಚಿಂತನೆಯಲ್ಲಿ ತೊಡಗಿಸಿಕೊಂಡಿದ್ದವರು. ಬ್ರಿಟಿಷರನ್ನು ಭಾರತದಿಂದ ಓಡಿಸಿ ಭಾರತಕ್ಕೆ ಸ್ವಾತಂತ್ರ್ಯ ದಕ್ಕಿಸಿಕೊಡಬೇಕೆಂಬುವುದು ಬೋಸರ ಆಸೆಯಾಗಿತ್ತು. ಆದರೆ ಅವರ ತಂದೆ ಬೋಸರನ್ನು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಕಳುಹಿಸಿ ಕೊಡುವ ಉದ್ಧೇಶ ಇಟ್ಟುಕೊಂಡಿದ್ದರು. ಆದರೆ ಇದಕ್ಕೆ ಆರಂಭದಲ್ಲಿ ಒಪ್ಪದೇ ಇದ್ದ ಬೋಸರು ನಂತರ ತನ್ನ ತಂದೆಯ ಒತ್ತಾಯದ ಮೇರೆ ವಿದೇಶಕ್ಕೆ ಹೊರಡಲು ಸಿದ್ಧರಾದರು. ಆದರೆ ಈ ವೇಳೆ ತನ್ನ ತಂದೆ ಬಳಿ ಷರತ್ತು ವಿಧಿಸಿದ್ದರು. ತಾನು ಶಿಕ್ಷಣ ಮುಗಿಸಿ ಬಂದ ನಂತರ ಉದ್ಯೋಗ ಎಂದು ಹೇಳಬಾರದು. ಆ ಪಾಪಿ ಬ್ರಿಟಿಷರ ಕೈಕೆಳಗೆ ದುಡಿಯುವುದು ನನಗೆ ಇಷ್ಟವಿಲ್ಲ. ಅದು ಸಾಧ್ಯವೂ ಇಲ್ಲ ಎಂದಿದ್ದರು. ಅಂತೆಯೇ ಶೀಘ್ರವಾಗಿ ತನ್ನ ವಿಧ್ಯಾಭ್ಯಾಸವನ್ನು ಮುಗಿಸಿ ಮತ್ತೆ ಮರಳಿ ಭಾರತಕ್ಕೆ ಬಂದು ತನ್ನ ಕಲಿಕಾ ಪ್ರಮಾಣ ಪತ್ರವನ್ನು ತಂದೆಯ ಬಳಿ ಕೊಟ್ಟು “ನಿನ್ನ ಆಸೆಯನ್ನು ಪೂರೈಸಿದ್ದೇನೆ, ಆದರೆ ಬ್ರಿಟಿಷರ ಕೈ ಕೆಳಗೆ ಕೆಲಸ ಮಾಡು ಎಂದು ಹೇಳುವಂತಿಲ್ಲ” ಎಂದು ಹೇಳಿದ್ದರು.

ಇದಾದ ನಂತರ ಬೋಸರು ಮತ್ತೆ ಮನಸು ಮಾಡಿದ್ದು ಸನ್ಯಾಸ ಜೀವನದತ್ತ. ಈ ನಿಮಿತ್ತ ಮತ್ತೊಮ್ಮೆ ಸ್ವಾಮಿ ವಿವೇಕಾನಂದರನ್ನು ಭೇಟಿಯಾಗಲು ಯತ್ನಿಸುತ್ತಾರೆ. ಈ ವೇಳೆ ಸ್ವಾಮಿ ವಿವೇಕಾನಂದರು “ನಿಮ್ಮ ಸಾಧನೆ ಬೇರೇನೋ ಇದೆ. ಸನ್ಯಾಸ ಜೀವನ ನಿಮಗೆ ಬೇಡ” ಎಂದು ಹೇಳಿ ವಾಪಾಸು ಕಳಿಸಿದ್ದರಂತೆ. ದಿಕ್ಕು ದೋಚದ ಬೋಸರು ಮತ್ತೆ ಮತ್ತೆ ಆದ್ಯಾತ್ಮದೊಂದಿಗೆ ಮುನ್ನಡೆಯುತ್ತಿದ್ದರು. ಈ ವೇಳೆ ಸ್ವಾತಂತ್ರ್ಯ ಹೋರಾಟಕ್ಕೆ ಮುಕ್ತವಾಗಿ ತೊಡಗಿಸಕೊಳ್ಳಬೇಕೆಂಬ ನಿರ್ಣಯ ಕೈಗೊಂಡು ಮಹಾತ್ಮ ಗಾಂಧಿಜೀ, ಸರ್ದಾರ್ ಪಟೇಲ್ ಮುಂತಾದ ನಾಯಕರನ್ನು ಭೇಟಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಳ್ಳುತ್ತಾರೆ.

