ಪ್ರಚಲಿತರಾಜ್ಯ

ಬಿಜೆಪಿಗೆ ಸೇರಲಿದ್ದಾರೆಯೇ ಚಾಲೆಂಜಿಂಗ್ ಸ್ಟಾರ್…!? ಮೋದಿಯೊಂದಿಗೆ ಮಾತು ನಿಗಧಿಯಾಗಿತ್ತಾ..?!

ನರೇಂದ್ರ ಮೋದಿಯವರ ಆಡಳಿತವನ್ನು ಕಂಡು ಇಂದು ಇಡೀ ವಿಶ್ವವೇ ಬಹಳ ಅಚ್ಚರಿಯಿಂದ ಭಾರತದ ಅಭಿವೃದ್ಧಿಯ ವೇಗವನ್ನು ನೋಡುತ್ತಿದೆ. ಯಾಕೆಂದರೆ ಭಾರತದ ಪ್ರಗತಿಗೆ ಹಗಲಿರುಳು ದುಡಿಯುತ್ತಿರುವ ಮೋದಿ ಇಂದು ಮಾಡುತ್ತಿರುವ ಅಚ್ಚರಿಯೇ ಅಂತಹದ್ದು. ನರೇಂದ್ರ ಮೋದಿಯವರ ಒಂದೊಂದು ಯೋಜನೆಗಳು ಇಂದು ಜಗತ್ತಿನಾದ್ಯಂತ ಮನ್ನಣೆ ಪಡೆದುಕೊಳ್ಳುತ್ತಿದೆ.

ಕಾಂಗ್ರೆಸ್ ನ ಆಡಳಿತಕ್ಕೆ ಬೇಸತ್ತ ದೇಶದ ಜನ ಪ್ರತೀ ರಾಜ್ಯಗಳಲ್ಲೂ ಕಾಂಗ್ರೆಸ್ ನಿಂದ ದೂರವಾಗುತ್ತಿದ್ದಾರೆ. ಕರ್ನಾಟಕದಲ್ಲಿ ಮಾತ್ರ ತನ್ನ ಅಸ್ತಿತ್ವ ಉಳಿಸಿಕೊಂಡಿರುವ ಕಾಂಗ್ರೆಸ್ ಗೆ ರಾಜ್ಯದಲ್ಲೂ ಕಂಟಕ ಎದುರಾಗಿದೆ. ಯಾಕೆಂದರೆ ಸಿದ್ದರಾಮಯ್ಯನವರ ಹಿಂದೂ ವಿರೋಧಿ ನೀತಿಯಿಂದಾಗಿ ಇಂದು ರಾಜ್ಯದ ಜನತೆಯೂ ಕೂಡ ನರೇಂದ್ರ ಮೋದಿಯವರ ನೇತ್ರತ್ವದ ಬಿಜೆಪಿಯತ್ತ ಒಲವು ತೋರಿಸುತ್ತಿದೆ‌.

ಕನ್ನಡ ಚಿತ್ರರಂಗದಿಂದ ನಮೋ ಜಪ..!

ಹೌದು, ಕರ್ನಾಟಕದಿಂದ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದ ದಿನದಿಂದಲೂ ಕನ್ನಡಕ್ಕೆ ಬೇಕಾದ ಯಾವುದೇ ಯೋಜನೆಗಳನ್ನಾಗಲಿ, ಅಥವಾ ಹೊಸ ಸೌಲಭ್ಯಗಳನ್ನು ಒದಗಿಸಲಿಲ್ಲ. ಕೇವಲ ಕರ್ನಾಟಕದ ಜನತೆಯ ಮತ ಗಿಟ್ಟಿಸಿಕೊಳ್ಳುವ ಸಲುವಾಗಿ ನಾಟಕವಾಡುತ್ತಿರುವ ಸಿದ್ದರಾಮಯ್ಯನವರ ಸರಕಾರಕ್ಕೆ ಈಗಾಗಲೇ ಕರ್ನಾಟಕದ ಜನತೆ ಛೀಮಾರಿ ಹಾಕಿದ್ದಾರೆ. ಇದೀಗ ಕನ್ನಡ ಚಿತ್ರರಂಗದ ದಿಗ್ಗಜರು ಕೂಡಾ ‘ನಮೋ’ ಜಪ ಮಾಡುತ್ತಿದ್ದು , ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಕಡೆ ಮುಖಮಾಡುವ ಸಾಧ್ಯತೆ ಹೆಚ್ಚಿದೆ.

