ಅಂಕಣದೇಶರಾಜ್ಯ

ಈ 21 ನೇ ಶತಮಾನ ಭಾರತಕ್ಕಷ್ಟೇ ಮೀಸಲು! ಮತ್ತೆ ಜಗದ್ಗುರುವಾಗಲು ಯಾಕೆ ಭಾರತ ಎಲ್ಲಾ ರೀತಿಯಲ್ಲಿಯೂ ತಯಾರಾಗುತ್ತಿದೆ ಗೊತ್ತೇನು?!

ಭಾರತ ಜಗತ್ತಿನ ವಿಶಿಷ್ಠ, ಶ್ರೇಷ್ಠ ದೇಶಗಳಲ್ಲೊಂದು. ವಿಶ್ವಗುರುವಾಗಿದ್ದ ಭಾರತ ಮತ್ತೆ ಗುರುಸ್ಥಾನದಲ್ಲಿ ವಿಜ್ರಂಭಿಸಲಿದೆ. ಆಧ್ಯಾತ್ಮಿಕ, ಸಾಂಸ್ಕøತಿಕ, ಕಲೆ ಮುಂತಾದ ಕ್ಷೇತ್ರಗಳಲ್ಲಿ ಅಗ್ರಗಣ್ಯ ಸ್ಥಾನದಲ್ಲಿರುವ ಭಾರತ ಭೌಗೋಳಿಕವಾಗಿಯೂ ವಿಶಿಷ್ಠ ಸ್ಥಾನದಲ್ಲಿದೆ. ಯಾಕೆಂದರೆ ಇಡೀ ಜಗತ್ತಲ್ಲಿರುವ ಭೌಗೋಳಿಕ ಗುಣಲಕ್ಷಣಗಳು ಭಾರತದಲ್ಲಿಯೇ ಇದೆ. ಇವೆಲ್ಲವೂ ಭಾರತವನ್ನು ಜಗತ್ತಲ್ಲೇ ಮೇಲ್ಪಂಕ್ತಿಯಲ್ಲಿ ಗುರುತಿಸುವಂತೆ ಮಾಡಿದೆ.

ಹೌದು, 21ನೇ ಶತಮಾನ ಭಾರತಕ್ಕೆ ಸೇರಿದೆ. ಮುಂದಿನ ವಿಶ್ವದ ದೊಡ್ಡಣ್ಣ ಭಾರತ….ಇದಕ್ಕೆ ಕಾರಣವೂ ಇದೆ…

ಸಂಸ್ಕøತಿ:
ಭಾರತದ ಸಂಸ್ಕøತಿಗೆ ಮಿಗಿಲಾಗಿರುವುದು ಏನೂ ಇಲ್ಲ. ಭಾರತದ ಸಂಸ್ಕøತಿಯ ಆಳವೆಷ್ಟು ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಭಾರತದಲ್ಲಿರುವ ಕುಟುಂಬ ವ್ಯವಸ್ಥೆ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಕುಟುಂಬ ವ್ಯವಸ್ಥೆ ಭಾರತದ ಬೆನ್ನುಲುಬಾಗಿದೆ. ನೀವು ನಂಬ್ಲೇಬೇಕು. ಭಾರತದ ಕುಟುಂಬ ವ್ಯವಸ್ಥೆಯನ್ನು ನೋಡಿ ಆನಂದಿಸಲೆಂದು ವಿದೇಶದಿಂದ ಜನರು ಬರುತ್ತಾರೆ. ಭಾರತದ ಸಂಸ್ಕøತಿ ಈ ರೀತಿ ಲಕ್ಷಾಂತರ ಮಂದಿಯನ್ನು ಆಕರ್ಷಿಸಿದೆ. .

