ಇತಿಹಾಸ

ತನ್ನ ಪಕ್ಷವೇ ಮಾಡಿದ ಸರ್ವೆಯಲ್ಲಿ ಹೊರಬಿತ್ತು ಫಲಿತಾಂಶದ ರಹಸ್ಯ!! ಈ ಫಲಿತಾಂಶದಿಂದ ಕಾಂಗ್ರೆಸ್ ಬೆಚ್ಚಿಬಿದ್ದಿದ್ಯಾಕೆ ಗೊತ್ತಾ?!

ಯಾವಾಗ ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣೆ ಮುಗಿದು ಫಲಿತಾಂಶ ಹೊರ ಬಿದ್ದಿತ್ತೋ ಅಂದಿನಿಂದ ರಾಜ್ಯ ರಾಜಕೀಯ ಬೆಳವಣಿಗೆಗಳು ಕ್ಷಿಪ್ರಗತಿಯಲ್ಲಿ ಸಾಗತೊಡಗಿದೆ. ಅಷ್ಟೂ ಸಮಯ ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ರಾಷ್ಟ್ರೀಯ ನಾಯಕರೆಲ್ಲರೂ ಈಗ ಕರ್ನಾಟಕಕ್ಕೆ ಲಗ್ಗೆ ಇಟ್ಟು ತಮ್ಮ ಅಬ್ಬರದ ಪ್ರಚಾರ ಹಾಗೂ ಚುನಾವಣಾ ತಂತ್ರಗಾರಿಕೆಯನ್ನು ಹೆಣೆಯುತ್ತಿದ್ದಾರೆ.

ಮೇಲಿಂದ ಮೇಲೆ ಬರುತ್ತಿದೆ ಚುನಾವಣಾ ಸಮೀಕ್ಷೆಗಳು…

ಇನ್ನು 4-5 ತಿಂಗಳಲ್ಲಿ ನಡೆಯುವ ರಾಜ್ಯ ವಿಧಾನ ಸಭಾ ಚುನಾವಣೆಗೆ ಈಗಾಗಲೇ ರಾಜ್ಯ ರಾಷ್ಟ್ರ ಸಹಿತ ಅನೇಕ ಸುದ್ಧಿ ಸಂಸ್ಥೆಗಳು ಮುಂದಿನ ಸರ್ಕಾರ ಯಾರದ್ದು ಎಂಬ ಸಮೀಕ್ಷೆಗಳನ್ನು ಬಿತ್ತರಿಸಿದೆ. ಬಹುತೇಕ ಸಮೀಕ್ಷೆಗಳು ಮುಂದಿನ ಸರ್ಕಾರ ಭಾರತೀಯ ಜನತಾ ಪಕ್ಷದ್ದು ಎಂಬ ಭವಿಷ್ಯವನ್ನು ನುಡಿದಿದೆ. ಇನ್ನು ಕೆಲವು ಸಮೀಕ್ಷೆಗಳು ಈ ಬಾರಿ ಅತಂತ್ರ ಸರ್ಕಾರ ನಿರ್ಮಾಣವಾಗಲಿದೆ ಎಂದಿದೆ. ಆಡಳಿತ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಿನ ಬಾರಿ ಅಧಿಕಾರ ಹಿಡಿಯುವುದಿಲ್ಲ. ಕಡಿಮೆ ಸ್ಥಾನಗಳನ್ನು ಪಡೆದು ಅತಂತ್ರ ಸಂಖ್ಯೆ ನಿರ್ಮಾಣ ನಿರ್ಮಾಣವಾಗುತ್ತದೆ. ಆವಾಗ ಜಾತ್ಯಾತೀತ ಜನತಾ ದಳ ಪಕ್ಷ ಕಾಂಗ್ರೆಸ್‍ನೊಂದಿಗೆ ತೂರಿಕೊಂಡರೆ ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಯೆಸ್ ಮೈತ್ರಿ ಸರ್ಕಾರವನ್ನು ನಡೆಸಬಹುದು ಎಂದು ಸಮೀಕ್ಷೆಗಳು ಹೇಳಿವೆ.

