ಪ್ರಚಲಿತರಾಜ್ಯ

ಖಳನಟ ಪ್ರಕಾಶ್ ರೈ ಗೂ ಕಾಂಗ್ರೆಸ್ ಶಾಸಕನ‌ ಮಗ ಗೂಂಡಾ ನಲಪಾಡ್ ಗೂ ಇರುವ ಸ್ಪೋಟಕ ಸಂಬಂಧ ಬಯಲು!! ಇಲ್ಲಿದೆ ಇವರ ಮುಖವಾಡ!!

ಅಧಿಕಾರದ ಅಹಂನಿಂದ ಮೆರೆಯುತ್ತಿರುವ ಕಾಂಗ್ರೆಸ್ ನಾಯಕರು , ತಾವು ಏನೇ ಮಾಡಿದರು ನಡೆಯುತ್ತದೆ ಎಂಬ ಮದದಿಂದ ಕರ್ನಾಟಕದಲ್ಲಿ ಅಶಾಂತಿ ಸ್ರಷ್ಟಿಸುವ ಕೆಲಸದಲ್ಲಿ ತೊಡಗಿದ್ದಾರೆ. ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಸರ್ವಾಧಿಕಾರದ ಆಡಳಿತ ನಡೆಸುತ್ತಿದ್ದು ,ತನ್ನ ಸಂಪುಟದಲ್ಲೂ ಗೂಂಡಾಗಿರಿ ನಡೆಸುವವರನ್ನೇ ಜೊತೆಯಲ್ಲಿ ಇರಿಸಿಕೊಂಡಿದ್ದಾರೆ.

ಸಿದ್ದರಾಮಯ್ಯನವರು ಅಧಿಕಾರದ ಬಲದಿಂದ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಕೊಲೆ ನಡೆಸುತ್ತಿದ್ದರೆ , ಇತ್ತ ಕಾಂಗ್ರೆಸ್ ಶಾಸಕರು ಮತ್ತು ಶಾಸಕರ ಮಕ್ಕಳು ಎಲ್ಲರೂ ಸೇರಿ ಗೂಂಡಾಗಿರಿ ನಡೆಸುತ್ತಿದ್ದಾರೆ. ನಿನ್ನೆ ಬೆಳಿಗ್ಗೆ ಬೆಂಗಳೂರಿನ ರೆಸ್ಟೋರೆಂಟ್ ಒಂದರಲ್ಲಿ ಶಾಸಕರ ಮಗ ನಡೆಸಿದ ದಾಂಧಲೆಗೆ ಅಮಾಯಕ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.

ಹೌದು, ಈ ಕಾಂಗ್ರೆಸ್ ತನಗಿರುವ ಅಧಿಕಾರದ ಬಲದಿಂದ ಏನು ಬೇಕಾದರೂ ಸಾಧಿಸಲು ತಯಾರಿದೆ ಎಂಬೂದಕ್ಕೆ ಮತ್ತೊಂದು ಉದಾಹರಣೆಗೆ ದೊರಕಿದೆ. ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಶಾಸಕ ಹ್ಯಾರಿಸ್ ನಲಪಾಡ್ ನ ಪುತ್ರ ಶನಿವಾರ ರೆಸ್ಟೋರೆಂಟ್ ಒಂದರಲ್ಲಿ ಅಮಾಯಕ ಯುವಕನ ಮೇಲೆ ಹಲ್ಲೆ ನಡೆಸಿದ್ದು ಕಾಂಗ್ರೆಸ್ ನ ಮತ್ತೊಂದು ಮುಖ ಅನಾವರಣವಾಗಿದೆ. ರಾಜ್ಯದಲ್ಲಿ ಅಮಾಯಕರಿಗೆ ಬದುಕಲು ಕಷ್ಟವಾಗುವಂತಹ ಸ್ಥಿತಿ ನಿರ್ಮಿಸಿದ ಕೀರ್ತಿ ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ.

ರಾಜ್ಯದಿಂದ ನಡೆಯುವ ಅನಾಚಾರಗಳಿಗೆ ಪ್ರಧಾನಿ ಮೋದಿಯವರನ್ನು ಪ್ರಶ್ನಿಸುತ್ತಲೇ ತನ್ನ ಹೆಸರು ಗಳಿಸಲು ಪ್ರಯತ್ನಿಸುತ್ತಿರುವ ಕಾಟಾಚಾರಿ ನಟ ಎನಿಸಿಕೊಂಡಿರುವ ಪ್ರಕಾಶ್ ರೈ ಯವರ ಮತ್ತೊಂದು ಕರಾಳ ಮುಖವೂ ಇದೀಗ ಬಯಲಾಗಿದೆ.

