ಅಂಕಣ

ಈ ರಾಜಕೀಯ ನಾಯಕನನ್ನು ಮಂತ್ರಾಲಯದ ಸ್ವಾಮೀಜಿಯವರು ಕರ್ನಾಟಕದ ಆಪತ್ಭಾಂಧವ ಎಂದು ಯಾಕೆ ಕರೆದಿದ್ದರು ಗೊತ್ತೆ?!

ಆಪತ್ಬಾಂಧವನಿಗೆ ಬಹುಪರಾಕ್!!

ಅವರೆಂದರೆ ಇಡೀ ರಾಜ್ಯವೇ ಹೆಮ್ಮೆ ಪಡುತ್ತಿತ್ತು. ಅನೇಕ ವರ್ಷಗಳಲ್ಲಿ ದಾಸ್ಯದ ನೆರಳಿನಲ್ಲಿ ಬದುಕುತ್ತಿದ್ದ ಕರ್ನಾಟಕದ ಜನತೆಗೆ ಹೊಸಬೆಳಕನ್ನು ನೀಡಲು ಬಂದ ಮಹಾನುಭಾವ ಎಂದೇ ಆತನನ್ನು ಹಾಡಿ ಹೊಗಳುತ್ತಿದ್ದರು. ಈವರೆಗೆ ನಾವು ಅವರೋ ಇವರೋ ಹೇಳಿದ ಹಾಗೆ ಬದುಕುತ್ತಿದ್ದೆವು. ಆದರೆ ಇಂದು ಒಂದು ಸಮರ್ಥ ರಾಜ್ಯದಲ್ಲಿ ಸ್ವಾಭಿಮಾನಯುತವಾಗಿ ಬದುಕುತ್ತಿದ್ದೇವೆ ಎಂದರೆ ಅವರೇ ಕಾರಣ…

ಇದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರನ್ನು ರಾಜ್ಯದ ಜನತೆ ಹೊಗಳುವ ಪರಿ. ಅಲ್ವೇ ಮತ್ತೆ… ಗುಡಿಸಿ ಗುಂಡಾಂತರ ಮಾಡಿದ ಈ ರಾಜ್ಯವನ್ನು ಪುನಶ್ಛೇತನಗೊಳಿಸಿದವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು. ಹಲವಾರು ಜನಪರ ಯೋಜನೆಗಳನ್ನು ರಾಜ್ಯದ ಜನತೆಗೆ ಕರುಣಿಸಿ ನಿಜವಾದ ಮುಖ್ಯಮಂತ್ರಿ ಎನಿಸಿಕೊಂಡವರು ಯಡಿಯೂರಪ್ಪನವರು.

ಯಡಿಯೂರಪ್ಪರನ್ನು ಆಪತ್ಬಾಂಧವ ಎಂದ ಶ್ರೀಗಳು…!!!

ಯಡಿಯೂರಪ್ಪನವರು ಕೇವಲ ಯೋಜನೆಗಳನ್ನು ರೂಪಿಸಿ ಅಭಿವೃದ್ಧಿಯ ಹರಿಕಾರ ಮಾತ್ರವಾಗಿಲ್ಲ. ಬದಲಾಗಿ ಮಾನವೀಯತೆಯ ಪ್ರತೀಕವಾಗಿದ್ದರು
ಯಡಿಯೂರಪ್ಪನವರು. ಹೀಗೆಂದು ಬಿಎಸ್.ಯಡಿಯೂರಪ್ಪನವರನ್ನು ಹಾಡಿ ಹೊಗಳಿದ್ದು ಬೇರಾರೂ ಅಲ್ಲ. ಕೋಟಿ ಕೋಟಿ ಭಕ್ತರು ಆರಾಧಿಸುವ ರಾಯರ ಆಲಯವಾದ ಮಂತ್ರಾಲಯದ ಯತಿವರ್ಯರಾದ ಸುಯತೀಂದ್ರ ತೀರ್ಥರು.

