ದೇಶರಾಜಕೀಯ

ಭಾರತ ಹೇಳಿದ್ದು ಎತ್ತಿಕಟ್ಟಲು ಎಂದರಿತಿದ್ದೇ ತಪ್ಪಾಯಿತು ಎಂದಿತು ಶ್ರೀಲಂಕಾ, ಭಾರತ ಹೇಳಿದ್ದು ಸರಿ ಎಂದಿತು ಚೀನಾ.! ಭಾರತ ಈಗ ವಿಶ್ವಗುರು.!

ಒಂದು ಕಾಲದಲ್ಲಿ ಭಾರತವೆಂದರೆ ಹಾವಾಡಿಗರ ರಾಷ್ಟ್ರ, ಭ್ರಷ್ಟ ರಾಜಕಾರಣಿಗಳಿಂದ ತುಂಬಿಕೊಂಡಿರುವ ರಾಷ್ಟ್ರ, ಅತ್ಯಂತ ಹಿಂದುಳಿದಿರುವ ರಾಷ್ಟ್ರ ಎಂದು ಅಪಖ್ಯಾತಿಗೆ ಪಾತ್ರವಾಗಿರುವ ರಾಷ್ಟ್ರವಾಗಿತ್ತು. ಆದರೆ ಇಂದು ಭಾರತವನ್ನು ವಿದೇಶಗಳು ನೋಡುವ ದೃಷ್ಟಿ ಬದಲಾಗಿದೆ. ವಿಶ್ವಗುರು ಭಾರತದ ವೇಗ ಮತ್ತಷ್ಟು ಹೆಚ್ಚಾಗುತ್ತಿದೆ. “2020ಕ್ಕೆ ಭಾರತ ವಿಶ್ವಗುರು ಆಗುತ್ತೆ, ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತದೆ” ಎಂದು ಮಾಜಿ ರಾಷ್ಟ್ರಪತಿ, ಶ್ರೇಷ್ಟ ವಿಜ್ಞಾನಿ ಡಾ.ಎಪಿಜೆ ಅಬ್ದುಲ್ ಕಲಾಂ ಭವಿಷ್ಯ ನುಡಿದಿದ್ದರು. ಈ ಬಗ್ಗೆ ಪುಸ್ತಕವನ್ನೂ ಬರೆದಿದ್ದರು. ಇದೀಗ ಜಗತ್ತು ಭಾರತವನ್ನು ನೋಡುವ ದೃಷ್ಟಿ ಕಲಾಂಜೀ ಭವಿಷ್ಯವನ್ನು ಅಕ್ಷರಶಃ ನಿರೂಪಿಸಿದಂತಿದೆ.

ಭಾರತದ ಪಾಠವನ್ನು ಮತ್ಸರವೆಂದು ತಿಳಿದಿತ್ತಂತೆ ಶ್ರೀಲಂಕಾ.?

ಇಸ್ಲಾಂ ಉಗ್ರರಿಗೆ ಸವಾಲು ಹಾಕಿರುವ ಒಂದು ಧರ್ಮವಿದ್ದರೆ ಅದು ಹಿಂದೂ ಧರ್ಮ, ಅಂತೆಯೇ ಅದೇ ಉಗ್ರರಿಗೆ ಸವಾಲು ಹಾಕಿರುವ ರಾಷ್ಟ್ರವೆಂದರೆ ಅದು ಭಾರತ. ಉಗ್ರರನ್ನು ಭಾರತದ ಬೇಲಿ ದಾಟಿ ಒಳಬರಲು ಬಿಡೋದಿಲ್ಲ ಎಂದು ಸವಾಲು ಹಾಕಿರುವ ಭಾರತಕ್ಕೆ ಉಗ್ರರ ಕರಿನೆರಳು ಶಾಶ್ವತ ಎಂಬಂತಾಗಿತ್ತು. ಅದು ಕಳೆದ 5 ವರ್ಷಗಳ ಹಿಂದೆ ಯಶಸ್ವಿಯೂ ಆಗಿತ್ತು. ಉಗ್ರರು ಸಿಕ್ಕ ಸಿಕ್ಕಲ್ಲಿ ಬಾಂಬ್ ಸ್ಪೋಟಿಸಿ ತಮ್ಮ ಇಸ್ಲಾಮೀಕರಣದ ವಿಕೃತಿಯನ್ನು ಮೆರೆಯುತ್ತಿದ್ದರು. ಆದರೆ ಕಳೆದ 5 ವರ್ಷದಲ್ಲಿ ನಡೆದ ರಾಜಕೀಯ ಬದಲಾವಣೆ ಈ ಎಲ್ಲದಕ್ಕೂ ಅಂತ್ಯ ಹಾಡಿತ್ತು. ಭಾರತದ ಒಳಗೆ ಹಾಗೂ ಹೊರಗೂ ಉಗ್ರರಿಗೆ ಭಾರತ ಹಾಗೂ ಈ ದೇಶವನ್ನು ಆಳುವ ದೊರೆಯ ಭಯ ಕಾಡಲಾರಂಭಿಸಿತ್ತು. ಭಾರತ ಸೇನಾಪಡೆಗಳು ಸಹಿತ ಗುಪ್ತಚರ ಇಲಾಖೆ ಸದೃಢವಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ಫಲವಾಗಿ ಕಳೆದ 5 ವರ್ಷಗಳಲ್ಲಿ ಭಾರತದಲ್ಲಿ ಈ ಹಿಂದೆ ನಡೆದಂತೆ ಯಾವೊಂದೂ ಉಗ್ರರ ಕೃತ್ಯಗಳು ನಡೆದಿಲ್ಲ. ಇದಕ್ಕೆ ಅವಕಾಶವೂ ಸಿಕ್ಕಿಲ್ಲ. ಈ ಕಾರಣಕ್ಕಾಗಿಯೇ ಗಡಿಯಲ್ಲಿ ಸೈನಿಕರನ್ನೇ ಮುಕ್ಕಿ ತಿನ್ನುವ ವಿಕೃತಿಗೆ ಮುಂದಾಗಿರುವುದು.

