ಪ್ರಚಲಿತ

ಮಹಾಸಂತನಿಗೆ ಅವಮಾನ ಮಾಡಿದ ಕಾಂಗ್ರೆಸ್ ಸರಕಾರ!! ವಿವೇಕಾನಂದ ಜಯಂತಿಯ ಬಗ್ಗೆ ಗೃಹ ಸಚಿವ ಹೇಳಿದ್ದೇನು ಗೊತ್ತಾ..?

“ಇಂತಹ ಕೆಟ್ಟ ಆಡಳಿತವನ್ನು ನಾವು ನೋಡಲೇ ಇಲ್ಲ” ಎಂದು ಮೊನ್ನೆ ತಾನೇ ಹೈಕೋರ್ಟ್ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಛಾಟಿ ಬೀಸಿತ್ತು. ಅದಾಗಲೇ ಹಿಂದೂ ವಿರೋಧಿ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ಕೇವಲ ಹಿಂದೂ ವಿರೋಧಿ ಮಾತ್ರವಲ್ಲ, ನಮ್ಮದು ದೇಶದ್ರೋಹಿ ಸರ್ಕಾರ ಎಂದು ಸಾರಿ ಸಾರಿ ಹೇಳುತ್ತಿದೆ. ಸಾಲು ಸಾಲು ಭಾಗ್ಯಗಳನ್ನು ಘೋಷಿಸಿ ಹಿಂದೂ ವಿರೋಧಿ ಧೋರಣೆಗಳನ್ನು ಅನುಸರಿಸಿಕೊಂಡು ಬರುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ಮತ್ತೆ ಹಿಂದೂಗಳಿಗೆ ಮಾತ್ರವಲ್ಲದೆ ದೇಶಕ್ಕೇ ಅವಮಾನ ಮಾಡಿದೆ.

ಈ ಬಾರಿಯೂ ವಿವೇಕಾನಂದ ಜಯಂತಿ ಇಲ್ಲ…

ಈ ಸಿದ್ದರಾಮಯ್ಯ ಎಂಬ ಅರೆ ಬೆಂದ ಹಿಂದೂ ಅದೇನು ರಾಜ್ಯಬಾರ ಮಾಡುತ್ತಾರೋ ದೇವನೇ ಬಲ್ಲ. ಹಿಂದಿನಿಂದಲೂ ಮುಸಲ್ಮಾನರನ್ನು ಓಲೈಸಿಕೊಂಡು ಬರುತ್ತಿರುವ ಈ ಸೋಗಲಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಣೆ ಮಾಡಬೇಕೆಂದು ಯಾಕೆ ಅನ್ನಿಸಿಲ್ಲ? ಹಾವಾಡಿಗರ ದೇಶ ಎಂದು ಮೂದಲಿಸುತ್ತಿದ್ದ ಭಾರತವನ್ನು ಜಗತ್ತಿನ ಅತ್ಯಂತ ಶ್ರೇಷ್ಠ ದೇಶ ಎಂಬ ಕೀರ್ತಿ ಪತಾಕೆಯನ್ನು ಅಮೇರಿಕಾದ ವಿಶ್ವ ವೇದಿಕೆಯಲ್ಲಿ ಸಾರಿದ ಸಿಡಿಲ ಸದ್ದಿನ ಸಂತ ಸ್ವಾಮಿ ವಿವೇಕಾನಂದರನ್ನು ರಾಜ್ಯ ಸರ್ಕಾರ ನಡೆಸಿಕೊಂಡು ಬರುತ್ತಿರುವ ರೀತಿ ನೋಡಿದ್ರೆ ರಾಜ್ಯದ ಹಿಂದೂಗಳು ಯಾಕಪ್ಪಾ ಇವನಿಗೆ ಓಟ್ ಹಾಕಿದ್ದೇವೆ ಎಂದು ಆಕ್ರೋಷವನ್ನು ವ್ಯಕ್ತಪಡಿಸುತ್ತಿದ್ದಾರೆ.

