ಪ್ರಚಲಿತ

ಬೆಂಗಳೂರಿನಲ್ಲಿ ಕಿಸ್, ಮಂಗಳೂರಿನಲ್ಲಿ ಪಂಚ್ ಆದರೆ ಶಿರಸಿಯಲ್ಲಿ ನಡೆದದ್ದೇ ಬೇರೆ…! ಸಿಎಂ ಸಿದ್ದರಾಮಯ್ಯಗೆ ಡಿಮಾಂಡ್ಯಪ್ಪೋ ಡಿಮಾಂಡ್!

ಸಿಎಂ ಸಿದ್ದರಾಮಯ್ಯ ಅವರು ಅದ್ಯಾವ ಭಾಗ್ಯ ಮಾಡಿದ್ದಾರೋ ಗೊತ್ತಿಲ್ಲ. ಯಾಕೆಂದರೆ ಅವರು ಹೋದಲೆಲ್ಲೆಡೆ ಮಹಿಳಾಮಣಿಗಳು ಮುತ್ತಿಕೊಳ್ಳುವುದು ಮಿತಿಮೀರುತ್ತಿದ್ದು, ಪಂಚ್, ಕಿಸ್ ಸಿಗುತ್ತಲೇ ಇದೆ. ಸಾರ್ವಜನಿಕವಾಗಿಯೇ ಮುತ್ತಿಕೊಳ್ಳುವ ಮಹಿಳಾಮಣಿಗಳು ಅವರನ್ನು ತಬ್ಬಿಕೊಳ್ಳಲು, ಮುತ್ತು ನೀಡಲು ಮುಂದಾಗುತ್ತಿದ್ದು, ಕಾಂಗ್ರೆಸ್‍ನ ಸಂಸ್ಕøತಿ ಬೀದಿಗೆ ಬರುತ್ತಿದೆ. ಮಂಗಳೂರಿನಲ್ಲಿ ಮೇಯರೊಬ್ಬರು ಪಂಚ್ ನೀಡಿದ್ದರಲ್ಲದೆ, ಇದಕ್ಕಿಂತ ಮುಂಚೆ ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಕಿಸ್ ನೀಡಿದ್ದರು. ಆದರೆ ಇದೀಗ ಕಾರವಾರ ಸಮೀಪದ ಶಿರಸಿಯಲ್ಲಿ ಮಹಿಳಾಮಣಿಗಳಿಬ್ಬರು ಸಿಎಂ ಅವರನ್ನು ತಬ್ಬಿಕೊಳ್ಳಲು ಮುಂದಾಗಿದ್ದು, ಇದರ ಲೈವ್ ವಿಡಿಯೋವನ್ನು ಸುದ್ದಿಮಾಧ್ಯಮವೊಂದು ವರದಿ ಮಾಡಿದೆ.

ಹೌದು, ಸಿದ್ದರಾಮಯ್ಯ ಉತ್ತರ ಕರ್ನಾಟಕದ ಪ್ರವಾಸದಲ್ಲಿದ್ದು, ಇಂದು ಶಿರಸಿಗೂ ಭೇಟಿನೀಡಿದ್ದರು. ಈ ವೇಳೆ ಮಹಿಳಾಮಣಿಗಳು ಸಿಎಂ ಅವರನ್ನು ಒಂದೇ ಸಮನೆ ಮುತ್ತಿಕೊಂಡಿದ್ದಲ್ಲದೆ ಬಹಿರಂಗವಾಗಿಯೇ ತಬ್ಬಿಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಮುಜುಗರಗೊಂಡ ಸಿದ್ದರಾಮಯ್ಯ ನಾಚಿಕೆಯಿಂದಲೇ ತಪ್ಪಿಸಿಕೊಂಡಿದ್ದಾರೆ. ಈ ರೀತಿ ತಬ್ಬಿಕೊಳ್ಳಲು ಮುಂದಾದ ಮಹಿಳೆಯನ್ನು ಶಿರಸಿ ನಗರಸಭೆ ಅಧ್ಯಕ್ಷೆ ವರುಣ್ ಅರುಣೀಕರ್ ಎಂದು ಗೊತ್ತಾಗಿದ್ದು, ಸಿಎಂನ ಅಂಗರಕ್ಷರನ್ನು ಮೀರಿಕೊಂಡು ಬಂದು ತಬ್ಬಿಕೊಳ್ಳಲು ಮುಂದಾಗಿದ್ದಾರೆ.

