ಪ್ರಚಲಿತ

ಬಿಗ್ ಬ್ರೇಕಿಂಗ್: ದೀಪಕ್ ರಾವ್ ಹತ್ಯೆಗೈದ ನಟೋರಿಯಸ್ ಗ್ಯಾಂಗ್‍ನ ಮುಖಂಡನ ಬರ್ಬರ ಹತ್ಯೆ.. ಕರಾವಳಿಯಲ್ಲಿ ಮತ್ತೆ ಹರಿದ ನೆತ್ತರು!!

ಹಿಂದೂ ಸಂಘಟನೆಯ ಕಾರ್ಯಕರ್ತ ಮಂಗಳೂರಿನ ಕಾಟಿಪಳ್ಳದ ದೀಪಕ್ ರಾವ್ ಎಂಬ ಅಮಾಯಕನನ್ನು ಹತ್ಯೆ ಮಾಡಿ 10 ದಿನಗಳು ಕಳೆದಿದೆ ಅಷ್ಟೇ. ಈಗ ಆತನನ್ನು ಹಾಡಹಗಲೇ ಬರ್ಬರವಾಗಿ ಹತ್ಯೆಗೈದ ತಂಡದ ಅತಿ ದೊಡ್ಡ ತಿಮಿಂಗಿಲವೊಂದು ಧರೆಗುರುಳಿದೆ. ಹಲವಾರು ಕುಕೃತ್ಯಗಳಿಂದ ಹೆಸರಾಗಿದ್ದ ಕುಖ್ಯಾತ ರೌಡಿಯನ್ನು ಕೊಚ್ಚಿ ಕೊಲೆ ಮಾಡಲಾಗಿದೆ.

ದೀಪಕ್ ರಾವ್‍ನ ಹತ್ಯೆ ಮಾಡಿದ್ದ ಕಿರಾತಕರು….!

ಜನವರಿ 3.ರ ಮಧ್ಯಾಹ್ನ. ಇಡೀ ರಾಜ್ಯವೇ ಅಂದು ಬೆಚ್ಚಿ ಬಿದ್ದಿತ್ತು. ಹಾಡಹಗಲೇ ಹಿಂದು ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ಎಂಬಾತನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಯಾವಾಗ ದೀಪಕ್ ರಾವ್ ಕೊಲೆಗೀಡಾದ ಮಾಹಿತಿ ಸಿಕ್ಕಿತೋ ಅಂದೇ ಕರಾವಳಿ ಕೆಂಡವಾಗಿತ್ತು. ಮಾತ್ರವಲ್ಲದೆ ಮತ್ತೆ ಗಲಭೆಗಳು ಏಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿತ್ತು. ಕೆಲವು ರಾಜಕೀಯ ಕುತಂತ್ರಗಳಿಂದ ಆತನ ಶವ ಯಾತ್ರೆಯನ್ನೂ ಮಾಡಲಾಗದೆ ನಾಜೂಕಾಗಿ ಕಳ್ಳ ಮಾರ್ಗದ ಮೂಲಕ ಆಸ್ಪತ್ರೆಯಿಂದ ಮನೆಗೆ ಸಾಗಿಸಲಾಗಿತ್ತು.

ಆ ಕೂಡಲೇ ಕರ್ತವ್ಯ ನಿರತರಾಗಿದ್ದ ಪೊಲೀಸರು ಸ್ಥಳೀಯ ಹಿಂದೂ ಮುಖಂಡರ ಸಹಾಯದಿಂದ ಆ ಕಿರಾತಕರ ಕಾರನ್ನು ಛೇಸ್ ಮಾಡಿ ಆ ಕೂಡಲೇ ಆರೋಪಿಗಳನ್ನು ಬಂಧಿಸಲಾಗಿತ್ತು. ನಂತರ ವಿಚಾರಣೆ ವೇಳೆ ದೀಪಕ್ ರಾವ್‍ನನ್ನು ಹತ್ಯೆ ಮಾಡಿದ್ದ ಈ ತಂಡ ಮಂಗಳೂರಿನ ಟಾರ್ಗೆಟ್ ಗ್ರೂಪ್ ಎಂಬ ಮಾಹಿತಿ ಹೊರಬಿದ್ದಿತ್ತು.