ಭಾರತ ನಂಬಿರುವುದು “ವಸುದೈವ ಕುಟುಂಬಕಂ” ಎಂಬ ತತ್ವವನ್ನು. ಇಡೀ ವಿಶ್ವವೇ ತನ್ನ ಕುಟುಂಬ ಎಂದುಕೊಂಡಿರುವ ಭಾರತಕ್ಕೆ ಎಲ್ಲಾ ರಾಷ್ಟ್ರಗಳೂ ಹಿತವೂ ಅಮೂಲ್ಯವೇ. ಈ ನಿಮಿತ್ತ ಇತ್ತೀಚೆಗೆ ಶ್ರೀಲಂಕಾ ರಾಷ್ಟ್ರಕ್ಕೆ ತನ್ನ ರಾಷ್ಟ್ರದ ಗುಪ್ತಚರ ಇಲಾಖಾ ಮಾಹಿತಿಯನ್ನು ನೀಡಿತ್ತು. “ಶ್ರೀಲಂಕಾದಲ್ಲಿ ದೊಡ್ಡ ಅನಾಹುತವನ್ನು ಸೃಷ್ಟಿಸಲು ಉಗ್ರರು ಸಜ್ಜಾಗಿದ್ದಾರೆ. ಹೀಗಾಗಿ ಎಚ್ಚರ ವಹಿಸಿ” ಎಂದು ಭಾರತೀಯ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಆದರೆ ಭಾರತದ ಈ ಮಾಹಿತಿಯನ್ನು ಮತ್ಸರದ ಪ್ರತೀಕವೆಂದು ಶ್ರೀಲಂಕಾ ಭಾವಿಸಿತ್ತು. “ಇಸ್ಲಾಂ ಧರ್ಮ ಹಾಗೂ ಪಾಕಿಸ್ತಾನದ ವಿರುದ್ಧ ಶ್ರೀಲಂಕಾವನ್ನು ಎತ್ತಿಕಟ್ಟಲು ಭಾರತ ಇಂತಹಾ ಸುಳ್ಳು ಮಾಹಿತಿಯನ್ನು ನೀಡುತ್ತಿದೆ” ಎಂದು ಭಾವಿಸಿತ್ತು. ಇದನ್ನು ಸ್ವತಃ ಶ್ರೀಲಂಕಾದ ಅಧಿಕಾರಿಯೋರ್ವರು ಬಹಿರಂಗಪಡಿಸಿದ್ದಾರೆ. “ದ್ವೀಪರಾಷ್ಟ್ರದಲ್ಲಿ ಇಂತಹಾ ಕೃತ್ಯಗಳನ್ನು ನಡೆಸಲು ಮುಸ್ಲಿಂ ಸಂಘಟನೆಗಳು ಮುಂದಾಗಿದ್ದನ್ನು ಭಾರತ ಹೇಳಿದ್ದರೂ ನಾವು ಕಡೆಗಣಿಸಿದ್ದೇವೆ” ಎಂದು ಅವರು ಹೇಳಿದ್ದಾರೆ.

ಕಳೆದ ಎರಡು ವರ್ಷಗಳಿಂದ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಲಾಗಿತ್ತಾದರೂ ಮುಸ್ಲಿಂ ಸಮುದಾಯವನ್ನು ಇತರೆ ಧರ್ಮದ ವಿರುದ್ಧ ಎತ್ತಿಕಟ್ಟಿದಂತಾಗುತ್ತದೆ. ಈ ಮೂಲಕ ಕೋಮು ಸೌಹಾರ್ದತೆಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ತಾತ್ಸಾರ ಮನೋಭಾವನೆಯನ್ನು ಲಂಕಾ ಸರ್ಕಾರ ಅನುಸರಿಸಿತ್ತು ಎಂದು ಹೇಳಲಾಗಿದೆ. ಇದೀಗ ಭಾರತ ನೀಡಿದ್ದ ಎಚ್ಚರಿಕೆಯ ಹೊರತಾಗಿಯೂ ಅಸಡ್ಡೆ ತೋರಿರುವ ಶ್ರೀಲಂಕಾ ಪಶ್ಚಾತಾಪವನ್ನು ವ್ಯಕ್ತಪಡಿಸಿದೆ. ಮಾತ್ರವಲ್ಲದೆ “ಭಾರತ ಹೇಳಿದಂತೆ ನಾವು ಕೇಳಿರುತ್ತಿದ್ದರೆ 250 ಜೀವಗಳನ್ನು ಉಳಿಸಬಹುದಿತ್ತು” ಎಂದೂ ಹೇಳಿದ್ದಾರೆ.

