ಇತಿಹಾಸ

ನೆಹರು ಡೈರಿ, ಅಧ್ಯಾಯ ಒಂದು :: ನನ್ನ ಗಂಡ ಇವತ್ತು ರಾತ್ರಿ ಇರುವುದಿಲ್ಲ – 10:00 ಗಂಟೆಯ ನಂತರ ಬನ್ನಿ: ಎಡ್ವಿನಾ

ಭಾರತೀಯರ ಸ್ವಾತಂತ್ರ್ಯ ಹೋರಾಟವು ಒಂದು ಐತಿಹಾಸಿಕ ಘಟನೆಯಾಗಿದ್ದು ನಮ್ಮ ಮನಸ್ಸು ಮತ್ತು ಹೃದಯಕ್ಕೆ ಬಹಳ ಅಪ್ಯಾಯಮಾನವಾಗಿದೆ. ಭಾರತದ‌ ಮಣ್ಣಿನ ಕಣಕಣವೂ ಸ್ವಾತಂತ್ರ್ಯವೀರರ ಬಲಿದಾನದ ರಕ್ತದಿಂದ ತೊಯ್ದುಹೋಗಿದೆ. ಪ್ರತೀಬಾರಿಯು ಅವರ ಅದಮ್ಯ‌ ರಾಷ್ಟ್ರಭಕ್ತಿ, ಸ್ಫೂರ್ತಿಯ, ಪ್ರೇರಣೆಯ ಶಕ್ತಿ ಭಾರತದಲ್ಲಿ ಸಂಚರಿಸುವ ವಾಯುವಿನಿಂದ‌ ನಾವು ಸೇವಿಸಲು ಸಾಧ್ಯವಿದೆ.‌ ನಾವೂ ದೇಶಕ್ಕಾಗಿ‌ ಏನಾದರೂ ಸಾಧನೆ ಮಾಡಬೇಕೆಂಬ ಅಗಾಧ ಇಚ್ಛಾಶಕ್ತಿ ಬೆಳೆಸಲು ಅವು ಪೇರಣೆಯಾಗುತ್ತಿವೆ. ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರರ ಪರಿಚಯ ನಮಗೆ ಇರಲಿಕ್ಕಿಲ್ಲ , ಆದರೆ ಅವರ ಬಲಿದಾನಗಳಿಂದಾಗಿ ನಮ್ಮ ರಾಷ್ಟ್ರಕ್ಕೆ ಸ್ವಾತಂತ್ರ್ಯ ಲಭಿಸಿದ್ದೆಂಬುದನ್ನು ಮಾತ್ರ ನಾವು ಮರೆಯೆವು. ಭಾರತೀಯರಿಗೆ ಅವರುಗಳು ಕೊಟ್ಟ ಉಡುಗೊರೆಯೇ ಸ್ವಾತಂತ್ರ್ಯ. !!

ಇದೆಲ್ಲಾ ಸರಿ. ಆದರೆ‌ ಒಂದು‌ ವಿಚಾರ ಮಾತ್ರ ನನ್ನ ಮನಸ್ಸನ್ನು ಪದೇ ಪದೇ‌ ಕಾಡುತ್ತದೆ. ನಿಮಗೂ ಕಾಡಬಹುದು. ಒಬ್ಬ ಭಾರತೀಯ ವ್ಯಕ್ತಿಯು ಶತ್ರುವಾದ‌ ಬ್ರಿಟಿಷರೊಂದಿಗೆ ಅತ್ಯಂತ ‌ಆಪ್ತನಾಗಿದ್ದು, ತನ್ನನ್ನು ತಾನು ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಹೋರಾಡುತ್ತಿದ್ದಾನೆ ಎಂದು ಬಿಂಬಿಸುತ್ತಾನಲ್ಲಾ ?? ನಿಜವಾದ ರಾಷ್ಟ್ರಪ್ರೇಮಿಯ‌ ಲಕ್ಷಣ ಇದೆಯಾ?? ಹೌದು, ಅದೇ ವ್ಯಕ್ತಿಯ ಕುರಿತಾಗಿಯೇ‌ ಮಾತನಾಡುತ್ತಿದ್ದೇನೆ. ಭಾರತದ‌ ಅಂತ:ಸತ್ವವನ್ನು ‌ನಾಶ ಮಾಡಲು ಮುನ್ನುಡಿಯಿಟ್ಟವ, ಭಾರತ ಕಂಡ ದಿ ಗ್ರೇಟ್ ಭ್ರಷ್ಟ, ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಬಗ್ಗೆ !!!!

