ಪ್ರಚಲಿತ

ಭಾರತದ ಪ್ರಧಾನಿಯ ವೇತನ ಸಿಂಗಾಪುರದ ಪ್ರಧಾನಿಗಿಂತ 51 ಪಟ್ಟು ಕಡಿಮೆ!! ತಮಿಳು ನಟ ವಿಜಯ ಜೋಸೆಫ್, ಇದರ ಬಗ್ಗೆ ಮಾತನಾಡುವಿರಾ?!!

ಮೆರ್ಸಾಲ್ ನಾಯಕನ ಮುಗಿಯದ ಕಿರಿಕ್!!!

ಇವತ್ತು ಉತ್ತರ ನೀಡಲೇ ಬೇಕಿದೆ! ಕೇವಲ ಜೋಸೆಫ್ ವಿಜಯ್ ರಂತಹರೊಬ್ಬರೇ ಅಲ್ಲ! ಬದಲಾಗಿ, ಸ್ಟಾರ್ ಗಿರಿಯ ಅಹಂಕಾರವನ್ನು ತಲೆಗೇರಿಸಿಕೊಂಡು ದೇಶದ ಪ್ರಧಾನಿಯನ್ನು ಬಹಿರಂಗವಾಗಿ ಟೀಕಿಸುವವರೆಲ್ಲ ಇವತ್ತು ಉತ್ತರಿಸಲೇಬೇಕಿದೆ!

ನೆನಪಿದೆಯಾ?! ಇದೇ ಜೋಸೆಫ್ ವಿಜಯ್ “ಮೆರ್ಸಾಲ್” ಎಂಬ ಚಿತ್ರದಲ್ಲಿ ಪ್ರಧಾನಿ ಮೋದಿಯನ್ನು ಟೀಕಿಸಿದ್ದಲ್ಲದೇ, ಹಿಂದೂಗಳ ಧಾರ್ಮಿಕ ಭಾವನೆಗಳನ್ನೂ ಟೀಕಿಸಿದ ರೀತಿಯಿದೆಯಲ್ಲವಾ?! ಉಹೂಂ! ಅಲ್ಲಿಯವರೆಗೆ, ವಿಜಯ್ ಜೋಸೆಫ್ ಎಂದರೆ ಎಲ್ಲರಿಗೂ “ಮೇರು ನಟ” ಎಂಬುದಷ್ಟೇ ಪರಿಚಯವಿದ್ದದ್ದು ಕೊನೆಗೆ “ವಿಜಯ್ ಹಿಂದೂ ವಿರೋಧಿಯೂ ಹೌದು” ಎಂದು ತಿಳಿದು ಹೋಯಿತು!

“ಸಿಂಗಾಪೂರವೇ ಬೆಸ್ಟ್!!”

ತನ್ನ ಮೆರ್ಸಾಲ್ ಸಿನಿಮಾದಲ್ಲಿ “ಭಾರತದಲ್ಲಿ ಮಠ ಮಂದಿರಗಳಿಗೆ ಹಾಕುವ ದುಡ್ಡನ್ನು ಆಸ್ಪತ್ರೆಗೆ ಹಾಕಿ! ಸಮಾಜ ಉದ್ಧಾರವಾಗುತ್ತೆ!” “ಸಿಂಗಾಪೂರ್ ನಲ್ಲಿ
ಉಚಿತವಾಗಿದೆ ವೈದ್ಯಕೀಯ ಸೌಲಭ್ಯ” “ಭಾರತದಲ್ಲಿ ಕುಳಿತು ತಿನ್ನುವುದಷ್ಟೇ ಕೆಲಸ” ಎಂಬಂತಹ ಅರ್ಥದ ಸಿನಿಮಾ ಡೈಲಾಗ್ ಗಳಿಗೆ ಅದೆಷ್ಟೋ ಜನ ಮೋದಿ ವಿರೋಧಿಗಳು ಕೇಕೆ ಹಾಕಿ ನಕ್ಕಿದ್ದರಷ್ಟೇ! ಆದರೆ, ಒಂದೈದು ದಿನಗಳೊಳಗೆ “ಸಿಂಗಾಪೂರ್ ನ ಹೇಳಿಕೆಗಳೆಲ್ಲ ಸುಳ್ಳು” ಎಂದು ಜನಕ್ಕೆ ತಿಳಿದು ಹೋಗಿತ್ತು! ಅಷ್ಟೇ ಯಾಕೆ?! ಕೊನೆ ಕೊನೆಗೆ ಜೋಸೆಫ್ ವಿಜಯ್ ರವರ ಡೈಲಾಗುಗಳ ಹಿಂದಿದ್ದ ಕಾರಣವೂ ತಿಳಿದು ಹೋಗಿತ್ತು!

