ಪ್ರಚಲಿತ

ಮೋದಿ ಸಹೋದರ ನಿನ್ನೆ ರಾತ್ರಿ ಎಲ್ಲಿದ್ದರು ಗೊತ್ತಾ? ಪ್ರಚಾರ ಬಯಸದ ಮೋದಿ ಬಗ್ಗೆ ಒಂದಿಷ್ಟು ಮಾತು!?

ನರೇಂದ್ರ ದಾಮೋದರ ದಾಸ್ ಮೋದಿ. ಬಾಲ್ಯ ವಯಸ್ಸಿನಿಂದಲೂ ರಾಷ್ಟ್ರೀಯ ಸ್ವಯಂ ಸೇವಾ ಸಂಘದಲ್ಲಿ ಕರ್ತವ್ಯಗಳನ್ನು ನಿರ್ವಹಿಸಿ, ಚಾಹಾ ಮಾರಿಕೊಂಡು ವಿಧ್ಯಾಭ್ಯಾಸಗಳನ್ನು ಪೂರೈಸಿಕೊಂಡು, ನಿಸ್ವಾರ್ಥ ಸೇವೆಯಿಂದಲೇ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುವ ಇವರು ಈಗ ಭವ್ಯ ಭಾರತದ ಪ್ರಧಾನ ಮಂತ್ರಿಗಳು. ಅನಿರೀಕ್ಷಿತವಾಗಿ ಗುಜರಾತಿನ ಮುಖ್ಯಮಂತ್ರಿಯ ಹುದ್ದೆಯನ್ನು ಅಲಂಕರಿಸಿ, ನಂತರ ಸೋಲಿಲ್ಲದ ಸರದಾರನಾಗಿ, 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಪ್ರಧಾನಿಯಾಗಿ ಆಯ್ಕೆಯಾದವರು ಶ್ರೀ ನರೇಂದ್ರ ದಾಮೋದರ ದಾಸ್ ಮೋದಿಯವರು.

ಇಂತಹ ಒಂದು ಘನತೆ ಗೌರವವನ್ನು ಹೊಂದಿಕೊಂಡಿರುವ ಶ್ರೀ ನರೇಂದ್ರ ಮೋದಿಯವರ ಕುಟುಂಬದ ಕಥೆಗಳು ಮಾತ್ರ ರೋಚಕ. ಮೋದಿಯವರ ಕುಟುಂಬದ ವಿಚಾರ ಈಗಾಗಲೇ ಭಾರತಕ್ಕೆ ಮಾತ್ರವಲ್ಲದೆ ವಿಶ್ವಕ್ಕೆ ಉತ್ತಮ ಸಂದೇಶವಾಗಿದೆ. ಮಾತ್ರವಲ್ಲದೆ ಮೋದಿಯವರ ಕುಟುಂಬ ಇತರೆ ಎಲ್ಲಾ ರಾಜಕಾರಣಿಗಳಿಂತ ಭಿನ್ನ ಎಂಬುವುದು ಗುಟ್ಟಾಗಿ ಉಳಿದಿಲ್ಲ. ಮೋದಿಯವರ ಮಾತೃಶ್ರೀ ಸೇರಿದಂತೆ ಇಡೀ ಕುಟುಂಬವೇ ಮೋದಿಯವರನ್ನು ಅಂಟಿಕೊಂಡಿರದೆ ತಮ್ಮದೇ ನಿತ್ಯ ಕಾರ್ಯದಲ್ಲಿ ತೊಡಗಿಕೊಂಡು ಜೀವನ ಸಾಗಿಸುತ್ತಾ ಇದೆ ಎಂದರೆ ನಂಬಲೇ ಬೇಕು.

ಬೆಂಗಳೂರಿಗೆ ಬಂದಿಳಿದ ಮೋದಿ ಸಹೋದರ…

ಭಾರತದ ನೆಚ್ಚಿನ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಸಹೋದರರಾದ ಶ್ರೀ ಪ್ರಹ್ಲಾದ್ ಮೋದಿಯವರು ನಿನ್ನೆ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ. ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಕ್ಕಿದ್ದ ಶ್ರೀ ಪ್ರಹ್ಲಾದ್ ಮೋದಿಯವರು ಗುರುವಾರ ಸಂಜೆ ಬೆಂಗಳೂರು ನಗರಕ್ಕೆ ಆಗಮಿಸಿದ್ದಾರೆ. ಗುರುವಾರ ಸಂಜೆ ನಗರಕ್ಕೆ ಆಗಮಿಸಿರುವ ಶ್ರೀ ಪ್ರಹ್ಲಾದ್ ಮೋದಿಯವರು ಬೆಂಗಳೂರಿನ ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿಯ ಶ್ರೀ ಸ್ವಾಮಿ ನಾರಾಯಣ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಬೆಂಗಳೂರಿನ ಪ್ರಸಿದ್ಧ ದೇವಾಲಯವಾದ ಸ್ವಾಮಿ ನಾರಾಯಣ ದೇವಾಲಯಕ್ಕೆ ಪ್ರಹ್ಲಾದ್ ಮೋದಿಯವರು ಭೇಟಿ ನೀಡಿ ದೇವರ ದರ್ಶನವನ್ನು ಪಡೆದಿದ್ದಾರೆ.

