ಪ್ರಚಲಿತ

ಕರ್ನಾಟಕ-ತಮಿಳುನಾಡು ಕಾವೇರಿ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಸಲು ಮುಂದಾದ ನಿತಿನ್ ಗಡ್ಕರಿ! ಎರಡು ರಾಜ್ಯಗಳ ನಡುವಿನ ದ್ವೇಷಕ್ಕೆ ಬೀಳಲಿದೆ ಫುಲ್‌ಸ್ಟಾಪ್!

ರ್ನಾಟಕ ಮತ್ತು ತಮಿಳುನಾಡಿನ ನಡುವೆ ಕಾವೇರಿ ನದಿ ನೀರಿನ ವಿಚಾರವಾಗಿ ಅದೆಷ್ಟೋ ವರ್ಷಗಳಿಂದ ಗಲಾಟೆ ವೈಮನಸ್ಸು ನಡೆಯುತ್ತಲೇ ಇದೆ. ಎರಡೂ ರಾಜ್ಯಗಳ ನಡುವಿನ ದ್ವೇಷಕ್ಕೆ ಅಂತ್ಯ ಹಾಡಲು ಈವರೆಗೆ ಯಾವೊಬ್ಬನಿಂದಲೂ ಸಾಧ್ಯವಾಗಲಿಲ್ಲ. ಕರ್ನಾಟಕ ಆಗಲಿ ತಮಿಳುನಾಡು ಆಗಲಿ ಈ ವಿಚಾರದಲ್ಲಿ ಒಬ್ಬರಿಗೊಬ್ಬರು ಪರಸ್ಪರ ಕಿತ್ತಾಟ ನಡೆಸುತ್ತಲೇ ಇದ್ದಾರೆ. ಕಾವೇರಿ ನದಿಯ ವಿಚಾರವಾಗಿ ಅದೆಷ್ಟೋ ಬಾರಿ ಎರಡೂ ರಾಜ್ಯಗಳು ಬಂದ್ ಆಗಿವೆ ಅಷ್ಟೇ ಅಲ್ಲದೆ ಭಾರತ್ ಬಂದ್ ಕೂಡ ಮಾಡಲಾಗಿತ್ತು. ಆದರೂ ಶಾಶ್ವತವಾಗಿ ಕಾವೇರಿ ಜಲವಿವಾದವನ್ನು ಬಗೆಹರಿಸಲು ಎರಡೂ ರಾಜ್ಯಗಳ ನಾಯಕರಿಂದ ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಮೋದಿ ಸರಕಾರದ ಸಚಿವರಾದ ನಿತಿನ್ ಗಡ್ಕರಿ ಅವರು ಮುಂದಾಗಿದ್ದಾರೆ. ಕಾವೇರಿ ನದಿ ನೀರಿನ ವಿವಾದವನ್ನು ಪ್ರಧಾನಿ ಮೋದಿಯೇ ಮಧ್ಯಸ್ಥಿಕೆ ವಹಿಸಿ ಬಗೆಹರಿಸಬೇಕೆಂದು ಈ ಹಿಂದೆ ಎರಡೂ ರಾಜ್ಯಗಳ ನಾಯಕರು ಮನವಿ ಮಾಡಿದ್ದರು. ಆದರೆ ಇದೀಗ ಈ ಸಮಸ್ಯೆಗೆ ಪರಿಹಾರ ನೀಡಲು ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಮಾಸ್ಟರ್ ಪ್ಲಾನ್ ಮಾಡಿದ್ದು ಈ ಬಗ್ಗೆ ರೂಪುರೇಷೆ ತಯಾರಿಸಿದ್ದಾರೆ.!

ಪೋಲಾವರಂ ಬಳಿ ಡ್ಯಾಂ ನಿರ್ಮಿಸಿ ಕಾವೇರಿ ಜಲವಿವಾದಕ್ಕೆ ಬ್ರೇಕ್!

ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಗಡ್ಕರಿ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಜನರು ಅದೆಷ್ಟೋ ವರ್ಷಗಳಿಂದ ಕಾವೇರಿ ನೀರಿನ ವಿಚಾರವಾಗಿ ಗಲಾಟೆ ಮಾಡುತ್ತಲೇ ಇದ್ದಾರೆ, ಆದರೂ ಈವರೆಗೆ ಯಾವುದೇ ಪ್ರಯೋಜನ ಆಗಲಿಲ್ಲ. ಕೇವಲ ಎರಡು ರಾಜ್ಯಗಳ ನಡುವೆ ವೈಮನಸ್ಸು ಮೂಡುತ್ತಿದೆಯೇ ವಿನಃ ವಿವಾದ ಬಗೆಹರಿಯುವ ಹಾಗೆ ಕಾಣುತ್ತಿಲ್ಲ. ಆದ್ದರಿಂದ ಈ ಸಮಸ್ಯೆ ಬಗೆಹರಿಯಬೇಕಾದರೆ ಗೋದಾವರಿಯ 11,000 ಟಿಎಂಸಿ ನೀರು ಯಾವುದೇ ಉಪಯೋಗವಾಗದೆ ಸಮುದ್ರದ ಒಡಲು ಸೇರುತ್ತಿದೆ, ಆದರೆ ಈ ಬಗ್ಗೆ ಈ ಎರಡೂ ರಾಜ್ಯಗಳು ಗಮನಹರಿಸುತ್ತಿಲ್ಲ. ಸಮುದ್ರ ಪಾಲಾಗುವ ಈ ಬೃಹತ್ ಪ್ರಮಾಣದ ನೀರನ್ನು ಬಿಟ್ಟು ಕೇವಲ 60 ರಿಂದ 70 ಟಿಎಂಸಿ ನೀರಿಗಾಗಿ ಕಿತ್ತಾಟ ನಡೆಸುತ್ತಿದೆ. ಸ್ವಲ್ಪ ಬುದ್ದಿವಂತಿಕೆಯಿಂದ ಯೋಚಿಸಿದರೆ ಈ ವಿವಾದಕ್ಕೆ ಅಂತ್ಯ ಹಾಡಬಹುದು ಎಂದು ಗಡ್ಕರಿ ಹೇಳಿಕೊಂಡಿದ್ದಾರೆ. ಪೋಲಾವರಂ ಬಳಿ ಡ್ಯಾಂ ನಿರ್ಮಿಸಿದರೆ ನೀರಿನ ವಿವಾದವನ್ನು ಶಾಶ್ವತವಾಗಿ ಬಗೆಹರಿಸಬಹುದು ಎಂದು ಭರವಸೆ ನೀಡಿದ್ದಾರೆ.!

Image result for kaveri river

ಈಗಾಗಲೇ ಈ ಬಗ್ಗೆ ಡಿಪಿಆರ್ ತಯಾರಿಕೆ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದ್ದು, ಕೃಷ್ಣಾ ನದಿಗೆ ಹರಿಬಿಟ್ಟ ನೀರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಪೆನ್ನಾ ನದಿಗೆ ಸೇರಿಸಲಾಗುತ್ತದೆ, ಮತ್ತು ಪೆನ್ನಾ ನದಿಯಿಂದ ಕಾವೇರಿಗೆ ನೀರನ್ನು ಹರಿಯಬಿಡಲಾಗುತ್ತದೆ. ಈ ಮಹತ್ವದ ಯೋಜನೆಯಿಂದ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಬರೋಬ್ಬರಿ 450 ಟಿಎಂಸಿ ನೀರು ಸಿಗಲಿದ್ದು, ಎರಡೂ ರಾಜ್ಯಗಳ ಜಲವಿವಾದಕ್ಕೆ ಶಾಶ್ವತವಾಗಿ ಬ್ರೇಕ್ ಬೀಳಲಿದೆ. ರಾಜ್ಯದ ಜನರಿಗೆ ಮತ್ತು ರೈತರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ ಎಂದು ನಿತಿನ್ ಗಡ್ಕರಿ ಹೇಳಿಕೊಂಡಿದ್ದಾರೆ.!

ರಾಜಕೀಯಕ್ಕಾಗಿ ನಾಟಕ ಮಾಡುವ ನಾಯಕರ ನಡುವೆ ಮೋದಿ ಸರಕಾರದ ಒಬ್ಬೊಬ್ಬ ಸಚಿವರೂ ಕೂಡ ವಿಶೇಷವಾಗಿ ಗುರುತಿಸಲ್ಪಡುತ್ತಾರೆ ಏಕೆ ಎಂದು ಕೇಳಿದರೆ ಇದೇ ಕಾರಣ ಎಂದು ಎದೆತಟ್ಟಿ ಹೇಳಬಹುದು. ಯಾಕೆಂದರೆ ಕಾವೇರಿ ನದಿ ನೀರಿನ ಸಮಸ್ಯೆ ಇಂದು ನೆನ್ನೆಯದ್ದಲ್ಲ, ಅದೆಷ್ಟೋ ವರ್ಷಗಳಿಂದ ಪ್ರತೀ ವರ್ಷ ಕಾವೇರಿ ನೀರಿಗಾಗಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಗಲಭೆ ನಡೆಯುತ್ತಲೇ ಇರುತ್ತದೆ. ಆದರೆ ಇವೆಲ್ಲದಕ್ಕೂ ಕೊನೆಗಾಣಿಸಲು ಮೋದಿ ಸರಕಾರ ಮುಂದಾಗಿದೆ. ಆದ್ದರಿಂದ ಮೋದಿ ಸರಕಾರಕ್ಕೆ ಸಮಸ್ತ ಕರ್ನಾಟಕದ ಜನತೆಯ ಪರವಾಗಿ ನಾವು ಧನ್ಯವಾದ ಹೇಳಲೇಬೇಕಲ್ಲವೇ..??!!

–ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close