ಪ್ರಾಣಿ, ಸಸ್ಯ, ಕೃಷಿ ಸಂಪತ್ತು:
90,000 ವಿವಿಧ ಪ್ರಬೇಧದ ಸಸ್ಯಗಳು, 45,000 ಸಸ್ಯ ಪ್ರಬೇಧಗಳು, 16,000ಕ್ಕೂ ಅಧಿಕ ವಿಧದ ಹೂ ಬಿಡುವ ಸಸ್ಯಗಳು… ಇಡೀ ಜಗತ್ತಲ್ಲಿರುವ ಸಸ್ಯ, ಪ್ರಾಣಿ ಪ್ರಬೇಧಗಳ ಶೇ. 10 ಭಾರತದಲ್ಲಿಯೇ ಇದೆ. ಕೃಷಿಯ ವಿಷಯದಲ್ಲಿ ಹೇಳುವುದಾದರೆ ಭಾರತವು ಹಣ್ಣುಗಳು, ಬೇಳೆಕಾಳುಗಳು, ತರಕಾರಿಗಳು ಮತ್ತು ಮಸಾಲೆ ಪದಾರ್ಥಗಳನ್ನು ಉತ್ಪಾದಿಸುವ ಏಕೈಕ ಒಂದಾಗಿದೆ. ಕೃಷಿಯ ಸರಿಯಾದ ಅಭಿವೃದ್ಧಿಯೊಂದಿಗೆ, ದೇಶವು ಹಸಿರು ಕ್ರಾಂತಿಯನ್ನು ಕೈಗೊಂಡು ಭಾರತವನ್ನು ಇನ್ನೊಂದು ರಾಷ್ಟ್ರ ಬೆರುಗಣ್ಣಿನಿಂದ ನೋಡುವಂತಾಗಿದೆ.

