ಪ್ರಚಲಿತ

ನೀವು ಇಲ್ಲಿ ತೆಗಳುತ್ತನೇ ಇರಿ, ಅವರು ಮಾತ್ರ ವಿಶ್ವ ನಾಯಕರಾಗಿದ್ದಾರೆ!! ಮೋದಿಗೆ ಈ ಬಾರಿ ವಿಶೇಷ ಗೌರವ ಕೊಟ್ಟ ಆ ದೇಶ ಯಾವುದು ಗೊತ್ತಾ..?!

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ದಿನ ಕಳೆದಂತೆ ಜಗತ್ತಿನಲ್ಲೇ ಪ್ರಭಾವಶಾಲಿ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುತ್ತಿದ್ದಾರೆ. ಮೋದಿಯ ಪ್ರಭಾವದಿಂದಾಗಿ ಭಾರತ ಜಗತ್ತಿನ ಮುಂದೆ ಮತ್ತೆ ತಲೆಯೆತ್ತಿ ನಡೆಯುವಂತಾಗಿದೆ.

ದೇಶ ವಿದೇಶಗಳಲ್ಲಿ ಮೋದಿಯ ಮಾತಿಗೆ ಯಾವ ರೀತಿಯ ಗೌರವ ಸಿಗುತ್ತಿದೆ ಎಂಬೂದು ಅನೇಕ ಬಾರಿ ಸಾಬೀತಾಗಿದೆ.
ಮೋದಿಯ ಒಂದೇ ಒಂದು ಕರೆಗೆ ಜಗತ್ತಿನ 192 ರಾಷ್ಟ್ರಗಳು ಯೋಗ ದಿನಾಚರಣೆಯನ್ನು ಆಚರಿಸಿದೆ ಎಂದರೆ ನೀವೇ ಆಲೋಚಿಸಿ ಈ ನಾಯಕನ ವರ್ಚಸ್ಸು…! ಭಾರತ ಏನೇ ನೀಡಿದರು ಅದು ಎಲ್ಲರ ಒಳಿತನ್ನೇ ಬಯಸುತ್ತದೆ ಎಂದು ಜಗತ್ತೇ ಒಪ್ಪಿಕೊಂಡಿದೆ. ಆದರೆ ಕಾಂಗ್ರೆಸ್ ಆಡಳಿತದಲ್ಲಿ ಮಂಕಾಗಿದ್ದ ಭಾರತವನ್ನು ಮತ್ತೆ ಬಡಿದೇಳುವಂತೆ ಮಾಡಿದ್ದಾರೆ ಶ್ರೀ ನರೇಂದ್ರ ಮೋದಿ.

ಜಗತ್ತಿನಾದ್ಯಂತ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಏಕೈಕ ವ್ಯಕ್ತಿ ಎಂದರೆ ಅದು “ಶ್ರೀ ನರೇಂದ್ರ ಮೋದಿ”.!
ಸಾಮಾಜಿಕ‌ ಜಾಲತಾಣಗಳಲ್ಲಿ ‘ಮೋದಿ’ ಎಂದರೆ ಒಂದು ಟ್ರೆಂಡ್ ಆಗಿಬಿಟ್ಟಿದೆ. ಒಂದಲ್ಲ ಒಂದು ಕಾರಣಕ್ಕೆ ಮೋದಿಯವರನ್ನು ಹೊಗಳದೇ ಕೂತವರಿಲ್ಲ.
ಅದೇ ಮೋದಿಯ ಸಾಮಾರ್ಥ್ಯ…!

ಪ್ರಧಾನಿಯಾದ ಬಳಿಕ ಹೆಚ್ಚಿನ ಎಲ್ಲಾ ದೇಶಗಳಿಗೂ ಭೇಟಿಕೊಟ್ಟು ಭಾರತದೊಂದಿಗೆ ಎಲ್ಲಾ ದೇಶಗಳ ಸಂಬಂಧ ಗಟ್ಟಿಗೊಳಿಸುತ್ತಾ ಬಂದಿರುವ ಮೋದಿ ಶತ್ರು ರಾಷ್ಟಗಳಾದ ಪಾಕಿಸ್ತಾನ ಮತ್ತು ಚೀನಾಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಗಡಿಯಲ್ಲಿ ಭಾರತವನ್ನು ಪದೇ ಪದೇ ಕೆಣಕುತ್ತಿರುವ ಪಾಕಿಸ್ತಾನಕ್ಕೆ ಅದರದೇ ಆದ ರೀತಿಯಲ್ಲಿ ತಿರುಗೇಟು ನೀಡುವ ಮೂಲಕ ಭಾರತದ ಸಾಮಾರ್ಥ್ಯ ಏನೆಂಬುದನ್ನು ಜಗತ್ತಿಗೆ ತೋರಿಸಿದೆ.