ಆದರೆ ಯಾವಾಗ ಬೋಸ್ ಎಂಬ ಶಕ್ತಿ ಕಾಂಗ್ರೆಸ್ ಪಾಳಯಕ್ಕೆ ನುಗ್ಗಿತ್ತೋ ಅಂದಿನಿಂದ ಶಾಂತಿಪ್ರಿಯ ಕಾಂಗ್ರೆಸ್ ನಾಯಕರಿಗೆ ತಮ್ಮ ರಾಜಕೀಯ ಅಸ್ತಿತ್ವದ ಬುಡ ಅಲುಗಾಡುತ್ತಿರುವಂತೆ ಭಾಸವಾಗಿತ್ತು. ಗಾಂಧಿಜೀ, ನೆಹರೂ ಸೇರಿದಂತೆ ಎಲ್ಲರೂ ಬೋಸರ ಕೆಲ ನಿರ್ಧಾರಗಳನ್ನು ವಿರೋಧಿಸಲು ಆರಂಭಿಸಿದರು. ಆರಂಭದಲ್ಲಿ ಅವಿರೋಧವಾಗಿ ಸುಭಾಷ್ ಚಂದ್ರ ಬೋಸರು ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ವೇಳೆ ಅವರು ಒಂದು ಕಡೆಯಲ್ಲಿ ಆಡಿದ ಭಾಷಣ ಅಕ್ಷರಶಃ ನಿಜವಾಗಿತ್ತು. “ಬ್ರಿಟಿಷರು ಒಡೆದು ಆಳುವ ಮನಸ್ಥಿತಿಯನ್ನು ಹೊಂದಿಕೊಂಡಿದ್ದವರು. ಹೀಗಾಗಿ ಎಚ್ಚರಿಕೆ ವಹಿಸಿಕೊಳ್ಳಬೇಕು. ಸ್ವಾತಂತ್ರ್ಯ ಕೊಟ್ಟರೂ ದೇಶವನ್ನು ಒಡೆಯುವ ಮೂಲಕವೇ ಕೊಡುತ್ತಾರೆ” ಎಂದು ಹೇಳಿದ್ದರು.

ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುತ್ತಿದ್ದಂತೆಯೇ ಬೋಸರ ಕೆಲಸಗಳು ವೇಗ ಪಡೆದುಕೊಂಡಿದ್ದವು. ಹಿರಿಯರ ಸಲಹೆಗಳನ್ನು ಪಡೆದುಕೊಂಡು ಕೆಲಸ ಮಾಡಲು ಆರಂಭಿಸಿದ್ದರು. ಆವರೆಗೂ ಗಾಂಧಿಜೀ ಹೇಳಿದಂತೆಯೇ ನಡೆಯುತ್ತಿದ್ದ ಕೆಲಸ ಕಾರ್ಯಗಳು ಬೋಸರ ಕಾಲದಲ್ಲಿ ಬದಲಾದವು. ಎಲ್ಲರಿಗೂ ಮುಕ್ತ ಅವಕಾಶಗಳಿವೆ ಒಟ್ಟಾಗಿ ಸೇರಿಕೊಂಡು ಕೆಲಸ ಮಾಡೋಣ ಎಂಬ ಕರೆ ಕೊಟ್ಟರು. ಆದರೆ ಇದು ಗಾಂಧಿಜೀಗೆ ಹಿಡಿಸಲಿಲ್ಲ. ಹೀಗಾಗಿ ಗಾಂಧಿಜೀ ಬೋಸರನ್ನು ಧ್ವೇಷಿಸುವ ಕೆಟ್ಟ ಕೆಲಸಕ್ಕೆ ಮುಂದಾಗುತ್ತಾರೆ.