ಮೋದಿ ಭೇಟಿಗೆ ಚಾಲೆಂಜಿಂಗ್ ಸ್ಟಾರ್ ತಯಾರಿ..!

ಇಂದು ಕರ್ನಾಟಕದ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದ ನರೇಂದ್ರ ಮೋದಿಯವರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ಮಾಡಲು ಕಾಯುತ್ತಿದ್ದಾರೆ. ದರ್ಶನ್ ರವರ ತಾಯಿ ಕಾಂಗ್ರೆಸ್ ಕಾರ್ಪೋರೇಟರ್ ಆಗಿದ್ದರು. ಆದ್ದರಿಂದ ದರ್ಶನ್ ಈವರೆಗೂ ಯಾವುದೇ ರಾಜಕೀಯ ಪಕ್ಷಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ನರೇಂದ್ರ ಮೋದಿಯವರ ಆಡಳಿತಕ್ಕೆ ದರ್ಶನ್ ರವರು ಇದೀಗ ಬಿಜೆಪಿಯತ್ತ ಒಲವು ತೋರಿಸಿದ್ದಾರೆ.

ನರೇಂದ್ರ ಮೋದಿಯವರ ಬಲು ದೊಡ್ಡ ಕನಸಿನ ಭಾರತದ ನಿರ್ಮಾಣಕ್ಕಾಗಿ ಕೈಗೊಂಡ ‘ಸ್ವಚ್ಛ ಭಾರತ್’ ಅಭಿಯಾನಕ್ಕೆ ದರ್ಶನ್ ಈ ಹಿಂದೆಯೇ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇಂತಹ ಯೋಜನೆಗಳಿಂದ ಭಾರತ ಮತ್ತಷ್ಟು ಬದಲಾವಣೆಗೊಳ್ಳಲಿದೆ. ನಾವೆಲ್ಲರೂ ನರೇಂದ್ರ ಮೋದಿಯವರ ಈ ಯೋಜನೆಯನ್ನು ಬೆಂಬಲಿಸಿ ಜೊತೆಯಾಗಿ ಕೆಲಸ ಮಾಡಬೇಕೆಂದು ಹೇಳಿಕೊಂಡಿದ್ದರು.

ಇದೀಗ ಇಂದು ಮತ್ತೆ ನರೇಂದ್ರ ಮೋದಿಯವರ ಭೇಟಿಗಾಗಿ ಕಾಯುತ್ತಿದ್ದೇನೆ ಎಂದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅವಕಾಶ ಸಿಕ್ಕರೆ ಪ್ರಧಾನಿಯವರ ಜೊತೆ ಮಾತುಕತೆ ನಡೆಸುತ್ತೇನೆ ಎಂದು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ ಗಳು ಈಗಾಗಲೇ ನರೇಂದ್ರ ಮೋದಿಯವರನ್ನು ಬೆಂಬಲಿಸುತ್ತಿದ್ದು ಇಡೀ ಕನ್ನಡ ಚಿತ್ರರಂಗವೇ ‘ನಮೋ’ ಜಪ ಮಾಡಿಕೊಳ್ಳುತ್ತಿದ್ದಾರೆ.

