ಪ್ರಚಲಿತ

ಬ್ರೇಕಿಂಗ್! ರಾಹುಲ್, ಸೋನಿಯಾಗೆ ಸುಪ್ರೀಂ ಶಾಕ್.! ಬಿ.ಎಸ್.ವೈ. ಕೇಸ್ ಫುಲ್ ಕ್ಲೋಸ್.!ನ್ಯಾಷನಲ್ ಹೆರಾಲ್ಡ್ ತಂತು ಬಂಧನದ ಭೀತಿ.!

ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಜೈಲುಕಂಬಿ ಎಣಿಸುವಂತೆ ಮಾಡಿಯೇ ಸಿದ್ಧ ಎಂದು ಜಿದ್ದಿಗೆ ಬಿದ್ದಿರುವ ಭಾರತೀಯ ಜನತಾ ಪಕ್ಷದ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ ಮುಖದಲ್ಲಿ ಇಂದು ಸಂತಸದ ಛಾಯೆ ಎದ್ದು ಕಾಣುತ್ತಿದ್ದರೆ ಇಂದಾದರೂ ರಿಲೀಫ್ ಸಿಗಬಹುದು ಎಂದುಕೊಂಡಿದ್ದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಮೊಗದಲ್ಲಿ ಆತಂಕದ ಛಾಯೆ ಕಾಣುತ್ತಿತ್ತು.

ಹೌದು, ಇಂದು ಸುಪ್ರೀಂ ಕೋರ್ಟ್ ಸೋನಿಯಾ ಹಾಗೂ ರಾಹುಲ್ ವಿಚಾರವಾಗಿ ಖಡಕ್ ಆದೇಶವನ್ನು ನೀಡಿತ್ತು. ನ್ಯಾಷನಲ್ ಹೆರಾಲ್ಡ್ ಭ್ರಷ್ಟಾಚಾರ ಪ್ರಕರಣದಲ್ಲಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಕೇಸ್ ದಾಖಲಿಸಿದ್ದರು. ಈ ವಿಚಾರವಾಗಿ ಈ ಉಭಯ ನಾಯಕರು ಇಂದಿಗೂ ಜಾಮೀನಿನ ಮೇಲೆ ತಿರುಗಾಡುತ್ತಿದ್ದಾರೆ.

ಇಂದು ಸುಪ್ರೀಂ ಕೋರ್ಟ್‍ನಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು. ಕೇಸ್ ವಜಾಗೊಳಿಸಿ ಎಂದು ಸೋನಿಯಾ ಹಾಗೂ ರಾಹುಲ್ ಅರ್ಜಿ ಸಲ್ಲಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ಮಾತ್ರ ಈ ಇಬ್ಬರೂ ನಾಯಕರಿಗೆ ಚಾಟಿ ಬೀಸಿದೆ. ಯಾವುದೇ ಕಾರಣಕ್ಕೂ ಕೇಸ್ ವಜಾ ಮಾಡುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಸೂಕ್ತವಾದ ದಾಖಲೆಗಳನ್ನು ಸಲ್ಲಿಸಿ. ತೆರಿಗೆ ಹಾಗೂ ಪತ್ರಿಕೆಯ ಲೆಕ್ಕಾಚಾರಗಳನ್ನು ಕೋರ್ಟ್ ಮುಂದಿಡಿ. ಅದರ ಹೊರತಾಗಿ ಕೇಸ್ ಕ್ಲೋಸ್ ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

Image result for supreme court

ಈ ಮಧ್ಯೆ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಮೇಲಿದ್ದ ಎಲ್ಲಾ ಪ್ರಕರಣಗಳನ್ನೂ ಸುಪ್ರೀಂ ವಜಾ ಮಾಡಿದೆ. ಡಿನೋಟಿಫಿಕೇಶನ್ ಹಗರಣ ಎಂಬ ಕೇಸ್ ಈ ಹಿಂದೆ ದಾಖಲಾಗಿದ್ದು ಈ ಕೇಸ್ ಇಂದು ವಜಾಗೊಳಿಸಿ ಸುಪ್ರೀಂ ಆದೇಶಿಸಿದೆ.

ನಾವೇನೂ ತಪ್ಪೇ ಮಾಡಿಲ್ಲ ಎಂಬಂತೆ ನಾಟಕ ಮಾಡುತ್ತಿರುವ ಈ ಉಭಯ ನಾಯಕರಿಗೆ ಇದೀಗ ಮತ್ತೆ ಬಂಧನದ ಕಾರ್ಮೋಡ ಆವರಿಸಿದೆ. ಈ ಹಿಂದೆ ಸ್ವಾಮಿ ಕೂಡಾ ಈ ನಾಯಕರನ್ನು ಜೈಲಿಗಟ್ಟುತ್ತೇನೆಂದು ಚಾಲೆಂಜ್ ಹಾಕಿದ್ದರು. ಇದೀಗ ಮಹಾ ಚುನಾವಣೆ ಸಮೀಪಿಸುತ್ತಿರುವಾಗಲೇ ಬಂಧನವಾಗುತ್ತಾ ಎಂಬ ಭೀತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಬಳಿ ಕಾಡುತ್ತಿದ್ದರೆ ಯಡಿಯೂರಪ್ಪನವರಿಗೆ ಅತಿದೊಡ್ಡ ಜಯ ಸಿಕ್ಕಿದ್ದಂತು ಸುಳ್ಳಲ್ಲ.

-ಏಕಲವ್ಯ

Tags

Related Articles

FOR DAILY ALERTS
 
FOR DAILY ALERTS
 
Close