ಗಾಣಿಗ ಸಮಾಜ ಭವನಕ್ಕೆ ಭೇಟಿಯಾದ ಮೋದಿ ಸಹೋದರ…

ತನ್ನ ಜಾತಿಯಾದ ಗಾಣಿಗ ಸಮಾಜದ ಭವನಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಶ್ರೀ ಪ್ರಹ್ಲಾದ್ ಮೋದಿಯವರು ಭೇಟಿ ನೀಡಿದ್ದಾರೆ. ಗಾಣಿಗ ಸಮಾಜ ಭವನಕ್ಕೆ ಭೇಟಿ ನೀಡಿದ ಪ್ರಹ್ಲಾದ್ ಮೋದಿಯವರು ಅಲ್ಲಿನ ಸಮಾಜ ಬಾಂಧವರ ಜೊತೆ ಚರ್ಚೆ ನಡೆಸಿದ್ದಾರೆ.

ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲೂ ಭಾಗಿ…

ಇಂದು ಜಗತ್ತು ಕಂಡ ಮಹಾ ಸಂತ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ. ಮೊದಲಿನಿಂದಲೂ ಸ್ವಾಮಿ ವಿವೇಕಾನಂದರನ್ನು ಅತ್ಯಂತ ಇಷ್ಟ ಪಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿಯವರು ಇಂದಿನ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಕೃಷ್ಣ ಶಾಲೆಯಲ್ಲಿ ನಡೆದ ಸ್ವಾಮಿ ವಿವೇಕಾನಂದ ಜಯಂತಿಯಲ್ಲಿ ಭಾಗವಹಿಸಿದರು.

ಬೆಂಗಳೂರಿನ ಶ್ರೀ ಕೃಷ್ಣ ಗ್ರೂಪ್ ಸಂಸ್ಥೆ ಆಯೋಜಿಸಿರುವ ರಾಷ್ಟ್ರೀಯ ಯುವದಿನಾಚರಣೆಯಲ್ಲಿ ಪ್ರಹ್ಲಾದ್ ಮೋದಿಯವರು ಭಾಗವಹಿಸಿದ್ದಾರೆ. ಸ್ವಾಮಿ ವಿವೇಕಾನಂದರ 156ನೇ ಜನ್ಮ ದಿನಾಚರಣೆಯ ಪ್ರಯುಕ್ತ ನಡೆದಿದ್ದ ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಅವರು ಭಾಗವಹಿಸಿದ್ದಾರೆ.

ಯಾವುದೇ ರಾಜಕೀಯವಿಲ್ಲ…!!!

ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಸಹೋದರ ಶ್ರೀ ಪ್ರಹ್ಲಾದ್ ಮೋದಿಯವರು ಕರ್ನಾಟಕಕ್ಕೆ ಆಗಮಿಸಿರುವುದರ ಹಿಂದೆ ಯಾವುದೇ ರಾಜಕೀಯ ಕಾರಣಗಳು ಗೋಚರಿಸಲಿಲ್ಲ. ಅಷ್ಟೇ ಅಲ್ಲದೆ ಯಾವ ಅತಿ ದೊಡ್ಡ ರಾಜಕಾರಣಿಯೂ ಶ್ರೀ ಪ್ರಹ್ಲಾದ್ ಮೋದಿಯವರನ್ನು ಭೇಟಿ ಮಾಡಿಲ್ಲ. ಯಾವುದೇ ರಾಜಕೀಯ ಕಾರಣಗಳಿಗಾಗಿ ಪ್ರಹ್ಲಾದ್ ಮೋದಿಯವರ ಕಾರ್ಯಕ್ರಮ ನಿಗಧಿಯಾಗದೆ ಕೇವಲ ಖಾಸಗೀ ಕಾರ್ಯಕ್ರಮಗಳಲ್ಲಿ ಮಾತ್ರವೇ ಭಾಗವಹಿಸಿದ್ದಾರೆ. ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ನಡೆಸಿರುವ ಸ್ವಾಮಿ ವಿವೇಕಾನಂದರ 156ನೇ ಹುಟ್ಟು ಹಬ್ಬದ ಆಚರಣೆಯ ಅಂಗವಾಗಿ ರಾಷ್ಟ್ರೀಯ ಯುವ ದಿನಾಚರಣೆಗೆ ಮುಖ್ಯ ಅಥಿತಿಯಾಗಿ ಆಗಮಿಸಿದ್ದಾರೆ.