ತೀರಾ ಎನ್ನುವಷ್ಟು ಮೋದಿಯನ್ನು ವಿರೋಧಿಸುವ ಮೊದಲು ಯೋಚಿಸಲೇಬೇಕಿದೆ!

ಮೋದಿಯವರ ಮೇಲೆ ಇವತ್ತಿಗೂ ಕೂಡ ಯಾವುದೇ ಭ್ರಷ್ಟಾಚಾರದ ದಾಖಲೆಗಳಿಲ್ಲ! ಇವತ್ತಿಗೂ ಕೂಡ ಯಾವುದೇ ಹಗರಣಗಳ ಕಪ್ಪು ಚುಕ್ಕೆಯಿಲ್ಲ! ಇವತ್ತಿಗೂ ಸಹ, “ಅನ್ಯಮತದವರೂ ಗೌರವಿಸುವ ಹಾಗಿರುವ ಮೋದಿ”ಯೆಂಬುವ ಅದ್ಭುತವನ್ನು ಟೀಕಿಸುವುದು ಸುಲಭವಾದರೂ, ಮರುಪ್ರಶ್ನೆ ಇಟ್ಟಾಗ ಉತ್ತರ ಕೊಡುವುದು ಅಷ್ಟೇ ಕಷ್ಟ ಎನ್ನುವುದು ನೆನಪಿರಲಿ!

ಈ ಕೆಳಗಿನ ಪಟ್ಟಿ ಇದೆಯಲ್ಲವಾ?! ಇದು, ಆಯಾ ದೇಶದ ಪ್ರಧಾನ ಮಂತ್ರಿಗಳ ವರ್ಷದ ಸಂಬಳದ ಮೊತ್ತ!

Annual salary (US Dollars)