ಭಾರತ ಮಾತ್ರವಲ್ಲದೆ ಅಮೇರಿಕಾ ಸಹಿತ ಅನೇಕ ರಾಷ್ಟ್ರಗಳು ಮಹಾ ಸಂತ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಭಾವನಾತ್ಮಕವಾಗಿ ಆಚರಿಸುತ್ತಿದೆ. ಆದರೆ ಕರ್ನಾಟಕ ಮಾತ್ರ ವಿವೇಕಾನಂದರನ್ನು ಮರೆತೇ ಬಿಟ್ಟಿದೆ. ಇತರೆ ಎಲ್ಲಾ ಜಾತಿಯ ಹಾಗೂ ಧರ್ಮದ ನಾಯಕರ ಜಯಂತಿಯನ್ನು ಆಚರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯನ್ನು ಆಚರಿಸಲು ಅಸಡ್ಡೆ ತೋರುತ್ತಿದೆ. ಇಂದು ವಿವೇಕಾನಂದರ ಜಯಂತಿಯನ್ನು ರಾಷ್ಟ್ರದಾದ್ಯಂತ ಆಚರಿಸುತ್ತಿದ್ದರೂ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಾತ್ರ ವಿವೇಕಾನಂದರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.

ಟಿಪ್ಪು ಜಯಂತಿ ಆಚರಿಸಿದ್ದ ಸಿದ್ದರಾಮಯ್ಯರಿಗೆ ಸ್ವಾಮೀಜಿ ಭಾರವಾದರೇ..?

“ಯಾರು ಏನೇ ಅನ್ನಲಿ. ಸರ್ಕಾರ ಮಾತ್ರ ಟಿಪ್ಪು ಜಯಂತಿ ಆಚರಿಯೇ ಆಚರಿಸುತ್ತದೆ. ಟಿಪ್ಪು ಓರ್ವ ಮಹಾ ಪರಾಕ್ರಮಿ. ಮಾತ್ರವಲ್ಲದೆ ಸ್ವಾತಂತ್ರ್ಯಕ್ಕಾಗಿ ತನ್ನ ಮಕ್ಕಳನ್ನೇ ಅಡವಿಟ್ಟ ಮಹಾ ಸ್ವಾತಂತ್ರ್ಯ ಹೋರಾಟಗಾರ. ಅವನು ಮೈಸೂರಿನ ಹುಲಿ. ಆತನ ಜಯಂತಿ ಮಾಡುವುದು ದೇಶಪ್ರೇಮವನ್ನು ಮೆರೆದಂತೆ” ಎಂದು ಅಂದು ಬೊಗಳೆ ಬಿಡುತ್ತಿದ್ದ ತಿಪ್ಪೆ ಸಂತಾನದ ಸಿದ್ದರಾಮಯ್ಯ ಇಂದು ಜಗತ್ತು ಕಂಡ ಅಪ್ರತಿಮ ದೇಶಪ್ರೇಮಿ, ಮಹಾ ಸಂತ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಮಾಡಲು ಮಾತ್ರ ಸಮಯವಿಲ್ಲ, ಸರ್ಕಾರದಲ್ಲಿ ಹಣವಿಲ್ಲ.

ಈ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಎನೋ ಮಹಾ ಎಂಬಂತೆ ಮತ್ತೆ ಬೊಬ್ಬೆ ಬಿಡುತ್ತಾರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು. “ನಾವು ಕೇವಲ ಟಿಪ್ಪು ಜಯಂತಿಯನ್ನು ಮಾತ್ರ ಆಚರಣೆ ಮಾಡುತ್ತಿಲ್ಲ. ನಮ್ಮ ಕಾಂಗ್ರೆಸ್ ಸರ್ಕಾರ ಎಲ್ಲಾ ನಾಯಕರ ಜಯಂತಿಗಳನ್ನು ಆಚರಣೆ ಮಾಡುತ್ತಿದ್ದೇವೆ. ನಾವು ಕೋಮುವಾದಿಗಳು ಅಲ್ಲ. ಎಲ್ಲಾ ಧರ್ಮದವರನ್ನೂ ಸಮಾನವಾಗಿ ಕಾಣುತ್ತೇವೆ” ಎಂದು ಟಿಪ್ಪು ಜಯಂತಿ ಸಂದರ್ಭ ಬುಗಿಲೆದ್ದ ಆಕ್ರೋಷಕ್ಕೆ ಉತ್ತರಿಸಿದ್ದರು.

ಮುಖ್ಯಮಂತ್ರಿಗಳೇ… ನಿಮಗೆ ನಾಚಿಗೆ ಆಗಲ್ವಾ..?