ಮಹಿಳೆಯರಿಗೆ ಗೌರವ ಸ್ಥಾನಮಾನ:
ಭಾರತದಲ್ಲಿ ಸ್ತ್ರೀಯರಿಗಿರುವ ಗೌರವ ಬೇರೆಲ್ಲೂ ಕಾಣಸಿಗದು. ಭಾರತದಲ್ಲಿ ಸ್ತ್ರೀಯರನ್ನು ದೇವತೆಯಂತೆ ಕಾಣಲಾಗುತ್ತದೆ. ಅಲ್ಲದೆ ಸ್ತ್ರೀ ದೇವರನ್ನು ಭಾರತದಲ್ಲಿಯಲ್ಲದೆ ಬೇರೆಲ್ಲೂ, ಬೇರೆ ಯಾವ ಧರ್ಮದಲ್ಲೂ ಪೂಜಿಸುವುದನ್ನು ಕಾಣಲು ಸಾಧ್ಯವಿಲ್ಲ. ನಾವು ಕುಮಾರಿಯರನ್ನೂ ಪೂಜಿಸುತ್ತೇವೆ. ನಮ್ಮ ಸಮಾಜವು ಮಹಿಳೆಯರಿಗೆ ದೇವತೆಗಳ ಸ್ಥಾನಮಾನವನ್ನು ಕೊಟ್ಟಿದೆ. ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ ಅಂದರೆ ಎಲ್ಲಿ ಸ್ತ್ರೀ ಇರುತ್ತಾಳೋ ಅಲ್ಲಿ ದೇವತೆಗಳು ವಾಸ ಮಾಡುತ್ತಾರೆ ಎನ್ನುವ ಮಾತು ಸ್ತ್ರೀಯರಿಗೆ ಇರುವ ವಿಶೇಷ ಸ್ಥಾನಮಾನವನ್ನು ಸೂಚಿಸುತ್ತದೆ. ಜಗತ್ತಿನ ಎಲ್ಲ ಕ್ಷೇತ್ರಗಳಲ್ಲೂ ಮಹಿಳಾ ನಾಯಕರನ್ನು ನಾವು ಹೊಂದಿದ್ದೇವೆ. ಮಹಿಳಾ ಸುರಕ್ಷತೆಗೆ ಸಂಬಂಧಿಸಿ ಭಾರತದಲ್ಲಿ ವಿಶಿಷ್ಠ ಕಾಳಜಿಯನ್ನು ವಹಿಸಲಾಗುತ್ತದೆ. ಇಂದು ಮಹಿಳೆಯರಲ್ಲಿ ಹೆಚ್ಚಿನ ಸುಧಾರಣೆ ಮಾಡಲೆಂದು ಸಾಮಾಜಿಕ ಮತ್ತು ಸರ್ಕಾರದ ಮಟ್ಟದಲ್ಲಿ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ನೈಸರ್ಗಿಕ ವೈವಿಧ್ಯತೆ:
ಭಾರತ ವಿವಿಧ ರೀತಿಯ ಪರಿಸರ ಪ್ರದೇಶಗಳಿಗೆ ತವರು ನೆಲೆಯಾಗಿದೆ. ಹವಾಮಾನ, ವಿಭಿನ್ನ ಋತುಗಳು, ವಿಭಿನ್ನ ಸಸ್ಯವರ್ಗಗಳು, ವಿವಿಧ ರೀತಿಯ ಮಣ್ಣು,
ಹಲವಾರು ನದಿಗಳು, ಕೊಳಗಳು, ಸರೋವರಗಳು, ಪರ್ವತಗಳು, ಪ್ರಸ್ಥಭೂಮಿಗಳು ಇತ್ಯಾದಿ… ಕಲ್ಲಿದ್ದಲು, ಖನಿಜ ಅದಿರು ಸೇರಿ ಇತರ ನೈಸರ್ಗಿಕ ಸಂಪತ್ತನ್ನು
ಭಾರತ ಹೊಂದಿದೆ. ಇಂದು ನಾವು ಹೊಂದಿರುವ ನೈಸರ್ಗಿಕ ಸಂಪನ್ಮೂಲಗಳ ಪ್ರಮಾಣವು ಕಂಡು ಅನೇಕ ದೇಶಗಳು ಅಸೂಯೆ ಪಡುತ್ತವೆ. ಮೊದಲಿನ
ಸಂಪನ್ಮೂಲಗಳನ್ನು ಲೂಟಿ ಮಾಡಲಾಗಿದೆ ಮತ್ತು ಸರಿಯಾಗಿ ಉಪಯೋಗಿಸಲಾಗಿಲ್ಲ. ಅದಕ್ಕಾಗಿಯೇ ಇಂದು ಕೆಲವೊಂದು ರೀತಿ ನೀತಿಗಳನ್ನು ಜಾರಿಗೊಳಿಸಲಾಗಿದೆ. ಕೆಲವೊಂದು ಕ್ಷೇತ್ರದಲ್ಲಿ ಬದಲಾವಣೆಗಳನ್ನು ತರಲಾಗಿದೆ. ಸ್ಪಷ್ಟವಾದ ಮಾರ್ಗಸೂಚಿಯ ಮೂಲಕ ಸಂಪನ್ಮೂಲಗಳ ಉತ್ಪಾದನೆ ಮತ್ತು ಬಳಕೆಯ ಪ್ರಮಾಣವನ್ನು ಮಹತ್ತರವಾಗಿ ಹೆಚ್ಚಿಸಲಾಗಿದೆ. ಆದರೆ ಭಾರತ ನೈಸರ್ಗಿಕ ಸಂಪನ್ಮೂಲಗಳನ್ನು ಸರಿಯಾದ ಕ್ರಮದಲ್ಲಿ ಬಳಕೆ ಮಾಡದ ಕಾರಣ ನಾವು ಬೇರೆದೇಶಗಳಿಂದ ಆಮದು ಮಾಡಿಕೊಳ್ಳುತ್ತೇವೆ. ನೈಸರ್ಗಿಕ ಶಕ್ತಿಯನ್ನು ಸರಿಯಾಗಿ ಬಳಸಿದರೆ ವಿದ್ಯುತ್ ಉತ್ಪಾದನೆ ಮತ್ತು ಕೈಗಾರಿಕೆಗಳಿಗೆ ದೊಡ್ಡ ಉತ್ತೇಜನ ನೀಡಿದೆ.