ಟಾರ್ಗೆಟ್ ಗ್ರೂಪ್‍ನ ಇಲಿಯಾಸ್ ಖಲ್ಲಾಸ್…

ದೀಪಕ್ ರಾವ್‍ನ ಹತ್ಯೆ ಮಾಡಿದ್ದ ಆರೋಪಿಗಳಿಂದ ತಿಳಿದು ಬಂದ ಮಾಹಿತಿಯ ಪ್ರಕಾರ ಟಾರ್ಗೆಟ್ ಗ್ರೂಪ್‍ನ ತಂಡದಿಂದ ದೀಪಕ್ ರಾವ್‍ನ ಹತ್ಯೆ ಮಾಡಲಾಗಿದೆ. ಇಂದು ಬೆಳಿಗ್ಗೆ ಅದೇ ಟಾರ್ಗೆಟ್ ಗ್ರೂಪ್‍ನ ನಟೋರಿಯಸ್ ರೌಡಿ ಇಲಿಯಾಸ್ ಎಂಬಾತನ ಬರ್ಬರ ಹತ್ಯೆ ಮಾಡಲಾಗಿದೆ. ಆತನ ನಿವಾಸವಾದ ಜಪ್ಪಿನಮೊಗರಿನಲ್ಲಿಯೇ ಹತ್ಯೆ ಗೈಯ್ಯಲಾಗಿದೆ. ಆತ ಮನೆಯಲ್ಲಿ ಮಲಗಿರುವಾಗಲೇ ಅಂದರೆ ಇಂದು ಬೆಳಿಗ್ಗೆ 9 ಗಂಟೆಗೆ ಆತನ ಮನೆಗೆ ನುಗ್ಗಿದ ಹಂತಕರು ಆತನನ್ನು ತಲವಾರುಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಮುಸ್ಲಿಮರಿಂದಲೇ ಹತ್ಯೆ…

ಟಾರ್ಗೆಟ್ ಗ್ರೂಪ್‍ನ ಮುಖ್ಯಸ್ಥ ರೌಡಿ ಇಲಿಯಾಸ್‍ನನ್ನು ಆತನ ಕೋಮಿನವರಾದ ಮುಸ್ಲಿಮರೇ ಹತ್ಯೆಗೈದಿದ್ದಾರೆ. ಇಲಿಯಾಸ್ ಹತ್ಯೆಗೆ ಕೋಮು ಬಣ್ಣ ಬಳಿಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿತ್ತು. ದೀಪಕ್ ರಾವ್ ನ ಹತ್ಯೆಯ ಪ್ರತೀಕಾರ ಎಂಬ ಪಟ್ಟ ಸಿಗುವ ಸೂಚನೆ ಅದಾಗಲೇ ಬಿತ್ತರಿಸತೊಡಗಿತು. ಆದರೆ ಇಲಿಯಾಸ್ ಹಂತಕರು ಆತನ ಕೋಮಿನ ಮುಸಲ್ಮಾನ ಯುವಕರೇ ಎಂದು ಗೊತ್ತಾಗಲು ಹೆಚ್ಚು ಸಮಯ ಬೇಕಾಗಿರಲಿಲ್ಲ.

ನಿನ್ನೆ ಜೈಲಿನಿಂದ ಬಿಡುಗಡೆಯಾಗಿದ್ದ-ಮನೆಗೆ ಬಂದು ತೆಪ್ಪಗೆ ಮಲಗಿದ್ದ…

ಗ್ರಹಚಾರ ನೆಟ್ಟಗಿರಲಿಲ್ಲ ಅಂತ ಕಾಣಿಸುತ್ತೆ. ಅದಾಗಲೇ ರೌಡೀಸಂನಿಂದ ಜೈಲಿಗೆ ಸೇರಿದ್ದ ನಟೋರಿಯಸ್ ಇಲಿಯಾಸ್ ನಿನ್ನೆ ತಾನೇ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ. ಜೈಲಿನಿಂದ ಬಿಡುಗಡೆಗೊಂಡು ಮನೆಗೆ ಬಂದು ತೆಪ್ಪಗೆ ಮಲಗಿದ್ದ ರೌಡಿ ಇಲಿಯಾಸ್‍ಗೆ ಬೆಳಿಗ್ಗೆ ಆಗಲೇ ಇಲ್ಲ. ಆತ ಏಳುವ ಮುನ್ನವೇ ಮನೆಯ ಬಾಗಿಲು ತಟ್ಟಿದ್ದ ಹಂತಕರು ಆತನ ಮನೆಗೆ ನುಗ್ಗಿ ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದಾರೆ. ಜೈಲಿನಲ್ಲೇ ಇರುತ್ತಿದ್ದರೆ ಆತನ ಜೀವವಾದರೂ ಉಳಿಯುತ್ತಿತ್ತೋ ಏನೋ…!!!