ಬೋಸರ ಅವಧಿ ಮುಕ್ತಾಯ ಆಗುತ್ತಲೇ ಬೋಸರ ಕೆಲಸಗಳು ಮತ್ತಷ್ಟು ಬಾಕಿ ಉಳಿದಿದ್ದವು. ಒಂದು ಅವಧಿಗೆ ಬೋಸರಿಗೆ ಎಲ್ಲವನ್ನೂ ಸರಿಪಡಿಸಲು ಸಾಧ್ಯವಾಗಿರಲಿಲ್ಲ. ಈ ನಿಮಿತ್ತ ಬೋಸರು ಮತ್ತೊಂದು ವರ್ಷದ ಬೇಡಿಕೆಯನ್ನು ಕಾಂಗ್ರೆಸ್ ಮುಂದಿಟ್ಟರು. ಆದರೆ ಗಾಂಧಿಜೀ ಸಹಿತ ಕೆಲ ನಾಯಕರು ಬೋಸ್ ಬೇಡಿಕೆಗೆ ಸ್ಪಂದಿಸಲೇ ಇಲ್ಲ. ಗಾಂಧಿಜೀಯಂತೂ ಸುತಾರಾಮ್ ಒಪ್ಪಿಕೊಳ್ಳಲಿಲ್ಲ. ಆದರೆ ಹೆಚ್ಚಿನ ನಾಯಕರು ಬೋಸ್ ಆಡಳಿತಕ್ಕೆ ಮಣೆ ಹಾಕಿದ್ದರು. ಈ ವೇಳೆ ಬೋಸರು ಚುನಾವಣೆಯ ಮಾರ್ಗವನ್ನು ತೋರಿಸಿದ್ದರು. “ಯಾಕೆ ಯಾವಾಗಲೂ ಒಬ್ಬ ವ್ಯಕ್ತಿ ಹೇಳಿದಂತೆ ಅಧ್ಯಕ್ಷನಾಗಬೇಕು? ಚುನಾವಣೆ ನಡೆಸೋಣ. ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲಿಂದಲೇ ಆರಂಭವಾಗಲಿ. ನಾನು ಚುನಾವಣೆಗೆ ಸಿದ್ಧ” ಎಂದು ಹೇಳಿದ್ದರು.

ಅನಿವಾರ್ಯವಾಗಿ ಗಾಂಧಿಜೀ ಚುನಾವಣೆಯನ್ನು ಒಪ್ಪಿಕೊಳ್ಳಬೇಕಾಗಿ ಬಂತು. ಬೋಸರ ವಿರುದ್ಧ ಯಾರು ಕೂಡಾ ಚುನಾವಣೆಗೆ ಸ್ಪರ್ಧಿಸಲು ಮುಂದೆ ಬರಲಿಲ್ಲ. ಸರ್ದಾರ್ ಪಟೇಲರು, ಬಾಬು ರಾಜೇಂದ್ರ ಪ್ರಸಾದರು ಸೇರಿದಂತೆ ಎಲ್ಲರೂ ಬೋಸ್ ವಿರುದ್ಧ ಸ್ಪರ್ಧಿಸಲು ಹಿಂದೇಟು ಹಾಕುತ್ತಾರೆ. ಈ ವೇಳೆ ಗಾಂಧಿಜೀ ದುರ್ಬಲ ಅಭ್ಯರ್ಥಿ ಪಟ್ಟಾಭಿ ಸೀತಾರಾಮಯ್ಯನವರನ್ನು ಕಣಕ್ಕಿಳಿಸುತ್ತಾರೆ. ಅಭ್ಯರ್ಥಿ ಯಾರೇ ಆಗಿದ್ದರೂ ತನ್ನ ಪ್ರಭಾವದಿಂದ ಚುನಾವಣೆ ಗೆಲ್ಲಿಸುವುದು ಸುಲಭ ಎಂಬ ಮನಸ್ಥಿತಿ ಗಾಂಧಿಜೀ ಬಳಿ ಇತ್ತು. ಚುನಾವಣೆ ಆರಂಭವಾಗಿ ಪ್ರಚಾರದ ಭರಾಟೆಯೂ ಅಷ್ಟೇ ವೇಗವಾಗಿ ನಡೆದಿತ್ತು. 1939ರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆ ಇತಿಹಾಸದಲ್ಲಿ ಮರೆಯಲಾರದ ಚುನಾವಣೆಯಾಗಿ ಮಾರ್ಪಾಡಾಗಿತ್ತು.

