ಪ್ರಚಲಿತ

ರಾತ್ರೋ ರಾತ್ರಿ ಊರುಬಿಟ್ಟ ನಟಿ ರಮ್ಯಾ? ಮಂಡ್ಯ ಜನರ ಆಕ್ರೋಶಕ್ಕೆ ಹೆದರಿ ಮಂಡ್ಯ ರಾಜಕೀಯದಿಂದಲೇ ದೂರ ಉಳಿದ ಪದ್ಮಾವತಿ!!!

ದಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಘಪರಿವಾರದ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಾ ತನ್ನನ್ನು ತಾನು ಗುರುತಿಸಿಕೊಳ್ಳುವ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ನಟಿ ರಮ್ಯಾ ಅವರು ಸದ್ಯ ರಾಜಕೀಯದಿಂದ ದೂರ ಉಳಿಯುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ಕೇವಲ ಟ್ವಿಟರ್ ಫೇಸ್‌ಬುಕ್‌ ನಲ್ಲಿ ಮಾತ್ರ ಕಾಣಸಿಗುವ ರಮ್ಯಾ, ಚುನಾವಣೆ ಸಂದರ್ಭದಲ್ಲಿ ಅಸಂಬದ್ಧ ಪೋಸ್ಟ್ ಗಳನ್ನು ತನ್ನ ಟ್ವಿಟರ್ ಫೇಸ್‌ಬುಕ್‌ ಖಾತೆಯಲ್ಲಿ ಹಾಕುತ್ತಾ ಪ್ರಧಾನಿ ಮೋದಿ ಮತ್ತು ಬಿಜೆಪಿಗರ ಕಾಲೆಳೆಯುವ ಕೆಲಸ ಮಾಡುತ್ತಿದ್ದರು. ಆದರೆ ಕಾಲೆಳೆದಷ್ಟು ತಾನೇ ಸೋಲನುಭವಿಸಿ ಜನರ ಕೆಂಗಣ್ಣಿಗೆ ಗುರಿಯಾದ ರಮ್ಯ, ನಟ ಮತ್ತು ಕಾಂಗ್ರೆಸ್ ನಾಯಕ ಅಂಬರೀಶ್ ಅವರ ಸಾವಿನ ಸಂದರ್ಭದಲ್ಲೂ ಭೇಟಿ ನೀಡದೆ ಅಹಂಕಾರ ಮೆರೆದ ರಮ್ಯಾ ವಿರುದ್ಧ ಕರ್ನಾಟಕದ ಜನತೆ ಸಾಮಾಜಿಕ ಜಾಲತಾಣಗಳಲ್ಲಿ “ಶ್ರದ್ಧಾಂಜಲಿ” ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಕಂಗಾಲಾದ ರಮ್ಯಾ ಇದೀಗ ರಾಜ್ಯ ರಾಜಕಾರಣದಿಂದಲೇ ದೂರ ಉಳಿಯುವ ನಿರ್ಧಾರಕ್ಕೆ ಬಂದಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಯಾಕೆಂದರೆ ಏಕಾಏಕಿ ಮಂಡ್ಯದಲ್ಲಿ ಇರುವ ತನ್ನ ಮನೆ ಖಾಲಿ ಮಾಡುವ ನಿರ್ಧಾರಕ್ಕೆ ಬಂದ ರಮ್ಯಾ, ರಾತ್ರೋರಾತ್ರಿ ಲಾರಿಗಳಲ್ಲಿ ಮನೆ ಸಾಮಾನು ಸಾಗಿಸಿದ್ದಾರೆ.!

ಮನೆ ಖಾಲಿ ಮಾಡಿ ಊರು ಬಿಟ್ಟ ರಮ್ಯಾ!