ಆತನನ್ನು ದೇವರುಯೆಂಬುದಾಗಿ ಯಾರು ಕರೆದರೋ?? ಆದರೂ ಆತ‌ ಲಾರ್ಡ್ ಆದ. ಭಾರತದ ಅತೀ ಭ್ರಷ್ಟರಿಗೆ ಹಾಗೂ
ಕೆಲವು ಕಾಮುಕರಿಗೆ ಆತ ‌ಬಹಳ ಆಪ್ತ. ಆತನೇ ಬ್ರಿಟಿಷ್ ಸರಕಾರದ‌ ಅಂತಿಯ‌ ವೈಸರಾಯ್ ಹಾಗೂ ಸ್ವತಂತ್ರ ಭಾರತದ ಪ್ರಥಮ ಗವರ್ವರ್ ಜನರಲ್ ಲೂಯಿಸ್ ‘ಡಿಕ್ಕೀ’ ಮೌಂಟ್ ಬ್ಯಾಟನ್. ಭಾರತದ ಸಂಪುಟದ ಕೆಲವು ಭ್ರಷ್ಟರಿಗೆ ಹಾಗೂ ನೆಹರೂವಿಗೆ ಆತ ಹಾಗೂ ಆತನ ಪತ್ನಿ ತೀರಾ ಆಪ್ತರು. ಆ ಕಾಲದಲ್ಲಿ ಪತ್ರಗಳ ವ್ಯವಹಾರ ಅಧಿಕವಾಗಿತ್ತು. ಎಡ್ವಿನಾ ಮೌಂಟ್ ಬ್ಯಾಟನ್ ಹಾಗೂ ನೆಹರೂ‌‌ ನಡುವೆಯೂ ಅನೇಕ ವ್ಯವಹಾರಗಳು ಪತ್ರಗಳ ಮೂಲಕ ‌ನಡೆದಿವೆ. ಆಶ್ಚರ್ಯಕರ ವಿಚಾರವೇನು ಗೊತ್ತಾ?? ಈ ಎಲ್ಲಾ ಪತ್ರಗಳು ಸರಕಾರದ ತಿಜೋರಿಯಲ್ಲಿದೆ. ಆದರೂ ಭಾರತೀಯರ ಮುಂದೆ‌ ಬಹಿರಂಗಪಡಿಸಲಾಗಿಲ್ಲ. ಇದೆಲ್ಲಾ ನಮ್ಮ ಸಂಶಯಕ್ಕೆ ನೀರೆರೆದಿವೆ. ಸರಕಾರ ಬಹಿರಂಗ ಪಡಿಸಲು ಹಿಂಜರಿಯಬಹುದಾಗಿರುವ ಪರಿಸ್ಥಿತಿಯುಂಟಾದರೆ, ಆ ಪತ್ರಗಳಲ್ಲಿ ಏನಿವೆ??