ಹೌದು… ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ, ಹಿಂದಿನ ಗುರುಗಳಾದ ಸುಯತೀಂದ್ರ ತೀರ್ಥರು ಯಡಿಯೂರಪ್ಪನವರನ್ನು ಭೇಟಿಯಾದಗಲೆಲ್ಲಾ “ಆಪತ್ಭಾಂಧವ” ಎಂದು ಸಂಭೋದಿಸುತ್ತಿದ್ದರು. ಬಹು ಪ್ರೀತಿಯಿಂದಲೇ ಈ ಒಂದು ಪದವನ್ನಿಟ್ಟು ಯಡಿಯೂರಪ್ಪನವರನ್ನು ಕರೆಯುತ್ತಿದ್ದರು. ಇದನ್ನು ಗಮನಿಸಿದ ಪತ್ರಕರ್ತರೊಬ್ಬರು ಸುಯತೀಂದ್ರ ತೀರ್ಥರನ್ನು ಪ್ರಶ್ನಿಸುತ್ತಾರೆ. “ಸ್ವಾಮೀಜೀ… ಇಡೀ ಭಕ್ತ ಸಮೂಹವೇ ತಮ್ಮನ್ನು ಆಪತ್ಬಾಂಧವ ಎಂದು ನಂಬಿ ಆರಾಧಿಸುತ್ತಿದೆ. ವೈಭವದಿಂದ ಕೊಂಡಾಡುತ್ತಿದೆ. ಇಲ್ಲಿಗೆ ಆಗಮಿಸುವ ಭಕ್ತರಿಗೆ ನೀವೇ ದಾರಿದೀಪವಾಗಿದ್ದೀರಿ. ಅನೇಕ ಭಕ್ತರು ನಿಮ್ಮನ್ನೇ ದೇವರು ಎಂದು ಆರಾಧಿಸುತ್ತಿದ್ದಾರೆ. ಆದರೆ ನೀವು ಮಾತ್ರ ಬಿ.ಎಸ್.ಯಡಿಯೂರಪ್ಪನವರನ್ನು ಆಪತ್ಬಾಂಧವ ಎಂದು ಸಂಭೋದಿಸುತ್ತೀರಲ್ವಾ… ಏನಿದರ ಮರ್ಮ?” ಎಂದು ಪ್ರಶ್ನಿಸುತ್ತಾರೆ.

ಸ್ವಾಮೀಜಿ ಒಂದು ಕ್ಷಣ ಭಾವುಕರಾಗುತ್ತಾರೆ. ಅಂದು ಆ ಪತ್ರಕರ್ತನ ಬಳಿ ಸ್ವಾಮೀಜಿ ಹೇಳಿದ್ದ ಮಾತು ನಿಜಕ್ಕೂ ಆದರ್ಶವಾಗಿತ್ತು. ಸ್ವಾಮೀಜಿ ಹೇಳುತ್ತಾರೆ, “ಯಡಿಯೂರಪ್ಪ ಓರ್ವ ಪ್ರಭಾವಿ ರಾಜಕಾರಣಿ ಎನ್ನುವ ಉದ್ಧೇಶದಿಂದ ಈ ಮಾತನ್ನು ನಾನು ಹೇಳುತ್ತಿಲ್ಲ. ಅವರನ್ನು ಹೊಗಳಿ ಸಂತುಷ್ಟಗೊಳಿಸುವ ಉದ್ಧೇಶವೂ ನಮ್ಮಲಿಲ್ಲ. ನಿಮಗೆಲ್ಲರಿಗೂ ತಿಳಿದಿರುವಂತೆ 2009ರಲ್ಲಿ ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿ ಇಡೀ ಮಂತ್ರಾಲಯವೇ ಜಲಾವೃತವಾಗಿತ್ತು. ಸುತ್ತ ಮುತ್ತಲಿನ ಪ್ರದೇಶವೆಲ್ಲಾ ಮುಳುಗಿ ಹೋಗಿತ್ತು. ಈ ಜಳಪ್ರಳಯ ರಾಯರ ಮಂತ್ರಾಲಯವನ್ನೂ ಬಿಟ್ಟಿರಲಿಲ್ಲ. ದೇವಾಲಯವೆಲ್ಲಾ ನೀರು ತುಂಬಿ ಹೋಗಿತ್ತು. ದೇವಾಲಯ ಜಲಾವೃತವಾದಾಗ ನಾನು ಮತ್ತು ಭಕ್ತರು ಪ್ರವಾಹದಲ್ಲಿ ಸಿಲುಕಿದ್ದೆವು. ಎಲ್ಲವೂ ಮುಗಿದೇ ಹೋಯಿತು ಎಂಬ ಆತಂಕದಲ್ಲಿ ಮುಳುಗಿದ್ದೆವು. ಇನ್ನೇನು ನೀರಲ್ಲಿ ನಾವೆಲ್ಲಾ ಕೊಚ್ಚಿಕೊಂಡು ಹೋಗುವಷ್ಟರಲ್ಲಿ ಪಕ್ಕನೆ ಹೆಲಿಕಾಫ್ಟರ್ ಒಂದು ಜೀವ ರಕ್ಷಕನಾಗಿ ಆಗಮಿಸಿ ನಮ್ಮನ್ನು ಪ್ರಾಣಾಪಾಯದಿಂದ ಪಾರು ಮಾಡಿತ್ತು.

ಅಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರ ನೇತೃತ್ವದ ತಂಡವೊಂದು ಮಂತ್ರಾಲಯದಲ್ಲಿ ಜಲಪ್ರಳಯವನ್ನು ಸಮರ್ಥವಾಗಿ ಸರಿದೂಗಿಸಿತ್ತು. ಯಾವುದೇ ಜೀವಹಾನಿಯಾಗದೆ ಸಮರೋಪಾದಿಯಲ್ಲಿ ಸಾಗಿತ್ತು. ಮಾತ್ರವಲ್ಲದೆ ಪ್ರಕೃತಿ ವಿಕೋಪದಿಂದ ಜಲಾವೃತಗೊ0ಡಿದ್ದ, ಬೆಡಗು ಬಣ್ಣಗಳನ್ನು ಕಳೆದುಕೊಂಡಿದ್ದ ಮಂತ್ರಾಲಯ ಯಥಾಶೀಘ್ರ ಪುನರುತ್ಥಾನವನ್ನು ಕಂಡಿತ್ತು. ಈ ಒಂದು ಕಾರ್ಯದಲ್ಲಿ ಬಿ.ಎಸ್.ಯಡಿಯೂರಪ್ಪನವರ ಕೆಲಸ ಮಹತ್ವದ್ದಾಗಿತ್ತು. ಅಂದು ಆ ಒಂದು ಹೆಲಿಕಾಫ್ಟರ್ ಬಾರದಿದ್ದರೆ ಇಂದು ನಾವು ಹೇಗಿತುತ್ತಿದ್ದೆವೋ ಏನೋ..!” ಎಂದು ಭಾವುಕರಾಗಿ ನುಡಿದಿದ್ದರು ಮಂತ್ರಾಲಯದ ಸುಯತೀಂದ್ರ ತೀರ್ಥ ಸ್ವಾಮೀಜಿ.

“ಯಡಿಯೂರಪ್ಪ ನಿಜ ಅರ್ಥದಲ್ಲಿ ಆಪಾತ್ಬಾಂಧವ” ಎಂದು ಅಂದಿನ ಘಟನೆಯನ್ನು ನೆನೆದು ನಿಧಾನವಾಗಿ ಪತ್ರಕರ್ತರಿಗೆ ವಿವರಿಸುತ್ತಾರೆ. ಮತ್ತೂ ತಮ್ಮ
ಮಾತುಗಳನ್ನು ಮುಂದುವರೆಸಿದ ಸ್ವಾಮೀಜಿಗಳು, “ಯಡಿಯೂರಪ್ಪ ಎಲ್ಲರ ಆಪಾದ್ಬಾಂಭವ. ಆದ್ದರಿಂದಲೇ ಕರುನಾಡಿನ ಜನತೆ ಅವರನ್ನು ತಮ್ಮ ನಾಯಕ ಎಂದು ಗುರುತಿಸಿಕೊಂಡಿದ್ದಾರೆ. ಅವರ ಚಟುವಟಿಕೆ, ಲವಲವಿಕೆ, ಓಡಾಟ, ಹೋರಾಟದ ಕಿಚ್ಚು, ಜನಸ್ಪಂಧನ ಗಮನಿಸಿದರೆ ಅವರಿನ್ನೂ 25ರ ಯುವಕರಂತೆ ಕಾಣುತ್ತಿದ್ದಾರೆ. ಅವರು ಕರ್ನಾಟಕ ಕಂಡ ಅಪರೂಪದ ಜನನಾಯಕ. ಅಭಿವೃದ್ಧಿಯ ಹರಿಕಾರ. ಅವರು ಅಧಿಕಾರದಲ್ಲಿದ್ದಾಗ ಪ್ರವಾಹವೂ ಬಂತು, ಮಾತ್ರವಲ್ಲದೆ ಪ್ರವಾಹದಂತಹ ಸಮಸ್ಯೆಗಳೂ ಬಂದವು. ಅವೆಲ್ಲವನ್ನೂ ಸಮರ್ಥವಾಗಿ, ಎದೆಗುಂದದೆ ಎದುರಿಸಿದ ಧೀಮಂತ ನಾಯಕ ಯಡಿಯೂರಪ್ಪ” ಎಂದು ಹಾಡಿ ಹೊಗಳಿದ್ದರು.

