ಪ್ರಚಲಿತ

ಟ್ರಂಪ್, ನೇತಾನ್ಯಹು ಸಹಿತ ವಿಶ್ವದ ದಿಗ್ಗಜರನ್ನು ಬಿಟ್ಟು ಈ ವಿದೇಶಿ ಸಂಸ್ಥೆಯೊಂದು ಮೋದಿಯನ್ನೇ ಅಪ್ಪಿಕೊಂಡಿದ್ದರ ಹಿಂದಿದೆ ರೋಚಕ ಸತ್ಯ!!

ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಭಾರತದ ಖ್ಯಾತಿ ವಿಶ್ವದೆಲ್ಲೆಡೆ ಪಸರಿಸುತ್ತಿದೆ. ಮೊದಲು ಅಮೆರಿಕವೇ ವೀಸಾ ನೀಡಿ ಮೋದಿ ಅವರಿಗೆ ರತ್ನಗಂಬಳಿ ಹಾಸಿತು, ಜಗತ್ತಿನ ಹಲವು ರಾಷ್ಟ್ರಗಳು ತಮ್ಮ ದೇಶಕ್ಕೆ ಭಾರತದ ಪ್ರಧಾನಿಯವರನ್ನು ಕರೆಸಿಕೊಂಡವು. ಪಾಕಿಸ್ತಾನ ಬಾಲ ಮುದುರಿಕೊಂಡಿತು. ಚೀನಾವೂ ಹಿಂದಡಿಯಿಟ್ಟಿತು.ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿಯಿಂದಾಗಿ ದೇಶವು ಅಭಿವೃದ್ಧಿ ಪಥದತ್ತ ಸಾಗುತ್ತದೆಯಲ್ಲದೇ, ಭಾರತವನ್ನು ವಿಶ್ವದೆಲ್ಲೆಡೆ ಪರಿಚಯಿಸಿ ಬಲಿಷ್ಠ ರಾಷ್ಟ್ರವನ್ನಾಗಿಸಿ ಮಾಡಿದ ಹಿರಿಮೆ ಇವರದ್ದಾಗಿದೆ!!

ಆದರೆ ಈಗಾಗಲೇ ಸಾಕಷ್ಟು ಸಂಸ್ಥೆಗಳು ನಡೆಸಿರುವ ವರದಿಗಳ ಪ್ರಕಾರ, ಸಮೀಕ್ಷೆಗಳ ಪ್ರಕಾರ ನರೇಂದ್ರ ಮೋದಿಯವರು ದೇಶದ ಅತ್ಯಂತ ಜನಪ್ರಿಯ ನಾಯಕರೆಂದು ಬಿಂಬಿತರಾಗುತ್ತಿದ್ದ ಬೆನ್ನಲ್ಲೇ ಮತ್ತೆ ಪ್ರಧಾನಿ ನರೇಂದ್ರ ಮೋದಿ ವಿರೋಧಿಗಳಿಗೆ ವಿದೇಶಿ ಸಂಸ್ಥೆಯೊಂದು ನೀಡಿದ ವರದಿ ದೊಡ್ಡ ಶಾಕ್ ನೀಡಿದೆ ಎಂದೇ ಹೇಳಬಹದು..!! ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಾಗಿನಿಂದ ದೇಶದ ಪ್ರತಿಯೊಂದು ಅಭಿವೃದ್ಧಿಗಾಗಿ ಶ್ರಮಿಸುತ್ತಾನೆ ಬರುತ್ತಿದ್ದಾರೆ… ದೇಶದ ಅಭಿವದ್ಧಿಗಾಗಿ ನಿದ್ದೆಕೆಟ್ಟು ಚಿಂತಿಸುತ್ತಿದ್ದಾರೆ…ಇದರಿಂದಲೇ ನಮ್ಮ ಭಾರತೀಯರಿಗಲ್ಲದೆ ದೇಶ ವಿದೇಶದಲ್ಲೂ ಇವರ ಕೀರ್ತಿ ಪತಾಕೆ ತುಂಬಿ ತುಳುಕುತ್ತಿವೆ…
ವಿಶ್ವದಲ್ಲಿ ಅದೆಷ್ಟೋ ಬಲಿಷ್ಟ ನಾಯಕರುಗಳು ಇದ್ದರೂ ಅವರನ್ನೆಲ್ಲಾ ಹಿಂದಿಕ್ಕಿ ವಿಶ್ವದ ಪ್ರಭಾವಿ ವ್ಯಕ್ತಿಯಾಗಿ ನಮ್ಮ ಪ್ರಧಾನಿ ನರೇಂದ್ರ ಮೋದಿಯವರಿಗೆ ದೊರಕಿರು ಸ್ಥಾನ ಎಷ್ಟೆಂದು ತಿಳಿದರೆ ಭಾರತೀಯರು ಹೆಮ್ಮೆ ಪಡಲೇ ಬೇಕಾದ ಸಂಗತಿ!! ಹೌದು ಈಗ ಪ್ರಧಾನಿ ಮೋದಿ ಅವರು ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಜಗತ್ತಿನ ಮೂರನೇ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ.