ರಮ್ಯಾ ಅವರು ರಾಜ್ಯ ರಾಜಕಾರಣದಿಂದ ದೂರ ಉಳಿದು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಸಕ್ರಿಯರಾಗಿ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಉಸ್ತುವಾರಿ ವಹಿಸಿಕೊಂಡಿದ್ದರು. ಪದೇ ಪದೇ ಪ್ರಧಾನಿ ಮೋದಿಯವರ ವಿರುದ್ಧ ಏನಾದರೊಂದು ಪೋಸ್ಟ್ ಹಾಕಿ ತನ್ನ ಮಾನ ತಾನೇ ಕಳೆದುಕೊಳ್ಳುವ ರಮ್ಯಾ ಇದೀಗ ಮಂಡ್ಯದ ಜನರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಯಾವುದೇ ಸುಳಿವು ಇಲ್ಲದೆ ರಾತ್ರೋರಾತ್ರಿ ಮಂಡ್ಯದಲ್ಲಿ ಇರುವ ತನ್ನ ಮನೆಯನ್ನು ಖಾಲಿ ಮಾಡಿದ್ದಾರೆ ಎಂದು ಕನ್ನಡ ಮಾಧ್ಯಮವೊಂದು ವರದಿ ಮಾಡಿದೆ. ರಮ್ಯಾ ಮೊದಲ ಬಾರಿಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಸಂದರ್ಭದಲ್ಲಿ ಮಂಡ್ಯ ನಗರದಲ್ಲೇ ಮನೆ ಮಾಡಿ ಜನರ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸುವುದಾಗಿ ಭರವಸೆ ನೀಡಿದ್ದರು. ಆದರೆ ಮುಂದಿನ ಚುನಾವಣೆಯಲ್ಲಿ ಹೀನಾಯವಾಗಿ ಸೋತು ಊರು ಬಿಟ್ಟ ರಮ್ಯಾ ಮಂಡ್ಯದಲ್ಲಿ ನಾಪತ್ತೆಯಾಗಿದ್ದರು. ವರ್ಷಾನುಗಟ್ಟಲೆ ಮಂಡ್ಯದಿಂದ ದೂರ ಉಳಿದ ರಮ್ಯಾ ನಂತರದಲ್ಲಿ ಮತ್ಯೆ ಮಂಡ್ಯಕ್ಕೆ ವಾಪಾಸಾಗಿ ತಾನು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಿದ್ದಾಗಿ ಹೇಳಿ ಇನ್ನು ಮುಂದೆ ನಿಮ್ಮ ಜೊತೆಗೆ ಇಲ್ಲೇ ಇರುವುದಾಗಿ ಹೇಳಿಕೊಂಡಿದ್ದರು. ಆದರೆ ಜನರ ಯಾವುದೇ ಸಂಪರ್ಕಕ್ಕೂ ಸಿಗದೆ ಕೇವಲ ಟ್ವಿಟರ್ ನಲ್ಲಿ ಮಾತ್ರ ಸಕ್ರಿಯರಾಗಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಆದರೆ ರಾಜ್ಯ ಕಾಂಗ್ರೆಸ್ ನಾಯಕರಿಂದಲೂ ಬದಿಗೆ ಸರಿಸಲ್ಪಟ್ಟ ರಮ್ಯಾ ಇದೀಗ ಸಂಪೂರ್ಣವಾಗಿ ರಾಜ್ಯ ರಾಜಕಾರಣದಿಂದ ದೂರ ಉಳಿಯುವುದಾಗಿ ಮುನ್ಸೂಚನೆ ನೀಡಿದ್ದಾರೆ.!

ಅಂಬರೀಶ್ ಅಭಿಮಾನಿಗಳ ಪಾಲಿಗೆ ರಮ್ಯಾ ಇನ್ನಿಲ್ಲ.!