ಜನರ ನಾಡಿ ಮಿಡಿತವೇ ಯಡಿಯೂರಪ್ಪ…

ಇದು ಕೇವಲ ಮಂತ್ರಾಲಯದ ಯತಿವರ್ಯರಾದ ಸುಯತೀಂಧ್ರ ಸ್ವಾಮೀಜಿಗಳ ಮಾತಲ್ಲ. ಕರ್ನಾಟಕದ ಜನರ ನಾಡಿ ಮಿಡಿತವೇ ಬಿ.ಎಸ್.ಯಡಿಯೂರಪ್ಪ. ಇಂದಿಗೂ ಜನರು ಯಡಿಯೂರಪ್ಪನವರನ್ನೇ ತಮ್ಮ ನಾಯಕನನ್ನಾಗಿ ಆಯ್ಕೆ ಮಡಿಕೊಂಡಿದ್ದಾರೆ. ಬಡ, ದಲಿತ ಹಾಗೂ ಹಿಂದುಳಿದ ಜನರ ಪಾಲಿಗೆ ಆಶಾಕಿರಣವಾಗಿರುವ ಯಡಿಯೂರಪ್ಪನವರು ಕರುನಾಡಿನ ಜನತೆಯ ಪಾಲಿಗೆ ಜನನಾಯಕನೆಂದರೆ ತಪ್ಪಾಗಲಾರದು.

ಯಡಿಯೂರಪ್ಪ ಹೋದಲೆಲ್ಲಾ ಬಹುಪರಾಕ್, ಬಹುಪರಾಕ್…!

ಅದ್ಯಾವುದೇ ಕಾರ್ಯಕ್ರಮವಿರಲಿ, ಅಲ್ಲಿ ಯಡಿಯೂರಪ್ಪ ಇದ್ದಾರೆ ಎಂದರೆ ಜನರು ಮುಗಿ ಬಿದ್ದು ಬೀಳುತ್ತಾರೆ. ಯಡಿಯೂರಪ್ಪನವರು ಬರ್ತಾರೆ ಎಂದರೆ
ಜನಸಾಗರವೇ ಹರಿದು ಬರುತ್ತೆ. ರಾಷ್ಟ್ರದಲ್ಲಿ 60 ವರ್ಷ ಆಡಳಿತವನ್ನು ಮಾಡಿದ ಪಕ್ಷವೊಂದರ ನಾಯಕರು ಎನಿಸಿಕೊಂಡವರು ಬರುವಾಗ ಹಣ ಕೊಟ್ಟು ಸೇರಿಸಿದರೂ ಸೇರದ ಜನರು ಯಡಿಯೂರಪ್ಪನವರು ಬರುತ್ತಾರೆಂದರೆ ಸಾವಿ ಸಾವಿರ ಸಂಖ್ಯೆಯಲ್ಲಿ ಸೇರುತ್ತಾರೆ. ಇದು ಕರ್ನಾಟಕದಲ್ಲಿ ಆಡಳಿತ ಇಲ್ಲದಿದ್ದರೂ ಹೋದಲ್ಲಿ ಬಂದಲ್ಲಿ ಜನ ಅವರನ್ನು ಬಹು ಪ್ರೀತಿಯಿಂದ ಸ್ವಾಗತಿಸುತ್ತಾರೆ. ಇದು ಯಡಿಯೂರಪ್ಪನವರು ನಮ್ಮ ಜನನಾಯಕನೆಂದು ಜನರು ಪ್ರೀತಿಸುವ ಪರಿ.