ಹೌದು, ಗ್ಯಾಲಪ್ ಇಂಟರ್ ನ್ಯಾಷನಲ್ ಸಂಸ್ಥೆ ನಡೆಸಿದ ವಿಶ್ವ ಜನಪ್ರಿಯ ನಾಯಕರ ಸಮೀಕ್ಷೆಯಲ್ಲಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಸಹ ಹಿಂದಿಕ್ಕಿ ಮೂರನೇ ಜಾಗತಿಕ ಪ್ರಭಾವಿ ನಾಯಕರಾಗಿದ್ದಾರೆ.

ಸಮೀಕ್ಷೆಗಾಗಿ ಜಗತ್ತಿನ 50 ರಾಷ್ಟ್ರಗಳ ಜನಾಭಿಪ್ರಾಯ ಸಂಗ್ರಹಿಸಿದ್ದು, ಮೊದಲ ಸ್ಥಾನದಲ್ಲಿ ಜರ್ಮನಿ ಪ್ರಧಾನಿ ಏಂಜೆಲಾ ಮರ್ಕೆಲ್, ಫ್ರಾನ್ಸ್ ಪ್ರಧಾನಿ ಎಮ್ಯಾನುವೆಲ್ ಮ್ಯಾಕ್ರನ್ ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿದ್ದಾರೆ. ಬ್ರಿಟನ್ ಪ್ರಧಾನಿ ಥೆರೇಸಾ ಮೇ, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೋದಿ ಅವರ ನಂತರದ ಸ್ಥಾನದಲ್ಲಿದ್ದಾರೆ.

ವಿಶ್ವ ನಾಯಕರುಗಳಲ್ಲಿ ಮೂರನೇ ಸ್ಥಾನ ಹೊಂದಿದ್ದಲ್ಲದೆ ನಮ್ಮ ಭಾರತದ ಪ್ರಭಾವಿ ವ್ಯಕ್ತಿಯಾಗಿ ದೊರಕಿರುವ ಸ್ಥಾನ ನಿಜವಾಗಿಯೂ ಹೆಮ್ಮೆ ಪಡಬೇಕು!! ಈಗಾಗಲೇ ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಫೆÇಬ್ರ್ಸ್ ಪಟ್ಟಿಯಲ್ಲಿ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿ ಹೊರಹೊಮ್ಮಿದ್ದಲ್ಲದೇ, ಫೇಸ್ ಬುಕ್ ನಲ್ಲೂ ಕೂಡ ಗರಿಷ್ಠ ಫಾಲೋವರ್ಸ್ ಹೊಂದುವ ಮೂಲಕ ನಂ.1 ಪಟ್ಟವನ್ನು ಗಿಟ್ಟಿಸಿಕೊಂಡಿದ್ದರು. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿಯವರು ಭಾರತದ ರಾಜಕೀಯದಲ್ಲಿಯೇ ಅತ್ಯಂತ ಪ್ರಭಾವ ಶಾಲಿ ಹಾಗೂ ಜನಪ್ರಿಯ ರಾಜಕಾರಣಿ ಎಂದು ಅಮೇರಿಕದ ಅಧ್ಯಯನ ಕೇಂದ್ರದ ಹೊಸ ಸಮೀಕ್ಷೆಯೊಂದು ಹೇಳಿತ್ತು!!

