ಪ್ರಚಲಿತ

ಅಸಂಬದ್ಧ ಹೇಳಿಕೆ ನೀಡಿದ್ದ ಮಣಿಶಂಕರ್ ಅಯ್ಯರ್‍ನನ್ನು ಝಾಡಿಸಿದ ಮೋದಿ!

ನೋಡಿ!! ಎಷ್ಟು ಬೇಗ ರೀಪ್ಲೈ ಸಿಕ್ಕಿ ಬಿಡ್ತು. ಈ ಮಣಿಶಂಕರ್ ಅಯ್ಯರ್ ಎಂಬ ಕಾಂಗ್ರೆಸ್ ನಾಯಕ ಮೋದಿ ಬಗ್ಗೆ ಕೀಳು ಮಟ್ಟದ ಪದಗಳನ್ನು ಪ್ರಯೋಗ ಮಾಡಿದ್ದಕ್ಕೆ ಸ್ವತಃ ಕಾಂಗ್ರೆಸ್ ಪಕ್ಷದ ಭಾವೀ ಅಧ್ಯಕ್ಷರೇ ಉತ್ತರ ನೀಡಿದ್ದಾರೆ. ಈ ಮೂಲಕ ಗುಜರಾತ್ ಚುನಾವಣೆಯಲ್ಲಿ ತಾನು ಸೋಲುನ್ನವುದು ಖಚಿತ ಎಂಬ ಸಂದೇಶವನ್ನು ರವಾಣಿಸಿದ್ದಾರೆ. ಬೀಸೋ ದೊಣ್ಣೆಯಿಂದ ಒಮ್ಮೆ ತಪ್ಪಿಸಿಕೊಂಡರೆ ಸಾಕು ಎಂಬ ಬುದ್ಧಿವಂತಿಕೆಯನ್ನು ತೋರಿಸಿದ್ದಾರೆ.

ಮಣಿಶಂಕರ್ ಅಯ್ಯರ್ ಮಾತು ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗುತ್ತೆ ಎಂಬ ಮಾತು ದೇಶದೆಲ್ಲೆಡೆ ಹಬ್ಬಿತ್ತು. ಸಾಮಾಜಿಕ ಜಾಲತಾಣ ಮಾತ್ರವಲ್ಲದೆ ದೇಶದ ಅತಿದೊಡ್ಡ ಸುದ್ಧಿ ಮಾಧ್ಯಮಗಳೂ ಅಯ್ಯರ್ ವಿರುದ್ಧ ಕಿಡಿ ಕಾರಿದ್ದರು. ಇದನ್ನು ಕಂಡು ಯಥಾ ಶೀಘ್ರ ಎಚ್ಚೆತ್ತುಕೊಂಡ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ, “ಮಣಿಶಂಕರ್ ಅಯ್ಯರ್ ಮೋದಿ ಬಳಿ ಕ್ಷಮೆ ಯಾಚಿಸಲಿ” ಎಂದು ಆಗ್ರಹಿಸಿದ್ದಾರೆ.

ಕೆಲವರಿಗೆ ತಾನೊಬ್ಬ ನಿರಂತರವಾಗಿ ಪ್ರಚಾರದಲ್ಲಿರಬೇಕೆಂಬ ಹಂಬಲ ಇದ್ದೇ ಇರುತ್ತದೆ. ಅದೇನೇನೋ ಸರ್ಕಸ್ ಮಾಡಿದರೂ ಒಮ್ಮೊಮ್ಮೆ ಅದು ಫಲಿಸೋದಿಲ್ಲಾ. ಹೀಗಾದಾಗ ಸಮಾಜದಲ್ಲಿರುವ ಉತ್ತಮ ವ್ಯಕ್ತಿಗಳನ್ನು ಮನಬಂದಂತೆ ಅಸಭ್ಯ ಮಾತುಗಳಿಂದ ನಿಂದಿಸಿ, ಕೆಟ್ಟವನಾದರೂ ಪರವಾಗಿಲ್ಲ ಫೇಮಸ್ ಆದರೆ ಸಾಕು ಎಂಬ ಚಪಲವನ್ನು ಇಟ್ಟುಕೊಂಡು ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಇದರ ಸಾಲಿಗೆ ಸದಾ ಮುಂಚಿನಂತೆ ಇದ್ದವನೇ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್.

