ಪ್ರಚಲಿತ

ಯಶಸ್ವಿಯಾಗಿ ಉಡಾವಣೆಯಾಯ್ತು ಜಿ ಸ್ಯಾಟ್ 11 ಉಪಗ್ರಹ! ಅಂತರ್ಜಾಲ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಲಿದೆ ಭಾರತ!

ಭಾರತ ಪ್ರತಿಯೊಂದು ಕ್ಷೇತ್ರದಲ್ಲೂ ಹಿಂದೆಂದಿಗಿಂತಲೂ ವೇಗವಾಗಿ ಬದಲಾಗುತ್ತಿದೆ ಎಂಬುದಕ್ಕೆ ಅನೇಕ ಕಾರಣಗಳು ನಮ್ಮ ಕಣ್ಣ ಮುಂದೆ ಇದೆ. ಮೋದಿ ಪ್ರಧಾನಿಯಾದ ಬಳಿಕ ಭಾರತದ ಪ್ರಗತಿ ಕಂಡು ಜಗತ್ತಿನ ಬಲಿಷ್ಠ ರಾಷ್ಟ್ರಗಳೇ ದಿಗ್ಭ್ರಮೆಗೊಂಡಿದೆ. ವಿಜ್ಞಾನ ಕ್ಷೇತ್ರವೇ ಆಗಿರಬಹುದು ಆರ್ಥಿಕ ಕ್ಷೇತ್ರವೇ ಆಗಿರಬಹುದು, ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಇದೀಗ ಅಂತರ್ಜಾಲ ಕ್ಷೇತ್ರದಲ್ಲೂ ಹೊಸ ಕ್ರಾಂತಿ ಸೃಷ್ಟಿಸಲು ಮುಂದಾಗಿರುವ ಭಾರತ, ಜಿ ಸ್ಯಾಟ್ 11 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿ ಜಗತ್ತಿನ ಮುಂದೆ ಭಾರತ ಕೂಡ ಬಲಿಷ್ಟಗೊಂಡಿದೆ ಎಂಬ ಸಂದೇಶ ರವಾನೆ ಮಾಡಿದೆ. ಯಾಕೆಂದರೆ ವಿಜ್ಞಾನ ಕ್ಷೇತ್ರಕ್ಕೆ ಅತೀ ಹೆಚ್ಚಿನ ಪ್ರಾಮುಖ್ಯತೆ ನೀಡುವ ಪ್ರಧಾನಿ ನರೇಂದ್ರ ಮೋದಿಯವರು, ಎಲ್ಲಾ ರೀತಿಯಲ್ಲೂ ವಿಜ್ಞಾನ ಕ್ಷೇತ್ರಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಆದ್ದರಿಂದಲೇ ಭಾರತ ಹೊಸ ಹೊಸ ಇತಿಹಾಸ ನಿರ್ಮಿಸಿ ಜಗತ್ತಿಗೆ ಮಾದರಿಯಾಗುತ್ತಿದೆ. ಇದೀಗ ಯಶಸ್ವಿಯಾಗಿ ಉಡಾವಣೆಗೊಂಡಿರುವ ಜಿ ಸ್ಯಾಟ್ 11 ಉಪಗ್ರಹವನ್ನು ಭಾರತದ ಅತ್ಯಂತ ಹೆಚ್ಚು ತೂಕದ ಉಪಗ್ರಹ ಎಂದೇ ಕರೆಯಲಾಗುತ್ತಿದೆ.!

ಜಿ ಸ್ಯಾಟ್ 11 ಭಾರತಕ್ಕೆ ಎಷ್ಟು ವೇಗದ ಇಂಟರ್ನೆಟ್ ಸೇವೆ ನೀಡಲಿದೆ ಗೊತ್ತಾ?

ದಕ್ಷಿಣ ಅಮೇರಿಕಾದ ಫ್ರೆಂಚ್ ಗಯಾನ ಸ್ಪೇಸ್ ಸ್ಟೇಷನ್ ನಿಂದ ರಾತ್ರಿ 2.07 ಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾದ ಈ ಉಪಗ್ರದ ತೂಕ ಬರೋಬ್ಬರಿ 5,800 ಕೆಜಿ. ಇದು ಭಾರತದ ಅತ್ಯಂತ ಹೆಚ್ಚು ತೂಕದ ಉಪಗ್ರಹ ಎಂದು ಹೇಳಲಾಗುತ್ತಿದೆ ಮಾತ್ರವಲ್ಲದೆ ಈ ಉಪಗ್ರದಿಂದಾಗಿ ಭಾರತಕ್ಕೆ ಇನ್ನು ಮುಂದೆ ಅತೀ ವೇಗದ ಇಂಟರ್ನೆಟ್ ಸೇವೆ ಸಿಗಲಿದೆ. ಅಂದರೆ ಈ ಉಪಗ್ರಹ ಭಾರತಕ್ಕೆ ಸುಮಾರು 14 ಜಿಬಿಪಿಎಸ್ ವೇಗದ ಇಂಟರ್ನೆಟ್ ಸೇವೆ ಒದಗಿಸಲಿದೆ, ಆದ್ದರಿಂದ ಈ ಉಪಗ್ರಹ ಭಾರತದ ಕೀ ಪ್ಲೇಯರ್ ಆಗಿ ಪಾತ್ರ ನಿರ್ವಹಿಸಲಿದೆ. ಅಷ್ಟೇ ಅಲ್ಲದೆ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಭಾರತದಲ್ಲಿ ಮಹತ್ತರವಾದ ಬದಲಾವಣೆಗೆ ನಾಂದಿ ಹಾಡಲಿದೆ.
ಇದೀಗ ಉಡಾವಣೆಗೊಂಡ ಉಪಗ್ರಹವು ಅಂತರಿಕ್ಷದಲ್ಲಿ ಸುಧೀರ್ಘ ಕಾಲ ಕಾರ್ಯ ನಿರ್ವಹಿಸಲಿದ್ದು ಭಾರತದ ಇಂಟರ್ನೆಟ್ ಕ್ಷೇತ್ರಕ್ಕೆ ಸಹಕಾರಿಯಾಗಲಿದೆ. ಅಂದರೆ ಈ ಉಪಗ್ರಹ ಸುಮಾರು 15 ವರ್ಷ ಅಂತರಿಕ್ಷದಲ್ಲೇ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. !