ಅದಲ್ಲದೆ “ಟೈಮ್ಸ್ ಗ್ರೂಪ್” ನಡೆಸಿದ ಮೆಗಾ ಆನ್ಲೈನ್ ಸಮೀಕ್ಷೆಯ ಪ್ರಕಾರ, ನರೇಂದ್ರ ಮೋದಿಯವರು ಇಂದಿಗೂ ಕೂಡ ಭಾರತದ ಅತ್ಯಂತ ಜನಪ್ರಿಯ ನಾಯಕರೆಂದು ಮತ್ತೊಮ್ಮೆ ಸ್ಪಷ್ಟವಾಗಿದೆ !! ನೋಟ್ ನಿಷೇಧದ ಹೊರತಾಗಿಯೂ ಜಿಎಸ್ ಟಿ ಯಂತಹ ಪರಿಮಾಣಕಾರಿ ಕ್ರಮಗಳ ನಂತರವೂ, “ಟೈಮ್ಸ್ ಗ್ರೂಪ್” ಮಾಧ್ಯಮ 9 ಭಾಷೆಗಳಲ್ಲಿ ನಡೆಸಿದ ಆನ್ಲೈನ್ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿಗೆ ಪ್ರಚಂಡ ಬೆಂಬಲ ವ್ಯಕ್ತವಾಗಿತ್ತು..

ಸಮೀಕ್ಷೆಯಿಂದ ಜಿಎಸ್ ಟಿ ನೋಟ್ ಬ್ಯಾನ್ ನಿರ್ಧಾರದಿಂದಾಗಿ ಈಗಾಗಲೇ ದೇಶದಲ್ಲಿ ಸಾಕಷ್ಟು ಬದಲಾವಣೆಗಳು ನಡೆದಿದ್ದಲ್ಲದೇ, ಭ್ರಷ್ಟಾಚಾರ, ತೆರಿಗೆ ವಂಚನೆಗೆ ಕಡಿವಾಣ ಹಾಕುವ ಕಾರಣ ದೇಶದ ಬಹುಸಂಖ್ಯಾತ ಜನರು ಈ ಕ್ರಮವನ್ನು ಬೆಂಬಲಿಸುತ್ತಾರೆ ಎಂದು ತಿಳಿದುಬಂದಿದೆ. ವಿಶ್ವದೆಲ್ಲೆಡೆ ಪ್ರಸಿದ್ಧಿಯನ್ನು ಪಡೆದಿರುವ ನರೇಂದ್ರ ಮೋದಿ ಒಬ್ಬ ಪ್ರಭಾವಿ ರಾಜಕಾರಣಿಯಾಗಿದ್ದು, ತನ್ನ ವಾಕ್ ಚಾತುರ್ಯತೆಯಿಂದಾಗಿ ವಿಶ್ವದಲ್ಲೇ ಗಮನಸೆಳೆದಿದ್ದಾರೆ. ಹಾಗಾಗಿ ಆಸೀಸ್ ಬಿಲಿಯನೇರ್ ಮೋದಿ ಅವರನ್ನು ಪ್ರಶಂಸಿದ್ದಲ್ಲದೇ, ಮೋದಿಯವರ ವಿಷನ್ ಅನುಸರಿಸಲು ತಮ್ಮ ಆಸ್ಟ್ರೇಲಿಯ ಸರ್ಕಾರಕ್ಕೆ ಹೇಳಿದ್ದರು.