ಜನಸಂಪತ್ತು:
ನಮ್ಮ ಅತಿದೊಡ್ಡ ಆಸ್ತಿ – ಜನಸಂಖ್ಯೆ. ದೇಶದ 65% ರಷ್ಟು ಜನರ ವಯೋಮಾನ 35 ವರ್ಷಕ್ಕಿಂತ ಕಡಿಮೆಯಿರುತ್ತದೆ. ಇಂತಹಾ ದೊಡ್ಡ ಯುವ ಸಂಪತ್ತು ಮತ್ತು
ಸಮರ್ಥ ಜನಸಂಖ್ಯೆಯೊಂದಿಗೆ ಭಾರತವು ಮಹಾಶಕ್ತಿಯಾಗಲು ಬೇರೆ ಕಾರಣವೇ ಬೇಕಿಲ್ಲ. ಯುರೋಪ್ , ಚೀನಾ ಮತ್ತು ಜಪಾನ್ ಎಲ್ಲಾ ದೇಶಗಳಲ್ಲಿ ವೃದ್ಧರ ಸಂಖ್ಯೆ ಜಾಸ್ತಿಯಾಗುತ್ತಿದ್ದಾಗ ಭಾರತವು ಯುವಜನತೆಯಲ್ಲಿ ಉತ್ತುಂಗದಲ್ಲಿದೆ. ಯುವಕರು ಅಧಿಕಾರ ಪಡೆಯುತ್ತಿದ್ದು ಭಾರತವನ್ನು ಮುನ್ನಡೆಸಲು ಶಕ್ತರಾಗಿದ್ದಾರೆ. ಯುವಕರನ್ನು ನಿಪುಣರನ್ನಾಗಿಸುವ ಕೌಶಲ್ಯಗಳನ್ನು ನೀಡಲಾಗುತ್ತಿದೆ. ಭಾರತದ ಯುವಜನತೆ ಪ್ರತಿಭಾನ್ವಿತರಾಗಿದ್ದು, ಇವರಿಗೆ ಸೂಕ್ತ ಉದ್ಯೋಗವನ್ನು ನೀಡಿ ಭಾರತವನ್ನು ಎತ್ತರಕ್ಕೆ ಕರೆದೊಯ್ಯುವ ಕೆಲಸ ನಡೆಯುತ್ತದೆ.

ಪ್ರಜಾಪ್ರಭುತ್ವ:
ಭಾರತ ಕೇವಲ ಪ್ರಜಾಪ್ರಭುತ್ವ ರಾಷ್ಟ್ರ ಮಾತ್ರವಲ್ಲ ಪ್ರಜಾಪ್ರಭುತ್ವದಿಂದ ಏನೆಲ್ಲಾ ಸಾಧಿಸಬಹುದೆಂದು ಜಗತ್ತಿಗೆ ತೋರಿಸಿಕೊಟ್ಟಿದ್ದೇವೆ. ಜಗತ್ತಲ್ಲಿ ಸರ್ವಾಧಿಕಾರ
ಧೋರಣೆ ಇದ್ದ ಸಂದರ್ಭದಲ್ಲಿ ಭಾರತ ಪ್ರಜಾಪ್ರಭುತ್ವತೆಯನ್ನು ಸ್ವೀಕರಿಸಿ ಇಂದು ದೇಶ ಉಚ್ಛ ಸ್ಥಾನಮಾನದಲ್ಲಿದ್ದು, ಪ್ರಜಾಪ್ರಭುತ್ವದಿಂದ ದೇಶದ ದಿಕ್ಕು ಬದಲಾಗುತ್ತದೆ ಎನ್ನುವುದಕ್ಕೆ ಭಾರತವೇ ಸೂಕ್ತ. ಭಾರತ ವಿಶ್ವದ ಮಹಾನ್ ಪ್ರಜಾಪ್ರಭುತ್ವ ರಾಷ್ಟ್ರ. ಪ್ರಜಾಪ್ರುಭುತ್ವದಿಂದಲೇ ಕಳೆದ ಮೂರು ದಶಕಗಳಿಂದ ಶೇ. 7-8ರಷ್ಟು ಸ್ಥಿರವಾದ ಬೆಳವಣಿಗೆಯನ್ನು ಕಾಯ್ದುಕೊಂಡು ಬಂದಿದೆ.

ಜ್ಞಾನ:

