ಪ್ರಚಲಿತ

ಬಿಗ್ ನ್ಯೂಸ್.! ಸಿಡಿದೆದ್ದ ಅಯ್ಯಪ್ಪ ಭಕ್ತರು.! ಏಕಕಾಲದಲ್ಲಿ 400 ಕಡೆ ಕೇರಳ ರಸ್ತೆ ಬಂದ್.! ಸುಪ್ರೀಂ ಕದ ತಟ್ಟೀತೇ ಸ್ವಾಮಿ ಶರಣಂ ಘೋಷಣೆ?

ಬರಿಮಲೆ ಸ್ವಾಮಿ ಅಯ್ಯಪ್ಪನ ಸನ್ನಿಧಾನಕ್ಕೆ ಮಹಿಳೆಯರ ಪ್ರವೇಶ ಎಂಬ ಸುಪ್ರೀಂ ಕೋರ್ಟ್ ಆದೇಶದ ವಿಚಾರವಾಗಿ ದೇಶದಾದ್ಯಂತ ಅಯ್ಯಪ್ಪ ಸ್ವಾಮಿ ಭಕ್ತರು ಸಿಡಿದೆದ್ದಿದ್ದಾರೆ. ಅನೇಕ ಬಾರಿ ಕೇರಳದಲ್ಲಿ ಪ್ರತರಿಭಟನೆ ನಡೆಸುವ ಮೂಲಕ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಬದಲಾಯಿಸುವಂತೆ ಆಕ್ರೋಶ ಕೇಳಿ ಬರುತ್ತಿದೆ. ಕರ್ನಾಟಕ ಸೇರಿದಂತೆ ಅನೇಕ ಕಡೆಗಳಲ್ಲೂ ಪ್ರತಿಭಟನೆ ನಡೆದಿದ್ದು ಇಂದು ಕೇರಳದಲ್ಲಿ ವಿನೂತನ ಪ್ರತಿಭಟನೆ ಸಲ್ಲಿಸಲಾಯಿತು.

ಇಂದು ಕೇರಳದಲ್ಲಿ 400ಕ್ಕೂ ಅಧಿಕ ಕಡೆಗಳಲ್ಲಿ ಏಕಕಾಲದಲ್ಲಿ ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆಯನ್ನು ನಡೆಸಲಾಯಿತು. “ಕೂಡಲೇ ಕೇರಳ ರಾಜ್ಯ ಸರ್ಕಾರ ಈ ಬಗ್ಗೆ ಗಮನ ಹರಿಸಿ ಸುಪ್ರಿಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಬೇಕು. ಕೋಟ್ಯಾಂತರ ಭಕ್ತ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಕೇವಲ ಬೆರಳೆಣಿಕೆಯಷ್ಟು ಮಂದಿಯ ಹೋರಾಟಕ್ಕಾಗಿ ಕೋಟ್ಯಾಂತರ ಜನರ ಹೋರಾಟವನ್ನು ಕಡೆಗಣಿಸಬೇಡಿ” ಎಂದು ಆಕ್ರೋಶ ಹೊರ ಹಾಕಿದ್ದಾರೆ.

400ಕ್ಕೂ ಅಧಿಕ ಕಡೆಗಳಲ್ಲಿ ಏಕಕಾಲದಲ್ಲಿ ರಸ್ತೆ ತಡೆ ನಡೆಸುವ ಮೂಲಕ ಲಕ್ಷಾಂತರ ಮಂದಿ ಪ್ರತಿಭಟನೆಯನ್ನು ಸಲ್ಲಿಸಿದರು. ಅಯ್ಯಪ್ಪ ಸ್ವಾಮಿಯ ಭಜನೆ ಹಾಗೂ ಶ್ಲೋಕಗಳನ್ನು ಹೇಳುವ ಮೂಲಕ ಶಾಂತಿಯುತವಾದ ಪ್ರತಿಭಟನೆಯನ್ನು ನಡೆಸಲಾಯಿತು. ಮಹಿಳೆಯರೇ ಅಧಿಕವಾಗಿ ಸೇರಿದ್ದ ಪ್ರತಿಭಟನೆಯು ಕೇರಳದಲ್ಲಿ ಮತ್ತೊಂದು ಇತಿಹಾಸವನ್ನೇ ಸೃಷ್ಟಿಸಿದೆ.

ಒಟ್ಟಾರೆ ಪ್ರಚಾರದ ಗೀಳಿನಿಂದ ನಕಲಿ ಮಹಿಳಾ ಹೋರಾಟಗಾರರು ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬೇಕೆಂಬ ಹಕ್ಕನ್ನು ಮಂಡಿಸಿದ್ದು ಇದೀಗ ಸಾಕ್ಷಾತ್ ಅಯ್ಯಪ್ಪನೇ ತಿರುಗಿಬಿದ್ದ ಹಾಗೆ ಭಾಸವಾಗುತ್ತಿದೆ. ಈವರೆಗೂ ಧರ್ಮದ ವಿಚಾರದಲ್ಲಿ ಸುಮ್ಮನಿದ್ದ ಕೇರಳಿಗರು ಈಗ ಅಯ್ಯಪ್ಪನಿಗಾಗಿ ಸಿಡಿದೆದ್ದಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತೆ ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ.

-ಏಕಲವ್ಯ

Tags

Related Articles

FOR DAILY ALERTS
 
FOR DAILY ALERTS
 
Close