ಪ್ರಚಲಿತ

ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಕನ್ನಡದ ಹಿಂದೂ ಫೈರ್ ಬ್ರಾಂಡ್…! ರಾಹುಲ್ ಹಿಂದೂ ಭಕ್ತಿಗೆ ಅನಂತ್ ಕುಮಾರ್ ಹೆಗಡೆ ಏನಂದರು ಗೊತ್ತಾ..?!

ರಾಜಕೀಯ ಲಾಭಕ್ಕಾಗಿ ದೇಶ ಸುತ್ತುತ್ತಿರುವ ರಾಹುಲ್ ಗಾಂಧಿ ಇದೀಗ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಆಗಮಿಸಿದ್ದಾರೆ. ಹಿಂದೂ ವಿರೋಧಿ ಸಿದ್ದರಾಮಯ್ಯನವರ ಸರಕಾರವನ್ನು ಕಿತ್ತೊಗೆಯಲು ರಾಜ್ಯದ ಜನತೆ ನಿರ್ಧರಿಸಿದರೆ , ಅತ್ತ ಕಡೆ ಹಿಂದುತ್ವದ ಮುಖವಾಡ ಧರಿಸಿ ರಾಹುಲ್ ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್ ನಾಯಕರು ಹಿಂದೂ ದೇವಾಲಯಗಳಿಗೆ ಭೇಟಿ ನೀಡಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಕರ್ನಾಟಕದಲ್ಲಿ ನಡೆಯಲಿರುವ ಮುಂದಿನ ರಾಜ್ಯಸಭಾ ಚುನಾವಣೆಗಾಗಿ ಪ್ರಚಾರಕ್ಕೆ ಆಗಮಿಸಿದ ರಾಹುಲ್ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಡ್ರಾಮಾ ಮಾಡುವ ಕಾಂಗ್ರೇಸಿಗರು ಯಾವ ಮಟ್ಟಕ್ಕೂ ಇಳಿಯಲು ಸಿದ್ದರಿದ್ದಾರೆ ಎಂಬುದಕ್ಕೆ ಕರ್ನಾಟಕವೇ ಸಾಕ್ಷಿ. ಯಾಕೆಂದರೆ ಅಧಿಕಾರಕ್ಕೆ ಬಂದ ದಿನದಿಂದಲೇ ಹಿಂದೂ ಧರ್ಮದ ಮತ್ತು ಹಿಂದೂಗಳ ವಿರುದ್ಧ ನಡೆದುಕೊಳ್ಳುತ್ತಿದ್ದ ಸಿದ್ದರಾಮಯ್ಯನವರು ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ದೇವಾಲಯಗಳ ಮೊರೆ ಹೋಗುತ್ತಿದ್ದಾರೆ.

ರಾಜ್ಯದಲ್ಲಿ ಹಿಂದೂಗಳ ಸಾಲು ಸಾಲು ಕೊಲೆಗಳು ನಡೆಯುತ್ತಿದೆ‌. ಆದರೂ ಸಿ ಎಂ ಸಿದ್ದರಾಮಯ್ಯನವರು ಈ ಬಗ್ಗೆ ಯಾವುದೇ ಸಮಗ್ರ ತನಿಖೆ ನಡೆಸುತ್ತಿಲ್ಲ. ಕೇವಲ ಅಲ್ಪಸಂಖ್ಯಾತರನ್ನು ಮೆಚ್ಚಿಸುವ ಸಲುವಾಗಿ ಹಿಂದೂಗಳ ಮಾರಣ ಹೋಮ ನಡೆಸುತ್ತಿರುವ ಸಿದ್ದರಾಮಯ್ಯನವರ ವಿರುದ್ಧ ಕೇಂದ್ರ ಸಚಿವ ಕರ್ನಾಟಕದ ಹಿಂದೂ ಫೈರ್ ಬ್ರಾಂಡ್ ಖ್ಯಾತಿಯ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.

 

ಕರ್ನಾಟಕ ಕಾಂಗ್ರೆಸ್ ಆಡಳಿತದಲ್ಲಿ ಏನೆಲ್ಲಾ ನೋಡಬಾರದಿತ್ತೋ ಅವೆಲ್ಲವನ್ನೂ ನೋಡಿದ್ದಾಯಿತು. ಚುನಾವಣೆ ಸಮೀಪಿಸುತ್ತಿದ್ದಂತೆ ಹಿಂದುತ್ವ ನೆನಪಾದರೆ ಸಾಲದು , ಕೇವಲ ಬಾಯಿ ಮಾತಿಗೆ ಹಿಂದೂ ದೇವರುಗಳ ಹೆಸರೇಳಿಕೊಂಡು ದೇವಾಲಯಗಳಿಗೆ ಭೇಟಿ ನೀಡಿದರೆ ಏನೂ ಪ್ರಯೋಜನವಿಲ್ಲ , ಬದಲಾಗಿ ಹಿಂದೂ ಧರ್ಮದ ಆಚಾರ ವಿಚಾರಗಳನ್ನು ಆಚರಿಸಿಕೊಂಡು ಬನ್ನಿ ಎಂದು ಅನಂತ್ ಕುಮಾರ್ ಹೆಗಡೆ ಸಿದ್ದರಾಮಯ್ಯನವರ ವಿರುದ್ಧ ಕಿಡಿಕಾರಿದ್ದಾರೆ..!