ಲೂಯಿಸ್ ಮತ್ತು ಎಡ್ವಿನಾ ಅವರ ಮರಣದ ನಂತರ, ಸತ್ಯವನ್ನು ಬಹಿರಂಗಪಡಿಸಲು ಒಂದೇ ಒಂದು ಮೂಲವಿದೆ. ಅದು ಪತ್ರಗಳನ್ನು ಸಾರ್ವಜನಿಕಕ್ಕೆ ಲಭಿಸುವಂತೆ ಮಾಡುವುದು‌ ಮಾತ್ರ. ಆದರೆ ಎಡ್ವಿನಾ ಸೇರಿದಂತೆ ವಿವಿಧ ವ್ಯಕ್ತಿಗಳು ನೀಡಿದ ವಿವಿಧ ಹೇಳಿಕೆಗಳನ್ನು ವಿಶ್ಲೇಷಿಸುವ ಮೂಲಕ ಸಹ ಒಂದು ತೀರ್ಮಾನಕ್ಕೆ ಬರಬಹುದು. ಅವುಗಳಲ್ಲಿ ಕೆಲವನ್ನು ನಾವು ವಿಶ್ಲೇಷಿಸೋಣ. ಸತ್ಯಸಂಗತಿಯನ್ನು‌ ತಿಳಿಯುವುದೇ ನಮ್ಮ ಉದ್ದೇಶವಷ್ಟೇ.. ಕೆಲವನ್ನು‌ ಅವಲೋಕನ ಮಾಡೋಣ.

* ” ಮೂಲಭೂತವಾಗಿ ಅವರಿಬ್ಬರು ಏಕಾಂಗಿ ವ್ಯಕ್ತಿಯಾಗಿದ್ದರೆಂದು ನಾನು ಬಲವಾಗಿ ನಂಬುತ್ತೇನೆ. ಅವರ ಪತ್ನಿ ಮರಣವನ್ನಪ್ಪಿದರು, ತನ್ನ ಸಹೋದರಿಗೆ ವಿದೇಶದಲ್ಲಿ ಉದ್ಯೋಗವಾಯಿತು, ತನ್ನ ಮಗಳನ್ನು ಅವಳ ಪತಿ ನೋಡಿಕೊಳ್ಳುತ್ತಿದ್ದನು ಮತ್ತು ಮಹಿಳಾ ಚಳವಳಿಯಲ್ಲಿ ತಲ್ಲೀನರಾಗಿದ್ದಳು. ಆತನಿಂದಂತೂ ಎಲ್ಲರೂ ದೂರವಾಗಿದ್ದರು. ಅವನು ತುಂಬಾ ಏಕಾಂಗಿಯಾಗಿದ್ದನೆಂದು ನಾನು ಭಾವಿಸುತ್ತೇನೆ . ನನ್ನ ತಾಯಿ ಕೂಡ ತುಂಬಾ ಅಂತರ್ಮುಖಿಯಾಗಿದ್ದರು. ಈ ವಿಚಾರಗಳೇ ಅವರಿಬ್ಬರು ಪರಸ್ಪರ ಸಂವಹನ ನಡೆಸುವುದಕ್ಕೆ ಎಡೆಮಾಡಬಹುದೆಂಬುದಾಗಿ ಅವರೇ ಕಂಡುಕೊಂಡಿದ್ದಾರೆ.”

“ಬ್ರೀಫ್ ಎನ್ಕೌಂಟರ್ ಎಂದು ಯಾರೋ ಅವರ ಸಂಬಂಧದ ಕುರಿತಾಗಿ ನನಗೆ ವಿವರಿಸಿದ್ದರು. ಬ್ರೀಫ್ ಎನ್ಕೌಂಟರ್ ಚಿತ್ರವನ್ನು ನೀವು ಎಂದಾದರೂ ನೋಡಿದ್ದೀರಾ ಎಂದು ನನಗೆ ಗೊತ್ತಿಲ್ಲ. ಚಿತ್ರದಲ್ಲಿ, ಎರಡು ಜನರ ಪಾತ್ರವು ಅಸಾಧಾರಣವಾದುದು. ಒಬ್ಬರಿಗೊಬ್ಬರು ಪರಸ್ಪರ ಆಕರ್ಷಿಸಲ್ಪಡುತ್ತಾರೆ, ಅದೂ ಮುಂದೆಂದೂ ಅವರನ್ನು ಬೇರ್ಪಡಿಸಲಾಗದಷ್ಟು.ನಾವು ಭಾರತವನ್ನು ತೊರೆದ ನಂತರ ಅವರು ಒಂದು ವರ್ಷಕ್ಕೊಮ್ಮೆ ಒಬ್ಬರನ್ನೊಬ್ಬರು ನೋಡುತ್ತಿದ್ದರು – ಪ್ರಾಯಶಃ ವರ್ಷಕ್ಕೆ ಎರಡು ಬಾರಿ – ಆದರೆ ಸಂಬಂಧ ತೀವ್ರವಾಗಿಯೇ ಉಳಿಯಿತು. ”