ಚುನಾವಣೆ ನಡೆದು ಫಲಿತಾಂಶ ಬೋಸರ ಪರವಾಗಿಯೇ ಬಂದಿತ್ತು. ಗಟ್ಟಿತನ ಹಾಗೂ ದೇಶದ ಹಿತಕ್ಕಾಗಿ ದೃಢ ನಿರ್ಧಾರ ಕೈಗೊಳ್ಳುತ್ತಿದ್ದ ಬೋಸರಿಗೆ ಅಂದಿನ ಕಾಂಗ್ರೆಸ್ ನಾಯಕರು ಮಣೆ ಹಾಕಿದ್ದರು. ಬೋಸರಿಗೆ 1580 ಮತಗಳು ಬಂದಿದ್ದರೆ ಗಾಂಧಿಜೀ ಪ್ರೇರಿತ ಸೀತಾರಾಮಯ್ಯನವರಿಗೆ 1370 ಮತಗಳು ಬಂದಿದ್ದವು. ಸುಮಾರು 200 ಮತಗಳ ಅಂತರದಿಂದ ಸುಭಾಷ್ ಚಂದ್ರ ಬೋಸರು ಜಯಗಳಿಸುತ್ತಾರೆ, ಮತ್ತೆ ಕಾಂಗ್ರೆಸ್ಸಿನ ಅಧ್ಯಕ್ಞರಾಗುತ್ತಾರೆ.

ಆದರೆ ಮಹಾತ್ಮ ಎನಿಸಿಕೊಂಡಿರುವ ಗಾಂಧಿಜೀಗೆ ಇದನ್ನು ಸಹಿಸಿಕೊಳ್ಳಲು ಅಸಾಧ್ಯವಾಯಿತು. ಅಸಹಿಷ್ಣುತೆ ಗಾಂಧಿಜೀಯನ್ನು ಕಾಡಿತ್ತು. ಈ ವೇಳೆ ಗಾಂಧಿಜೀ ಕಾಂಗ್ರೆಸ್ ನಾಯಕರಿಗೆ ಪತ್ರ ಬರೆಯುತ್ತಾರೆ. “ಯಾರಿಗೆ ಕಾಂಗ್ರೆಸ್ ಅಧ್ಯಕ್ಷ ಸುಭಾಷ್ ಚಂದ್ರ ಬೋಸರ ಧೋರಣೆಗಳು ಇಷ್ಟ ಆಗುವುದಿಲ್ಲವೋ ಅವರು ಕಾಂಗ್ರೆಸ್ ಬಿಟ್ಟು ಹೊರಬನ್ನಿ” ಎಂದು ಕರೆಕೊಟ್ಟಿದ್ದರು. ತನ್ನ ಅಥವಾ ತನ್ನ ನಿರ್ಧೇಶನದ ಹೊರತಾದ ಯಾವ ನಾಯಕನೂ ಕಾಂಗ್ರೆಸ್ಸಿನಲ್ಲಿ ಹಾಗೂ ಅದರ ಅಧ್ಯಕ್ಷ ಪಟ್ಟದಲ್ಲಿ ಇರಬಾರದು ಎಂಬ ಮನಸ್ಥಿತಿ ಗಾಂಧಿಜೀ ಬಳಿ ಇತ್ತು. ಈ ಪತ್ರ ಯಂಗ್ ಇಂಡಿಯಾ ಪತ್ರಿಕೆಯಲ್ಲೂ ಪ್ರಕಟವಾಗಿತ್ತು. ಬೋಸರನ್ನು ಅನೇಕ ಕಾಂಗ್ರೆಸ್ ನಾಯಕರು ಬೆಂಬಲಿಸಿದ್ದರು. ರಾಷ್ಟ್ರಗೀತೆಯ ಹರಿಕಾರ ರವೀಂದ್ರನಾಥ ಠಾಗೋರ್ ಅವರು ಬೋಸರನ್ನು ಅಭಿನಂದಿಸಿ “ನಿಮ್ಮ ಸಾಹಸ ಮೆಚ್ಚಬೇಕಾದದ್ದು” ಎಂದು ಹೇಳಿದ್ದರು.