 

ಹಿಂದೂ ಹುಡುಗಿಯರ ಅಶ್ಲೀಲ ವೀಡಿಯೋ ಮಾಡುತ್ತಿದ್ದ…

ಈತ ಮುಸಲ್ಮಾನರು ಮಾತ್ರವಲ್ಲದೆ ಹಿಂದೂ ಸಂಘಟನೆಯ ಕಾರ್ಯಕರ್ತರ ಕೆಂಗಣ್ಣಿಗೂ ಕಾರಣವಾಗಿದ್ದ. ಹಿಂದೂ ಹುಡುಗಿಯರ ಅಶ್ಲೀಲ ಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುತ್ತಿದ್ದ. ಮಾತ್ರವಲ್ಲದೆ ತನ್ನ ಅಶ್ಲೀಲ ಮಾತುಗಳಿಂದಲೇ ಹಿಂದು ಜನಾಂಗವನ್ನು ನಿಂದಸುತ್ತಿದ್ದ ಎಂದು ಹೇಳಲಾಗುತ್ತಿದೆ.

 

ಕಾಂಗ್ರೆಸ್ ಮುಖ್ಯಸ್ಥನಾಗಿದ್ದ ರೌಡಿ ಇಲಿಯಾಸ್…

ಇಲಿಯಾಸ್ ಉಳ್ಳಾಲದ ಕಾಂಗ್ರೆಸ್ ಮುಖಂಡ, ಸಚಿವ ಯುಟಿ ಖಾದರ್ ಅವರ ಸ್ನೇಹಿತ. ಮಾತ್ರವಲ್ಲದೆ ಈ ಹಿಂದೆ ಯೂತ್ ಕಾಂಗ್ರೆಸ್ ಚುನಾವಣೆಗೆ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದ. ಕಾಂಗ್ರೆಸ್ ಶಾಸಕ ಯುಟಿ ಖಾದರ್, ಮೋಯ್ದೀನ್ ಬಾವ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಸೇರಿದಂತೆ ಹಲವಾರು ಮುಖಂಡರೊಂದಿಗೆ ಆಪ್ತನಾಗಿದ್ದ.

ಕೊಲೆ ಮಾಡಿದ ಹಂತಕರು ಆತನ ಬದ್ಧ ವೈರಿಗಳಾದ ಸಫ್ವಾನ್, ದಾವೂದ್ ಎಂಬ ಮುಸಲ್ಮಾನ ಕೋಮಿಗೆ ಸೇರಿದವರು ಎಂಬ ಮಾಹಿತಿ ತಿಳಿದು ಬಂದಿದೆ. ಮಾತ್ರವಲ್ಲದೆ ಹಲವಾರು ನಟೋರಿಯಸ್ ಚಟುವಟಿಕೆಗಳಿಂದಲೇ ಗುರುತಿಸಿಕೊಂಡಿದ್ದ ಈ ಇಲಿಯಾಸ್ ಮೇಲೆ ಈ ತಂಡಕ್ಕೆ ಧ್ವೇಷ ಇತ್ತು ಎಂದು ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಜಿಲ್ಲೆಯ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದ್ದು ಇಂತಹ ಹೆಣಗಳು ಕರಾವಳಿಯಲ್ಲಿ ಬೀಳುತ್ತಲೇ ಇದೆ. ಒಂದು ಕಡೆ ಕೋಮು ಜ್ವಾಲೆಯಲ್ಲಿ ಕರಾವಳಿ ಬೆಂದು ಬೇಯುತ್ತಿದ್ದರೆ ಮತ್ತೊಂದು ಕಡೆ ಇಂತಹ ಧ್ವೇಷಗಳಿಗೆ ಕರಾವಳಿ ಬಲಿಯಾಗುತ್ತಿದೆ. ಈ ಮಧ್ಯೆ ಇಲ್ಲಿನ ರಾಜ್ಯ ಸರ್ಕಾರ ಮಾತ್ರ ಗಡದ್ದಾಗಿ ನಿದ್ದೆ ಮಾಡುತ್ತಿದೆ.

-ಹರೀಶ್

Tags

Related Articles

Close