“ಅವರಿಬ್ಬರು ಪರಸ್ಪರ‌ ಅಗಾಧವಾಗಿ ಪ್ರೇಮಿಸುತ್ತಿದ್ದರು. ಆದರೆ ಅದುವರೆಗೂ ಲೈಂಗಿಕ ಸಂಬಂಧವನ್ನು ಇಟ್ಟುಕೊಂಡಿಲ್ಲ. ” ಇದನ್ನು ಒಂದು ಸಂದರ್ಶನದಲ್ಲಿ ಹೇಳಿದವಳು ಪಮೇಲಾ ಮೌಂಟ್ ಬ್ಯಾಟನ್. ಲೂಯಿಸ್ ಮೌಂಟ್ ಬ್ಯಾಟನ್ ಹಾಗೂ ಎಡ್ವಿನಾ ರವರ ಕೊನೆಯ‌ ಪುತ್ರಿ ಆಕೆ. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ ನಿತ್ಯಅತಿಥಿಯಾಗಿದ್ದರು ಎಡ್ವಿನಾ ಹಾಗೂ ಪಮೇಲಾ. ನೆಹರೂ ಅವರು ಬ್ರಿಟನ್ ಗೆ ಪ್ರವಾಸ ಮಾಡಿದಾಗಲಂತೂ ರಾಜಾತಿಥ್ಯವೇ ನೀಡಲಾಗುತ್ತಿತ್ತು.

* ಕುತೂಹಲಕಾರಿ ಸಂಗತಿಯೇನೆಂದರೆ ನೆಹರೂ ಹಾಗೂ ಎಡ್ವಿನಾ ಸಂಬಂಧದ ಕುರಿತು ಮೌಂಟ್ ಬ್ಯಾಟನ್ ಗೆ ಅರಿವಿದ್ದರೂ‌ ಸಹ ಹಸ್ತಕ್ಷೇಪ‌ ಮಾಡಿರಲಿಲ್ಲ. ಈ ಸಂಗತಿಯನ್ನು ಪಮೇಲಾ ತನ್ನ ಪುಸ್ತಕವಾದ ಡಾಟರ್ ಆಫ್ ಅಂಪೈರ್: ಲೈಫ್ ಏಸ್ ಎ ಮೌಂಟ್ ಬ್ಯಾಟನ್ ಅಲ್ಲಿ ಉಲ್ಲೇಖಿಸಿದ್ದಾಳೆ. ತನ್ನ ಹೆಂಡತಿ ಪರ ಪುರುಷನ ಜತೆಗೆ ರಾಸಲೀಲೆಯಾಡುತ್ತಿದ್ದರೂ ತಲೆಕೆಡಿಸದ ಆಸಾಮಿಯಾಗಿದ್ದ‌ ಆತ !! ಇತ್ತ ಕಡೆ ನೆಹರೂ ತನ್ನ ಕೈಚಳಕವನ್ನು ಮುಂದುವರೆಸಿದ. ಯಾಕೆಂದರೆ ಆತನಿಗೆ ವಿರೋಧಿಗಳೇ ಇಲ್ಲವೆಂಬ ಅಹಂಭಾವ!!

* ಎಡ್ವಿನಾ ನೆಹರೂವಿನಿಂದ ಬರುತ್ತಿದ್ದ ಎಲ್ಲಾ ಪತ್ರಗಳನ್ನು ತನ್ನ ಹಾಸಿಗೆಯ‌ ಬಳಿಯಲ್ಲೇ ಇಡುತ್ತಿದ್ದಳು. ಆಶ್ಚರ್ಯದ ಸಂಗತಿಯೇನೆಂದರೆ ಪತ್ರಗಳನ್ನು ರಹಸ್ಯವಾಗಿಸಿದವಳೇ ಅಲ್ಲ ಅವಳು.

* ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿದ್ದ ಎಸ್ ಎಸ್ ಪಿರ್ಜಾದ ಹೇಳುವ ಪ್ರಕಾರ, ನೆಹರೂ ಹಾಗೂ ಎಡ್ವಿನಾ ರವರ ಪತ್ರ ವ್ಯವಹಾರದ ಸಂಗತಿ ಜಿನ್ನಾ ರವರಿಗೂ ತಿಳಿದಿತ್ತು. ಕೆಲವು ಪತ್ರಗಳು ಜಿನ್ನಾರ ಕೈಯನ್ನೂ ಸೇರಿತ್ತೆಂಬುದೇ ಸೋಜಿಗದ ಸಂಗತಿ. ಆ ಪತ್ರಗಳಲ್ಲಿದ್ದ ಕೆಲವು ಸಂಗತಿಗಳನ್ನು‌ ನೀವೇ ಗಮನಿಸಿ: “ಡಿಕ್ಕೀ ಇವತ್ತು ರಾತ್ರಿ ಹೊರಗಡೆ‌ ಹೋಗುತ್ತಾರೆ, 10 ಗಂಟೆಯ ನಂತರ ಬನ್ನಿ” ಎಡ್ವಿನಾ ಬರೆದ ಪತ್ರದಲ್ಲಿದ್ದ ವಿಚಾರವಿದು.

“ನೀವು ನಿಮ್ಮ ಕರವಸ್ತ್ರವನ್ನು‌ ಮರೆತು ತೆರಳಿದ್ದೀರಿ, ಡಿಕ್ಕೀ ಅದನ್ನು‌ ಗಮನಿಸುವ ಮುಂಚೆಯೇ ನಾನು ಅದನ್ನು ತೆಗೆದಿಟ್ಟಿದ್ದೇನೆ.”

“ಶಿಮ್ಲಾದ ಸುಮಧುರ‌ ನೆನಪುಗಳನ್ನಂತೂ ನಾನು‌ ಮರೆಯಲಾರೆ – ಅಲ್ಲಿನ ಸವಾರಿ ಹಾಗೂ ನಿಮ್ಮ ಸ್ಪರ್ಶ ”

* ನೆಹರೂ ಹಾಗೂ ಎಡ್ವಿನಾ ಒಮ್ಮೆ ಹಿಮಾಲಯದ‌‌ ಬುಡದಲ್ಲಿರುವ ನೈನಿತಿಲ್ ನಲ್ಲಿ ವಾಸ್ತವ್ಯವವನ್ನು ಹೂಡಿದ್ದರು. ಅವರನ್ನು ಊಟಕ್ಕೆ ಕರೆಯಲು ರಾಜ್ಯಪಾಲರ ಮಗ ಹೋದ. ನೆಹರೂ ವಾಸವಿದ್ದ ಕೋಣೆಯ ಬಾಗಿಲು ತೆರೆದು ನೋಡಿದ ಈತ‌ ಗಾಬರಿ ಹಾಗೂ ಅಚ್ಚರಿಗೊಂಡ.. ಯಾಕೆ ಗೊತ್ತಾ?? ಅವರೀರ್ವರು ಪರಸ್ಪರ‌ ಆಲಿಂಗನದಲ್ಲಿ ತಲ್ಲೀನರಾಗಿದ್ದರು.

*ಅದೆಷ್ಟು ಜನ ಗಮನಿಸಿದ್ದೀರೋ ಅರಿಯದು. ನೆಹರೂ ಮತ್ತು ಎಡ್ವಿನಾ ರ ಸಂಬಂಧದ ಕುರಿತು ಸಿನೆಮಾ‌ ಮಾಡುವುದಕ್ಕೂ ಮುಂದಾಗಿದ್ದರು ಕೆಲವರು. ಹೆಸರು : ಇಂಡಿಯನ್ ಸಮ್ಮರ್. ಆದರೆ ಅವರ ದೈಹಿಕವಾದ ಅನ್ಯೋನ್ಯತೆಯಿರುವ ದೃಶ್ಯಗಳನ್ನು ತೆಗೆದರಷ್ಟೇ ಅಂತಹ ಚಲನಚಿತ್ರಕ್ಕೆ ಅವಕಾಶ ಮಾಡಿಕೊಡುತ್ತೇವೆಯೆಂದಿತು ಭಾರತ ಸರಕಾರ. ಅಂತಿಮವಾಗಿ ಆ ಯೋಜನೆಯೇ 2009 ರಲ್ಲಿ ರದ್ದಾಯಿತು.