ಖ್ಯಾತ ಕನ್ನಡ ಚಿತ್ರ ನಟ ಮಂಡ್ಯ ಕಾಂಗ್ರೆಸ್‌ನ ಪ್ರಭಾವಿ ನಾಯಕ ಮಾತ್ರವಲ್ಲದೆ ರಮ್ಯಾ ಅವರ ರಾಜಕೀಯ ಗುರು ಎಂದೇ ಕರೆಯಲ್ಪಡುವ ಅಂಬರೀಶ್ ಅವರ ಸಾವಿನ ಸಂದರ್ಭದಲ್ಲೂ ಮಾನವೀಯತೆಗಾದರೂ ಭೇಟಿ ನೀಡಬೇಕಿತ್ತು. ಆದರೂ ಭೇಟಿ ನೀಡದ ರಮ್ಯಾ ವಿರುದ್ಧ ಅಂಬಿ ಅಭಿಮಾನಿಗಳು ಆಕ್ರೋಶಗೊಂಡು “ರಮ್ಯಾಗೆ ಶ್ರದ್ಧಾಂಜಲಿ” ಎಂದು ಪೋಸ್ಟ್ ಮಾಡಿ ಫೇಸ್‌ಬುಕ್‌ ವಾಟ್ಸಾಪ್‌ಗಳಲ್ಲಿ ಫೋಟೋ ಹಾಕಿದ್ದರು. ಇದರಿಂದ ಕಂಗಾಲಾದ ರಮ್ಯಾ ಇದೀಗ ರಾತ್ರೋರಾತ್ರಿ ತನ್ನ ಮನೆ ಖಾಲಿ ಮಾಡಿದ್ದಾರೆ. ಎರಡು ಲಾರಿಗಳಲ್ಲಿ ಮನೆ ಸಾಮಾನುಗಳನ್ನು ಸಾಗಿಸುವ ಫೋಟೋಗಳು ಇದೀಗ ವೈರಲ್ ಆಗಿದೆ ಮತ್ತು ರಮ್ಯಾ ಊರು ಬಿಡುತ್ತಿದ್ದಾರೆ ಎಂಬ ಸುದ್ಧಿಯಾಗಿದೆ. ಮಂಡ್ಯದಲ್ಲಿ ಜನರ ಆಕ್ರೋಶ ಕಂಡು ಇನ್ನು ಮುಂದೆ ಮಂಡ್ಯದಲ್ಲಿ ರಾಜಕೀಯ ಭವಿಷ್ಯ ಇಲ್ಲ ಎಂಬ ಅರಿವು ರಮ್ಯಾಳಿಗೆ ಆಗಿದ್ದು ಮಂಡ್ಯ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಅದೇನೇ ಆಗಲಿ ಪದೇ ಪದೇ ಪ್ರಧಾನಿ ಮೋದಿಯವರ ವಿರುದ್ಧ ಅಸಂಬದ್ಧ ಹೇಳಿಕೆ ನೀಡಿ ವಿವಾದ ಹುಟ್ಟುಹಾಕುತ್ತಿದ್ದ ರಮ್ಯಾ ಅವರ ರಾಜಕೀಯ ಜೀವನಕ್ಕೆ ಬ್ರೇಕ್ ಬಿದ್ದಂತಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ರಮ್ಯಾ ಕೇವಲ ಟ್ವಿಟರ್ ನಲ್ಲಿ ಮಾತ್ರ ಕಾಣಸಿಗಬೇಕೇ ಹೊರತು ಜನರ ಬಳಿ ತೆರಳಿ ತನ್ನ ರಾಜಕೀಯ ಆಟ ತೋರಿಸುವಂತಿಲ್ಲ. ಯಾಕೆಂದರೆ ಅಂಬರೀಶ್ ಅವರ ಸಾವಿನ ಸಂದರ್ಭದಲ್ಲಿ ಭೇಟಿ ನೀಡದೆ ಅಹಂಕಾರ ತೋರಿದ ರಮ್ಯಾ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ರಾಹುಲ್ ಗಾಂಧಿ ಅವರ ಕೃಪಾಕಟಾಕ್ಷದಿಂದ ಕಾಂಗ್ರೆಸ್‌ನಲ್ಲಿ ಉಳಿದುಕೊಂಡಿರುವ ರಮ್ಯಾಳಿಗೆ ರಾಜ್ಯ ರಾಜಕಾರಣದಲ್ಲಿ ಇನ್ನು ಮುಂದೆ ಭವಿಷ್ಯ ಇಲ್ಲದಂತಾಗಿದೆ.!!

–ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close