ಪ್ರಚಲಿತ

ಅಟಲ್ ಹೆಸರಿನ ಮೋದಿ ಸರ್ಕಾರದ ಈ ಯೋಜನೆಯನ್ನು ತನ್ನ ಕ್ಷೇತ್ರದಲ್ಲಿ ಸಮರ್ಪಕವಾಗಿ ಜಾರಿಗೊಳಿಸಿದ ಉಡುಪಿ ಶಾಸಕರು.! ಅಟಲ್ ಟಿಂಕರಿಂಗ್ ಯೋಜನೆ ಉಡುಪಿ ಕ್ಷೇತ್ರದಲ್ಲಿ ಯಶಸ್ವಿ.!

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ವಿಭಿನ್ನ ಆಲೋಚನೆ ಹಾಗೂ ಭವಿಷ್ಯಕ್ಕೆ ಪೂರಕವಾಗುವ ಯೋಜನೆಗಳಿಗೇ ಒತ್ತನ್ನು ನೀಡಿ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಇದರಲ್ಲಿ ಮಾಜಿ ಪ್ರಧಾನಿ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿರುವ “ಅಟಲ್ ಟಿಂಕರಿಂಗ್ ಯೋಜನೆ” ಕೂಡಾ ಒಂದಾಗಿದೆ. ದೇಶದಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳು ವಿಜ್ಞಾನನ ವಿಷಯದಲ್ಲಿ ಕಲಿಕೆಗೆ ವಂಚಿತರಾಗುತ್ತಿದ್ದು ಪ್ರಮುಖ ಸರ್ಕಾರಿ ಶಾಲೆಗಳನ್ನು ಗುರುತಿಸಿ ಆ ಶಾಲೆಗೆ ಬರೋಬ್ಬರಿ 20 ಲಕ್ಷ ರೂಗಳ ಅನುದಾನವನ್ನು ನೀಡಲಾಗುತ್ತಿದೆ. ಸುಮಾರು 5000 ಶಾಲೆಗಳಿಗೆ ಈ ಯೋಜನೆಯಲ್ಲಿ ವಿಜ್ಞಾನನ ವಿಷಯಕ್ಕೆ ಸಂಬಂಧಿಸಿದ 5000 ಬಗೆಯ ಸಾಮಾಗ್ರಿಗಳು ದೊರಕುತ್ತದೆ. ಕೇಂದ್ರ ಈ ಯೋಜನೆಗೆ ಒಟ್ಟು 1 ಸಾವಿರ ಕೋಟಿಯಷ್ಟು ಅನುದಾನವನ್ನು ಮೀಸಲಿರಿಸಿದೆ.

ಉಡುಪಿ ಕ್ಷೇತ್ರದಲ್ಲಿ ಯಶಸ್ವೀ ಯೋಜನೆ..!

ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ ರಘುಪತಿ ಭಟ್ ಇವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ತನ್ನ ಕ್ಷೇತ್ರದಲ್ಲಿ ಸಮರ್ಪಕವಾಗಿ ಜಾರಿಗೊಳಿಸುವುದರಲ್ಲಿ ಇತರೆಲ್ಲಾ ಶಾಸಕರಿಗಿಂತ ಒಂದು ಹೆಜ್ಜೆ ಮುಂದು. ಇದೀಗ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ “ಅಟಲ್ ಟಿಂಕರಿಂಗ್ ಯೋಜನೆ”ಯನ್ನು ತನ್ನ ಕ್ಷೇತ್ರದಲ್ಲಿ ಸಮರ್ಪಕವಾಗಿ ಜಾರಿಗೆ ತರುವ ಮೂಲಕ ಮತ್ತೊಮ್ಮೆ ಸುದ್ಧಿಯಾಗಿದ್ದಾರೆ.

ಅಟಲ್ ಟಿಂಕರಿಂಗ್ ಯೋಜನೆಯಡಿ ಕೇಂದ್ರ ಸರ್ಕಾರ ನೀಡುವ 20 ಲಕ್ಷ ಅನುದಾನವನ್ನು ಉಡುಪಿ ಕ್ಷೇತ್ರದ ಬ್ರಹ್ಮಾವರ ಸರ್ಕಾರಿ ಬೋರ್ಡ್ ಪ್ರೌಢಶಾಲೆ ಹಾಗೂ ಉಡುಪಿಯ ಒಳಕಾಡು ಸರ್ಕಾರಿ ಪ್ರೌಢಶಾಲೆಗೆ ನೀಡಲಾಗಿತ್ತು. ಕೇಂದ್ರದಿಂದ ಬಂದ ಅನುದಾನವನ್ನು ತನ್ನ ಕ್ಷೇತ್ರದ ಎರಡೂ ಶಾಲೆಗಳಲ್ಲಿ ವಿಶೇಷ ಆಸಕ್ತಿ ತೋರಿಸಿ ಶಾಸಕ ರಘುಪತಿ ಭಟ್ ಯಶಸ್ವಿಯಾಗಿ ಉಧ್ಘಾಟನೆಗೊಳಿಸಿದ್ದಾರೆ. ಉಧ್ಘಾಟನೆಗೊಳಿಸಿ ಮಾತನಾಡಿದ ಶಾಸಕರು “ಕೇಂದ್ರ ಸರ್ಕಾರ ಶಾಲಾ ಮಕ್ಕಳಿಗೆಂದೇ ವಿಶೇಷ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಅದರಲ್ಲಿ ಅಟಲ್ ಟಿಂಕರಿಂಗ್ ಯೋಜನೆಯೂ ಒಂದು. ಈಗಿನ ಕಾಲದಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳು ಮಾತ್ರವೇ ಸರ್ಕಾರಿ ಶಾಲೆಗಳಲ್ಲಿ ಕಲಿಯುವಂತಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಬಡ ಮಕ್ಕಳು ವಿಜ್ಞಾನ ವಿಷಯದಲ್ಲಿ ಅಧ್ಯಯನ ವಂಚಿತರಾಗಬಾರದು ಹಾಗೂ ಖಾಸಗೀ ಶಾಲೆಗಳಿಗಿಂತ ಭಿನ್ನವಾಗಿರಬೇಕು ಎಂಬ ದೃಷ್ಟಿಕೋನವನ್ನು ಇಟ್ಟುಕೊಂಡು ಜಾರಿಗೆ ತಂದಿರುವ ಯೋಜನೆ ಇದಾಗಿದೆ. ಈ ಯೋಜನೆ ನಮ್ಮ ಕ್ಷೇತ್ರದಲ್ಲಿ ಯಶಸ್ವಿಯಾಗಿ ಪೂರೈಸಿದ್ದು ಉಧ್ಘಾಟನೆಗೊಂಡು ಕಲಿಕೆಗೆ ಮುಕ್ತವಾಗಿದೆ” ಎಂದು ಹೇಳಿದ್ದಾರೆ.