* ನೆಹರೂ ಹಾಗೂ ಎಡ್ವಿನಾ ಳ ಸಂಬಂಧದ ಕುರಿತಾಗಿ ಅಲೆಕ್ಸ್ ವಾನ್ ತನ್ಜೇಲ್ ಮನ್ ಒಂದು ಪುಸ್ತಕವನ್ನೇ ಬರೆದಿದ್ದಾರೆ. “ಇಂಡಿಯನ್
ಸಮ್ಮರ್ : ದಿ ಸೀಕ್ರೇಟ್ ಹಿಸ್ಟರಿ ಆಫ್ ದಿ ಎಂಡ್ ಆಫ್ ಏನ್ ಅಂಪೈರ್ ” ಪುಸ್ತಕದ ನಾಮ.

 

*ನೆಹರೂ ಹಾಗೂ ಎಡ್ವಿನಾಳ ನಡುವೆ ವ್ಯವಹಾರವಾದ ಪತ್ರಗಳನ್ನು ಬಹಿರಂಗಪಡಿಸಲು ಹಲವು ಯೋಜನೆಗಳನ್ನು ರೂಪಿಸಲಾಗಿತ್ತು. ಆದರೆ ಇಟಲಿಯ‌ ಕೂಸು , ಭಾರತದ ಸೊಸೆ ಸೋನಿಯೂ ಆ ಯೋಜನೆಗಳಿಗೆ ಅಡ್ಡವಾಗಿ ನಿಂತರು. ತನ್ನ ರಾಜಕೀಯ‌ ಸ್ವಾರ್ಥವೇ ಅದಕ್ಕೆ ಮೂಲ ಕಾರಣವಾಯಿತು. ಈ ವಿಚಾರವನ್ನು ಹೇಳಿದವರು ಬೇರಾರು ಅಲ್ಲ, ನೆಹರೂ‌ರವರು ತಂಗಿಯಾದ ವಿಜಯಲಕ್ಷ್ಮಿ‌ಪಂಡಿತ್ ಅವರ ಪುತ್ರಿಯಾದ ನಯನತಾರ ಸಾಹಗಲ್‌. ವಿರೋಧಪಕ್ಷದವರ ಒಂದೇ ಒಂದು ಭಯದಿಂದ‌ ಅವಳು ಈ ಯೋಜನೆ ನೆರವೇರಲು ಬಿಡಲಿಲ್ಲ‌ ಅನ್ನುವುದಾಗಿ ನಯನತಾರ ಅವರು ಸ್ಪಷ್ಟಪಡಿಸಿದ್ದರು. ಒಟ್ಟಿನಲ್ಲಿ ಭಾರತಕ್ಕೆ ಒಕ್ಕರಿಸಿದ ಶನಿಯಾಗಿ ಬೆಳೆದಳು ಸೋನಿಯಾ !!!