ಆದರೆ ಗಾಂಧಿಜೀಗೆ ಮಾತ್ರ ಇದು ಸಹ್ಯವಾಗಲೇ ಇಲ್ಲ. ಬ್ರಿಟಿಷರ ವಿರುದ್ಧ ನಡೆಸಬೇಕಾದ ಹೋರಾಟವನ್ನು ಬೋಸರ ವಿರುದ್ಧ ಆರಂಭಿಸಲು ಗಾಂಧಿಜೀ ಮುಂದಾದರು. ಓರ್ವ ಸಮರ್ಥ ನಾಯಕನ ವಿರುದ್ಧ ಅಸಹಕಾರ ಚಳವಳಿ ಆರಂಭವಾಗಿತ್ತು. ಕಾಂಗ್ರೆಸ್ಸಿನಲ್ಲಿ ವರ್ಕಿಂಗ್ ಕಮಿಟಿಗೆ ಸರ್ಜರಿ ಮಾಡಬೇಕಾಗಿತ್ತು. ಹಳೆಯ ಸದಸ್ಯರನ್ನು ತೆಗೆದು ಹೊಸ ಸದಸ್ಯರನ್ನು ಹಾಕುವ ನಿರ್ಧಾರವನ್ನು ಬೋಸರು ತೆಗೆದುಕೊಂಡಿದ್ದರು. ಆದರೆ ಈ ನಿರ್ಧಾರವನ್ನು ಗಾಂಧಿಜೀ ಒಪ್ಪಲಿಲ್ಲ. ನಂತರ ಬೋಸರು ಗಾಂಧಿಜೀ ಬಳಿ ಯಾವ ಸದಸ್ಯರನ್ನು ಹಾಕಬೇಕು ಹೇಳಿ, ಅಂತವರನ್ನೇ ಹಾಕೋಣ ಎಂದರೂ ಗಾಂಧಿಜೀ ಮಾತೆತ್ತಲಿಲ್ಲ. ಈ ಮಧ್ಯೆ ನೆಹರೂ ಹಳೇ ಸಮಿತಿಯನ್ನೇ ಮುಂದುವರೆಸೋಣ ಎಂದರೂ ಬೋಸರು ಇದಕ್ಕೆ ಒಪ್ಪಲಿಲ್ಲ.