ದರ್ಶನ್ ಮೈಸೂರಿನಲ್ಲಿ ಇರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ಬಾರಿಯ ಚುಮಪನಾವಣೆಯಲ್ಲಿ ದರ್ಶನ್ ರವರ ಈ ನಡೆ ಭಾರೀ ಹಿನ್ನಡೆ ತರುವ ಸಾಧ್ಯತೆ ಇದೆ. ಯಾಕೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಎಲ್ಲರೂ ದರ್ಶನ್ ಪರ ನಿಂತರೆ , ದರ್ಶನ್ ನರೇಂದ್ರ ಮೋದಿಯವರನ್ನು ಬೆಂಬಲಿಸಲು ತುದಿಕಾಲಲ್ಲಿ ನಿಂತಿದ್ದಾರೆ. ಇದರಿಂದಾಗಿ ಸಿದ್ದರಾಮಯ್ಯನವರಿಗೆ ಈ ವಿಚಾರವು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮೈಸೂರಿನಲ್ಲಿ ಅಭಿಮಾನಿಗಳ ದಂಡನ್ನೇ ಹೊಂದಿರುವ ದರ್ಶನ್ ನರೇಂದ್ರ ಮೋದಿಯವರ ಬಿಜೆಪಿಯತ್ತ ಮುಖ ಮಾಡಿದರೆ, ಅಭಿಮಾನಿಗಳು ಕೂಡ ಬಿಜೆಪಿಯತ್ತ ಬರುತ್ತಾರೆ. ಅದೇ ಕಾರಣಕ್ಕಾಗಿ ಸಿದ್ದರಾಮಯ್ಯನವರು ತಲೆ ಮೇಲೆ ಕೈ ಇಟ್ಟು ಕೂರುವಂತಾಗಿದೆ.

ಅರವಿಂದ್ ಲಿಂಬಾವಳಿಯ ಪರ ಭಾರೀ ಪ್ರಚಾರ..!

ಈ ಹಿಂದೆ ಅರವಿಂದ್ ಲಿಂಬಾವಳಿಯ ಪರ ಭಾರೀ ಪ್ರಚಾರ ಮಾಡಿದ್ದ ದರ್ಶನ್ ಅಂದೇ ಬಿಜೆಪಿಯ ಕಡೆ ಒಲವು ತೋರಿಸಿದ್ದರು. ಅರವಿಂದ್ ಲಿಂಬಾವಳಿ ಸದ್ಯ ರಾಜ್ಯ ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ಯಾಗಿದ್ದು ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅಂದು ದರ್ಶನ್ ಲಿಂಬಾವಳಿಯ ಪರ ರೋಡಿಗಿಳಿದು ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು . ಹೀಗಾಗಿ ಈ ಬಾರಿಯೂ ಮತ್ತೆ ಮೋದಿಯವರ ಭೇಟೀಯ ಬಗ್ಗೆ ಇಂಗಿತ ವ್ಯಕ್ತಪಡಿಸಿದ ನಟ ದರ್ಶನ್ ಸದ್ಯದಲ್ಲೇ ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ..!

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿದ್ದಂತೆ , ಆಡಳಿತದಲ್ಲಿ ಇರುವ ಕಾಂಗ್ರೆಸ್ ಗೆ ನಡುಕ ಉಂಟಾಗಿದೆ‌. ಈಗಾಗಲೇ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎದ್ದು ಕಾಣುತ್ತಿದ್ದು ಮುಂಬರುವ ಕರ್ನಾಟಕವನ್ನು ವಿಧಾನಸಭಾ ಚುನಾವಣೆ ಬಹಳ ಕುತೂಹಲ ಕೆರಳಿಸಿದೆ.
ಸಿನಿದಿಗ್ಗಜರೆಲ್ಲಾ ನರೇಂದ್ರ ಮೋದಿಯವರ ಬೆಂಬಲಕ್ಕೆ ನಿಂತಿದ್ದು ,ಇದೀಗ ದರ್ಶನ್ ಕೂಡಾ ನರೇಂದ್ರ ಮೋದಿಯವರನ್ನು ಬೆಂಬಲಿಸುವುದಾಗಿ ಹೇಳಿಕೊಂಡಿದ್ದಾರೆ..!

–ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close