Singapore PM: $1.6 million : 103240000.00 Rs

Per Month : 86033333.33 Rs

Australia PM: $402,000 : 25939050.00 Rs

Per Month : 2161587.5Rs

US President: $400,000 : 25810000.00 Rs

Per Month : 2150833.33Rs

Canada PM: $272,000 : 17550800.00 Rs

Per Month : 1462566.66Rs

Germany Chancellor: $256,000 : 16518400.00 Rs

Per Month : 1376533.33Rs

Japan PM: $202,000 : 13034054.00 Rs

Per Month : 1086171.16Rs

Turkey President: $197,600 : 12750140.00 Rs

Per Month : 1062511.66Rs

UK PM: $193,000 : 12453325.00 Rs

Per Month : 1037777.08Rs

Russia President: $61,200 : 3948930.00 Rs

Per Month : 329077.5 Rs

India PM: $31,200 : 2013180.00 Rs

Per Month : 167765Rs

China President: $22,000 : 1419550.00 Rs

Per Month : 118295.83Rs

ಸಿಂಗಾಪೂರ್ ಎಂಬ ದೇಶದ ಬಗ್ಗೆ ಬಹಳ ಅತ್ಯುನ್ನತವಾಗಿ ಮಾತನಾಡಿ, ಹೊಗಳಿ ಅಟ್ಟಕೇರಿಸಿದ್ದ ಜೋಸೆಫ್ ವಿಜಯ್ ರವರು ಇದಕ್ಕೇನು ಹೇಳಬಲ್ಲರು?! ಭಾರತದ ಪ್ರಧಾನ ಮಂತ್ರಿಗೆ ತಿಂಗಳ ಸಂಬಳ ಲಕ್ಷದಲ್ಲಿ ಬಂದರೆ, ಸಿಂಗಾಪೂರಿನ ಅಧ್ಯಕ್ಷನಿಗೆ ಬಿಲಿಯನ್ ಗಳಲ್ಲಿ ಸಂಬಳ! ಒಂದೂ ಭ್ರಷ್ಟಾಚಾರದ ಮೊಕದ್ದಮೆಗಳಿಲ್ಲದೇ “ನಾನು ಜನರ ಪ್ರಧಾನ ಸೇವಕ್ ” ಎಂದು ಕರ್ತವ್ಯ ನಿರ್ವಹಿಸುವ ಪ್ರಧಾನ ಮಂತ್ರಿಯನ್ನು ಬೇರೆಲ್ಲಿಯಾದರೂ ನೋಡಿದ್ದಾರಾ?! ಅದೂ ಬೇಡ! “ತನಗಾಗಿ” ಎಂಬುವುದೇನನ್ನೂ ಇಟ್ಟುಕೊಳ್ಳದೇ, ಎಲ್ಲವೂ “ರಾಷ್ಟ್ರವೇ” ಎಂಬಂತಹ ಮನಃಸ್ಥಿತಿಯನ್ನು ಹೊಂದಿದ ಭಾರತ ದೇಶದ ಪ್ರಧಾನ ಮಂತ್ರಿಯನ್ನು ಟೀಕಿಸುವ ಹಿಂದೆ “ಕಪ್ಪು ಹಣ ಕಳೆದುಕೊಂಡ” ಸೇಡಿಟ್ಟುಕೊಂಡು ಸುಖಾ ಸುಮ್ಮನೆ ವಿವಾದಗಳನ್ನು ಸೃಷ್ಟಿಸಿದ ಜೋಸೆಫ್ ವಿಜಯ್ ಇದಕ್ಕೇನೆನ್ನುತ್ತಾರೋ?!

ತನ್ನ ಪ್ರತಿಯೊಂದು ಸಿನಿಮಾಗಳಿಗೂ ಅದೆಷ್ಟೋ ಕೋಟಿಗಳನ್ನು ಎತ್ತುವ ಜೋಸೆಫ್ ವಿಜಯ್ ಒಂದು ದಿನವಾದರೂ ತನ್ನ ಬೆಳೆಸಿದ ಸಮಾಜಕ್ಕೇನಾದರೂ ಪ್ರಾಮಾಣಿಕತೆಯಿಂದ ಕೊಡುಗೆ ನೀಡಿದ್ದಾರಾ?! ಅನಿವಾರ್ಯ ಬಿದ್ದಾಗ, ಪೋಸು ಕೊಟ್ಟು ಪ್ರಚಾರ ಗಿಟ್ಟಿಸುವುದರಲ್ಲಿ ನಿರತವಾಗುವ ಸ್ಟಾರ್ ಗಳು ಬಾಚುವುದು ಕೋಟಿಯಾದರೂ, ಟೀಕಿಸುವುದು ದಕ್ಷ ಪ್ರಧಾನಿಯನ್ನು ಎನ್ನಿಸಿದಾಗ ನಿಜಕ್ಕೂ ಅಚ್ಚರಿಯಾಗುತ್ತದೆ! ಅಷ್ಟೇ, ಅಸಹ್ಯವೂ ಎನ್ನಿಸಿಬಿಡುತ್ತದೆ!

ಕೇವಲ, ಜೋಸೆಫ್ ಮಾತ್ರವಲ್ಲ!

ನಮ್ಮ ಮಧ್ಯೆ ಅದೆಷ್ಟೋ ಜನರಿದ್ದಾರೆ! ಒಬ್ಬ ವ್ಯಕ್ತಿ ಭ್ರಷ್ಟಾಚಾರ ರಹಿತವಾದ ದೇಶವನ್ನು ಕಟ್ಟುತ್ತೇನೆಂದು ಹೊರಟು ನಿಂತಾಗ ಅದೆಷ್ಟೋ ಅಡೆ ತಡೆಗಳು ಬರುವಂತೆ, ಇವತ್ತಿನ ಸಮಾಜದಲ್ಲಿರುವ ಇಂತಹ ಸೋ ಕಾಲ್ಡ್ ಹೀರೋಗಳು ಮೋದಿಯ ವರ್ಚಸ್ಸನ್ನು ಇನ್ನಷ್ಟು ಹೆಚ್ಚಿಸುತ್ತವೆಯೇ ಹೊರತು ಬೇರಿನ್ನೇನಲ್ಲ!

– ಪೃಥು ಅಗ್ನಿಹೋತ್ರಿ

Tags

Related Articles

Close