ಒಂದು ಕಡೆ ಗಾಂಧಿಜೀ ಮತ್ತು ಅವರ ತಂಡದ ಅಸಹಕಾರ, ಮತ್ತೊಂದು ಕಡೆ ತಾನೂ ಏನೂ ಮಾಡಲಾರದ ಸ್ಥಿತಿ ಹೀಗೆ ಇದೆಲ್ಲವನ್ನೂ ಕಂಡಂತಹ ಬೋಸರು ತನ್ನಿಂದಾಗಿ ಕೆಲಸಗಳು ಸ್ಥಗಿತಗೊಳ್ಳಬಾರದು ಎಂದು ತನ್ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಬಿಟ್ಟರು. ಯಾವಾಗ ಬೋಸರು ರಾಜೀನಾಮೆ ನೀಡಿದರೋ ಅಂದಿನಿಂದ ಮತ್ತೆ ಗಾಂಧಿಜೀ ಪುಟಿದೆದ್ದರು. ಮತ್ತೆ ತಾನು ಹೇಳಿದಂತೆಯೇ ಕಾಂಗ್ರೆಸ್ಸನ್ನು ಮುಂದುವರೆಸಲು ಆರಂಭಿಸಿದರು. ಆದರೆ ಬೋಸರು ಮಾತ್ರ ತನ್ನ ಪಕ್ಷವನ್ನು ಬಿಡಲಿಲ್ಲ.

ಬೋಸರು ಕಾಂಗ್ರೆಸ್ಸಿನಲ್ಲಿ ಇದ್ದುಕೊಂಡೇ ಗುಂಪೊಂದನ್ನು ಕಟ್ಟಿ ಸ್ವಾತಂತ್ರ್ಯಕ್ಕಾಗಿ ಕೆಲಸ ಮಾಡುವ ಉದ್ಧೇಶ ಇಟ್ಟುಕೊಂಡರು. ಗಾಂಧಿಜೀಯ ಅನೇಕ ಧೋರಣೆಗಳನ್ನು ಬೋಸರು ಮತ್ತೆಯೂ ವಿರೋಧಿಸಿದರು. ಆದರೆ ಬೋಸರ ಕಾರಣದಿಂದಾಗಿ ಗಾಂಧಿಜೀ ಮಾತುಗಳು ನಡೆಯುತ್ತಿಲ್ಲ ಹಾಗೂ ಬ್ರಿಟಿಷರ ವಿರುದ್ಧ ಬೋಸರಿಗಿದ್ದ ಕಠಿಣ ನಿಲುವು ಗಾಂಧಿಜೀಗೆ ಇಷ್ಟವಾಗದ ಕಾರಣ ಅವರನ್ನು ಪಕ್ಷದಿಂದಲೇ ಉಚ್ಚಾಟಿಸಲಾಯಿತು. ಮಾತ್ರವಲ್ಲದೆ ಬೋಸರನ್ನು ಯಾರೂ ಯಾವುದೇ ಸಂಘಟನೆಗೆ ಸೇರಿಸಕೊಳ್ಳಬಾರದು ಎಂಬ ಆದೇಶವನ್ನು ಹೊರಡಿಸಲಾಗಿತ್ತು. ಇಷ್ಟರ ಮಟ್ಟಿಗೆ ಬೋಸರನ್ನು ಗಾಂಧಿಜೀ ಹಾಗೂ ನಕಲಿ ಶಾಂತಿಪ್ರಿಯವಾದ ಅವರ ತಂಡಗಳು ಹಿಂಸಿಸಿದ್ದವು. ಬೋಸರಿಗೆ ಇಲ್ಲಿ ನಿಂತು ಸ್ವಾತಂತ್ರ್ಯ ದಕ್ಕಿಸಿಕೊಳ್ಳುವುದು ಕಷ್ಟ ಎಂದು ಗೊತ್ತಾಗಿ ನಂತರ ಬೇರೆ ದಾರಿಯನ್ನು ಕಂಡುಕೊಂಡರು.

ಕಾಂಗ್ರೆಸ್ ಎಂಬ ಪಕ್ಷದಲ್ಲಿ ಸರ್ವಾಧಿಕಾರ ಅಂದಿನಿಂದ ಇಂದಿಗೂ ಮುಂದುವರೆಯುತ್ತಿದೆ ಎಂಬುವುದೇ ನಗ್ನ ಸತ್ಯ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close