ಪ್ರಚಲಿತ

ಶಾಂತಿ ಸ್ಥಾಪನೆಗೆ ಶ್ರಮಿಸುವ ಪ್ರಧಾನಿ ಮೋದಿಯವರನ್ನು ಬೆಂಬಲಿಸಿ! ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ ಅಮೇರಿಕಾ!!!

ರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಏನೂ ಮಾಡಿಲ್ಲ ಎಂಬ ಒಂದು ಆರೋಪ ಮೋದಿ ವಿರೋಧಿಗಳಿಂದ ಕೇಳುತ್ತಲೇ ಇದೆ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿರುವ ಮೋದಿ ವಿರೋಧಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಮೋದಿಯವರನ್ನು ವಿರೋಧಿಸುತ್ತಿದ್ದಾರೆ. ಆದರೆ ಜಾಗತಿಕ ಮಟ್ಟದಲ್ಲಿ ಮೋದಿಯವರ ವರ್ಚಸ್ಸು ಯಾವ ರೀತಿ ಬೆಳೆಯುತ್ತಿದೆ ಎಂದರೆ ಮೋದಿ ವಿರೋಧಿಗಳು ಭಾರತದಲ್ಲಿ ಅರಚಾಡುತ್ತಲೇ ಇದ್ದಾರೆ, ಆದರೆ ಮೋದಿ ವಿಶ್ವನಾಯಕನಾಗಿ ಬೆಳೆದು ನಿಂತಿದ್ದಾರೆ. ಅದೊಂದು ಕಾಲವಿತ್ತು ಜಗತ್ತಿನ ಇತರ ರಾಷ್ಟ್ರಗಳು ಹೇಳುತ್ತಿದ್ದರೆ ಭಾರತ ಕೈಕಟ್ಟಿ ಕೇಳುವ ಸ್ಥಿತಿ ಇತ್ತು, ಆದರೆ ಈಗ ಭಾರತದ ನಾಯಕತ್ವ ಬದಲಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಹೇಳುತ್ತಿದ್ದರೆ ಜಗತ್ತಿನ ಬಲಿಷ್ಠ ರಾಷ್ಟ್ರಗಳ ದಿಗ್ಗಜರೇ ತಲೆ ಅಲ್ಲಾಡಿಸಿ ಕೇಳುತ್ತಾರೆ. ಅಷ್ಟೇ ಅಲ್ಲದೆ ಮೋದಿಯವರ ಪರವಾಗಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಳ್ಳುವುದಕ್ಕೂ ಹಿಂಜರಿಯುತ್ತಿಲ್ಲ. ಭಾರತದ ತಂಟೆಗೆ ಬಂದು ಪದೇ ಪದೇ ಕಾಲುಕೆರೆದು ಜಗಳ ಮಾಡಲು ಪ್ರಯತ್ನಿಸುವ ಪಾಕಿಸ್ತಾನಕ್ಕೆ ಇದೀಗ ದೊಡ್ಡಣ್ಣ ಅಮೇರಿಕಾ ತಾಕೀತು ಮಾಡಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಜಗತ್ತಿನಲ್ಲಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸುತ್ತಿದ್ದಾರೆ, ಆದರೆ ಪಾಕಿಸ್ತಾನ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದೆ. ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ಮುಂದಾಗಿರುವ ಪ್ರಧಾನಿ ಮೋದಿಯವರಿಗೆ ಪ್ರತಿಯೊಂದು ರಾಷ್ಟ್ರವೂ ಬೆಂಬಲ ನೀಡಲೇಬೇಕು ಪಾಕಿಸ್ತಾನ ಕೂಡ ಭಾರತವನ್ನು ಬೆಂಬಲಿಸಬೇಕು ಎಂದು ಖಡಕ್ ಎಚ್ಚರಿಕೆ ನೀಡಿದೆ.!

Image result for jim mattis with nirmala seetharaman

ಶಾಂತಿ ಬಯಸಿದರೆ ನರೇಂದ್ರ ಮೋದಿಯವರನ್ನು ಬೆಂಬಲಿಸಿ!