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ… ನಿಮಗೆ ಸ್ವಲ್ಪಾನಾದರೂ ನಾಚಿಗೆ ಮಾನ ಮರ್ಯಾದೆ ಇದ್ದರೆ ನೀವು ಹೀಗೆ ಮಾಡುತ್ತೀರಾ. ಯಾವಾಗಲೂ ನಾನು ಸಮಾಜವಾದಿ, ಎಲ್ಲಾ ಧರ್ಮದ ಪರ ಎಂದು ಬೊಬ್ಬೆ ಬಿಡುತ್ತಿದ್ದ ನೀವು ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲು ನಿಮ್ಮಿಂದ ಆಗಲ್ವೇ. “ನಾನೂ ಹಿಂದೂ, ನನ್ನ ಹೆಸರಲ್ಲೂ ರಾಮನಿದ್ದಾನೆ” ಎನ್ನುವ ನೀವು, ಇಂದು ಸಿದ್ದರಾಮಯ್ಯ ಎಂದು ಹೆಸರು ಇಟ್ಟುಕೊಳ್ಳಲು ಅದೇ ವಿವೇಕಾನಂದರು ಕಾರಣ ಅನ್ನೋದನ್ನು ಮರೆತಿದ್ದೀರಾ? ಎಲ್ಲರನ್ನೂ ಸಮಾನವಾಗಿ ಕಂಡು, ಹಿಂದೂ ಧರ್ಮದ ಏಳಿಗೆಗಾಗಿ ದುಡಿದ ಸ್ವಾಮಿ ವಿವೇಕಾನಂದರ ಚರಿತ್ರೆ ನಿಮಗೆ ಗೊತ್ತಿದೆಯೇ.? ನೀವು ನಿಜವಾಗಿಯೂ ಓರ್ವ ರಾಜಕಾರಣಿಯಾಗಲು ಲಾಯಕ್ಕು ಇರುವವರೇ? ಓರ್ವ ರಾಜ್ಯದ ಮುಖ್ಯಮಂತ್ರಿಗಳಾಗಿ ಸ್ವಾಮಿ ವಿವೇಕಾನಂದರ ಬಗ್ಗೆ ಇಂತಹ ಅಸಡ್ಡೆ ತೋರುತ್ತಿರುವುದು ನಿಮಗೆ ಶೋಭೆ ತರುತ್ತಿದೆಯೇ? ದೇಶದ್ರೋಹಿ ಟಿಪ್ಪು ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುವ ನೀವು ಸ್ವಾಮೀಜಿಯವರ ಜಯಂತಿಯನ್ನು ಆಚರಿಸಲು ಏಕೆ ಹಿಂದೇಟು?

ಕೋಟಿಗಟ್ಟಲು ಕರ್ಚು ಮಾಡಿ ಟಿಪ್ಪು ಜಯಂತಿ ಆಚರಣೆಯನ್ನು ಮಾಡಿದ್ದೀರಲ್ಲಾ, ಯಾರಪ್ಪನ ಹಣ? ಸರ್ಕಾರದ ಹಣವನ್ನೆಲ್ಲಾ ಪೋಲು ಮಾಡಿಕೊಂಡು ತನ್ನ ಮುಸ್ಲಿಂ ಸಂತಾನಕ್ಕೆ ಕೋಟಿ ಗಟ್ಟಲೆ ಖರ್ಚು ಮಾಡುತ್ತಿರುವ ನಿಮ್ಮ ನಿಜ ಮುಖ ಈಗ ಬದಲಾಗಿದೆ. ಯಾವ ಸಂತ ಭಾರತವನ್ನು ಕುಲಗಂಜಿಗೂ ಕಡಿಮೆ ಇಲ್ಲದಂತೆ ಪ್ರೀತಿಸಿ ಭಾರತವನ್ನು ವಿಜೃಂಭಿಸಿದರೋ ಅದೇ ಶಕ್ತಿ ಪುಂಜವನ್ನು ಅವಮಾನಿಸಿದ್ದೀರಲ್ವಾ… ಏನನ್ನಬೇಕು ನಿಮ್ಮ ದುರಾಹಂಕಾರಕ್ಕೆ.