ಮೋದಿ, ಅಮಿತ್ ಶಾ ಎದುರೇ ಯಡಿಯೂರಪ್ಪನವರ ಉದ್ಘೋಷ..!!!

ಹೌದು. ಮೋದಿ ಮತ್ತು ಅಮಿತ್ ಶಾ ಎಂದರೆ ವಿರೋಧ ಪಕ್ಷಗಳ ಎದೆಯಲ್ಲಿ ನಡುಕ ಶುರುವಾಗುತ್ತದೆ ಎಂಬ ವಿಚಾರ ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಇಬ್ಬರು ನಾಯಕರು ಬರುತ್ತಾರೆಂದರೆ ಇಡೀ ರಾಜ್ಯವೇ ಒಮ್ಮೆ ಮೈಕೊಡವಿ ಎದ್ದು ಬಿಡುತ್ತದೆ. ಮೋದಿ-ಶಾ ಜೋಡಿಗೆ ಜಗತ್ತೇ ತಲೆಬಾಗಿದ್ದು ಅವರೆಲ್ಲೇ ಹೋದರೂ ಜನರು ಚಾತಕ ಪಕ್ಷಿಗಳಂತೆ ಕಾಯುತ್ತಾ ನಿಲ್ಲುತ್ತಾರೆ. ಹಾಗೇನೇ ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪನವರು ಕೂಡಾ ಜನರ ಪಾಲಿಗೆ ಹೀರೋ ಆಗಿದ್ದಾರೆ.

ಮೋದಿ ಅಥವಾ ಅಮಿತ್ ಶಾ ವೇದಿಕೆಯಲ್ಲಿರುವಾಗ ಅವರ ಎದುರಲ್ಲೇ ಯಡಿಯೂರಪ್ಪನವರ ಉದ್ಘೋಷ ಮುಗಿಲು ಮುಟ್ಟಿರುತ್ತೆ. ಯಡಿಯೂರಪ್ಪನವರ ಹೆಸರೆತ್ತಿದರೆ ಸಾಕು ಜನರು ಘೊಷಣೆಗಳನ್ನು ಕೂಗುತ್ತಾ ರಾಷ್ಟ್ರನಾಯಕರಿಗೆ ನೇರ ಸಂದೇಶಗಳನ್ನು ರವಾನಿಸುತ್ತಾರೆ. ಮುಂದಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನವೂ ಸ್ವೀಕಾರ ಆಯಿತೇನೋ ಎಂಬಂತೆ ವರ್ತಿಸುತ್ತಾರೆ. ಇದು ಯಡಿಯೂರಪ್ಪನವರ ಮೇಲಿರುವ ಪ್ರೀತಿಯಲ್ಲದೆ ಮತ್ತೇನೂ ಅಲ್ಲ.

ತಮ್ಮ ಆಡಳಿತಾವಧಿಯಲ್ಲಿ ರೈತರಿಗೆ, ಮಹಿಳೆಯರಿಗೆ ಎಂಬಂತೆ ಸರ್ವರಿಗೂ ವಿಶೇಷ ಯೋಜನೆಗಳ ಮೂಲಕ ಜನಮೆಚ್ಚಿದ ನಾಯಕನೆನಸಿಕೊಂಡಿದ್ದರು. ಈಗ ಮತ್ತೆ ಮುಖ್ಯಮಂತ್ರಿಯಾಗಿ ಜನರ ಸೇವೆ ಮಾಡಲು ಜನರ ಬಳಿ ತೆರಳುತ್ತಿದ್ದಾರೆ. ಪರಿವರ್ತನಾ ಯಾತ್ರೆಯ ಮೂಲಕ ರಾಜ್ಯದ ಮೂಲೆ ಮೂಲೆಗೆ ತಲುಪಿ ರಾಜ್ಯವನ್ನು ಮತ್ತೆ ಅಭಿವೃದ್ಧಿಯ ಪಥಕ್ಕೆ ಎತ್ತರಿಸಲು ಶ್ರಮಿಸುತ್ತಿದ್ದಾರೆ.

-ಸುನಿಲ್ ಪಣಪಿಲ

Tags

Related Articles

Close