ಯಾವ ಸ್ಟಾರ್ ನಟನಿಗಿಂತಲೂ ಕಮ್ಮಿ ಇಲ್ಲದಂತೆ ಅವರನ್ನು ಒಂದೇ ಸಮನೆ ಮುತ್ತಿಕೊಳ್ಳುವ ಮಹಿಳಾ ಮಣಿಗಳು ಅಪ್ಪಿಕೊಳ್ಳಲು ಮುಂದಾಗುತ್ತಿರುವ ಲೈವ್ ದೃಶ್ಯ ದೃಶ್ಯವಾಹಿನಿಯಲ್ಲಿ ಲೈವ್ ಆಗಿ ತೋರಿಸಲಾಗಿದೆ. ಇದನ್ನೆಲ್ಲಾ ನೋಡಿದ ಜನರು ಸಿಎಂರನ್ನು ಕಂಡು ಬೆಂಗಳೂರಿನಲ್ಲಿ ಕಿಸ್, ಮಂಗಳೂರಿನಲ್ಲಿ ಪಂಚ್, ಶಿರಸಿಯಲ್ಲಿ ಹಗ್ ಎಂದು ಲೇವಡಿ ಮಾಡಿದ್ದು, ಸಿದ್ದರಾಮಯ್ಯನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ ಎಂದು ಲೇವಡಿ ಮಾಡಿದ್ದಾರೆ.

ಶಿರಸಿಗೆ ಭೇಟಿ ನೀಡಿದ್ದ ಸಿದ್ದರಾಮಯ್ಯನನ್ನು ಕಂಡು ಇಬ್ಬರು ಮಹಿಳಾಮಣಿಗಳು ತಾಮುಂದು ತಾಮುಂದು ಎಂದು ಮುಂದೆ ಬಂದು ಅಪ್ಪಿಕೊಳ್ಳಲು ಮುಂದಾಗಿದ್ದಾರೆ. ಆದರೆ ಇದರಿಂದ ಮುಜುಗರ ಅನುಭವಿಸಿದ ಸಿದ್ದರಾಮಯ್ಯ ಅವರು ಮಹಿಳೆಯರಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಆದರೂ ಅರುಣಾ ಮಾತ್ರ ಅಪ್ಪಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇದಕ್ಕಿಂತ ಮುಂಚೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕುರುಬ ಸಮುದಾಯದ ರಾಜ್ಯ ಮಟ್ಟದ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಿಹಿ ಮುತ್ತಿನ ಭಾಗ್ಯ ಸಿಕಿತ್ತು. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಅಮೃತಪುರ ತಾಲೂಕು ಪಂಚಾಯಿತಿ ಸದಸ್ಯೆ ಗಿರಿಜಾ ಶ್ರೀನಿವಾಸ್ ಅವರು ವೇದಿಕೆ ಏರಿ ಸಿಎಂ ಅವರನ್ನು ಕಂಡು ವೇದಿಕೆ ಏರಿ ಗ್ರೂಪ್ ಫೆÇೀಟೋಗೆ ಪೆÇೀಸ್ ಕೊಟ್ಟಿದ್ದಲ್ಲದೆ ಸಿಎಂ ಅವರಿಗೆ ಮುತ್ತಿಟ್ಟು ತೆರಳಿದ್ದಾರೆ. ಇದರಿಂದ ಯಾವುದೇ ಮುಜುಗರಕ್ಕೊಳಗಾಗದ ಸಿದ್ದರಾಮಯ್ಯ ಅಲ್ಲಿಂದ ತೆರಳಿದ್ದರು. ಈ ದೃಶ್ಯ ದೃಶ್ಯವಾಹಿನಿಗಳಲ್ಲಿ ಬಂದು ಭಾರೀ ಸದ್ದು ಮಾಡಿತ್ತು.

ಇದಾದ ಬಳಿಕ ಮಂಗಳೂರಿಗೆ ಆಗಮಿಸಿದ್ದ ಸಿದ್ದರಾಮಯ್ಯ ಕರಾಟೆ ಚ್ಯಾಂಪಿಯನ್‍ಶಿಪ್ ಉದ್ಘಾಟನೆ ವೇಳೆ ಮಂಗಳೂರಿನ ಮೇಯರ್ ಆಗಿರುವ ಕವಿತಾ ಸನಿಲ್ ಅವರ ಹೊಟ್ಟೆಗೆ ಪಂಚ್ ನೀಡಿದ್ದರು. ಇದನ್ನು ಕಂಡು ಹುಳ್ಳಗೆ ನಗು ಬೀರಿದ್ದ ಕವಿತಾ ಸನಿಲ್ ಕೂಡಾ ಸಿದ್ದರಾಮಯ್ಯಗೆ ಪಂಚ್ ನೀಡಿ ಬಿದ್ದು ಬಿದ್ದು ನಕ್ಕಿದ್ದರು. ಈ ವಿಚಿತ್ರ ನಮೂನೆಯ ಉದ್ಘಾಟನೆಯೂ ದೃಶ್ಯ ಮಾಧ್ಯಮದಲ್ಲಿ ಲೈವ್ ಆಗಿ ಬಿತ್ತರಗೊಂಡು ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿತ್ತು.

