ಪ್ರಚಲಿತ

ಬಿಗ್ ಬ್ರೇಕಿಂಗ್!!! ಮೋದಿಯನ್ನು ನಿಂದಿಸಿದ್ದಕ್ಕಾಗಿ ಹಿರಿಯ ನಾಯಕನನ್ನು ಅಮಾನತುಗೊಳಿಸಿದ ಕಾಂಗ್ರೆಸ್!!

ಎಲ್ಲಾ ಚುನಾವಣೆಗಾಗಿ ಬಿಡಿ!

ಗುಜರಾತ್ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರದ ಅಂತಿಮ ದಿನದಂದೇ, ಕಾಂಗ‌್ರೆಸ್ ಹಾಗೂ ಬಿಜೆಪಿಯ ಸಮರ ತಾರಕಕ್ಕೇರಿದ ಬೆನ್ನಲ್ಲೇ, ಹಿರಿಯ ಕಾಂಗ‌್ರೆಸ್ಸಿಗ ಮಣಿಶಂಕರ್ ಅಯ್ಯರ್ ಪ್ರಧಾನಿ ಮೋದಿಯನ್ನು “ನೀಚ ಕುಲ” ಎಂದು ಟೀಕಿಸಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು ಗೊತ್ತೇ ಇದೆ!!

ಅಲ್ಲದೇ, ಕಾಂಗ‌್ರೆಸ್ ಉಪಾಧ್ಯಕ್ಷ ರಾದ ರಾಹುಲ್ ಗಾಂಧಿ ಮೊಟ್ಟ ಮೊದಲ ಬಾರಿಗೆ ಚುನಾವಣೆಗೆ ಪ್ರಯೋಜನವಾಗಬಹುದೆಂದು ಅರಿತು ಅಯ್ಯರ್ ರವರ ನಿಂದನೆಯನ್ನು ವಿರೋಧಿಸಿದ್ದರು! ಆದರೆ, ಈಗ ಪ್ರಧಾನಿಯನ್ನು ವಿರೋಧಿಸಿದ್ದಕ್ಕೆ ಭಾರೀ ಬೆಲೆಯನ್ನೆ ತೆತ್ತಿದ್ದಾರೆ ಮಣಿಶಂಕರ್ ಅಯ್ಯರ್!

Related image

ಅಮಾನತುಗೊಂಡ ಮಣಿಶಂಕರ್ ಅಯ್ಯರ್!!!

ಹೌದು!! ಕಾಂಗ‌್ರೆಸ್ ಪಕ್ಷದಿಂದಲೇ ಉಚ್ಛಾಟಿಸಲ್ಪಟ್ಟಿದ್ದಾರೆ ಅಯ್ಯರ್! ಅಯ್ಯರ್ ರವರ ಹೇಳಿಕೆಗೆ ಕಾಂಗ‌್ರೆಸ್ ಸಮರ್ಥನೆಯನ್ನು ಕೇಳಿದಾಗ, “ನನಗೆ ಮೋದಿಯ ಜಾತಿ, ಕುಲ ಗೊತ್ತಿಲ್ಲ. ನಾನು ಅವರು ನೀಚ ಜಾತಿಯವರೆಂದು ಹೇಳಿಲ್ಲ. ಮಾತನ್ನು ಬದಲಾಯಿಸಿ ತಿರುಚಲಾಗಿದೆ! ಪದಬಳಕೆಯಿಂದ ನೋವಾಗಿದ್ದರೆ ಕ್ಷಮೆ ಇರಲಿ!” ಎಂದರೂ ಕಾಂಗ್ರೆಸ್ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ!

ಪ್ರಾಥಮಿಕ ಸದಸ್ಯತ್ವವನ್ನು ಅಯ್ಯರ್ ಕಳೆದುಕೊಂಡಿದ್ದು, ಶೋಕಾಸ್ ನೋಟೀಸ್ ಜಾರಿ ಮಾಡಲಾಗಿದೆ! ಸದ್ಯಕ್ಕೆ ಕಾಂಗ್ರೆಸ್ ವಲಯದಲ್ಲಿ ಈ ಹೇಳಿಕೆ ಭಾರೀ ವಿವಾದವನ್ನು ಸೃಷ್ಟಿಸಿದ್ದು ಅಯ್ಯರ್ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿದ‌್ದಾರೆ.

ಎಲ್ಲಾ ಚುನಾವಣೆಗಾಗಿ!!!

ಪಾಪ! ಕಾಂಗ್ರೆಸ್ ನವರಿಗೀಗ ಪೇಚಾಟಕ್ಕಿಟ್ಟುಕೊಂಡಿದೆ! ಮಣಿಶಂಕರ್ ನನ್ನು ಇಟ್ಟುಕೊಂಡರೆ ‘ಜಾತಿಗೆ ಅವಮಾನ” ಮಾಡಿದ್ದರ ಮೇಲೆ
ಚುನಾವಣೆಯ ಮೇಲೆ ಪ್ರಭಾವ!! ಇಲ್ಲದೇ ಹೋದರೆ, ಹಿರಿಯ ನಾಯಕನನ್ನು ಕಳೆದುಕೊಂಡು ಪಕ್ಷದ ಉಳಿದವರ ಮುನಿಸಿಗೆ ಕಾರಣವಾಗುವ ಭೀತಿ!

ಏನಾದರಾಗಲಿ ಎಂದು ಅತ್ಯಂತ ಕಠಿಣ ನಿರ್ಧಾರ ತೆಗೆದುಕೊಂಡಿರುವ ಕಾಂಗ್ರೆಸ್ ಸದ್ಯಕ್ಕೆ ಸಾರ್ವಜನಿಕರ ಆಕ್ರೋಶದಿಂದ ಬಚಾವಾಗಲಿದೆ!

– ಪೃಥು ಅಗ್ನಿಹೋತ್ರಿ

Tags

Related Articles

Close