ಹೌದು , ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಯಿಂದಲೇ ಸದ್ಯ ಸುದ್ದಿಯಲ್ಲಿರುವ ಬಹುಭಾಷಾ ನಟ ಪ್ರಕಾಶ್ ರೈ ಮತ್ತು ಬೆಂಗಳೂರಿನಲ್ಲಿ ನಡೆದ ಅಮಾಯಕ ಯುವಕನ ಮೇಲೆ ಹಲ್ಲೆ ನಡೆಸಿದ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಗೆ ಬಹಳ ಹತ್ತಿರದಿಂದ ಸಂಬಂಧ ಇದೆ ಎಂಬ ವಿಚಾರವೂ ಬಯಲಾಗಿದೆ.

ಈ ಹಿಂದೆ ಮಹಮ್ಮದ್ ನಲಪಾಡ್ ಕಾಂಗ್ರೆಸ್ ನ ಒಂದು ಕಾರ್ಯಕ್ರಮ ಏರ್ಪಡಿಸಿದ್ದರು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಪ್ರಕಾಶ್ ರೈ ಗೆ ಆಹ್ವಾನಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಕಾಶ್ ರೈ , ‘ಮಹಮ್ಮದ್ ನಲಪಾಡ್ ಇನ್ನೂ ಸಣ್ಣ ಹುಡುಗ, ಇಂತಹ ಮಕ್ಕಳನ್ನು ಬೆಳೆಸಲು ಪುಣ್ಯ ಮಾಡಿರಬೇಕು, ಈ ಸಣ್ಣ ವಯಸ್ಸಿನಲ್ಲೇ ಇಷ್ಟು ದೊಡ್ಡ ಸಾಧನೆ ಮಾಡಿದ್ದಾನೆ’ ಎಂದು ಬಾಯಿಗೆ ಬಂದಂತೆ ಬಡಾಯಿ ಕೊಚ್ಚಿಕೊಂಡಿದ್ದರು.

ಆದರೆ ಮಹಮ್ಮದ್ ನಲಪಾಡ್ ಹೇಳಿಕೊಂಡು ತಿರುಗುವಂತಹ ಯಾವುದೇ ಸಾಧನೆ ಮಾಡಿದವನಲ್ಲ. ಆದರೆ ತಂದೆಗೆ ಇರುವ ಅಧಿಕಾರದ ಬಲದಿಂದ ಹೋದಲ್ಲೆಲ್ಲಾ ಗಲಾಟೆ ಮಾಡಿಕೊಂಡು ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದವರು. ಇಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಮಹಮ್ಮದ್ ನಲಪಾಡ್ ನನ್ನು ಹಾಡಿ ಹೊಗಳಿರುವ ಪ್ರಕಾಶ್ ರೈ ಅವರ ನಡೆ ಗಮನಿಸಿದರೆ, ಇವರು ಕೇವಲ ಸಮಾಜಘಾತುಕ ವ್ಯಕ್ತಿಗಳ ಜೊತೆ ಮಾತ್ರ ಬೆರೆಯುತ್ತಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ.

ಯಾಕೆಂದರೆ ದೇಶದ್ರೋಹಿ ಹೇಳಿಕೆ ನೀಡಿ ಕಾಶ್ಮೀರದ ವಿರುದ್ಧ ಮಾತನಾಡಿದ್ದ ಮೇವಾನಿಯ ಜೊತೆ ಕೈ ಜೋಡಿಸಿಕೊಂಡಿದ್ದ ಪ್ರಕಾಶ್ ರೈ ಸದಾ ದೇಶದ್ರೋಹಿ ಮತ್ತು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರ ಜೊತೆಯೇ ಕಾಣಸಿಗುತ್ತಿದ್ದಾರೆ. ಮಹಮ್ಮದ್ ನಲಪಾಡ್ ಈ ಹಿಂದೆಯೂ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಕೆಲು ಪೋಲಿಸ್ ಠಾಣೆಗಳಲ್ಲಿ ಈತನ ಮೇಲೆ ಕೇಸ್ ದಾಖಲಾಗಿದೆ. ಈ ಎಲ್ಲಾ ವಿಷಯ ತಿಳಿದಿದ್ದರೂ ಪ್ರಕಾಶ್ ರೈ ನಲಪಾಡ್ ನನ್ನು ಹೊಗಳಿ ರಾಜಕೀಯ ಲಾಭ ಗಳಿಸುವ ಪ್ರಯತ್ನ ನಡೆಸಿದ್ದರು..!

–ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close