ಪ್ರಚಲಿತ

ಇಸ್ರೋದ ಸಾಧನೆಗೆ ಶತಕದ ಸಂಭ್ರಮ!! ಮೋದಿ ಪ್ರಧಾನಿಯಾದ ನಂತರ ಇಸ್ರೋದಲ್ಲಿ ಕ್ರಾಂತಿ ಹುಟ್ಟಿದ್ದು ಹೇಗೆ ಗೊತ್ತಾ?!

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಪ್ರಗತಿಯನ್ನು ಸಾಧಿಸುತ್ತಲೇ ಬಂದಿದ್ದಾರೆ… ಅವರು ದೇಶದ ಅಭಿವೃದ್ಧಿಗಾಗಿ ತರುತ್ತಿರುವ ಒಂದಲ್ಲ ಒಂದು ಯೋಜನೆಗಳಿಗೂ ಕೆಲ ವಿರೋಧಿಗಳು ಟೀಕೆಯ ಸುರಿಮಳೆಯೇ  ಸುರಿಸುತ್ತಾರೆ.. ಇದೀಗ ಟೀಕಾಕಾರರಿಗೆ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಮತ್ತೊಂದು ಮಹತ್ವದ ಮೈಲುಗಲ್ಲು ಸಾಧಿಸಿರುವುದು ಮುಖಕ್ಕೆ ಹೊಡೆದ ರೀತಿಯಾಗಿರಬಹುದು…

ಇದೀಗ ನರೇಂದ್ರ ಮೋದಿ ಸರಕಾರದಲ್ಲಿ ಮಹತ್ವದ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ.!! ಇಂದು ಬೆಳಗ್ಗೆ 9.29ಕ್ಕೆ ಇಸ್ರೋ ಭಾರತದ 100ನೇ ಉಪಗ್ರಹವನ್ನು ನಭಕ್ಕೆ ಚಿಮ್ಮಿಸಿ ಇಸ್ರೋ ಶತಕ ಸಾಧನೆ ಮಾಡಿದೆ. !! ಆಂಧ್ರದ ಶ್ರೀಹರಿಕೋಟಾದಲ್ಲಿರುವ ಉಡಾವಣಾ ಕೇಂದ್ರದಿಂದ ಭಾರತದ ಕಾರ್ಟೋಸ್ಯಾಟ್-2 ಸಿರೀಸ್‍ನ ಒಂದು, ಒಂದು ನ್ಯಾನೋ ಮತ್ತು ಮೈಕ್ರೋ ಸ್ಯಾಟಲೈಟ್‍ಗಳನ್ನು ಹೊತ್ತು ಪಿಎಸ್‍ಎಲ್‍ವಿ ಸಿ-40 ಉಡಾವಣಾ ನೌಕೆ ನಭಕ್ಕೆ ಚಿಮ್ಮಿದೆ. ಇದರ ಜೊತೆಗೆ ಅಮೆರಿಕ, ಕೆನಡಾ, ಇಂಗ್ಲೆಂಡ್, ಕೊರಿಯಾ, ಫಿನ್‍ಲ್ಯಾಂಡ್ ಹಾಗೂ ಫ್ರಾನ್ಸ್ ಗೆ ಸೇರಿದ 28 ವಿದೇಶಿ ಉಪಗ್ರಹಗಳು ಕಕ್ಷೆ ಸೇರಲಿವೆ. ಕಾರ್ಟೋಸ್ಯಾಟ್-2 ಸ್ಯಾಟ್‍ಲೈಟ್ 710 ಕೆಜಿ ಭಾರವಿದೆ.