ಅನೇಕ ಸುದ್ಧಿ ಸಂಸ್ಥೆಗಳು ನಡೆಸಿದ್ದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಅತಂತ್ರ ಸರ್ಕಾರ ನಿರ್ಮಾಣವಾಗಲಿದೆ ಎಂಬ ಸಮೀಕ್ಷೆಯನ್ನು ನೀಡಿದ್ದರೆ ಕರ್ನಾಟಕದ ನಂಬರ್ ವನ್ ಸುದ್ಧಿ ಸಂಸ್ಥೆ ಎಂಬ ಬಿರುದನ್ನು ಪಡೆದಿರುವ ಸುದ್ಧಿ ಸಂಸ್ಥೆಯಾದ ಟಿವಿ9 ಸುದ್ಧಿ ವಾಹಿನಿ ಮಾತ್ರ ಈ ಬಾರಿ ಭಾರತೀಯ ಜನತಾ ಪಕ್ಷ 154ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ಭವಿಷ್ಯವನ್ನು ನುಡಿದಿದೆ.

ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು ಎಂಬ ಮಾತಿದೆ. ಕಳೆದ ಲೋಕಸಭಾ ಚುನಾವಣೆಯ ನಂತರ, ಪ್ರಧಾನಿ ಮೋದಿಯ ಅಬ್ಬರ ಹಾಗೂ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಚಾಣಾಕ್ಷತೆಯಿಂದ ಇಡೀ ದೇಶದಲ್ಲೇ ಕೇಸರಿ ಅರಳಿದೆ. ತಾವುಗಳು ಜವಬ್ಧಾರಿ ವಹಿಸಿದ 19ಕ್ಕಿಂತಲೂ ಅಧಿಕ ಚುನಾವಣೆಗಳಲ್ಲಿ ಭರ್ಜರಿ ಜಯಭೇರಿಯನ್ನು ಬಾರಿಸಿ ದೇಶದಲ್ಲೇ ಹೊಸ ಬದಲಾವಣೆಗೆ ನಾಂದಿ ಹಾಡಿತ್ತು. ಕಾಂಗ್ರೆಸ್ ಎಂಬ 132 ವರ್ಷಗಳ ಇತಿಹಾಸವುಳ್ಳ ರಾಜಕೀಯ ಪಕ್ಷವೊಂದು ಈ ಎಲ್ಲಾ ಚುನವಣೆಗಳಲ್ಲೂ ಸೋತು ಸುಣ್ಣವಾಗಿ ನೆಲಕಚ್ಚಿತ್ತು. ಮತ್ತೆಂದಿಗೂ ಆ ಪಕ್ಷ ಆ ರಾಜ್ಯಗಳಲ್ಲಿ ಮೇಲೆದ್ದು ಬರೋದಿಲ್ಲ ಎಂಬ ಸತ್ಯ ಅದಾಗಲೇ ಕಾಂಗ್ರೆಸ್ ಪಕ್ಷಕ್ಕೆ ಗೊತ್ತಾಗಿತ್ತು.

ಈಗ ಕರ್ನಾಟಕದಲ್ಲಿ ಸ್ವತಃ ಕಾಂಗ್ರೆಸ್ ಪಕ್ಷದಲ್ಲೂ ಇಂತಹ ಸಮೀಕ್ಷೆ ಋಣಾತ್ಮಕ ಬೆಳವಣಿಗೆಗಳು ಬೆಳವಣಿಗೆಗಳು ನಡೆಯುತ್ತಿದ್ದು ಮುಂದಿನ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವುದು ಕಷ್ಟ ಎಂದೇ ವ್ಯಾಖ್ಯಾನಿಸಿದೆ.