ಇನ್ನು “ಟೈಮ್ಸ್ ಗ್ರೂಪ್” ನಡೆಸಿರುವ ಮೆಗಾ ಆನ್ ಲೈನ್ ಸಮೀಕ್ಷೆಯ ಪ್ರಕಾರ ನರೇಂದ್ರ ಮೋದಿಯವರು ಭಾರತದ ಅತ್ಯಂತ ಜನಪ್ರಿಯ ನಾಯಕರೆಂದು ಬಿಂಬಿತರಾಗಿರೋದು ಹೆಮ್ಮೆಯ ವಿಚಾರವಾಗಿದೆ. ಅಷ್ಟೇ ಅಲ್ಲದೇ, 2019 ರಲ್ಲಿಯೂ ಕೂಡ ಇದೇ ಜನಾಭಿಪ್ರಾಯ ವ್ಯಕ್ತವಾಗಲಿದೆ ಎಂದು ಸಮೀಕ್ಷೆ ನಡೆಸಿದ 79 ಪ್ರತಿಶತ ಜನರು ಅಭಿಪ್ರಾಯ ಪಟ್ಟಿದ್ದಾರೆ.

ಈ ಹಿಂದೆ, “ಎದ್ದೇಳಿ… ವಿಶ್ವದ ಅತ್ಯಂತ ಪ್ರಮುಖ ಪ್ರಧಾನಿ” ಬರುತ್ತಿದ್ದಾರೆ ಎಂದು, ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಇಸ್ರೇಲ್ ಗೆ ಭೇಟಿ ನೀಡುತ್ತಿರುವ ವೇಳೆನರೇಂದ್ರ ಮೋದಿ ಅವರನ್ನು ಅಲ್ಲಿನ ಪ್ರಮುಖ ಬ್ಯುಸಿನೆಸ್ ದಿನ ಪತ್ರಿಕೆ ಹಾಡಿ ಹೊಗಳಿತ್ತು. ಅಷ್ಟೇ ಅಲ್ಲದೇ, ಬ್ಯುಸಿನೆಸ್ ದಿನ ಪತ್ರಿಕೆ, ‘ದಿ ಮಾರ್ಕ್’ ಪತ್ರಿಕೆ ತನ್ನ ಭಾರತ-ಇಸ್ರೇಲ್ ಸಂಬಂಧಗಳ ಕುರಿತ ಲೇಖನದಲ್ಲಿ, ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಯಹೂದಿ ರಾಜ್ಯಕ್ಕೆ ಭೇಟಿ ನೀಡಿದ್ದಾಗ ಇಸ್ರೇಲಿಗಳು ದೊಡ್ಡ ನಿರೀಕ್ಷೆಗಳನ್ನು ಹೊಂದಿದ್ದರು. ಆದರೆ “ಅವರು ಹೆಚ್ಚು ಹೇಳಲಿಲ್ಲ”. ಈಗ 1.25 ಬಿಲಿಯನ್ ಜನರ ನಾಯಕ, ಭಾರಿ ಜನಪ್ರಿಯತೆ ಗಳಿಸುತ್ತಿರುವ ಮತ್ತು ಪ್ರಪಂಚದ ಅತಿ ವೇಗವಾಗಿ ಆರ್ಥಿಕ ಬೆಳವಣಿಗೆ ಸಾಧಿಸುತ್ತಿರುವ ದೇಶದ ಪ್ರಧಾನಿ ನರೇಂದ್ರ ಮೋದಿ ನಮ್ಮ ದೇಶಕ್ಕೆ ಭೇಟಿ ನೀಡುತ್ತಿರುವುದು ಹೆಚ್ಚಿನ ಗಮನ ಸೆಳೆದಿದೆ ಎಂದು ವಿವರಿಸಿದ್ದರು!!