ಎರಡು ಕಕ್ಷೆಗಳಿಗೆ ಉಪಗ್ರಹಗಳನ್ನ ಸೇರಿಸುತ್ತಿರುವುದರಿಂದ ಈ ಉಡಾವಣೆ ವಿಶಿಷ್ಟವಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 30 ಉಪಗ್ರಹಗಳನ್ನ ಭೂಮಿಯಿಂದ 550 ಕಿ.ಮೀ ಎತ್ತರದ ಕಕ್ಷೆಗೆ ಉಡಾವಣೆ ಮಾಡಿದ್ದು, ಮತ್ತೊಂದನ್ನು 359 ಕಿ.ಮೀ ಎತ್ತರದ ಕಕ್ಷೆಗೆ ಸೇರಿಸಬೇಕಿದೆ. ಮಲ್ಟಿಪಲ್ ಬರ್ನ್ ಟೆಕ್ನಾಲಜಿ ಮೂಲಕ ಇದನ್ನ ಮಾಡಲಿದ್ದು, ರಾಕೆಟ್‍ನ ಎತ್ತರವನ್ನ ನಿಯಂತ್ರಿಸಲು ಅದನ್ನು ಸ್ವಿಚ್ ಆಫ್ ಮಾಡಿ ಮತ್ತೆ ಸ್ವಿಚ್ ಆನ್ ಮಾಡಲಾಗುತ್ತದೆ.

ಉಡಾವಣೆ ಮತ್ತು ಉಪಗ್ರಹಗಳನ್ನು ಎರಡು ಕಕ್ಷೆಗೆ ಸೇರಿಸುವ ಈ ಇಡೀ ಪ್ರಕ್ರಿಯೆಗೆ ಸುಮಾರು 2 ಗಂಟೆ 21 ನಿಮಿಷ ಸಮಯ ಹಿಡಿಯುತ್ತದೆ. ಪಿಎಸ್‍ಎಲ್‍ವಿ ಉಡವಣೆಯ ಕೌಂಟ್‍ಡೌನ್ ಗುರುವಾರ ಬೆಳಗ್ಗೆ 5.29ರಿಂದ ಶುರುವಾಗಿತ್ತು. ಕಳೆದ ವರ್ಷದ ಆಗಸ್ಟ್ ನಲ್ಲಿ ಉಷ್ಣ ಕವಚ ಪ್ರತ್ಯೇಕೀಕರಣದಲ್ಲಿ ತೊಂದರೆ ಉಂಟಾಗಿ ಉಡಾವಣೆ ವಿಫಲವಾಗಿತ್ತು.

ಪ್ರಯೋಜನ ಏನೇನು?

ಇದೀಗ ಬಾಹ್ಯಾಕಾಶ ಸೇರಿಕೊಂಡಿರುವ ಉಪಗ್ರಹಗಳು ಭಾರತದ ವಿವಿಧ ಕ್ಷೇತ್ರಗಳ ಸಂವಹನಕ್ಕೆ ಆನೆ ಬಲ ನೀಡಲಿದೆ. ಹೆಚ್ಚೆಚ್ಚು ಗುಣಮಟ್ಟದ ಫೆÇೀಟೋಗಳನ್ನು ರವಾನಿಸಲು, ಶರವೇಗದ ಮಾಹಿತಿಗಳ ವಿನಿಮಯಕ್ಕೆ ಸಹಕಾರಿಯಾಗಲಿದೆ. ಕಾಟ್ಸೋಗ್ರಾಫಿಕ್ಸ್ ಅಪ್ಲಿಕೇಷನ್ಸ್, ಅರ್ಬನ್ ಮತ್ತು ರೂರಲ್ ಅಪ್ಲಿಕೇಷನ್ಸ್, ಕರಾವಳಿ ಭೂ ಬಳಕೆ ಹಾಗೂ ನಿಯಂತ್ರಣ, ರಸ್ತೆ ಸಂಪರ್ಕ ನಿಯಂತ್ರಣ, ನೀರು ಬಳಕೆ ಸೇರಿದಂತೆ ಇವುಗಳ ಕುರಿತಾದ ಅಧ್ಯಯನಕ್ಕೆ ಸಹಕಾರಿಯಾಗುವಂತೆ ಇವು ಕಾರ್ಯನಿರ್ವಹಿಸಲಿವೆ. ಕಾರ್ಟೊಸ್ಯಾಟ್2, 2ಎ ಮತ್ತು 2ಬಿ ರೀತಿಯಲ್ಲಿ ಕಾರ್ಯನಿರ್ವಹಿಸಲಿವೆ.