ಜಗತ್ತಿನ ಪ್ರತಿಯೊಂದು ರಾಷ್ಟ್ರವೂ ಶಾಂತಿ ಬಯಸುತ್ತದೆ, ಆದರೆ ಅದಕ್ಕಾಗಿ ಶ್ರಮಿಸುವ ಕೆಲವೊಂದು ರಾಷ್ಟ್ರಗಳ ಪೈಕಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಭಾರತ ಮುಂಚೂಣಿಯಲ್ಲಿದೆ ಎಂದು ಹೇಳಿರುವ ಅಮೇರಿಕಾದ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಅವರು ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದು, ಶಾಂತಿ ಸ್ಥಾಪನೆ ಪ್ರಕ್ರಿಯೆಯಲ್ಲಿ ಪ್ರತೀ ಜವಾಬ್ದಾರಿಯುತ ದೇಶವೂ ಕೈಜೋಡಿಸಬೇಕು. ಅದಕ್ಕಾಗಿ ಜಗತ್ತಿನ ಎಲ್ಲಾ ರಾಷ್ಟ್ರಗಳ ಬೆಂಬಲಕ್ಕಾಗಿ ಎದುರು ನೋಡುತ್ತಿದ್ದೇವೆ. ಭಾರತ ಈಗಾಗಲೇ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಸಾಕಷ್ಟು ನಿರ್ಧಾರ ಕೈಗೊಂಡು ಇತರ ದೇಶಗಳಿಗೆ ಮಾದರಿಯಾಗಿದೆ. ಅದೇ ರೀತಿ ಪ್ರತೀ ರಾಷ್ಟ್ರಗಳು ಕೂಡ ಈ ಪ್ರಕ್ರಿಯೆಗೆ ಕೈಜೋಡಿಸಬೇಕೆಂದು ಒತ್ತಾಯಿಸಿದ್ದಾರೆ. ಕಳೆದ ೪೦ ವರ್ಷಗಳಲ್ಲಿ ಅಫ್ಘಾನಿಸ್ತಾನದ ಯುದ್ಧ ಪ್ರಮಾಣ ಸಾಕಷ್ಟು ಇಳಿದಿದೆ, ಅಫ್ಘಾನಿಸ್ತಾನ ಕೂಡ ಶಾಂತಿ ನೆಲೆಸುವುದಕ್ಕಾಗಿ ಸಾಕಷ್ಟು ಪ್ರಯತ್ನ ಪಡುತ್ತಿದೆ. ಆದ್ದರಿಂದ ಭಾರತ , ಅಫ್ಘಾನಿಸ್ತಾನ ಮತ್ತು ಶಾಂತಿ ಸ್ಥಾಪನೆಗಾಗಿ ಪ್ರಯತ್ನಿಸುವ ಎಲ್ಲಾ ರಾಷ್ಟ್ರಗಳನ್ನು ಬೆಂಬಲಿಸುವ ಸಮಯವಿದು ಎಂದು ಹೇಳಿಕೊಂಡಿದ್ದಾರೆ.!

ಒಂದು ರಾಷ್ಟ್ರ ಶಾಂತಿ ಸ್ಥಾಪನೆಗಾಗಿ ಯಾವ ರೀತಿ ನಿರ್ಧಾರ ತೆಗೆದುಕೊಳ್ಳಬಹುದು ಎಂಬುದನ್ನು ಪ್ರಧಾನಿ ಮೋದಿ ತೋರಿಸಿಕೊಟ್ಟಿದ್ದಾರೆ. ಭಾರತದ ಒಂದೊಂದು ನಿರ್ಧಾರ ಕೂಡ ಜಗತ್ತಿಗೆ ಮಾದರಿಯಾಗುತ್ತಿದೆ. ಆದರೆ ಪಾಕಿಸ್ತಾನ ಮಾತ್ರ ಇನ್ನೂ ಭಾರತಕ್ಕೆ ಗಡಿಯಲ್ಲಿ ಉಪಟಳ ನೀಡುವುದನ್ನು ಕಡಮೆ ಮಾಡಲಿಲ್ಲ. ಆದರೆ ಪಾಕಿಸ್ತಾನ ಈ ಕೂಡಲೇ ಎಚ್ಚೆತ್ತುಕೊಂಡರೆ ಉತ್ತಮ ಎಂದು ನೇರವಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಅಮೇರಿಕಾ, ಜಗತ್ತಿನಲ್ಲಿ ಶಾಂತಿ ನೆಲೆಸಬೇಕಾದರೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆಂಬಲ ನೀಡಬೇಕು ಎಂದು ಕರೆ ನೀಡಿದ್ದಾರೆ.!