ಮೋದಿ ಭೇಟಿಯಾದ ಮಹೇಶ್ ವಿಕ್ರಮ್ ಹೆಗ್ಡೆ…

ಇನ್ನು ನಿನ್ನೆ ರಾತ್ರಿ ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಶ್ರೀ ಪ್ರಹ್ಲಾದ್ ಮೋದಿ ಅವರನ್ನು, ಪೋಸ್ಟ್ ಕಾರ್ಡ್ ಸುದ್ಧಿ ಮಾಧ್ಯಮದ ಮಾಲೀಕರಾದ ಶ್ರೀ ಮಹೇಶ್ ವಿಕ್ರಮ್ ಹೆಗ್ಡೆಯವರು ಭೇಟಿಯಾದರು. ಬೆಂಗಳೂರಿನ ಕುಮಾರ ಕೃಪಾ ಅಥಿತಿ ಗೃಹದಲ್ಲಿ ಭೇಟಿಯಾದ ಮಹೇಶ್ ವಿಕ್ರಮ್ ಹೆಗ್ಡೆಯವರು ಕೆಲ ಹೊತ್ತುಗಳ ಕಾಲ ಶ್ರೀ ಪ್ರಹ್ಲಾದ್ ಮೋದಿ ಅವರೊಂದಿಗೆ ಮಾತುಕತೆ ನಡೆಸಿದರು.

 

ಥೇಟ್ ಮೋದಿಯಂತೆ ಕಂಡ ಮೋದಿ!!!

ಪ್ರಧಾನಿ ಮೋದಿ ಅಂದರೆ ಸುಮ್ನೇನಾ. ಅದು ಚಿನ್ನಕ್ಕೆ ಹೋಲಿಸಿದ ಪುಟವಿದ್ದಂತೆ ಎಂದು ಈ ಹಿಂದೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದ್ದರು. ತನ್ನ ನಡವಳಿಕೆಗಳಿಂದಲೇ ಹೆಸರಾಗಿರುವ ಪ್ರಧಾನಿ ಮೋದಿ ಜಗತ್ತಿನಲ್ಲೇ ಫೇಮಸ್. ಅವರ ಸಹೋದರ ಶ್ರೀ ಪ್ರಹ್ಲಾದ್ ಮೋದಿ ಕೂಡಾ ಕಡಿಮೆಯೇನಿಲ್ಲ. ಥೇಟ್ ಪ್ರಧಾನಿ ನರೇಂದ್ರ ಮೋದಿಯವರಂತೆಯೇ ಕಂಡಂತಹ ಪ್ರಹ್ಲಾದ್ ಮೋದಿ ಅವರದ್ದೇ ಗೆಟಪ್‍ನಲ್ಲಿ ಮಿಂಚುತ್ತಿದ್ದರು. ಅವರನ್ನು ನೋಡಿದ ಜನತೆ ಸಾಕ್ಷಾತ್ ಪ್ರಧಾನಿ ನರೇಂದ್ರ ಮೋದಿಯವರ ದರ್ಶನವಾದಂತೆ ಭಾವಪರವಶಕ್ಕೊಳಗಾಗಿದ್ದರು.

ಒಟ್ಟಿನಲ್ಲಿ ಮೋದಿ ಸಹೋದರ ಪ್ರಹ್ಲಾದ್ ಮೋದಿಯವರ ಭೇಟಿಯಿಂದ ಬೆಂಗಳೂರು ಕಳೆಕಟ್ಟಿದ್ದು, ಹೆಚ್ಚು ಪ್ರಚಾರಕ್ಕೆ ಬಾರದೆ ತನ್ನದೇ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂದು ಸಂಜೆ ಮತ್ತೆ ತನ್ನ ಸ್ವಗ್ರಾಮಕ್ಕೆ ವಾಪಾಸ್ ಆಗಲಿದ್ದಾರೆ.

-ಸುನಿಲ್ ಪಣಪಿಲ

Tags

Related Articles

Close