ಇದೀಗ ಅಂಥಹುದ್ದೇ ಘಟನೆ ಶಿರಸಿಯಲ್ಲಿ ನಡೆದಿರುವುದು ಭಾರೀ ಚರ್ಚೆಗೆ ಗ್ರಾಸ ಒದಗಿಸಿದೆ. ಎಲ್ಲರ ಮುಂದೆಯೇ ಮುಂದೆ ಬಂದಿರುವ ಮಹಿಳಾಮಣಿಗಳು ಸಿದ್ದರಾಮಯ್ಯನವರನ್ನು ತಾಮುಂದು ತಾಮುಂದು ಎಂದು ಮುಂದೆ ಬಂದು ಅಪ್ಪಕೊಳ್ಳಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಅದೇನು ಮೋಡಿ ಮಾಡಿದ್ದಾರೋ ಗೊತ್ತಿಲ್ಲ. ಅವರು ಹೋದಲ್ಲೆಲ್ಲ ಕಡೆ ಮುತ್ತಿನ, ಅಪ್ಪುಗೆಯ ಮಳೆಗೈಯ್ಯಲು ಮಹಿಳಾಮಣಿಗಳು ಕ್ಯೂನಲ್ಲಿ ನಿಂತಿರುವುದು ಕಂಡುಬರುತ್ತಿದೆ.

ಅಲ್ಪಸಂಖ್ಯಾತರಿಗೆ ಸಾಕಷ್ಟು ಭಾಗ್ಯಗಳನ್ನು ಕೊಟ್ಟು ಹಿಂದೂಗಳನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿರುವ ಸಿದ್ದರಾಮಯ್ಯನಿಗೆ ಕಿಸ್‍ಭಾಗ್ಯ, ಪಂಚ್ ಭಾಗ್ಯ ಇದೀಗ ಹಗ್ ಭಾಗ್ಯ ಸಿಗುತ್ತಿದೆ. ಇದರಲ್ಲೇ ಕಾಲ ಕಳೆಯುತ್ತಿರುವ ಸಿದ್ದರಾಮಯ್ಯಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಭಾಗ್ಯ ಕರುಣಿಸಲು ಕರ್ನಾಟಕದ ಮತದಾರರು ಕಾತರರಾಗಿದ್ದಾರೆ.

ಕಿಸ್ ಆಫ್ ಲವ್ ವಿರೋಧಿಸಿದ್ದ ಸಿದ್ದುಗೆ ಕಿಸ್ ಭಾಗ್ಯ!

ನೈತಿಕ ಪೆÇಲೀಸ್‍ಗಿರಿ ವಿರುದ್ಧ ಬೆಂಗಳುರಿನ ಟೌನ್‍ಹಾಲ್ ಬಳಿ ನಡೆಸಲು ಬುದ್ಧಿಜೀವಿಗಳ ಪ್ರೇರಿತ ಯುವಪಡೆಗಳ ತಂಡವೊಂದು `ಕಿಸ್ ಆಫ್ ಲವ್’ ನಡೆಸಲು ಮುಂದಾಗಿತ್ತು. ಇದನ್ನು ವಿರೋಧಿಸಿದ್ದ ಸಿದ್ದರಾಮಯ್ಯ ಕಿಸ್ ಆಫ್ ಲವ್‍ನಲ್ಲಿ ಭಾಗವಹಿಸುವವರಿಗೆ ಎಚ್ಚರಿಕೆ ನೀಡಿ, `ಕಿಸ್ ಆಫ್ ಲವ್’ನಲ್ಲಿ ಭಾಗವಹಿಸಿ, ಅಶ್ಲೀಲ ಮತ್ತು ಅಸಭ್ಯವಾಗಿ ವರ್ತಿಸುವವರ ವಿರುದ್ಧ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು. ನೈತಿಕ ಪೆÇಲೀಸ್‍ಗಿರಿ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ಪ್ರತಿಭಟನೆ ನಡೆಸಿದರೆ, ಅದಕ್ಕೆ ಸರ್ಕಾರದ ಅನುಮತಿ ಇದೆ. ಆದರೆ ಸಾರ್ವಜನಿಕವಾಗಿ ಬೀದಿಗಳಲ್ಲಿ ಕಿಸ್ ಡೇ ಆಚರಿಸುವ ಮೂಲಕ ಅಶ್ಲೀಲವಾಗಿ ಪ್ರತಿಭಟನೆ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದ್ದರು. ಆದರೆ ಆ ರೀತಿ ಎಚ್ಚರಿಸಿದ್ದ ಸಿದ್ದರಾಮಯ್ಯನವರಿಗೆ ಇಂದು ಸಾರ್ವಜನಿಕವಾಗಿಯೇ ಕಿಸ್ ಭಾಗ್ಯ, ಹಗ್ ಭಾಗ್ಯ ಸಿಗುತ್ತಿದೆ.

ಸಿಎಂ ಸಿದ್ದರಾಮಯ್ಯನವರ ಮುಖ ಮೊದಲೇ ಹರಳೆಣ್ಣೆ ಕುಡಿದವರಂತಿದ್ದು, ಆದರೂ ಈ ಮಹಿಳಾಮಣಿಗಳು ಮಾತ್ರ ಕಿಸ್ ನೀಡಿ ಹಗ್ ಮಾಡಲು ಮುಂದೆ ಬರುತ್ತಿರುವುದು ಕರ್ನಾಟಕದ ಜನತೆಗೆ ಒಂದು ಸೋಜಿಗದ ವಿಷಷಯವಾಗಿದೆ.

 

-ಚೇಕಿತಾನ

Tags

Related Articles