ಚೀನಾ ಕೂಡಾ ತಲೆಬಾಗಿತು.?

ಭಾರತ ಸಹಿತ ಅನೇಕ ಕಡೆಗಳಲ್ಲಿ ಪಾಪ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದ ಉಗ್ರ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಿಬೇಕು ಎಂದು ಭಾರತ ಅದೆಷ್ಟೋ ವರ್ಷಗಳಿಂದ ವಿಶ್ವಸಂಸ್ಥೆಯನ್ನು ಕೇಳಿತ್ತು. ಭಾರತದ ಈ ಆಗ್ರಹಕ್ಕೆ ವಿವಿಧ ದೇಶಗಳೂ ಕೈಜೋಡಿಸಿದ್ದವು. ಆದರೆ ಚೀನಾ ಮಾತ್ರ ಈ ವಿಚಾರದಲ್ಲಿ ನೋ ಎಂದಿತ್ತು. ಮಸೂದ್ ಅಜರ್ ನನ್ನು ಜಾಗತಿಕ ಉಗ್ರನೆಂದು ಘೋಷಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ಇತ್ತೀಚೆಗೆ ಭಾರತದಲ್ಲಿ ನಡೆದ ಪುಲ್ವಾಮ ದಾಳಿಯ ಪರಿಣಾಮ ಹಾಗೂ ಈ ದಾಳಿಯ ನಂತರ ಭಾರತಕ್ಕೆ ವಿದೇಶಗಳಿಂದ ದೊರೆತ ಬೆಂಬಲ ಚೀನಾವನ್ನೂ ಕಂಗೆಡುವಂತೆ ಮಾಡಿತ್ತು. ತರಾತುರಿಯಲ್ಲಿ ಚೀನಾ ಕೂಡಾ ಭಾರತವನ್ನು ಬೆಂಬಲಿಸಲು ಮುಂದಾಗಿತ್ತು. ಸದಾ ಪಾಕಿಸ್ತಾನಕ್ಕೆ ಹಿಂಬಾಗಿಲ ಮೂಲಕ ಸಹಕಾರ ತೋರುತ್ತಿದ್ದ ಚೀನಾ ಒಲ್ಲದ ಮನಸ್ಸಿನಲ್ಲಿಯೇ ಭಾರತವನ್ನು ಬೆಂಬಲಿಸಲು ಮುಂದಾಗಿತ್ತು. ಇದರ ಪರಿಣಾಮ ಪುಲ್ವಾಮ ದಾಳಿಯ ಮಾಸ್ಟರ್ ಮೈಂಡ್ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಚೀನಾ ಭಾರತಕ್ಕೆ ಶರಣಾಗಬೇಕಾಯಿತು.

ಭಾರತ ಎಷ್ಟು ಸಹಿಷ್ಣು ರಾಷ್ಟ್ರವೆಂದರೆ ವಿನಾಕಾರಣ ತನ್ನ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೂ ಕೇಡು ಬಯಸಿಲ್ಲ. ಈವರೆಗೆ ಪಾಕಿಸ್ತಾನದ ಉಪಟಳದ ಹೊರತಾಗಿ ಯಾವ ದಾಳಿಯನ್ನೂ ಪಾಕಿಸ್ತಾನದ ವಿರುದ್ಧ ಭಾರತ ಮಾಡಿಲ್ಲ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಪಾಕಿಸ್ತಾನಕ್ಕೆ ಬಸ್ ಬಿಟ್ಟರೂ, ಪ್ರಧಾನಿ ಮೋದಿಯವರು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರ ಮಗಳ ಮದುವೆಗೆ ತೆರಳಿದ್ರೂ ಪಾಕಿಸ್ತಾನ ಮಾತ್ರ ತನ್ನ ವಿಕೃತಿಯನ್ನು ಬಿಟ್ಟಿಲ್ಲ. ಹೀಗಾಗಿಯೇ ಇಂದು ಅಮೇರಿಕಾ, ಚೀನಾ ಸಹಿತ ಜಗತ್ತಿನ ಎಲ್ಲಾ ರಾಷ್ಟ್ರಗಳೂ ಪಾಕಿಸ್ತಾನವನ್ನು ಏಕಾಂಗಿಯಾಗಿ ಬಿಟ್ಟು ಭಾರತಕ್ಕೆ ಜೈ ಎನ್ನುತ್ತಿವೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close