ಭಾರತದ ರಾಜಕಾರಣದಲ್ಲಿ, ಅನೇಕ ನಿರ್ಧಾರವನ್ನು ಮಾಡಿದ್ದು ಎಡ್ವಿನಾ !!! ನಂಬುತ್ತೀರಾ?? ನಂಬಲಾಗದಿದ್ದರೂ ಕಹಿಸತ್ಯವಿದು. ನೆಹರೂ ರವರು ಅನೇಕ ಬಾರಿ ನಿರ್ಧಾರವನ್ನು‌ ಕೈಗೊಳ್ಳುವಾಗ ಸಲಹೆ ಪಡೆದಿದ್ದು ಇದೇ ಎಡ್ವಿನಾಳ ಬಳಿ.. ಈ ಸಂಗತಿಯನ್ನು ಹೇಳಿದ್ದು ಬೇರಾರೂ ಅಲ್ಲ. ಮೌಂಟ್ ಬ್ಯಾಟನ್ ಕುಟುಂಬದ‌ ಆಪ್ತರಾಗಿದ್ದ ಆಂಗ್ಲ ಲೇಖಕ ಜಾನೆಟ್ ಮಾರ್ಗನ್.
ಅನೇಕ ಪತ್ರಗಳು ಮಾರ್ಗನ್ ಬಳಿಯೂ ಇತ್ತು. ನೆಹರೂ ಭಾರತಕ್ಕೆ ಮಾಡಿದ‌ ಪ್ರಮಾದದ ಕುರಿತಾಗಿ ಮಾತನಾಡುತ್ತೇವಲ್ಲಾ?? ನಿಮಗೆ‌ ಒಂದು ಸತ್ಯ ಹೇಳಲಾ,ಅವರು ಮಾಡಿದ್ದು ಪ್ರಮಾದವಲ್ಲ, ಅವರೇ ಒಂದು ಪ್ರಮಾದ. ಅವರಿಬ್ಬರಲ್ಲಿ ಅಂತಹ ಸಂಬಂಧಗಳಿಲ್ಲವೆಂದರೆ ಅಷ್ಟೂ ಪತ್ರಗಳು ಹೇಗೆ ಲಭಿಸಿದವು?? ಸಾಮಾನ್ಯ ಪ್ರಜೆಯಾಗಿ ನಮ್ಮನ್ನು ಕಾಡಬಹುದಾದ ಪ್ರಶ್ನೆಯಿದು.

ಭಾರತೀಯರೇ , ಒಂದು ವಿಚಾರ ಅವಲೋಕನ ಮಾಡಿ :

ಈ ವಿಷಯಗಳನ್ನೆಲ್ಲಾ ಗಮನಿಸುವಾಗ ಅವರಿಗಿದ್ದ ಸಂಬಂಧ ಸತ್ಯವೆಂದು ಸಾಬೀತಾಗುತ್ತದೆ. ಹಾಗಾದರೆ ನವೆಂಬರ್ 14 ರಂದು, ನೆಹರೂವಿನ ಜನ್ಮದಿವಸದಂದ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುವುದೆಷ್ಟು ಸರಿ?? ಯಾವ ಆದರ್ಶವನ್ನು ಆತನಿಂದ‌ ಮಕ್ಕಳು ಕಲಿಯಬೇಕಿದೆ?? ಪರಸ್ತ್ರೀಯೊಂದಿಗೆ ರಾಸಲೀಲೆಯಾಡಿದ ಭಾರತದ ಪ್ರಧಾನಿಯೆಂದೇ?? ತಮ್ಮ ಅಧಿಕಾರದ‌ ಲಲಾಸೆಗೆ ಭಾರತವನ್ನೇ ಛಿದ್ರವಾಗಿಸಿದರೆಂಬ ಆದರ್ಶವೇ?? ಅದರ ಬದಲಾಗಿ ಮಕ್ಕಳ ಮೇಲೆ ಅಪಾರ ವಿಶ್ವಾಸವನ್ನಿರಿಸಿದ, ಭಾರತದ ಓರ್ವ ಶ್ರೇಷ್ಠ‌ ವಿಜ್ಞಾನಿಯಾಗಿದ್ದ‌ ಡಾ. ಅಬ್ದುಲ್ ಕಲಾಂ ರ ಜನ್ಮದಿವಸದಂದು ಮಕ್ಕಳ ದಿನಾಚರಣೆಯನ್ನಾಗಿ ಯಾಕೆ ಆಚರಿಸಬಾರದು?? ನಾವೆಲ್ಲಾ ಚಿಂತಿಸಬೇಕಾಗಿದೆ.