ಸಿದ್ದರಾಮಯ್ಯನವರಿಗೆ ತಮ್ಮ ರಕ್ತದ ಪರಿಚಯವಿಲ್ಲ ,ಆದ್ದರಿಂದಲೇ ರಾಜ್ಯದ ಹಿಂದೂ ಯುವಕರನ್ನು ಕೊಂದು ಬೇರೆಯವರ ರಕ್ತದ ರುಚಿ ನೋಡಿ ಖುಷಿ ಪಡುತ್ತಿದ್ದಾರೆ ಎಂದು ಗಂಭೀರವಾಗಿ ಹೇಳಿಕೆ ನೀಡಿದ ಅನಂತ್ ರವರು ಹೆಗ್ಡೆ , ಚುನಾವಣೆ ಹತ್ತಿರ ಬರುತ್ತಿದ್ದು ರಾಜ್ಯದಲ್ಲಿ ಖೋಟಾ ಹಿಂದುತ್ವವಾದಿಗಳು ಹುಟ್ಟಿಕೊಂಡಿದ್ದಾರೆ ಎಂದು ಸಿ ಎಂ ಸಿದ್ದರಾಮಯ್ಯ ಮತ್ತು ರಾಜ್ಯ ಪ್ರವಾಸ ಮಾಡುತ್ತಿರುವ ರಾಹುಲ್ ಗಾಂಧಿಗೆ ಟಾಂಗ್ ನೀಡಿದ್ದಾರೆ.

 

ಸಿದ್ದರಾಮಯ್ಯನವರು ತಮ್ಮ ರಕ್ತದ ಪರೀಕ್ಷೆ ಮಾಡಿಕೊಳ್ಳಲಿ, ರಕ್ತದ ಅರಿವೇ ಇಲ್ಲದವರಿಗೆ ಇದೀಗ ರಕ್ತದ ರುಚಿ ನೋಡುವ ಆಸೆ ಹುಟ್ಟಿದೆ. ಅದೇ ಕಾರಣಕ್ಕಾಗಿ ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಸರಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.

ಇಷ್ಟೇ ಅಲ್ಲದೆ, ರಾಹುಲ್ ಗಾಂಧಿ ಕಾಲಿಟ್ಟಲ್ಲೆಲ್ಲಾ ಕಾಂಗ್ರೆಸ್ ಸೋಲುತ್ತಿದ್ದು , ಕರ್ನಾಟಕ ಕಾಂಗ್ರೆಸ್ ಗೂ ಇದೇ ರೀತಿ ಸೋಲಾಗಲಿದೆ ಎಂದು ಫೈರ್ ಬ್ರಾಂಡ್ ಟೀಕಿಸಿದ್ದಾರೆ. ರಾಹುಲ್ ಗಾಂಧಿ ರಾಜ್ಯದಲ್ಲಿ ಓಡಾಡಿದಷ್ಟು ಬಿಜೆಪಿಗೆ ಒಳ್ಳೆಯದು, ಯಾಕೆಂದರೆ ರಾಹುಲ್ ಇರುವಷ್ಟು ದಿನ ರಾಜ್ಯದ ಜನತೆಗೆ ಮನೋರಂಜನೆ ಸಿಗುತ್ತದೆ ಎಂದು ರಾಹುಲ್ ಗಾಂಧಿ ವಿರುದ್ಧ ಲೇವಡಿ ಮಾಡಿದ್ದಾರೆ. ನರೇಂದ್ರ ಮೋದಿಯವರ ಆಡಳಿತ ವೈಖರಿಗೆ ಈಗಾಗಲೇ ಇಡೀ ದೇಶವೇ ಬಿಜೆಪಿಯ ಕಡೆ ಒಲವು ತೋರಿಸಿದೆ. ಇದೇ ರೀತಿ ಕರ್ನಾಟಕ ಬಿಜೆಪಿಯೂ ಬಲಿಷ್ಠವಾಗಿದ್ದು , ಕಾಂಗ್ರೆಸ್ ಸೋಲುವುದು ಖಚಿತವಾಗಿದೆ ಎಂದು ಸೂಚಿಸಿದ್ದಾರೆ.

ಈ ಹಿಂದೆಯೂ ರಾಜ್ಯದಲ್ಲಿ ನಡೆದ ಹಿಂದೂ ಕಾರ್ಯಕರ್ತರ ಕೊಲೆಗಳಿಗೆ ಸಿದ್ದರಾಮಯ್ಯ ಸರಕಾರವೇ ನೇರ ಕಾರಣ ಎಂದು ಆರೋಪಿಸುತ್ತಾ ಬಂದಿರುವ ಅನಂತ್ ಕುಮಾರ್ ಹೆಗ್ಡೆ ಸದಾ ರಾಜ್ಯ ಸರಕಾರದ ನಿದ್ದೆಗೆಡಿಸುತ್ತಲೇ ಇದ್ದಾರೆ. ಸಿದ್ದರಾಮಯ್ಯನವರ ವಿರುದ್ಧ ನೇರವಾಗಿ ಆರೋಪ ಮಾಡುತ್ತಿರುವ ಕರ್ನಾಟಕದ ಹಿಂದೂ ಫೈರ್ ಬ್ರಾಂಡ್ ಅನಂತ್ ಕುಮಾರ್ ಹೆಗ್ಡೆ ಮತ್ತೆ ಸಿದ್ದರಾಮಯ್ಯನವರ ಸರಕಾರದ ವಿರುದ್ಧ ಛಾಟಿ ಬೀಸಿದ್ದಾರೆ..!

–ಅರ್ಜುನ್

 

Tags

Related Articles