ಶ್ರೀ ನರೇಂದ್ರ ಮೋದಿಯವರು ಪ್ರಧಾನಿ‌ ಪಟ್ಟ ವಹಿಸಿಕೊಂಡ ನಂತರದಲ್ಲಿ ಭಾರತದ ಗೌರವ ಮತ್ತು ಖ್ಯಾತಿ ಜಗತ್ತಿನಾದ್ಯಂತ ಹೆಚ್ಚುತ್ತಿರುವುದು ನಮಗೆಲ್ಲಾ ತಿಳಿದ ಸಂಗತಿ. ಇದೀಗ ಭಾರತೀಯರೆಲ್ಲರೂ ಹೆಮ್ಮೆ ಪಡುವ ವಿಚಾರ ಒಂದು ಕೇಳಿಬಂದಿದೆ.

‘ಮಾರಿಷಸ್’ ದೇಶದ 50ನೇ ಸ್ವಾತಂತ್ರೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನು ಆಹ್ವಾನಿಸಲಾಗುವುದು ಎಂದು ಮಾರಿಷನ್ ಉಪಾಧ್ಯಕ್ಷ ಹೇಳಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ದ್ವೀಪ ರಾಷ್ಟ್ರ ‘ಮಾರಿಷಸ್’ ಗೆ ಭೇಟಿ ನೀಡಿದ ಬಳಿಕ ಆ ದೇಶಕ್ಕೆ ಭಾರತದೊಂದಿಗಿನ‌ ಸಂಬಂಧಕ್ಕೆ ರೆಕ್ಕೆ ಬಂದಿತ್ತು. ಅದೇ ರೀತಿ ನರೇಂದ್ರ ಮೋದಿಯವರ ಸೊಗಸಾದ ವಿದೇಶ ನೀತಿಯಿಂದಾಗಿ ಭಾರತದ ಜೊತೆಗೆ ಜಗತ್ತಿನ ಎಲ್ಲಾ ರಾಷ್ಟ್ರಗಳ ಸಂಬಂಧ ಉತ್ತಮ ರೀತಿಯಲ್ಲಿ ಮುಂದುವರೆಯುತ್ತಿದೆ.

ಮೋದಿಯವರನ್ನು ತಮ್ಮ ದೇಶಕ್ಕೆ ಅತಿಥಿಯಾಗಿ ಆಹ್ವಾನಿಸಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅರಬ್ ದೇಶಗಳೂ ಸೇರಿದಂತೆ ಅನೇಕ ದೇಶಗಳು ಮೋದಿಯವರನ್ನು ತಮ್ಮ ದೇಶಕ್ಕೆ ಅಹ್ವಾನಿಸಿತ್ತು.

ನರೇಂದ್ರ ಮೋದಿಯಂತಹ ನಾಯಕನ ಅಗತ್ಯ ಸಧ್ಯ ಭಾರತಕ್ಕಿತ್ತು. ಯಾಕೆಂದರೆ ಜಗತ್ತಿಗೆ ಪಾಠ ಹೇಳುವ ಸ್ಥಾನದಲ್ಲಿದ್ದ ಭಾರತವನ್ನು ಕಾಂಗ್ರೆಸ್ ಇಡೀ ಜಗತ್ತೇ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ನೋಡುವಂತೆ ಮಾಡಿತ್ತು.
ಸತತ ಅರವತ್ತು ವರ್ಷಗಳ ಕಾಲ ಭಾರತದ ಸಂಪತ್ತನ್ನು ದೋಚಿ ಭಾರತವನ್ನು ಜಗತ್ತಿನ ಮುಂದೆ ಮಂಡಿಯೂರಿ ನಿಲ್ಲುವಂತೆ ಮಾಡಿತ್ತು.
ಮೋದಿ ಪ್ರಧಾನಿಯಾಗಿದ್ದಂದಿನಿಂದಲೂ ಜಗತ್ತನಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಫೇಮಸ್ ಆಗುತ್ತಲೇ ಬಂದವರು. ತನ್ನ ನಡೆ ನುಡಿ, ಕಾರ್ಯ ಧಕ್ಷತೆಯಿಂದ ಜಗತ್ತಿನ ಗಮನವನ್ನು ಸೆಳೆದವರು. ಮಾತ್ರವಲ್ಲದೆ ತನ್ನ ವಿಶೇಷವಾದ ಆಮಥ್ರ್ಯದಿಂದ ಜಗತ್ತಿನ ಎಲ್ಲಾ ನಾಯಕರಿಗಿಂತ ಒಂದು ಹೆಜ್ಜೆ ಮುಂದು ಹೋಗಿ ವಿಶ್ವದ ಗಮನವನ್ನು ಸೆಳೆದವರು. ಮೋದಿಯನ್ನು ಅಮೇರಿಕಾಗೆ ಕರೆದು ಮಾಡಿಸನ್ ಸ್ಕ್ವಾರ್‍ನಲ್ಲಿ ಭಾಷಣ ಮಾಡಿಸಿದಾಗ ಸೇರಿದ್ದ ಜನರನ್ನು ಕಂಡು ದಂಗಾಗಿದ್ದ ಆಸ್ಟ್ರೇಲಿಯಾ ತನ್ನ ದೇಶಕ್ಕೂ ಮೋದೀಜಿಯನ್ನು ಕರೆದು ಅಮೇರಿಕಾಗಿಂತ ಹೆಚ್ಚಿನ ಜನರನ್ನು ಸೇರಿಸಿ ಭಾಷಣ ಮಾಡಿಸಿದ್ದಾರೆ. ಭಾರತದ ಒಬ್ಬ ನಾಯಕನನ್ನು ಜಗತ್ತಿನ ದಿಗ್ಗಜ ರಾಷ್ಟ್ರಗಳೆಲ್ಲಾ ತಮ್ಮ ದೇಶದ ವೈಭೋಗಕ್ಕೆ ಕರೆದು ಉಪಚರಿಸುತ್ತಾರೆ ಎಂದರೆ ಮೋದೀಜಿಯ ಪವರ್ ಅಂದೇ ಅರ್ಥವಾಗಿತ್ತು.