ಭಯ ಹುಟ್ಟಿಸಿತ್ತು ಲೋಕಸಭಾ ಚುನಾವಣೆಯ ಫಲಿತಾಂಶ…

ಮೋದಿ ಬಗ್ಗೆ ಕೀಳು ಮಟ್ಟದ ಪದ ಬಳಕೆ ಮಾಡಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲುಂಡಿದ್ದು ಇತಿಹಾಸವಾಗಿದೆ. ಇದೇ ಈಗ ರಾಹುಲ್ ಗಾಂಧಿಯ ಭಯಕ್ಕೆ ಕಾರಣವಾಗಿದೆ. ಗುಜರಾತ್ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇಂತಹ ಹೊತ್ತಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಇಂತಹ ಹೇಳಿಕೆಗಳು ಬಂದರೆ ಪಕ್ಷಕ್ಕೆ ಮತ್ತಷ್ಟು ನಷ್ಟವಾಗುತ್ತದೆ ಎಂಬ ಪಕ್ಕಾ ಲೆಕ್ಕಾಚಾರ ರಾಹುಲ್ ಗಾಂಧಿಯದ್ದು.

ಮಣಿಶಂಕರ್ ಎನ್ನುವ ದೂರ್ತ ದೇಶ ಕಂಡ ಅತ್ಯಂತ ಕೀಳು ಮಟ್ಟದ ಮನುಷ್ಯ. ತನ್ನ ಮನಸ್ಸನ್ನೇ ಕೊಳಚೆಯಲ್ಲಿ ಬಿದ್ದ ಪ್ರಾಣಿಗಳ ರೀತಿಯಲ್ಲಿ ವರ್ತಿಸುವ ಈತ ದೇಶಸೇವೆ ಮಾಡುವ ವ್ಯಕ್ತಿಗಳನ್ನು ಕಂಡರೆ ಕೆಂಡ ಕಾರುತ್ತಿರುತ್ತಾನೆ. ಈತನಿಗೆ ಹಾಗೂ ಈತನ ಪಕ್ಷಗಳಿಗೆ ಕಂಟಕವಾಗುತ್ತಿರುವ ವ್ಯಕ್ತಿಗಳನ್ನು ಬಾಯಿಗೆ ಬಂದ ಹಾಗೆ ಅಸಂಭದ್ದ ಪದಗಳನ್ನು ಪ್ರಯೋಗ ಮಾಡುವ ಮೂಲಕ ಪ್ರಚಾರದಲ್ಲಿ ಇದ್ದೇ ಇರುತ್ತಾನೆ. ತಾನು ಪ್ರಚಾರದಲ್ಲಿ ಇರಬೇಕಾದರೆ ಅದ್ಯಾವ ಮಟ್ಟಕ್ಕೂ ಇಳಿಯಲು ಸಿದ್ದನಿದ್ದಾನೆ ಈ ವ್ಯಕ್ತಿ.

ಪ್ರಧಾನಿ ಮೋದೀಜಿಯನ್ನು ಕೆಳ ಮಟ್ಟದ ಪದಗಳನ್ನು ಪ್ರಯೋಗಿಸುವ ಮೂಲಕ ಟೀಕೆಗೆ ಗುರಿಯಾಗುತ್ತಿದ್ದ ಈ ಅಯ್ಯರ್ ಎಂಬ ಕಾಂಗ್ರೆಸ್ ನಾಯಕ ಇಂದು ಮತ್ತೆ ತಮ್ಮ ನಾಲಗೆಯನ್ನು ಉದ್ದ ಬಿಟ್ಟಿದ್ದ. “ಮೋದಿ ಮೌಲ್ಯಗಳಿಲ್ಲದ ನೀಚ ವ್ಯಕ್ತಿ. ಆತ ಒಬ್ಬ ಕೀಳುವ್ಯಕ್ತಿ” ಎಂದು ಮತ್ತೆ ತನ್ನನ್ನು ತಾನು ಸುದ್ಧಿ ಮಾಡಿಕೊಂಡಿದ್ದ.

ಮೋದಿ ಅಂದರೆ ಈಗ ಕೇವಲ ಗುಜರಾತ್ ಅಥವಾ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ವಿಶ್ವನಾಯಕರಾಗಿದ್ದಾರೆ. ಅವರನ್ನು ಹೊಗಳಿದರೂ ತೆಗಳಿದರೂ ವಿಶ್ವ ಮಟ್ಟಿನಲ್ಲಿ ಸುದ್ಧಿಯಾಗುತ್ತದೆ. ಈ ಕಾರಣಕ್ಕಾಗಿಯೇ ಕೆಲವು ಪ್ರಚಾರ ಪ್ರಿಯರು ಮೋದಿಯ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಮಣಿಶಂಕರ್ ಅಯ್ಯರ್ ಕೂಡಾ ಇದೇ ಜಾತಿಗೆ ಸೇರಿದವನಾಗಿದ್ದಾನೆ.