ಸ್ವಪಕ್ಷವೇ ನಡೆಸಿದ ಸಮೀಕ್ಷೆ ಕಂಡು ಕಾಂಗ್ರೆಸ್ ಬೆಚ್ಚಿ ಬಿದ್ದಿದ್ಯಾಕೆ?
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುವುದಕ್ಕೆ ಕೆಲವೇ ತಿಂಗಳುಗಳು ಬಾಕಿ ಇದೆ, ಇದೇ ವೇಳೆ ರಾಜ್ಯದ ಚುಕ್ಕಾಣಿ ಹಿಡಿಯುವುದಕ್ಕೆ ಪ್ರಮುಖ ರಾಜಕೀಯ ಪಕ್ಷಗಳು ಮತದಾರನ ಮನಸ್ಥಿತಿಯನ್ನು ತಿಳಿದುಕೊಳ್ಳುವುದಕ್ಕೆ ಖಾಸಗಿ ಸಮೀಕ್ಷೆಗಳನ್ನು ಮಾಡಿಸಲು ಮುಂದಾಗಿದ್ದು, ಆ ಮೂಲಕ ತಮ್ಮ ರಾಜಕೀಯ ಲೆಕ್ಕಚಾರಗಳನ್ನು ಹಾಕುವುದಕ್ಕೆ ಮುಂದಾಗಿದೆ.
ಇದೇ ವೇಳೆ ರಾಜ್ಯದಲ್ಲಿ ನಡೆಯುವ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರದ ಗದ್ದುಗೇರಲು ಸಿದ್ದವಾಗಿರುವ ಕಾಂಗ್ರೆಸ್ ಕೂಡ ಸಿ.ಹೆಚ್.ಎಸ್ ಎನ್ನುವ ಖಾಸಗಿ ಸಮೀಕ್ಷಾ ಸಂಸ್ಥೆಗೆ ವಹಿಸಿದೆ ಎನ್ನಲಾಗಿದ್ದು, ಅದು ನೀಡಿರುವ ಮಾಹಿತಿಯಲ್ಲಿ ಏನು ಹೇಳಿದೆ ಎನ್ನುವ ಕಂಪ್ಲೀಟ್ ಮಾಹಿತಿ ಮೊಟ್ಟಮೊದಲ ಬಾರಿಗೆ ನಿಮ್ಮ ಮುಂದೆ ಇದೆ ಓದಿ.

ಇದೇ ವೇಳೆ ಸಮೀಕ್ಷೆಯಲ್ಲಿ ಹೇಳಲಾಗಿರುವ ಕೆಲ ಪ್ರಮುಖ ಅಂಶಗಳು ಹೀಗಿವೆ 2018ರ ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ಸಿ.ಹೆಚ್.ಎಸ್ ಸಮೀಕ್ಷಾ ಕಂಪನಿಯು 2017ರ ಡಿಸೆಂಬರ್‍ 2ರಿಂದ 2017ರ ಡಿಸೆಂಬರ್‍ 19ರ ತನಕ ರ್ಯಾಂಡಮ್ ಸ್ಯಾಂಪಲಿಂಗ್ ವಿಧಾನದ ಅಡಿಯಲ್ಲಿ ರಾಜ್ಯದ ಒಟ್ಟು ಮತದಾರ ಪೈಕಿ ಹಾಗೂ 224 ವಿಧಾನ ಸಭಾಕ್ಷೇತ್ರಗಳನ್ನು ಒಳಗೊಂಡಂತೆ 4,48,000 ಲಕ್ಷ ಜನರ ಅಭಿಪ್ರಾಯವನ್ನು ಪಡೆದುಕೊಳ್ಳಲಾಗಿದೆ ಅಂತ ತಾನು ತಿಳಿಸಿರುವ ವರದಿಯಲ್ಲಿ ಹೇಳಿದೆ ಇದೇ ವೇಳೆ ವರದಿಯಲ್ಲಿ ಇದರಲ್ಲಿ 560 ನಗರ, 1250 ಹಳ್ಳಿ ಭಾಗದಿಂದ ಸ್ಯಾಂಪಲ್ ಗಳನ್ನು ಸಂಗ್ರಹಿಸಲಾಗಿದೆ ಅಂತ ತಿಳಿಸಿದೆ.

ಸಿ.ಹೆಚ್.ಎಸ್ ಸಮೀಕ್ಷಾ ಕಂಪನಿಯು ಹೇಳಿರುವ ಪ್ರಕಾರ ಆಹಿಂದ ಮತದಾರರು ಈಗಲೂ ಕಾಂಗ್ರೆಸ್ ಕಡೆಗೆ ತಮ್ಮ ನಿಷ್ಠೆಯನ್ನು ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ನ ಕೆಲವು ಭಾಗದ ವೋಟ್ ಗಳು ಸಹ ಈ ಬಾರಿ ಕಾಂಗ್ರೆಸ್ ಗೆ ಸಹಾಯವಾಗುವುದು ಆದರೆ ಆದರೆ ಬೆನ್ನಲೇ ಕೆಲ ಮುಸ್ಲಿಂ ವೋಟ್ ಗಳು ಸಹ ಈ ಬಾರಿ ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಹೋಗುವುದಂತೆ.

ಇನ್ನು ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಕಾಂಗ್ರೆಸ್ ಈ ಬಾರಿ ಚುನಾವಣೆಯಲ್ಲಿ ಸರಿ ಸುಮಾರು 40-50 ವಿಧಾನಸಭಾ ಸೀಟುಗಳನ್ನು ಕಳೆದುಕೊಳ್ಳುವ ಸಂಭಾವವಿದೆ ಎನ್ನಲಾಗಿದ್ದು, ಕಳೆದ ಬಾರಿ ಕೆಜೆಪಿ ಹಾಗೂ ಬಿಎಸ್‌ಆರ್‍ ಹೆಸರಿಂದ ಇಬ್ಬಾಗವಾಗಿದ್ದವರು ಈಗ ಪುನಃ ಬಿಜೆಪಿ ಸೇರಿರುವುದರಿಂದ ಬಿಜೆಪಿಗೆ ಹೆಚ್ಚುಲಾಭವಾಗಲಿದ್ದು ಈ ನಿಟ್ಟಿನಲ್ಲಿ ಹೆಚ್ಚು ಸೀಟುಗಳನ್ನು ಬಿಜೆಪಿ ಗೆಲ್ಲುವ ಸಾಧ್ಯತೆ ಇದೆ ಅಂತ ಹೇಳಿದ್ದಾರೆ,

ಜೆಡಿಎಸ್ ಈ ಬಾರಿ ಹಳೆ ಮೈಸೂರು ಭಾಗದಲ್ಲಿ ಹಾಗೂ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಹೆಚ್ಚು ಸ್ಥಾನವನ್ನು ಗೆಲ್ಲವು ಸಂಭವವಿದ್ದು, ಈ ಬಾರಿ ಅತಂತ್ರ ವಿಧಾನಸಭೆ ನಿರ್ಮಾಣದ ಆತಂಕ ಕೂಡ ಇದೆ ಅಂತ ಹೇಳಿದೆ. ಇದೇ ವೇಳೆ ರಾಜ್ಯ ಸರ್ಕಾರದ ಭಾಗ್ಯಗಳ ಬಗ್ಗೆ ರಾಜ್ಯದ ಜನರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬಹು ದಿವಸಗಳಿಂದ ಕಾಡುತ್ತಿತುವ ಕಾವೇರಿ ಹಾಗೂ ಮಹದಾಯಿ ವಿಚಾರಗಳು ರಾಜ್ಯ ಕಾಂಗ್ರೆಸ್ ಗೆ ನಕರಾತ್ಮಕವಾಗಿ ಪರಿಣಮಿಸ ಬಹುದು ಅಂತ ಹೇಳಿದೆ.

ತಾನೇ ಮಾಡಿಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷದ ಮುಂದಿನ ವಿಧಾನ ಸಭೆಯ ಫಲಿತಾಂಶ ಅವರದ್ದೇ ಪಕ್ಷ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದ್ದು ಇದು ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ನಿರಾಸೆಯನ್ನು ತಂದೊಗಿದೆ. ಕಾಂಗ್ರೆಸ್‍ನ ರಾಷ್ಟ್ರೀಯ ನಾಯಕರ ಹೊಟ್ಟೆ ತುಂಬಿಸಿಕೊಳ್ಳಲು ಇದ್ದಂತಹ ಕರ್ನಾಟಕ ರಾಜ್ಯ ಸರ್ಕಾರ ಈಗ ಅದನ್ನೂ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಮಾತ್ರವಲ್ಲದೆ ಭಾರತೀಯ ಜನತಾ ಪಕ್ಷದ ನಾಯಕರು ಜಪಿಸುತ್ತಿರುವ ಕಾಂಗ್ರೆಸ್ ಮುಕ್ತ ಭಾರತ ಎಂಬ ಕನಸು ನನಸಾಗುವ ಭಯವೂ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿದೆ.
-ಸುನಿಲ್ ಪಣಪಿಲ

Tags

Related Articles