ಪ್ರಚಲಿತ

ಬಿಜೆಪಿ ಹೈಕಮಾಂಡ್ ಸಿಡಿಸಿದ ಬಾಂಬ್‌ಗೆ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ! ಡಿಸೆಂಬರ್ ತಿಂಗಳಲ್ಲೇ ನಡೆಯಲಿದೆ ರಾಜಕೀಯ “ಭೂಕಂಪ”!!!

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸೇರಿಕೊಂಡು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿದ್ದರು ಮತ್ತು ಹೇಗೋ 6 ತಿಂಗಳು ಕಾಲ ಕಳೆದುಬಿಟ್ಟರು. ತಮ್ಮ ತಮ್ಮಲ್ಲೇ ಅನೇಕ ವೈಮನಸ್ಸು ಭಿನ್ನಾಭಿಪ್ರಾಯ ಅಸಮಧಾನಗಳಿದ್ದರೂ ಕೂಡ ಕೆಲ ನಾಯಕರ ಪ್ರಯತ್ನದಿಂದ ಕುಮಾರಸ್ವಾಮಿ ಸರಕಾರ ಗಟ್ಟಿಯಾಗಿ ಬೇರೂರಿಬಿಟ್ಟಿತು. ಇತ್ತ ಬಿಜೆಪಿಯಿಂದ ಆಪರೇಷನ್ ಕಮಲ ನಡೆಯುತ್ತದೆ ಎಂಬ ಸುದ್ದಿ ಸಮ್ಮಿಶ್ರ ಸರಕಾರಕ್ಕೆ ಭಯ ಹುಟ್ಟಿಸಿದರೆ ಮತ್ತೊಂದೆಡೆ ತಮ್ಮ ಪಕ್ಷದ ನಾಯಕರ ಕಿತ್ತಾಟವೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಭಾರೀ ತಲೆನೋವು ಬರುವಂತೆ ಮಾಡಿದೆ. ರಾಜ್ಯ ಬಿಜೆಪಿ ಮಾತ್ರ ಈವರೆಗೆ ಸರಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಪ್ರಬಲವಾಗಿ ಹೇಳಿತ್ತಾದರೂ ಯಾವುದೇ ಬದಲಾವಣೆ ಕಂಡುಬಂದಿರಲಿಲ್ಲ. ಆದರೆ ಇದೀಗ ಸ್ವತಃ ಬಜೆಪಿ ಹೈಕಮಾಂಡ್ ಅಂದರೆ ರಾಜ್ಯ ಬಿಜೆಪಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಪ್ರಕಾಶ್ ಜಾವ್ಡೇಕರ್ ಅವರು ಸಿಡಿಸಿದ ಒಂದೇ ಒಂದು ಮಾತಿಗೆ ಇಲ್ಲಿಯವರೆಗಿನ ಎಲ್ಲಾ ಅಡೆತಡೆಗಳನ್ನು ಮೀರಿ ಸರಕಾರ ಭದ್ರಗೊಳಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರು ಅಕ್ಷರಶಃ ಕಂಗಾಲಾಗಿದ್ದಾರೆ. ಇದೇ ತಿಂಗಳ ಅಂದರೆ ಡಿಸೆಂಬರ್ ತಿಂಗಳಲ್ಲೇ ರಾಜ್ಯ ಮೈತ್ರಿ ಸರಕಾರ ಅಂತ್ಯ ಕಾಣಲಿದೆ ಎಂಬ ಸ್ಫೋಟಕ ಹೇಳಿಕೆ ಇಡೀ ರಾಜ್ಯ ರಾಜಕಾರಣದಲ್ಲೇ ಒಂದು ರೀತಿಯ ಸಂಚಲನ ಮೂಡಿಸಿದೆ.!

ರಾಜ್ಯ ಸರಕಾರಕ್ಕೆ ಕಾದಿದೆ ಮಹಾ ಕಂಟಕ!

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣೆಗೂ ಮೊದಲು ಯಾವ ರೀತಿ ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದರು ಎಂಬುದನ್ನು ಇಡೀ ರಾಜ್ಯವೇ ಕಂಡಿದೆ ಮಾತ್ರವಲ್ಲದೆ ಸದ್ಯ ರಾಜ್ಯ ರಾಜಕಾರಣದಲ್ಲಿ ಏನಾಗುತ್ತಿದೆ ಎಂಬುದನ್ನು ಕೂಡ ರಾಜ್ಯದ ಜನತೆ ನೋಡುತ್ತಿದ್ದಾರೆ. ಮೈತ್ರಿ ಸರಕಾರ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ ಎಂಬ ಸತ್ಯಾಂಶ ಸ್ವತಃ ಈ ಎರಡೂ ಪಕ್ಷಗಳ ನಾಯಕರಿಗೆ ಗೊತ್ತಿದೆಆದರೂ ಬಹಿರಂಗವಾಗಿ ಯಾರೂ ತೋರ್ಪಡಿಸುತ್ತಿಲ್ಲ. ಆದರೆ ಇದೀಗ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಅವರು ಸಿಡಿಸಿರುವ ಬಾಂಬ್‌ಗೆ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಯಾಕೆಂದರೆ ಜಾವ್ಡೇಕರ್ ಅವರು ಹೇಳಿರುವ ಪ್ರಕಾರ, ಈ ತಿಂಗಳು ಮುಗಿಯುವುದರ ಒಳಗಾಗಿ ರಾಜ್ಯ ಸರಕಾರದ ಪತನವಾಗಲಿದೆ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿಕೊಂಡಿದ್ದಾರೆ. ಈವರೆಗೆ ರಾಜ್ಯ ಸರಕಾರದ ವಿಚಾರದಲ್ಲಾಗಲಿ ಅಥವಾ ಮೈತ್ರಿ ಸರಕಾರದ ವಿಚಾರದಲ್ಲಾಗಲಿ ಬಿಜೆಪಿ ಹೈಕಮಾಂಡ್ ಯಾವುದೇ ಹಸ್ತಕ್ಷೇಪ ಮಾಡಿರಲಿಲ್ಲ. ಆದರೆ ಇದೀಗ ಜಾವ್ಡೇಕರ್ ಅವರ ಹೇಳಿಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿನ್ನು ಮಾತ್ರವಲ್ಲದೆ ಕಾಂಗ್ರೆಸ್ ಮತ್ತು ಜೆಡಿಎಸ್‌ನ ನಾಯಕರ ನಿದ್ದೆಗೆಡಿಸಿದೆ.!