ನಾಯಕರಲ್ಲಿ ನಮ್ಮ ಕೋರಿಕೆ :

ಈ ಸತ್ಯವು ಬಹಿರಂಗವಾಗಬೇಕು. ಯಾವಾಗ ಪೋಸ್ಟ್ ಕಾರ್ಡ್ ತಂಡ ಕಟು ಸತ್ಯವನ್ನು ಜನರ‌ ಮುಂದಿಡುತ್ತೋ, ಆವಾಗ ಬುದ್ಧುಜೀವಿಗಳಿಗೆ ಉರಿಯಲು ಪ್ರಾರಂಭವಾಗುತ್ತದೆ. ಯಾಕೆಂದರೆ ಅವರ ಬಂಡವಾಳವನ್ನೂ ನಾವು ಬಯಲಿಗೆಳೆದರೆ ಎಂಬ ಭಯದಿಂದ. ಅನೇಕರು ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುವ ತಾಣವೆಂದೇ ಅಪಪ್ರಚಾರ‌ ಮಾಡಿದರು. ಹಾಗಾದರೆ ವಾಸ್ತವ ಸಂಗತಿಗಳನ್ನು, ಭ್ರಷ್ಟರ ಬಂಡವಾಳವನ್ನು ಬಯಲಿಗೆಳೆಯುವುದು ಭಾರತದಲ್ಲಿ ಪ್ರಮಾದದ ಕಾರ್ಯವೇ??

ನೆಹರೂ ಹಾಗೂ ಎಡ್ವಿನಾಳ ಸಂಬಂಧದ ಕುರಿತಾಗಿರುವ ಕೆಲವು ಲಿಂಕ್ ಗಳನ್ನು ನಾವು ಪ್ರಸ್ತುತಪಡಿಸಿದ್ದೇವೆ. ನಾವು ನಿಮ್ಮನ್ನು ತಪ್ಪು ದಾರಿಯನ್ನು ತೋರಿಸುತ್ತಿದ್ದೇವೆ, ಸುಳ್ಳು ಮಾಹಿತಿಯನ್ನು ನೀಡುತ್ತಿದ್ದೇವೆಂದು ಅನಿಸಿದರೆ, ಓದುಗರು ಅದರ ಪರಿಶೀಲನೆ ಮಾಡಿ‌ ಸತ್ಯ‌ ಯಾವುದು ಮಿಥ್ಯ‌ ಯಾವುದೆಂಬುದಾಗಿ ಪರಿಶೀಲಿಸಬೇಕೆಂದು ವಿನಂತಿಸುತ್ತೇವೆ.

ಅಂತಿಮವಾಗಿ ನಿಮ್ಮ ಅಭಿಪ್ರಾಯವನ್ನು ಪ್ರತಿಕ್ರಿಯೆ ಪೆಟ್ಚಿಗೆಯಲ್ಲಿ ನೀಡಿ.

ಮಾಹಿತಿಗಳ‌ ಮೂಲ :

https://en.wikipedia.org/wiki/Edwina_Mountbatten,_Countess_Mountbatten_of_Burma

https://nehrufamily.wordpress.com/

http://www.dnaindia.com/india/report-sonia-holding-
back-nehru-s-letters-to-edwina-vijaylakshmi-pandit-1338138

http://blogs.tribune.com.pk/story/16592/nehru-and-edwina-a-subcontinental-love/

https://akodalikar.wordpress.com/2015/06/12/midnight-visitor-myth-or-reality-pure-love-
or-disgrace/

http://indiatoday.intoday.in/story/lord-mountbattens-biography-is-more-about-
his-wife-edwinas-sexual-peccadilloes/1/410051.html

http://www.dailymail.co.uk/femail/article-1216186/The-shocking-love-triangle-Lord-
Mountbatten-wife-founder-modern-India.html

The great charmer

http://www.outlookindia.com/article/nehru-was-generally-happy-to-be-among-either-
mountains-or-interesting-women/292519

http://www.outlookindia.com/article/nehru-was-
generally-happy-to-be-among-either-mountains-or-interesting-women/292519

http://www.livemint.com/Leisure/1r9W3AfwfoJBulvX6zwzqK/Excerpt%E2%80%93Public-
and-private-relations.html
– ವಸಿಷ್ಠ

Tags

Related Articles

Close