ಇನ್ನು ಏರಿಯಾನ್ 5 ವಾಹನ ಭಾರತದ ಜಿಸ್ಯಾಟ್ 11 ನೊಂದಿಗೆ ಕೊರಿಯಾದ ಜಿಯೋ ಕೋಮ್ ಸ್ಯಾಟ್ 2ಎ ಉಪಗ್ರಹವನ್ನೂ ಕೂಡ ನಭಕ್ಕೆ ಕೊಂಡೊಯ್ದು ಕಕ್ಷೆಗೆ ಸೇರಿಸುವ ಕಾರ್ಯ ಮಾಡಲಿದೆ. ಜಿಯೋ ಕೋಮ್ ಸ್ಯಾಟ್ 2ಎ ಹವಾಮಾನ ಮತ್ತು ಬಾಹ್ಯಾಕಾಶ ಹವಾಮಾನ ಮೇಲ್ವಿಚಾರಣೆ ಮಾಡುವ ಉಪಗ್ರಹವಾಗಿದೆ. ಭಾರತ(ಇಸ್ರೋ) ಈ ಹಿಂದೆ ಅನೇಕ ಬಾರಿ ಜಿ ಸ್ಯಾಟ್ 11 ಉಪಗ್ರಹವನ್ನು ಉಡಾವಣೆ ಮಾಡಲು ಮುಂದಾಗಿತ್ತಾದರೂ ತಾಂತ್ರಿಕ ಕಾರಣದಿಂದ ಉಡಾವಣೆ ಮಾಡಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಪದೇ ಪದೇ ಉಡಾವಣೆ ಮಾಡುವುದನ್ನು ಮುಂದೂಡಲಾಗುತ್ತಿತ್ತು. ಕಳೆದ ಎಪ್ರಿಲ್ ತಿಂಗಳಲ್ಲಿ ಜಿ ಸ್ಯಾಟ್ 6 ಉಪಗ್ರಹದ ಸಂಪರ್ಕ ಕಳೆದುಕೊಂಡ ಬೆನ್ನಲ್ಲೇ ಇಸ್ರೋ ಜಿ ಸ್ಯಾಟ್ 11 ಉಪಗ್ರಹದ ಉಡಾವಣೆಯನ್ನು ಮುಂದೂಡಿತ್ತು. ಆದರೆ ಈಗ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ ಮತ್ತು ಇದರಿಂದ ಭಾರತದ ಇಂಟರ್ನೆಟ್ ಕ್ಷೇತ್ರಕ್ಕೆ ಸಾಕಷ್ಟು ಸಹಕಾರಿಯಾಗಲಿದೆ.!

ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಅನೇಕ ಬದಲಾವಣೆ ಆಗುತ್ತಲೇ ಇದೆ ಮತ್ತು ಜಗತ್ತಿಗೆ ಮಾದರಿಯಾಗುತ್ತಿದೆ ಭಾರತ. ಭಾರತದ ಆಂತರಿಕ ಕ್ಷೇತ್ರ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ಹೆಚ್ಚಾಗುತ್ತಿದೆ. ಒಂದು ದೇಶದ ಪರಿಸ್ಥಿತಿ ಸುಧಾರಿಸಬೇಕಾದರೆ ಆ ದೇಶದ ನಾಯಕತ್ವ ಉತ್ತಮವಾಗಿರಬೇಕು. ವಿಶ್ವದಲ್ಲಿ ಭಾರತದ ಗೌರವ ಹೆಚ್ಚಾಗುತ್ತಿದೆ ಎಂದರೆ ಅದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಎಂಬುವುದರಲ್ಲಿ ಸಂಶಯವಿಲ್ಲ. ವಿಜ್ಞಾನ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದುವ ಯೋಜನೆಗಳು ಭಾರತದ ಭತ್ತಳಿಕೆಯಲ್ಲಿ ಇವೆ, ಅವೆಲ್ಲವೂ ಒಂದೊಂದೇ ಯಶಸ್ವಿಯಾಗಿ ನಡೆದರೆ ಭಾರತದ ಕಾಲಬುಡಕ್ಕೆ ಜಗತ್ತಿನ ಬಲಿಷ್ಠ ರಾಷ್ಟ್ರಗಳು ಬಂದು ಕೂರುವುದರಲ್ಲಿ ಸಂಶಯವಿಲ್ಲ.!!

–ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close