ಪಿಎಸ್‍ಎಲ್‍ವಿ ರಾಕೆಟ್ ಮೂಲಕ ಈತನಕ 250ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. ಇದೀಗ ಇಂದು ಉಡಾವಣೆಗೊಳ್ಳಲಿರುವ ಪಿಎಸ್‍ಎಲ್‍ವಿ-ಸಿ40 ವಾಹಕದಲ್ಲಿ ಈಗಾಗಲೇ 42 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ.

ಇಸ್ರೋಗೆ ಇದೇಕೆ ಮಹತ್ವದ್ದು?

2017, ಆಗಸ್ಟ್ 31ರಂದು ಪಿಎಸ್‍ಎಲ್‍ವಿ ರಾಕೆಟ್ ಮೂಲಕ ನಡೆಸಲಾಗಿದ್ದ ಉಡಾವಣೆ ವಿಫಲಗೊಂಡಿತ್ತು. ಆ ಬಳಿಕ ಇದೀಗ ಮತ್ತೆ ಪಿಎಸ್‍ಎಲ್‍ವಿ ಸರಣಿ ರಾಕೆಟ್‍ನಲ್ಲಿಯೇ ಉಡಾವಣೆಗೆ ಮುಂದಾಗಿದ್ದರಿಂದ ಇದು ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಕಕ್ಷೆ ಸೇರಲಿರುವ ಉಪಗ್ರಹ ಕಾರ್ಟೊಸ್ಯಾಟ್ 2ಎಸ್: ಕಾರ್ಟೊಸ್ಯಾಟ್ 2ಎಸ್ ಇದೀಗ ಉಡಾವಣೆಯಾದ ಉಪಗ್ರಹ. ಈ ಸರಣಿಯಲ್ಲಿ ಉಡಾವಣೆ ಆಗುತ್ತಿರುವ 7ನೇ ಉಪಗ್ರಹ ಇದಾಗಿದೆ.

ವಿಜ್ಞಾನಿಗಳ ಮುಂದಿದ್ದ ಸವಾಲು

ಉಡಾವಣೆ ಬಳಿಕ ತಂಪು ಹಾಗೂ ಗುರುತ್ವಾಕರ್ಷಣ ಬಲ ಕಡಿಮೆ ಇರುವ ವಾತಾವರಣದಲ್ಲಿ ಎರಡೆರಡು ಬಾರಿ ಎಂಜಿನ್ ಆಫ್-ಆನ್ ಆಗಲಿದೆ. ಉಪಗ್ರಹಗಳ ಸುರಕ್ಷತಾ ದೃಷ್ಟಿಯಿಂದ ಎರಡೆರಡು ಬಾರಿ ಎಂಜಿನ್ ಆಫ್-ಆನ್ ಆಗಲಿದ್ದು, 15 ನಿಮಿಷದಲ್ಲಿ ಎಂಜಿನ್ ತಣ್ಣಗಾಗಲಿದ್ದು, ಸ್ಟಾರ್ಟ್ ಆಗಿ 46 ನಿಮಿಷಗಳ ಬಳಿಕ ಆಫ್ ಆಗಲಿದೆ. ಹೀಗಾಗಿ ಇದರ ನಿರ್ವಹಣೆ ವಿಜ್ಞಾನಿಗಳಿಗೆ ದೊಡ್ಡ ಸವಾಲಾಗಿರಲಿದೆ.

