ಪ್ರಚಲಿತ

ಬ್ರೇಕಿಂಗ್! ಭಾರತಕ್ಕೆ ಕರೆತಂದ ಆಗಸ್ತಾ ವೆಸ್ಟ್ ಲ್ಯಾಂಡ್ ಆರೋಪಿಯ ವಕೀಲ ಕಾಂಗ್ರೆಸ್ ನಾಯಕ.! ಬಯಲಾಯ್ತು ಕಾಂಗ್ರೆಸ್ಸಿನ ಕಳ್ಳಮುಖ.!

ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಸಹಿತ ಕಾಂಗ್ರೆಸ್ಸಿನ ಅನೇಕ ಮುಖಂಡರ ಎದೆಯಲ್ಲಿ ನಡುಕ ಉಂಟು ಮಾಡಲು ಕಾರಣವಾಗಿರುವ ಆಗಸ್ತಾ ವೆಸ್ಟ್ ಲ್ಯಾಂಡ್ ಮಹಾ ಹಗರಣದ ಆರೋಪಿ ಕ್ರಿಶ್ಚಿಯನ್ ಮಿಷೆಲ್ ಎಂಬಾತನ ಬಂಧನದ ವಿಚಾರಕ್ಕೆ ಇದೀಗ ಮಹತ್ವದ ತಿರುವು ದೊರೆತಿದೆ. ಭಾರತದಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಮಹಾ ಭ್ರಷ್ಟಾಚಾರ ಪ್ರಕರಣದ ಆರೋಪಿಯನ್ನು ಗಲ್ಫ್ ರಾಷ್ಟ್ರ ಭಾರತಕ್ಕೆ ಹಸ್ತಾಂತರ ಮಾಡಿದ್ದ ಮರುದಿನವೇ ಮತ್ತೊಂದು ಸ್ಪೋಟಕ ಸುದ್ಧಿ ಹೊರಬಿದ್ದಿದೆ.

ಗಲ್ಫ್ ರಾಷ್ಟ್ರದಿಂದ ಭಾರತಕ್ಕೆ ಆರೋಪಿ ಕ್ರಿಶ್ಚಿಯನ್ ಮಿಷೆಲ್ ಎಂಬಾತನನ್ನು ಹಸ್ತಾಂತರ ಮಾಡಿದ ಕೆಲವೇ ಕ್ಷಣಗಳಲ್ಲಿ ಕಾಂಗ್ರೆಸ್ ಪಕ್ಷದ ಮತ್ತೊಂದು ಮುಖ ಬೆತ್ತಲಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಆಗಸ್ತಾ ವೆಸ್ಟ್ ಲ್ಯಾಂಡ್ ಹಗರಣದ ಆರೋಪಿ ಕ್ರಿಶ್ಚಿಯನ್ ಮಿಷೆಲ್ ಎಂಬಾತನ ಪರವಾಗಿ ವಾದಿಸಲು ಈಗ ಕಾಂಗ್ರೆಸ್ ನಾಯಕ ಮುಂದಾಗಿದ್ದಾನೆ.

ರಾಷ್ಟ್ರೀಯ ಯುವ ಕಾಂಗ್ರೆಸ್ಸಿನ ಕಾನೂನು ಸಲಹೆಗಾರ ಅಲ್ಜೋ ಕೆ.ಜೋಸೆಫ್ ಎಂಬಾತ ಈಗ ಆಗಸ್ತಾ ವೆಸ್ಟ್ ಲ್ಯಾಂಡ್ ಹಗರಣದ ಪ್ರಮುಖ ಆರೋಪಿಯ ಪರವಾಗಿ ವಾದಿಸಲು ಮುಂದಾಗಿರುವ ವ್ಯಕ್ತಿಯಾಗಿದ್ದಾನೆ. ಈತ ಕಾಂಗ್ರೆಸ್ ಪಕ್ಷದ ನಾಯಕನಾಗಿದ್ದು ಇದೀಗ ಯುವ ಕಾಂಗ್ರೆಸ್ ಪಕ್ಷದ ಕಾನೂನು ಸಲಹೆಗಾರನಾಗಿದ್ದಾನೆ. ಆಗಸ್ತಾ ವೆಸ್ಟ್ ಲ್ಯಾಂಡ್ ಹಗರಣ ನಡೆದೇ ಇಲ್ಲ ಹಾಗೂ ಈ ಪ್ರಕರಣದಲ್ಲಿ ತನ್ನ ಪಾತ್ರವೇ ಇಲ್ಲ ಎಂದು ವಾದಿಸುತ್ತಿದ್ದ ಕಾಂಗ್ರೆಸ್ಸಿನ ಅಸಲಿ ಮುಖ ಇದೀಗ ಅನಾವರಣಗೊಂಡಿದೆ.

ಆಗಸ್ತಾ ವೆಸ್ಟ್ ಲ್ಯಾಂಡ್ ಎಂಬ ಹೆಲಿಕಾಫ್ಟರ್ ತಯಾರಿಸುವ ಕಂಪನಿಯಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರ ಲಂಚ ಸ್ವೀಕಾರ ಮಾಡಿತ್ತು. ಈ ಬಗ್ಗೆ ಭಾರತದ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿತ್ತು. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಬ್ಬೊಬ್ಬ ಕಳ್ಳರನ್ನೂ ಹೆಡೆಮುರಿ ಕಟ್ಟಲಾಗಿತ್ತು. ಈ ಸಾಲಿನಲ್ಲಿ ಆಗಸ್ತಾ ವೆಸ್ಟ್ ಲ್ಯಾಂಡ್ ಪ್ರಕರಣವೂ ಕೂಡಾ. ಇದೀಗ ಗಲ್ಫ್ ರಾಷ್ಟ್ರದಲ್ಲಿ ಅಡಗಿದ್ದ ಪ್ರಮುಖ ಆರೋಪಿಯನ್ನು ಪ್ರಧಾನಿ ಮೋದಿಯವರ ಸತತ ಪ್ರಯತ್ನದಿಂದ ಆರೋಪಿಯನ್ನು ಗಲ್ಫ್ ರಾಷ್ಟ್ರ ಹಸ್ತಾಂತರ ಮಾಡಿದ್ದು ಈತನಿಗೆ ಕಾಂಗ್ರೆಸ್ ಬೆಂಬಲ ನೀಡಲಿದೆ ಹಾಗೂ ಈತನ ಪರವಾಗಿ ವಾದಿಸಲಿದೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದೆ. ಈ ಮೂಲಕ ರಾಷ್ಟ್ರದ ಜನತೆಯ ಎದುರು ತನ್ನ ಭ್ರಷ್ಟ ಮುಖವನ್ನು ಬೆತ್ತಲುಗೊಳಿಸಿದೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close