ಅಷ್ಟೇ ಅಲ್ಲದೇ, “ಬ್ಯಾಂಕ್ ಆಫ್ ಅಮೆರಿಕಾ”ವು ಮಾಡಿರುವ ವರದಿಯ ಪ್ರಕಾರ, ಭಾರತ ದಿನೇ ದಿನೇ ಬಲಿಷ್ಠ ರಾಷ್ಟ್ರವಾಗುತ್ತಿದೆಯಲ್ಲದೇ, 2028ರ ವೇಳೆಗೆ ಇಂಡಿಯಾ 3ನೇ ಸಧೃಡ ರಾಷ್ಟ್ರವಾಗುತ್ತದೆ ಎಂದು ಹೇಳಿತ್ತು. ಅಷ್ಟೇ ಅಲ್ಲದೇ, ಮುಂದಿನ ವರ್ಷ ಬ್ರಿಟನ್ ಮತ್ತು ಫ್ರಾನ್ಸ್ ನ ಆರ್ಥಿಕತೆಯನ್ನು ಭಾರತ ಹಿಂದಿಕ್ಕಳಿದ್ದು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ತಿಳಿಸಿದೆ.

ಇನ್ನು, ‘ಹಿಂದುಸ್ತಾನ್ ಟೈಮ್ಸ್’ ಬಾಲಿವುಡ್ ಐಕಾನ್, ಪೆÇಲಿಟಿಕಲ್ ಐಕಾನ್, ಅತ್ಯುತ್ತಮ ಮಾದರಿ ವ್ಯಕ್ತಿ, ಸ್ಫೋಟ್ರ್ಸ್ ಐಕಾನ್ ಹೀಗೆ ಹಲವು ವಿಭಾಗಗಳ ಕುರಿತು ನಡೆಸಿರುವ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ‘ಅತ್ಯುತ್ತಮ ಮಾದರಿ ವ್ಯಕ್ತಿ’ ಎನ್ನುವ ಪಟ್ಟವನ್ನು ಪಡೆದುಕೊಂಡಿದ್ದಾರೆ!! ಅಷ್ಟೇ ಅಲ್ಲದೇ, ಪ್ರಧಾನಿ ಮೋದಿಯವರು ಯೂತ್ ಐಕಾನ್ ಆಗಿಯೂ ಹೊರಹೊಮ್ಮಿರುವುದು ಇನ್ನೊಂದು ಉತ್ತಮ ಸಾಕ್ಷಿಯಾಗಿದೆ.

ಈ ಎಲ್ಲಾ ಸಮೀಕ್ಷೆಯ ಪ್ರಕಾರ ನರೇಂದ್ರ ಮೋದಿಯವರು ಭಾರತದ ಅತ್ಯಂತ ಜನಪ್ರಿಯ ನಾಯಕರೆಂದು ಬಿಂಬಿತರಾಗಿರೋದು ಹೆಮ್ಮೆಯ ವಿಚಾರವಾಗಿದೆ. ಅಷ್ಟೇ ಅಲ್ಲದೇ, ಇತ್ತೀಚೆಗೆ ನಡೆದ ಪ್ರತಿಯೊಂದು ರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವನ್ನು ಸಾಧಿಸಿರುವುದು ಗೊತ್ತೇ ಇದೆ. ಹಾಗಾಗಿ ಇದೇ ಯಶಸ್ಸು 2019 ರಲ್ಲಿಯೂ ಮುಂದುವರೆದರೆ ಪ್ರಧಾನಿ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ…

ವಿಶ್ವದ ಬಲಿಷ್ಟ ನಾಯಕರುಗಳನ್ನೆಲ್ಲಾ ಹಿಂದುಕ್ಕಿ ಮೂರನೇ ಸ್ಥಾನ ಗಳಿಸಿರುವ ಮೋದಿಜೀಗೆ ಒಂದು ಸಲಾಂ ಹೊಡೆಯಲೇ ಬೇಕು….

ಪವಿತ್ರ

Tags

Related Articles