ರಾಜ್ಯ ಬಿಜೆಪಿ ನಾಯಕರು ಈ ಬಗ್ಗೆ ಯಾವುದೇ ಬಹಿರಂಗ ಹೇಳಿಕೆ ನೀಡುತ್ತಿಲ್ಲವಾದರೂ ರಾಜ್ಯ ಸರಕಾರ ಪತನವಾದರೆ ಬಿಜೆಪಿ ಸರಕಾರ ರಚನೆ ಮಾಡಲಿದೆ ಎಂದು ಹೇಳುತ್ತಿದ್ದಾರೆ. ಆಪರೇಷನ್ ಕಮಲ ನಡೆಯುತ್ತಿದೆ ಎಂದು ಕುಮಾರಸ್ವಾಮಿ ಮತ್ತು ಇತರ ನಾಯಕರು ಹೇಳುತ್ತಿದ್ದಾರೆ, ಆದರೆ ಅದರ ಅವಶ್ಯಕತೆ ನಮಗಿಲ್ಲ. ಮೈತ್ರಿ ಕೂಟ ಸದ್ಯದಲ್ಲೇ ಅಂತ್ಯಗೊಳ್ಳಲಿದೆ, ಆ ನಂತರದಲ್ಲಿ ನಾವು ಸರಕಾರ ರಚನೆ ಮಾಡುತ್ತೇವೆ ಎಂದು ಬಿಜೆಪಿ ನಾಯಕ ಆರ್ ಅಶೋಕ್ ಹೇಳಿದ್ದಾರೆ.!

ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ?

ಮುಂದಿನ ಲೋಕಸಭಾ ಚುನಾವಣೆಯ ಮೊದಲು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ರಾಜ್ಯ ಬಿಜೆಪಿ ನಾಯಕರು ಕಾಯುತ್ತಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ಮಾತ್ರ ಈವರೆಗೆ ಯಾವುದೇ ಹೇಳಿಕೆ ಅಥವಾ ಆಪರೇಷನ್ ನಡೆಸಿಲ್ಲ.ಆದರೆ ಇದೀಗ ಬಿಜೆಪಿ ಹೈಕಮಾಂಡ್ ನಾಯಕರಲ್ಲಿ ಒಬ್ಬರಾದ ಪ್ರಕಾಶ್ ಜಾವ್ಡೇಕರ್ ಅವರ ಮಾತಿಗೆ ರಾಜ್ಯದಲ್ಲಿ ಹೊಸ ಸಂಚಲನ ಉಂಟಾಗಿದೆ. ರಾಜ್ಯ ಬಿಜೆಪಿ ನಾಯಕರಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಬೀಗುತ್ತಿದ್ದ ಮೈತ್ರಿ ಸರಕಾರದನಾಯಕರು ಇದೀಗ ಕಂಗಾಲಾಗಿದ್ದಾರೆ. ಒಂದೆಡೆ ಪಕ್ಷದ ಕೆಲ ಮುಖಂಡರು ಸಚಿವ ಸ್ಥಾನ ನೀಡದೇ ಇದ್ದರೆ ರಾಜೀನಾಮೆ ನೀಡುವುದಾಗಿ ಹೇಳಿಕೊಂಡಿದ್ದಾರೆ ಮಾತ್ರವಲ್ಲದೆ ಪಕ್ಷ ತೊರೆಯುವ ಹಂತಕ್ಕೆ ತಲುಪಿದ್ದಾರೆ. ಆದರೂ ಹೇಗೋ ಇನ್ನೂ ಉಳಿಸಿಕೊಂಡಿರುವ ನಾಯಕರು ಯಾವಾಗ ಪಕ್ಷ ತೊರೆಯುತ್ತಾರೋ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಪ್ರಕಾಶ್ ಜಾವ್ಡೇಕರ್ ಅವರ ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ಹೊಸ ಅಲೆ ಸೃಷ್ಟಿಯಾಗಿದ್ದು, ಅವರ ಮಾತಿನಂತೆ ನಡೆದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಗ್ಯಾರಂಟಿ.!!

–ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close