Image result for trump with imran khan

ಮೋದಿಗೆ ತಲೆಬಾಗಿದ ಅಮೇರಿಕಾ!

ಮೋದಿಯವರ ವಿದೇಶಿ ಪ್ರವಾಸವನ್ನು ಟೀಕಿಸುವ ವಿರೋಧಿಗಳು ಇದನ್ನು ಸರಿಯಾಗಿ ಗಮನಿಸಬೇಕು ಏಕೆಂದರೆ ಮೋದಿ ಮಾಡಿದ ಎಲ್ಲಾ ಯೋಚನೆ – ಯೋಜನೆಗಳು ಯಶಸ್ವಿಯಾಗಿದೆ ಎಂಬುದಕ್ಕೆ ಇದುವೇ ಸಾಕ್ಷಿ. ಯಾಕೆಂದರೆ ಮೋದಿ ವಿದೇಶಿ ಪ್ರವಾಸ ಮಾಡಿ ಜಗತ್ತಿನ ಎಲ್ಲಾ ಬಲಿಷ್ಠ ರಾಷ್ಟ್ರಗಳ ಜೊತೆ ಉತ್ತಮ ಸ್ನೇಹ ಸಂಬಂಧ ಬೆಳೆಸಿಕೊಂಡಿದ್ದಾರೆ.ಇದರ ಫಲವಾಗಿ ಇಂದು ಜಗತ್ತಿನ ಎಲ್ಲಾ ರಾಷ್ಟ್ರಗಳು ಭಾರತದ ಪರವಾಗಿ ನಿಲ್ಲುತ್ತದೆ. ಈಗಾಗಲೇ ವಿಶ್ವದಲ್ಲೇ ಪಾಕಿಸ್ತಾನವನ್ನು ಮೂಲೆಗುಂಪು ಮಾಡಿರುವ ಪ್ರಧಾನಿ ಮೋದಿ, ಪಾಕಿಸ್ತಾನವನ್ನು ಭಿಕಾರಿ ರಾಷ್ಟ್ರವನ್ನಾಗಿ ಮಾಡಿದ್ದಾರೆ. ಇದೀಗ ಅಮೇರಿಕಾ ಕೂಡ ಪಾಕಿಸ್ತಾನಕ್ಕೆ ತಾಕೀತು ಮಾಡಿದ್ದು ಮತ್ತೊಮ್ಮೆ ಮೋದಿಗೆ ಗೆಲುವಾಗಿ ಪಾಕಿಸ್ತಾನಕ್ಕೆ ಮುಖಭಂಗವಾಗಿದೆ. ಇದರಿಂದ ನಾವು ಸ್ಪಷ್ಟವಾಗಿ ಕಾಣಬಹುದು, ಮೋದಿ ಆಡಳಿತದಲ್ಲಿ ಭಾರತ ವಿಶ್ವಗುರುವಾಗುತ್ತಿದೆ. ಭಾರತ ಹಿಂದೆಂದೂ ಕಂಡಿರದ ವೇಗದ ಅಭಿವೃದ್ಧಿ ಹೊಂದುತ್ತಿದೆ, ಇದೇ ರೀತಿ ಮುಂದುವರಿದರೆ ಭಾರತವೇ ಜಗತ್ತನ್ನು ಆಳುವುದರಲ್ಲಿ ಸಂಶಯವಿಲ್ಲ..!!

–ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close