ಗುಜರಾತ್ ಚುನಾವಣೆ ಹೊಸ್ತಿಲಲ್ಲಿ ಇಂತಹ ಹೇಳಿಕೆಗಳನ್ನು ನೀಡಿ ಕಾಂಗ್ರೆಸ್ ಕಾರ್ಯಕರ್ತರ ಪಾಲಿನ ಹೀರೋ ಆಗಲು ಹೊರಟಿದ್ದಾನೆ ಈ ಅಯ್ಯರ್. ಆದರೆ ಅದೆಷ್ಟೋ ಕೋಟಿ ಕೋಟಿ ಜನರ ಪಾಲಿಗೆ ತಾನೊಬ್ಬ ಖಳನಾಯಕನಾಗಿ ಗುರುತಿಸುತ್ತೇನೆ ಎಂಬ ವಿಚಾರ ತಿಳಿದಿದಿಯೋ ಇಲ್ಲವೋ ಏನೋ… ಮತ್ತೊಮ್ಮೆ ರಾಷ್ಟ್ರ ಮಟ್ಟದಲ್ಲಿ ಸುದ್ಧಿಯಾಗಲು ಈ ಖತರ್ನಾಕ್ ಪ್ಲಾನ್‍ಗಳನ್ನು ಹೂಡುತ್ತಾ ಹೋಗುತ್ತಾನೆ ಈ ಖಳನಯಕ.

ಮತ್ತೆ ಮೋದಿ ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ರಾಹುಲ್ ಪ್ಲಾನ್…!!!

ಅದೆಷ್ಟು ಬಾರಿ ಮೋದಿಯನ್ನು ತೆಗಳುತ್ತಾನೋ ಅಷ್ಟೇ ಬಾರಿ ಮೋದಿ ಎತ್ತರಕ್ಕೆ ಹೋಗಿ ಬಿಡುತ್ತಾರೆ. ಮೋದಿಯ ಬಗ್ಗೆ ಆತ ಏನಾದರೂ ಮಾತನಾಡಿದ್ದಾನೆ ಎಂದರೆ ಮತ್ತೊಮ್ಮೆ ಇತಿಹಾಸ ಸೃಷ್ಟಿಸುತ್ತೆ ಎಂದೇ ಅರ್ಥ. ಮೋದಿ ಬಗ್ಗೆ ಆತ ತನ್ನ ನಾಲಗೆಯನ್ನು ಹರಿಬಿಟ್ಟ ಕೂಡಲೇ “ಇವನಿಗೆ ಬೇಕಿತ್ತಾ ಇದೆಲ್ಲಾ” ಎಂದು ಹೇಳುವ ಕಾಂಗ್ರೆಸ್ಸಿಗರೇ ಹೆಚ್ಚು. ಈವರೆಗೆ ಕಾಂಗ್ರೆಸ್ ನಾಯಕರು ಸುಮ್ಮನಿದ್ದರು. ಈಬರೆಗೂ ಆತನ ಬಾಯಿ ಮುಚ್ಚಿಸುವ ಪ್ರಯತ್ನವನ್ನು ಯಾರೂ ಮಾಡದೇ ವಿವಾದಗಳನ್ನು ಸೃಷ್ಟಿಸುವಾಗ ಅಂತರ ಕಾಯ್ದುಕೊಳ್ಳುತ್ತಲೇ ಇದ್ದ ಕಾಂಗ್ರೆಸ್ ಇಂದು ಮೆಲ್ಲನೆ ತನ್ನ ಪಕ್ಷದ ನಾಯಕನ ವಿರುದ್ಧ ಧ್ವನಿಯೆತ್ತಿದೆ.