ಭಾರತದ ಜ್ಞಾನ ಎಷ್ಟು ಶ್ರೇಷ್ಠಮಟ್ಟದಲ್ಲಿ ಇದೆ ಎಂದರೆ ಭಾರತೀಯರು ಬಾಹ್ಯಾಕಾಶದ ಬಗ್ಗೆ ಅಧ್ಯಯನ ಮಾಡುತ್ತಿದ್ದಾಗ ಪಾಶ್ಚಿಮಾತ್ಯರು ಕಾಡುಮನುಷ್ಯರಂತೆ
ತಿರುಗಾಡುತ್ತಿದ್ದರು. ಭಾರತೀಯರು ಜ್ಞಾನದ ಅನ್ವೇಷಕರು. ನಮ್ಮ ಸಮಾಜ, ನಮ್ಮ ಸಂಸ್ಕೃತಿ ಪ್ರತಿಯೊಂದು ಕೂಡಾ ಜ್ಞಾನಕ್ಕೆ ಪೂರಕ ಎನಿಸಿದೆ. ಭಾರತದಲ್ಲಿ
ಜ್ಞಾನವೇ ಹೆಚ್ಚು ಗೌರವಾನ್ವಿತ ಗುಣವಾಗಿದೆ -ನಹೀ ಜ್ಞಾನೇನ ಸದೃಶ್ಯಂ ಅಂದರೆ ಜ್ಞಾನಕ್ಕಿಂತ ಮಿಗಿಲಾದುದು ಏನೂ ಇಲ್ಲ ಎಂಬಂತೆ ನಡೆದಾಡುವವರು ಭಾರತೀಯರು. ಶಿಕ್ಷಣ, ಶಸ್ತ್ರಚಿಕಿತ್ಸೆ, ಔಷಧಿ, ತತ್ವಶಾಸ್ತ್ರ ಇವೆಲ್ಲಾ ಬೆಳೆದದ್ದು ಭಾರತದಲ್ಲಿ. ಭಾರತದಲ್ಲಿ ಪ್ರಾಚೀನ ಕಾಲದಿಂದಲೇ ಸಾಕಷ್ಟು ವಿಶ್ವವಿದ್ಯಾಲಯಗಳನ್ನು ನಿರ್ಮಿಸಿರುವುದರಿಂದ ಭಾರತ ಐತಿಹಾಸಿಕವಾಗಿ ಜ್ಞಾನದ ಅತ್ಯುನ್ನತ ಗೌರವವನ್ನು ಹೊಂದಿರುವ ಸ್ಥಳವಾಗಿದೆ.

ಎಲ್ಲವನ್ನೂ ಒಟ್ಟಿಗೆ ಹೊಂದಿರುವ ದೇಶ ಭಾರತವಾಗಿದ್ದು, ಇಂಥಾ ದೇಶ ವಿಶ್ವದಲ್ಲಿ ಬೇರೆಲ್ಲೂ ಇಲ್ಲ. ಆದರೆ ದೇಶದಲ್ಲಿ ಹಲವಾರು ಸುಧಾರಣೆಗಳಾಗಬೇಕಿದೆ. ಅದಕ್ಕಾಗಿ ಭಾರತೀಯರಾದ ನಾವು ಕಠಿಣ ಹಾಗೂ ವ್ಯವಸ್ಥಿತವಾಗಿ ದುಡಿಯಬೇಕಾಗಿದೆ. ಭಾರತದ ಬುನಾದಿ ಭದ್ರವಾಗಿದ್ದು, ಈ ಸುದೃಢ ಅಡಿಪಾಯದಿಂದ ಭಾರತವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಬೇಕಾಗಿದೆ. ಭಾರತವನ್ನು ಇನ್ನಷ್ಟು ಬೆಳೆಸಬೇಕೆಂಬ ಆಶಾವಾದನ್ನು ಬೆಳೆಸಿಕೊಂಡು ಆತ್ಮವಿಶ್ವಾಸದಿಂದ ಮುನ್ನಡೆದರೆ ಮುಂದಿನ ಯುಗ ಭಾರತದ್ದಾಗಲಿದೆ. ನಾವು ಭಾರತವನ್ನು ಮತ್ತೆ ವಿಶ್ವಗುರುವನ್ನಾಗಿಸುವತ್ತ ಚಿತ್ತ ಹರಿಸಬೇಕು. ನಕಾರಾತ್ಮಕತೆ, ನಿರಾಶಾವಾದವು ನಮ್ಮನ್ನೆಂದೂ ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ. 21ನೇ ಶತಮಾನದ ನಂತರ ಇಡೀ ಜಗತ್ತೇ ನಮ್ಮದಾಗಬೇಕಾದರೆ ಭಾರತೀಯರಾದ ನಮ್ಮ ಕಠಿಣ ಪರಿಶ್ರಮವೂ ಮುಖ್ಯ.

ಜೈ ಹೋ!!

-ಚೇಕಿತಾನ

Tags

Related Articles

Close