ವಿಶ್ವ ಸಂಸ್ಥೆಯಲ್ಲಿ ಕಾರ್ಯಕ್ರಮವೇ ಇರಲಿ, ಜಿ-20 ಶೃಂಗ ಸಭೆನೇ ಇರಲಿ, ಸಾರ್ಕ್ ದೇಶದ ಮಾತುಕತೆಯೇ ಇರಲಿ ಏನೇ ಇದ್ದರೂ ಅಲ್ಲಿ ಮೋದಿ ಇರುತ್ತಾರೆಂದರೆ ಜಗತ್ತಿನ ಕಣ್ಣೆಲ್ಲಾ ಮೋದಿಯತ್ತ ನೆಟ್ಟಿರುತ್ತದೆ. ಮೋದೀಜೀ ಏನಾದರೂ ಮಾತನಾಡುತ್ತಾರಾ ಎಂಬ ಕುತೂಹಲ ವಿಶ್ವದ ಘಟಾನುಗಟಿ ನಾಯಕರಲ್ಲಿ ಮನೆ ಮಾಡಿರುತ್ತದೆ.

ವೈರಿ ರಾಷ್ಟ್ರ ಪಾಕಿಸ್ಥಾನಕ್ಕೆ ಜಗತ್ತಿನ ಸಭೆಗೆ ಮೋದಿ ಬರುತ್ತಾರೆಂದರೆ ಭಯ ಆವರಿಸಿ ಬಿಡುತ್ತದೆ. ಎಲ್ಲಿ ನಮ್ಮ ರಾಷ್ಟ್ರವನ್ನು ಮತ್ತೆ ಕಾಲೆಳೆದು ಜಗತ್ತಿನ ಮುಂದೆ ಭಯೋತ್ಪಾದಕ ರಾಷ್ಟ್ರ ಎಂಬ ಪಟ್ಟವನ್ನು ಕಟ್ಟಿ ಬಿಡುತ್ತದೆಯೋ ಎಂಬ ಭಯ ಆ ರಾಷ್ಟ್ರಕ್ಕೆ ಕಾಡಿರುತ್ತದೆ. ಯಾಕೆಂದರೆ ಮೋದಿ ಮಾತನ್ನು ಕೇಳಿ ವಿಶ್ವದ ಎಲ್ಲಾ ರಾಷ್ಟ್ರಗಳೂ ಪಾಕಿಸ್ಥಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸಿತ್ತು.

ಆದರೆ ಇದೀಗ ಮತ್ತೆ ಭಾರತ ಜಗದ್ಗುರುವಾಗುತ್ತಿದೆ. ಇದಕ್ಕೆ ಕಾರಣ ಶ್ರೀ ನರೇಂದ್ರ ಮೋದಿ. ಮೋದಿಯವರನ್ನು “ಯುಗಾವತಾರಿ” ಎಂದರೆ ತಪ್ಪಾಗದು. ಭಾರತದ ಪಾಲಿಗೆ ಅವತಾರಿಯಾಗಿ ಸಿಕ್ಕಿದ ಈ ಮನುಷ್ಯನ ಜನಹಿತ ಮತ್ತು ದೇಶಹಿತ ಕಾರ್ಯಗಳಿಂದ ಭಾರತಕ್ಕೆ ಜಗತ್ತಿನೆಲ್ಲೆಡೆ ಒಳ್ಳೆಯ ಗೌರವ ಮತ್ತೆ ಸಿಗುತ್ತಿದೆ. ಶ್ರೀ ನರೇಂದ್ರ ಮೋದಿಯವರಿಂದಾಗಿ ಇಡೀ ದೇಶವೇ ಹೆಮ್ಮೆ ಪಡುವಂತಾಗಿದೆ.

  • ಅರ್ಜುನ್

Tags

Related Articles

Close