ಮೊದಲು ಅಬ್ದುಲ್ ಕಲಾಂರವರು ಉಪಗ್ರಹ ಉಡಾವಣೆಗೆ ನಿರಂತರವಾಗಿ ಶ್ರಮಿಸಿದ್ದರು ತದ ನಂತರ ಪ್ರಧಾನಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಇಸ್ರೋಗೆ ಅನೇಕ ರೀತಿಯಲ್ಲಿ ಮಾಮ್ ಎಂಬ ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು…

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಹತ್ವದ ಯೋಜನೆಗಳಲ್ಲಿ ಒಂದಾದ ಮಂಗಳಯಾನ ಉಪಗ್ರಹ 1,000 ದಿನಗಳನ್ನು ಬಾಹ್ಯಾಕಾಶದಲ್ಲಿ ಪೂರೈಸಿತ್ತು. ಮಂಗಳಯಾನ ಉಪಗ್ರಹದ ಜೀವಿತಾವಧಿ ಆರು ತಿಂಗಳಾಗಿದ್ದರೂ, ಅದಕ್ಕಿಂತ ಐದು ಪಟ್ಟು ಹೆಚ್ಚು ಸಮಯ ಬಾಹ್ಯಾಕಾಶದಲ್ಲಿ ಕಳೆಯುವ ಮೂಲಕ ವಿಶ್ವದ ಗಮನ ಸೆಳೆದಿತ್ತು. ಸೌರದಿನದ ಪ್ರಕಾರ ಬಾಹ್ಯಾ ಕಾಶದಲ್ಲಿ ಮಾಮ್ 973.24 ದಿನ ಕಳೆದ್ದು, 388 ಬಾರಿ ಕಕ್ಷೆಯನ್ನು ಪರಿಭ್ರಮಿಸಿದೆ ಎಂದು ಇಸ್ರೋ ಹೇಳಿದೆ.2014ರ ಸೆ. 24ರಂದು ಮಾಮ್ ಉಪಗ್ರಹವನ್ನು ಮೊದಲ ಯತ್ನದಲ್ಲೇ ಮಂಗಳನ ಕಕ್ಷೆಯ ಪರಿಧಿಗೆ ಸೇರ್ಪಡೆಗೊಳಿಸುವಲ್ಲಿ ಭಾರತ ಯಶಸ್ವಿಯಾಗಿ ಮೆಚ್ಚುಗೆಗೆ ಪಾತ್ರವಾಗಿತ್ತು.. ಇದೆಲ್ಲಾ ಪ್ರಧಾನಿ ನರೇಂದ್ರ ಮೋದಿಯವರ ಕೈಚಳಕದಿಂದಲೇ… ನಾಸಾ ಮತ್ತು ಯುರೋಪಿಯನ್ ಒಕ್ಕೂಟಗಳು ಉಪಗ್ರಹ ಯೋಜನೆಗೆ ಮಾಡುವ ವೆಚ್ಚದ ಮೂರನೇ ಒಂದರಷ್ಟು ವೆಚ್ಚದಲ್ಲಿ ಇಸ್ರೋ ಮಂಗಳಯಾನ ಕೈಗೊಂಡಿತ್ತು. 450 ಕೋಟಿ ರೂ. ವೆಚ್ಚದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಂಗಳಯಾನ ಉಪಗ್ರಹ ಸಾವಿರ ದಿನ ಪೂರೈಸಿರುವುದು ಕೂಡಾ ಮಹತ್ವದ ಸಾಧನೆಯಾಗಿದೆ. ಮಂಗಳನಲ್ಲಿನ ವಾತಾವರಣ, ಮೀಥೇನ್ ಪ್ರಮಾಣ, ಅಲ್ಲಿರಬಹುದಾದ ಜೀವಸೆಲೆಗಳು, ಮೇಲ್ಮೈ ಸಹಿತ ವಿವಿಧ ಉದ್ದೇಶಗಳ ಅಧ್ಯಯನಕ್ಕೆ ಇಸ್ರೋ ಮಂಗಳಯಾನ ಕೈಗೊಂಡಿತ್ತು..

ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ನಿಜವಾಗಿಯೂ ಇಸ್ರೋದಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂಬುವುದು ಹೆಮ್ಮೆಯ ವಿಷಯವಾಗಿದೆ..

ಪವಿತ್ರ

Tags

Related Articles

Close