ಮೋದಿಯೇ ಹೂಡಿಯೇ ಬಿಟ್ಟರು ತಣ್ಣನೆಯ ಬಾಣ…

ಮಣಿಶಂಕರ್ ಅಯ್ಯರ್ ಹರಿಬಿಟ್ಟ ನಾಲಗೆಯ ವಿರುದ್ಧ ಪ್ರಧಾನಿ ಮೋದಿ ತಣ್ಣನೆಯ ಬಾಣ ಬಿಟ್ಟಿದ್ದಾರೆ. “ನನ್ನನ್ನು ನೀಚ ಎಂದು ಹೇಳುವವರು ಹೇಳುತ್ತಲೇ ಇರಲಿ. ಅವರ ಮನಸ್ಥಿತಿಯೇ ಹಾಗೆ. ಅಂತವರಿಗೆ ನಾವು ಅಭಿನಂದನೆ ಸಲ್ಲಿಸೋಣ. ನಾವ್ಯಾರೂ ಇದರ ಬಗ್ಗೆ ಮಾತನಾಡಲು ಹೋಗೋದು ಬೇಡ. ಅವರಿಗೆಲ್ಲಾ ಚುನಾವಣೆಯಲ್ಲಿಯೇ ಉತ್ತರ ನೀಡೋಣ” ಎಂದು ತಣ್ಣಗೆ ಹೇಳಿದ್ದಾರೆ. ಮಾತ್ರವಲ್ಲದೆ, “ತಾನು ನೀಚನಾದರೆ ನೀಚನಾಗಿಯೇ ಇರುತ್ತೇನೆ.

ನಾನು ಬಡವನಾಗಿ ಹುಟ್ಟಿದ್ದೇ ನೀಚ ಎನ್ನಲು ಕಾರಣನಾದರೆ ಪರವಾಗಿಲ್ಲ. ಮುಂದೆಯೂ ಬಡವನಾಗಿಯೇ ಇರುತ್ತೇನೆ. ಬಡವರ, ಹಿಂದುಳಿದವರ ಏಳಿಗೆಗೆ ಶ್ರಮಿಸುತ್ತೇನೆ. ನೀಚನಾಗಿಯೇ ಇರುತ್ತೇನೆ. ನಾನು ಮುಖ್ಯಮಂತ್ರಿಯಾದಾಗಲೂ ನನ್ನನ್ನು ಸೋನಿಯಾ ಗಾಂಧಿ ಸಾವಿನ ವ್ಯಾಪಾರಿ ಎಂದಿದ್ದರು. ಅಂತಹ ಪದಗಳನ್ನು ಉಪಯೋಗಿಸುವ ಮೂಲಕ ಅವರ ಸಂಸ್ಕøತಿಯನ್ನು ಅವರೇ ಎತ್ತಿ ತೋರಿಸುತ್ತಿದ್ದಾರೆ” ಎಂದು ಗುಜರಾತಿನಲ್ಲಿ ನಡೆಯುತ್ತಿರುವ ಚುನಾವಣಾ ರ್ಯಾಲಿಯಲ್ಲಿ ಹೇಳಿದರು.

ಕ್ಷಮೆ ಕೇಳಿದ ಅಯ್ಯರ್…

ಯಾವಾಗ ತನ್ನ ಪಕ್ಷದವರೇ ತನ್ನ ಮಾತನ್ನು ವಿರೋಧಿಸಿದರೋ ಆವಾಗಲೇ ಎಚ್ಚೆತ್ತ ಅಯ್ಯರ್ ಮೋದಿ ಬಳಿ ಕ್ಷಮೆ ಯಾಚಿಸಿದ್ದಾನೆ. ಗುಜರಾತ್ ಚುನಾವಣೆಯು ಕಾಂಗ್ರೆಸ್‍ಗೆ ಕಗ್ಗಂಟಾಗುವುದು ಖಚಿತ ಎಂಬ ವಾತಾವರಣ ಆವಾಗಲೇ ಸೃಷ್ಟಿಯಾಗಿತ್ತು. ಇದನ್ನು ಕಂಡ ಕಾಂಗ್ರೆಸ್ ನಾಯಕರು ಮಣಿಶಂಕರ್ ಅಯ್ಯರ್ ಮೇಲೆ ಮೋದಿ ಬಳಿ ಕ್ಷಮೆ ಕೇಳುವಂತೆ ಒತ್ತಡಗಳನ್ನು ಹೇರುತ್ತಾರೆ. ಇದರಿಂದ ಗಲಿಬಿಲಿಗೊಂಡ ಅಯ್ಯರ್ ಮೋದೀಜಿಯಲ್ಲಿ ಕ್ಷಮೆ ಕೇಳಿದ್ದಾನೆ. ಕೊನೆಗೂ ತಾನು ನಾಲಿಗೆ ಹರಿಯಬಿಟ್ಟಿದ್ದು ನಿಜ ಎಂದು ಒಪ್ಪಿಕೊಂಡಿದ್ದಾನೆ.