ಯೋಜನೆಯ ವಿಶೇಷತೆಗಳು…

ಕೇಂದ್ರ 5000 ಶಾಲೆಗಳನ್ನು ಗುರುತಿಸಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. 1 ಸಾವಿರ ಕೋಟಿ ವೆಚ್ಚದ ಈ ಯೋಜನೆಯ ಅಡಿಯಲ್ಲಿ ಗುರುತಿಸಿದ ಶಾಲೆಗೆ 20 ಲಕ್ಷ ಅನುದಾನ ಕೇಂದ್ರದಿಂದ ಬರುತ್ತದೆ. ಈ ಅನುದಾನದಲ್ಲಿ ಲ್ಯಾಪ್ ಟಾಪ್, ಇಂಟರ್ ನೆಟ್, ಪ್ರೊಜೆಕ್ಟರ್ ಸಹಿತ 5000 ಬಗೆಯ ವಿವಿಧ ರೀತಿಯ ವಿಜ್ಞಾನಕ್ಕೆ ಸಂಬಂಧಿಸಿದ ಸಾಮಾಗ್ರಿಗಳು ದೊರೆಯುತ್ತದೆ. ವಿವಿಧ ರೀತಿಯ ಯಂತ್ರಗಳು ಹಾಗೂ ಅದನ್ನು ಪೋಣಿಸುವ ಸಾಮಾಗ್ರಿಗಳು ಈ ಅನುದಾನದಲ್ಲಿ ದೊರಕುತ್ತದೆ. ಅರ್ಥ್ ಮೂವರ್ಸ್ ಯಂತ್ರ, ಮೋಟಾರ್ ವಸ್ತುಗಳು, ರಸಾಯನ ಶಾಸ್ತ್ರಕ್ಕೆ ಸಂಬಂಧಿಸಿದ ಸಾಮಾಗ್ರಿಗಳು ಇದರಲ್ಲಿ ಬರಲಿದ್ದು ದೇಶದಲ್ಲೇ ಮೊದಲ ಬಾರಿಗೆ ಇಂತಹಾ ಯೋಜನೆಯೊಂದು ಸಾಮಾನ್ಯ ವಿದ್ಯಾರ್ಥಿಗಳ ಕೈ ಸೇರುತ್ತಿದೆ.

ಇದೀಗ ಈ ಯೋಜನೆಯು ಉಡುಪಿ ಕ್ಷೇತ್ರದಲ್ಲಿ ಯಶಸ್ವಿಯಾಗಿದ್ದು ಶಾಸಕ ರಘುಪತಿ ಭಟ್ ಇವರು ಅತ್ಯಂತ ಮುತುವರ್ಜಿ ವಹಿಸಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ ಉಧ್ಘಾಟನೆಗೊಳಿಸಿದ್ದಾರೆ. ಈ ಯೋಜನೆಯನ್ನು ಯಶಸ್ವಿಯಾಗಿ ಶೀಘ್ರ ಜಾರಿಗೆ ತಂದಿರುವ ಶಾಸಕರಲ್ಲಿ ಉಡುಪಿ ಶಾಸಕರು ಮೊದಲಿಗರು ಎನ್ನಲಾಗುತ್ತಿದೆ. ಈ ಯೋಜನೆಯನ್ನು ಪ್ರತೀ ಶಾಲೆಗಳಲ್ಲೂ ಜಾರಿಗೆ ತಂದಿದ್ದೇ ಆದಲ್ಲಿ ಖಾಸಗೀ ಶಾಲೆಯ ಮೋಹಕ್ಕೆ ಬೀಳುವ ಸಮಾಜ ಸರ್ಕಾರಿ ಶಾಲೆಗಳತ್ತ ಮುಖ ಮಾಡೋದು ಖಂಡಿತ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close