ಉದ್ಧಟತನ ತೋರಿಸಿದ ಗೃಹ ಸಚಿವ…

ಇನ್ನು ಈ ಬಗ್ಗೆ ಮಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ ಸ್ವಾಮಿ ವಿವೇಕಾನಂದ ಜಯಂತಿಯ ಬಗ್ಗೆ ಉದ್ಧಟತನ ಮೆರೆದಿದ್ದಾರೆ. ಇಂದು ಸ್ವಾಮಿ ವಿವೇಕಾನಂದರ 156ನೇ ಜನ್ಮ ದಿನೋತ್ಸವ. ಆದರೆ ಕರ್ನಾಟಕ ರಾಜ್ಯ ಸರ್ಕಾರ ಯಾಕೆ ವಿವೇಕಾನಂದ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಿಲ್ಲ ಎಂದು ಮಾಧ್ಯಮಗಳು ಪ್ರಶ್ನಿಸಿದ್ದಾರೆ. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ “ಈ ಬಾರಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಮಾಡಲು ಆಗಲಿಲ್ಲ. ಮುಂದಿನ ಬಾರಿ ಮಾಡೋಣ ಬಿಡಿ” ಎಂದು ಉಡಾಫೆ ಉತ್ತರವನ್ನು ನೀಡಿದ್ದಾರೆ.

ದೇಶದ ಮಹಾಸಂತನಾಗಿರುವ ಸ್ವಾಮಿ ವಿವೇಕಾನಂದರ ಬಗ್ಗೆ ಇಷ್ಟೊಂದು ಉಡಾಫೆಯಾಗಿ ಮಾತನಾಡೋದು ರಾಜ್ಯದ ಅತ್ಯಂತ ಹಿರಿಯ ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳಿಗೆ ಖಯಾಲಿಯಾಗಿ ಬಿಟ್ಟಿದೆ. ಕೇವಲ ಅಲ್ಪ ಸಂಖ್ಯಾತರ ಮತಗಳನ್ನೇ ಓಲೈಸಿಕೊಂಡು ಬರುತ್ತಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ರಾಮಲಿಂಗಾ ರೆಡ್ಡಿಯವರು ಸ್ವಾಮಿ ವಿವೇಕಾನಂದರ ಜಯಂತಿಯನ್ನು ಮರೆತಿರುವುದು ಮಾತ್ರವಲ್ಲದೆ ಈ ಬಗ್ಗೆ ಉಡಾಫೆಯಾಗಿ ಮಾತನಾಡಿರುವುದು ರಾಜ್ಯದ ಜನತೆಯ ಕೆಂಗಣ್ಣಿಗೆ ಕಾರಣವಾಗಿದೆ.

ಮಾನ್ಯ ಘನತೆ “ತೆತ್ತ” ಮುಖ್ಯಮಂತ್ರಿಗಳೇ… ಚುನಾವಣೆ ಹತ್ತಿರ ಬರುತ್ತಿದೆ. ರಾಜ್ಯದ ಜನತೆ ಮತ್ತೆ ಮೂರ್ಖರಾಗೋಕೆ ತಯಾರಿಲ್ಲ. ಈ ಬಾರಿ ಖಂಡಿತ ನಿಮ್ಮ ಅಹಂಕಾರವನ್ನು ರಾಜ್ಯದ ಜನತೆ ಮುರಿಯಲಿದ್ದಾರೆ. ಮುಂದಿನ ಬಾರಿ ಈ ರಾಜ್ಯದಲ್ಲಿ ನಡೆಯುವುದು ಸ್ವಾಮಿ ವಿವೇಕಾನಂದರ ಜಯಂತಿ, ಮುಂದಿನ ಬಾರಿ ಈ ರಾಜ್ಯದಲ್ಲಿ ನಡೆಯುವುದು ಅಬ್ದುಲ್ ಕಲಾಂ ಅವರ ಜಯಂತಿ, ಮುಂದಿನ ಬಾರಿ ಈ ರಾಜ್ಯದಲ್ಲಿ ನಡೆಯುವುದು ರಾಷ್ಟ್ರಪ್ರೇಮಿಗಳ ಜಯಂತಿ. ಮುಂದಿನ ಬಾರಿ ಈ ರಾಜ್ಯ ಕಾಂಗ್ರೆಸ್ ಮುಕ್ತ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

-ಸುನಿಲ್ ಪಣಪಿಲ

Related Articles

Close