“ಚಾಯ್‍ವಾಲಾ” ಸೃಷ್ಟಿಸಿದ್ದ ಅವಾಂತರ…

2014ರ ಲೋಕಸಭಾ ಚುನಾವಣಾ ಸಮಯದಲ್ಲಿ ಮೋದಿಯನ್ನು ಚಾಯ್‍ವಾಲಾ ಎಂದು ಕೇವಲವಾಗಿ ಟೀಕಿಸಿದ್ದನು ಈ ಅಯ್ಯರ್. “ಮೋದಿ ಕೇವಲ ಚಾಹಾ ಮಾರಲಷ್ಟೇ ಫಿಟ್. ಅವರು ಪ್ರಧಾನಿಯಾಗೋದೇ ಇಲ್ಲ. ಬೇಕಿದ್ದರೆ ನಮ್ಮ ಎಐಸಿಸಿ ಸಭೆಯಲ್ಲಿ ಬಂದು ಚಹಾ ಮಾರಲಿ. ನಾವು ಅವಕಾಶ ಮಾಡಿಕೊಡುತ್ತೇವೆ” ಎಂದು ಜರೆದಿದ್ದ. ಆದರೆ ಆ ಕೀಳು ವ್ಯಕ್ತಿ ಪ್ರಯೋಗಿಸಿದ ಕೀಳು ಮಟ್ಟದ ಪದಗಳೇ ಆತನ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಿ ಹೋಗಿತ್ತು.

ದೇಶವೇ ಮೋದಿಯ ಬೆಂಬಲಕ್ಕೆ ನಿಂತಿತ್ತು. ಗಲ್ಲಿ ಗಲ್ಲಿಯಲ್ಲೂ, ಹಳ್ಳಿ ಹಳ್ಳಿಯಲ್ಲೂ “ನಮೋ” ಟೀ ಸ್ಟಾಲ್ ತಲೆಯೆತ್ತಿತ್ತು. ಮೋದಿ ಮೇನಿಯಾ ಹಬ್ಬಿದ್ದೇ ಅದೇ ಚಾಯಾ ಮಾರಾಟದಿಂದ. ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಗೂ ಮೋದಿ ಬಗ್ಗೆ, ಅವರ ಸಾಧನೆಯ ಬಗ್ಗೆ ಅರಿವಾಗಿತ್ತು. ಇದಕ್ಕೆಲ್ಲಾ ಕಾರಣವಾಗಿದ್ದು ಅದೇ ಮಣಿಶಂಕರ್ ಅಯ್ಯರ್ ಎಂಬ ಕಾಂಗ್ರೆಸ್‍ನ ನಾಯಕ.

ಏನೇ ಇರಲಿ ಮೋದಿಯನ್ನು ಆತ ಎಷ್ಟು ತೆಗಳುತ್ತಾನೋ ಅಷ್ಟೇ ವೇಗದಲ್ಲಿ ಮೋದಿ ಬೆಳೆಯುತ್ತಾರೆ ಎಂಬುವುದನ್ನು ಆತನೂ ನೆನಪಿನಲ್ಲಿಡಬೇಕಾಗುತ್ತದೆ. ಲೋಕಸಭೆ ಚುನಾವಣೆಯಲ್ಲಿ ಮೋದಿಯನ್ನು ಫೇಮಸ್ ಮಾಡಿದ್ದ ಅಯ್ಯರ್ ಈಗ ಗುಜರಾತ್ ಚುನಾವಣೆಯಲ್ಲೂ ತನ್ನ ಬಾಲ ಬಿಚ್ಚಿ ಕಾಂಗ್ರೆಸ್ ಸೋಲುವಂತೆ ಮಾಡುತ್ತಿದ್ದಾನೆ ಅಷ್ಟೇ…

ಓರ್ವ ಜವಬ್ಧಾರಿಯುತವಾದ ಹುದ್ದೆಯಲ್ಲಿದ್ದುಕೊಂಡು ರಾಷ್ಟ್ರ ನಾಯಕರಿಗೆ ಹೇಗೆ ಮಾತನಾಡಬೇಕೆಂಬ ಕಾಮನ್‍ಸೆನ್ಸ್ ಇಲ್ಲದ ನಾಯಕರು ಈಗಲೂ ಇದ್ದಾರೆ ಎಂದರೆ ಅದು ಅವರ ವ್ಯಕ್ತಿತ್ವ ಮತ್ತು ಪಕ್ಷದ ಸಿದ್ಧಾಂತವನ್ನು ಸೂಚಿಸುತ್ತದೆ.

-ಸುನಿಲ್ ಕಾರಂತ್

Tags

Related Articles

Close